For Quick Alerts
ALLOW NOTIFICATIONS  
For Daily Alerts

  ಪವಿತ್ರ ದಾರ-ಜನಿವಾರದ ಮಹಿಮೆ ಹಾಗೂ ಪ್ರಾಮುಖ್ಯತೆ

  By Arshad
  |

  ಪವಿತ್ರವಾದ ಜನಿವಾರವನ್ನು ಧರಿಸುವುದು ಹಿಂದೂಧರ್ಮದಲ್ಲಿ ಒಂದು ಪ್ರಮುಖವಾದ ಧಾರ್ಮಿಕ ಕಟ್ಟಳೆಯಾಗಿದೆ. ಈ ದಾರವನ್ನು ಸುಖಾಸುಮ್ಮನೆ ಮನಬಂದಂತೆ ಧರಿಸುವಂತಿಲ್ಲ, ಉಪನಯನ ಅಥವಾ ಯಜ್ಞೋ ಪವಿತ್ರ ಎಂಬ ವಿಧಿಗೆ ಒಳಗಾಗಿ ಶಾಸ್ತ್ರೋಕ್ತವಾಗಿಯೇ ಧರಿಸಬೇಕು. ಸಾಮಾನ್ಯವಾಗಿ ಹಿಂದೂ ಧರ್ಮದ ಉನ್ನತ ವರ್ಗದ ಜನರಿಗೆ ಜನಿವಾರ ಅನಿವಾರ್ಯವಾಗಿದೆ. ಬ್ರಾಹ್ಮಣ ಮತ್ತು ಕ್ಷತ್ರಿಯರು ಜನಿವಾರವನ್ನು ಧರಿಸುತ್ತಾರೆ.

  ಜನಿವಾರವನ್ನು ಚಿಕ್ಕ ವಯಸ್ಸಿನಲ್ಲೇ ಉಪನಯನದ ಮೂಲಕ ತೊಡಿಸಲು ಪ್ರಾರಂಭಿಸಿ ಧರ್ಮದ ಪಾಲನೆ, ಶಿಕ್ಷಣ ಮತ್ತು ಲೋಕದ ಇತರ ಆಕರ್ಷಣೆಗಳತ್ತ ಮುಖಮಾಡದೇ ಇರುವುದಕ್ಕೆ ಬದ್ಧರಾಗಿರಬೇಕಾಗುತ್ತದೆ. ಉಪನಯನದ ಸಂದರ್ಭದಲ್ಲಿಯೇ ಮಕ್ಕಳಿಗೆ 'ಗಾಯತ್ರಿ ಮಂತ್ರ'ದ ಪ್ರಥಮ ಪಾಠವನ್ನೂ ಕಲಿಸಿಕೊಡಲಾಗುತ್ತದೆ. ತಾಯಿಯೇ ಮೊದಲ ಗುರು ಎಂಬ ಗಾದೆಯ ಪ್ರಕಾರ, ಇಲ್ಲಿಯೂ ತಾಯಿಯೇ ಮಗನಿಗೆ ಗಾಯತ್ರಿ ಮಂತ್ರದ ಮೊದಲ ಪಾಠವನ್ನು ಕಲಿಸುತ್ತಾಳೆ.       ನಿಮ್ಮೆಲ್ಲಾ ಸಮಸ್ಯೆಗಳಿಗೆ ಸ೦ಜೀವಿನಿ ಈ ಗಾಯತ್ರಿ ಮಹಾಮ೦ತ್ರ!

  ಜನಿವಾರ ಎಂದರೆ ಬಿಳಿಯ ಬಣ್ಣದ ಹತ್ತಿಯ ದಾರವಾಗಿದ್ದು ಇದರ ಉದ್ದ ಎಷ್ಟಿರಬೇಕು ಎಂಬುದನ್ನು ಧರಿಸುವವರ ಕೈ ಅಳತೆ ನಿರ್ಧರಿಸುತ್ತದೆ. ನಾಲ್ಕು ಬೆರಳುಗಳಿಗೆ ತೊಂಬತ್ತಾರು ಸುತ್ತು ಬರುವಷ್ಟು ಉದ್ದದ ದಾರ ಸಾಕು. ಬ್ರಾಹ್ಮಣ ಮಕ್ಕಳು ಹನ್ನೆರಡು ವರ್ಷದವರಾದಾಗ ಹದಿನಾರನೇ ಸಂಸ್ಕಾರದ ವಿಧಿಯ ಪ್ರಕಾರ ಉಪನಯನವನ್ನು ಬೋಧಿಸಲಾಗುತ್ತದೆ.    ಸನಾತನ ಧರ್ಮ: ಸಂಸ್ಕೃತಿ ಬೆಳೆಸಿದ ಮಹಾನ್ ತಾಯಿ

  ಸನಾತನ ಹಿಂದೂ ಪದ್ಧತಿಯ ಪ್ರಕಾರ ಇದು ಹತ್ತನೆಯ ಸಂಸ್ಕಾರವಾಗಿದ್ದು ಹದಿವಯಸ್ಸಿಗೆ ಕಾಲಿಡುವ ಯುವಕ ಜೀವನ ಮತ್ತು ಜಗತ್ತನ್ನು ನೋಡುವ ದೃಷ್ಟಿ ವಿಶಾಲ ಹಾಗೂ ಪವಿತ್ರವಾಗಿರಬೇಕು ಎಂದು ಬೋಧಿಸುತ್ತದೆ. ಬನ್ನಿ, ಉಪನಯನ ಮತ್ತು ಜನಿವಾರದ ಮಹತ್ವದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದೇವೆ ಮುಂದೆ ಓದಿ... 

  ಜನಿವಾರ-ಪವಿತ್ರ ದಾರ

  ಜನಿವಾರ-ಪವಿತ್ರ ದಾರ

  ಜನಿವಾರವನ್ನು ಯಾವುದೋ ಮನಬಂದ ನೂಲಿನಿಂದ ತಯಾರಿಸುವಂತಿಲ್ಲ. ಏಕೆಂದರೆ ಇದರ ಪ್ರತಿ ನೂಲಿಗೂ ಧಾರ್ಮಿಕ ಮಹತ್ವವಿದೆ. ಪ್ರಮುಖವಾಗಿ ಜನಿವಾರದಲ್ಲಿ ಮೂರು ಎಳೆಗಳಿರುತ್ತವೆ. ಅವಿವಾಹಿತರು ಒಂದು ಎಳೆಯನ್ನು ಮಾತ್ರ ಧರಿಸಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಜನಿವಾರ-ಪವಿತ್ರ ದಾರ

  ಜನಿವಾರ-ಪವಿತ್ರ ದಾರ

  ವಿವಾಹಿತರು ಎರಡು ಎಳೆಗಳ ಜನಿವಾರವನ್ನೂ, ದಂಪತಿಗಳಿಗೆ ಸಂತಾನಭಾಗ್ಯ ಪ್ರಾಪ್ತವಾದ ಬಳಿಕ ಮೂರು ಎಳೆಗಳ ಜನಿವಾರವನ್ನು ಧರಿಸುವುದು ಸಂಪ್ರದಾಯವಾಗಿದೆ. ಈ ಮೂರು ಎಳೆಗಳು ಧರಿಸಿದವಾತನ ಜವಾಬ್ದಾರಿಗಳನ್ನು ಸತತವಾಗಿ ನೆನಪಿಸುತ್ತಿರುತ್ತದೆ. ಅವೆಂದರೆ ಗುರುವಿನ ಋಣ, ತಂದೆ ತಾಯಿ ಮತ್ತು ಹಿರಿಯ ವಂಶಸ್ಥರ ಋಣ ಮತ್ತು ಪಡೆದ ಪಾಂಡಿತ್ಯದ ಋಣ.

  ಉಪನಯನದ ಮಹತ್ವ

  ಉಪನಯನದ ಮಹತ್ವ

  ಜನಿವಾರದ ನೂಲಿನ ಎಳೆಗಳು ಸತತವಾಗಿ ಧರಿಸಿದವನ ಮನದ ಯೋಚನೆಗಳು ಪವಿತ್ರವಾಗಿರಬೇಕೆಂದೂ, ನುಡಿಯುವ ಪದಗಳೂ ಪವಿತ್ರವಾಗಿರಬೇಕೆಂದೂ ಸೂಚಿಸುತ್ತಿರುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಉಪನಯನದ ಮಹತ್ವ

  ಉಪನಯನದ ಮಹತ್ವ

  ಅಂದರೆ ಜನಿವಾರ ಧರಿಸಿದಷ್ಟು ಹೊತ್ತೂ ಆತನ ಮನದಲ್ಲಿ ದುರಾಲೋಚನೆಯಾಗಲೀ ಬೈಗುಳ, ಅವಮಾನದ ಶಬ್ದಗಳು ಬರಕೂಡದು ಉಪನಯನದಲ್ಲಿ ಹದಿಹರೆಯಲ್ಲಿ ಕಾಲಿಡುತ್ತಿರುವ ಮಕ್ಕಳಿಗೆ ಬ್ರಾಹ್ಮಣತ್ಮದ ಬಗ್ಗೆ ಮಾಹಿತಿ, ಇದರ ಸರಿಯಾದ ಆಚರಣೆ ಮತ್ತು ಬ್ರಹ್ಮಚಾರಿಯ ಜೀವನವನ್ನು ಮನುಸ್ಮೃತಿಯ ಪ್ರಕಾರ ಸರಿಯಾಗಿ ಅನುಸರಿಸುವುದನ್ನು ಬೋಧಿಸಲಾಗುತ್ತದೆ.

  ಸ್ವಸಾಮರ್ಥ್ಯ, ಪಾಂಡಿತ್ಯ ಮತ್ತು ಸಮೃದ್ಧಿಯ ಸಂಕೇತವಾಗಿದೆ

  ಸ್ವಸಾಮರ್ಥ್ಯ, ಪಾಂಡಿತ್ಯ ಮತ್ತು ಸಮೃದ್ಧಿಯ ಸಂಕೇತವಾಗಿದೆ

  ಜನಿವಾರದ ಮೂರು ಎಳೆಗಳು ಮೂರು ದೇವಿಯರನ್ನು ತನ್ನ ಬಳಿ ಇಟ್ಟುಕೊಂಡಿರುವ ಸಂಕೇತವಾಗಿದೆ. ಇವರೆಂದರೆ ಸ್ವಸಾಮರ್ಥ್ಯದ ದೇವಿ (ಪಾರ್ವತಿ), ಪಾಂಡಿತ್ಯದ ದೇವಿ (ಸರಸ್ವತಿ) ಮತ್ತು ಸಮೃದ್ದಿ ಅಥವಾ ಧನದ ದೇವಿ (ಲಕ್ಷ್ಮಿ). ಸುಖಜೀವನಕ್ಕೆ ಈ ಮೂರೂ ದೇವಿಯರ ಆಶೀರ್ವಾದ ಇರಬೇಕಾದ ಕಾರಣ ಮೂರು ಎಳೆಗಳ ಜನಿವಾರವನ್ನು ಸದಾ ತೊಟ್ಟಿರುವುದು ಅಗತ್ಯವಾಗಿದೆ.

  ಋಣಾತ್ಮದ ಯೋಚನೆಗಳಿಂದ ಮತ್ತು ಶಕ್ತಿಗಳಿಂದ ದೂರವಿರಲು ಸಾಧ್ಯ

  ಋಣಾತ್ಮದ ಯೋಚನೆಗಳಿಂದ ಮತ್ತು ಶಕ್ತಿಗಳಿಂದ ದೂರವಿರಲು ಸಾಧ್ಯ

  ಜನಿವಾರವನ್ನು ಧರಿಸಿದ್ದರೆ ಋಣಾತ್ಮಕ ಯೋಚನೆಗಳಿಂದ ದೂರವಿರಲು ಮತ್ತು ಋಣಾತ್ಮಕ ಶಕ್ತಿಗಳು ಆವರಿಸದಂತಿರಲು ಸಾಧ್ಯವಾಗುತ್ತದೆ. ವಾಸ್ತವವಾಗಿ ಮನದಲ್ಲಿ ಋಣಾತ್ಮಕ ಯೋಚನೆಗಳು ಮೂಡಬಾರದು ಎಂಬುದು ಮೊತ್ತ ಮೊದಲ ಬಾರಿಗೆ ಧರಿಸಿದಾಕ್ಷಣದಿಂದ ಅನುಸರಿಸಬೇಕಾದ ವಿಧಿಯೂ ಆಗಿದೆ.

  ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ

  ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ

  ಇತ್ತೀಚೆಗೆ ವೈದ್ಯಕೀಯ ಸಂಶೋಧನೆಯೊಂದರಲ್ಲಿ ಜನಿವಾರ ಧರಿಸಿದವರ ರಕ್ತದ ಒತ್ತಡ ಧರಿಸದವರ ರಕ್ತದ ಒತ್ತಡಕ್ಕಿಂತ ಹೆಚ್ಚು ಆರೋಗ್ಯಕರ ಮಟ್ಟದಲ್ಲಿರುವುದನ್ನು ಕಂಡುಕೊಳ್ಳಲಾಗಿದೆ. ಅಂದರೆ ಜನಿವಾರ ಧರಿಸಿದವರು ಅಧಿಕ ರಕ್ತದೊತ್ತಡದ ತೊಂದರೆಗೆ ಅತಿ ಕಡಿಮೆ ಒಳಗಾಗುತ್ತಾರೆ.

   

  English summary

  Significance Of The Sacred Thread In Hinduism

  Wearing the sacred thread or the 'Janeu' is one of the most important rites de passage for Hindus. This ceremony of wearing the sacred thread or the 'Yagnopavitra' is also known as Upanayanam. The Upanayanam ceremony is generally associated with the higher caste Hindus. It is mandatory for the Brahmin and the Kshatriya boys to wear the sacred thread.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more