For Quick Alerts
ALLOW NOTIFICATIONS  
For Daily Alerts

ರಾಮ ನವಮಿಯ ಮಹತ್ವವನ್ನು ತಿಳಿಯೋಣ ಬನ್ನಿ

|

ರಾಮ ನವಮಿ ಭಾರತದ ಜನಪ್ರಿಯ ಹಬ್ಬವಾಗಿದೆ. ಶ್ರೀ ರಾಮ ದೇವರ ಜನ್ಮದಿನವನ್ನು ಈ ದಿನ ಆಚರಿಸಲಾಗುತ್ತದೆ. ಮಾರ್ಚ್ - ಏಪ್ರಿಲ್ ತಿಂಗಳುಗಳಲ್ಲಿ ಈ ಹಬ್ಬವನ್ನು ಸಾಮಾನ್ಯವಾಗಿ ಆಚರಿಸುತ್ತಾರೆ. ನವರಾತ್ರಿಯ ಕೊನೆಯ ದಿನವಾದ ಚೈತ್ರ ತಿಂಗಳ ಒಂಭತ್ತನೆಯ ದಿನವೇ ರಾಮ ನವಮಿ ಎಂದು ಹಿಂದೂ ಕ್ಯಾಲೆಂಡರ್ ನಿಖರಪಡಿಸುತ್ತದೆ. ಆದ್ದರಿಂದಲೇ ಹಿಂದೂಗಳಿಗೆ ರಾಮನವಮಿ ಒಂದು ಮಹತ್ವಪೂರ್ಣ ಹಬ್ಬವಾಗಿದೆ.

ರಾಮ ನವಮೀ ಶ್ರೀ ರಾಮನ ಜನ್ಮ ದಿನ . ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನ ಈ ಹಬ್ಬವನ್ನು ಆಚರಿಸುತ್ತಾರೆ. ಶ್ರೀ ರಾಮ ಮನೆದೇವರು ಇರುವವರು ಒಂಭತ್ತು ದಿನದ ಹಬ್ಬ ಮಾಡುತ್ತಾರೆ. ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣ ಪಾರಾಯಣ ಮಾಡಿ , ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಮುಗಿಸುತ್ತಾರೆ. ಹೀಗೆ 9 ದಿನದ ರಾಮೋತ್ಸವ ಮಾಡುತ್ತಾರೆ.ರಾಮನವಮಿ ಹಬ್ಬ ಆಚರಿಸಲು ತುಂಬ ಪರಿಕರಣೆ ಯಾವುದು ಇಲ್ಲ, ಇದು ಸರಳವಾದ ಹಬ್ಬ.

Significance Of Ram Navami

ರಾಮ ನಾಮವನ್ನು ಜಪಿಸಿದರೆ ಅವನು ನಮ್ಮನ್ನು ಸದಾ ಸಂರಕ್ಷಿಸಿ, ಕಾಪಾಡುತ್ತಾನೆ. ರಾಮನ ಧ್ಯಾನಕ್ಕೆ ರಾಮನಾಮ ಬರೆಯುವುದು ಒಂದು ಉತ್ತಮ ಸಾಧನ. "ರಾಮ" "ಶ್ರೀ ರಾಮ" "ಶ್ರೀ ರಾಮ ಜಯ ರಾಮ" "ಶ್ರೀ ರಾಮ ಜಯ ರಾಮ ಜಯ ಜಯ ರಾಮ" ಇತ್ಯಾದಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: 3 ಪಾನೀಯಗಳ ರೆಸಿಪಿ-ರಾಮನವಮಿ ಸ್ಪೆಷಲ್

ಈ ರೀತಿಯಾಗಿ ನಾವು ನಾಮವನ್ನು ಜಪಿಸಬಹುದು. ರಾಮ ನವಮಿಯ ದಿನ ರಾಮ ನಾಮ ಬರೆದರೆ ಅತಿ ಉತ್ತಮ. ಕನಿಷ್ಠ ಪಕ್ಷ 9 ನಾಮಗಳನ್ನಾದರೂ ಬರೆಯ ಬೇಕು ಎಂದು ಹಿರಿಯರು ಹೇಳುತ್ತಾರೆ. ವಿಶೇಷವಾಗಿ ಮಕ್ಕಳೂ ಇದನ್ನು ಬರೆದರೆ ವಿದ್ಯಾಭ್ಯಾಸದಲ್ಲಿ ಏಕಾಗ್ರೆಯನ್ನು ಕಾಯ್ದುಕೊಳ್ಳಲು ಅವರಿಗೆ ಸಹಕಾರಿಯಾಗಲಿದೆ

ದೇಶಾದ್ಯಂತ ಸಂಭ್ರಮ ಸಡಗರದಿಂದ ರಾಮನವಮಿಯನ್ನು ಆಚರಿಸುತ್ತಾರೆ. ಅದರಲ್ಲೂ ಭಾರತದ ಉತ್ತರ ಕಡೆಗಳಲ್ಲಿ ರಾಮನವಮಿಯನ್ನು ಭರ್ಜರಿಯಾಗಿ ಆಚರಿಸುತ್ತಾರೆ. ಶಾಸನಗಳ ರಾಮ ಜನಿಸಿದರೆಂದು ಪ್ರತೀತಿ ಇರುವ ಆಯೋಧ್ಯಾ ಮತ್ತು ಕೆಲವು ಪ್ರದೇಶಗಳಲ್ಲಿ ರಾಮನವಮಿ ಹಬ್ಬವನ್ನು ಜೋರಾಗಿಯೇ ನಡೆಸುತ್ತಾರೆ.

ತುಳಸೀ ದಾಸರ ರಾಮಚರಿತ ಮಾನಸದಲ್ಲಿ ರಾಮನವಮಿ ಹಬ್ಬದ ಪ್ರಾಮುಖ್ಯತೆಗಳು, ಆಚರಣೆಗಳ ಕ್ರಮಗಳನ್ನು ವಿಸ್ತಾರವಾಗಿ ತಿಳಿಸಲಾಗಿದೆ. ಭಜನೆ, ಕೀರ್ತನೆಗಳು ಮತ್ತು ಮೆರವಣಿಗೆ ಹಬ್ಬದ ಪ್ರಮುಖ ಭಾಗಗಳಾಗಿವೆ. ರಾಮನವಮಿ ಹಬ್ಬದ ಕೆಲವೊಂದು ಪ್ರಾಮುಖ್ಯತೆಗಳನ್ನು ಇಲ್ಲಿ ನೀಡುತ್ತಿದ್ದೇವೆ... ಬನ್ನಿ ಮುಂದಕ್ಕೆ ಓದಿ ರಾಮನ ಹಬ್ಬದ ಮಹತ್ವತೆಯನ್ನು ತಿಳಿದುಕೊಳ್ಳಿ.

ರಾಮನವಮಿ ಹಬ್ಬದ ಆಚರಣೆ
ಉದಿಸುತ್ತಿರುವ ಸೂರ್ಯನಿಗೆ ಪ್ರಾರ್ಥನೆಯನ್ನು ಮಾಡುವ ಮೂಲಕ ಹಬ್ಬದ ದಿನ ಪ್ರಾರಂಭಗೊಳ್ಳುತ್ತದೆ. ರಾಮ ದೇವರ ಪೂರ್ವಜರು ಎಂದು ಸೂರ್ಯ ದೇವರನ್ನು ನಂಬುತ್ತಾರೆ. ಶಕ್ತಿಯ ಪ್ರತೀಕವಾಗಿರುವ ಸೂರ್ಯ ದೇವರ ಆರಾಧನೆ ರಾಮನವಮಿಯಂದು ಮುಖ್ಯವಾಗಿರುತ್ತದೆ. ರಾಮ ದೇವರ ಸ್ತೋತ್ರಗಳು, ಭಜನೆಗಳನ್ನು ಹಾಡುವ ಮೂಲಕ ದೇವರನ್ನು ಸಂಪ್ರೀತಿಗೊಳಿಸುವ ಕಾರ್ಯವನ್ನು ನಾವು ಈ ದಿನ ಮಾಡಬೇಕು. ಸೂರ್ಯಸ್ತದ ನಂತರವಷ್ಟೇ ವೃತಾಚರಣೆ ಮುಕ್ತಾಯಗೊಳ್ಳುತ್ತದೆ.

ಮೆರವಣಿಗೆ
ಮೆರವಣಿಗೆ ಹಬ್ಬದ ಪ್ರಮುಖ ಆಕರ್ಷಣೆಯಾಗಿರುತ್ತದೆ. ಶ್ರೀರಾಮ ದೇವರು, ಸೀತಾಮಾತೆ, ಲಕ್ಷ್ಮಣ, ಹನುಮಂತ ದೇವರುಗಳ ಪ್ರತಿಮೆಗಳನ್ನು ರಥದಲ್ಲಿ ಸಿಂಗರಿಸಿ ಪ್ರತಿಷ್ಟಾಪಿಸುತ್ತಾರೆ. ನಂತರ ಬೀದಿಯ ಉದ್ದಕ್ಕೂ ಮೆರವಣಿಗೆಯಲ್ಲಿ ರಥವನ್ನು ಎಳೆದುಕೊಂಡು ಹೋಗುತ್ತಾರೆ. ಭೂಮಿಯಲ್ಲಿ ರಾಮದೇವರ ಆಳ್ವಿಕೆಯ ಸಮಯದಲ್ಲಿದ್ದಂತಹ ಶಾಂತಿಯನ್ನು ಜನರಿಗೆ ಈ ಸನ್ನಿವೇಶ ನೆನಪು ಮಾಡಿಕೊಡುತ್ತದೆ.

ರಾಮ ನವಮಿಯ ಮಹತ್ವ
ಉತ್ತರ ಭಾರತದಲ್ಲಿ ರಾಮ ನವಮಿಯನ್ನು ರಾಮದೇವರ ಹುಟ್ಟುಹಬ್ಬವೆಂದು ಆಚರಿಸುತ್ತಾರೆ. ಆದರೆ ದಕ್ಷಿಣದಲ್ಲಿ ರಾಮ ಸೀತೆಯರ ವಿವಾಹದ ದಿನವಾಗಿ ರಾಮ ನವಮಿಯನ್ನು ಆಚರಿಸುತ್ತಾರೆ. ಮಹಿಮಾನ್ವಿತ ದೇವತೆಗಳ ದೈವಿಕ ಬಂಧವಾಗಿ ರಾಮನವಮಿಯನ್ನು ಅವರು ಆಚರಿಸುತ್ತಾರೆ.

ಆದರೆ ರಾಮದೇವರ ಮಹಿಮೆಯನ್ನು ತಿಳಿಸುವ ಈ ಹಬ್ಬ ಶಾಂತಿಯ ಸಂಕೇತವಾಗಿದೆ. ಕೆಟ್ಟ ಶಕ್ತಿಗಳು, ಕೆಟ್ಟ ವಾತಾವರಣ ಹಬ್ಬದ ಆಚರಣೆಯಿಂದ ದೂರಾಗುತ್ತದೆ. ವೃತಾಚರಣೆಯು ಆತ್ಮವನ್ನು ಶುದ್ಧಗೊಳಿಸುವ ವಿಧಾನವಾಗಿದೆ. ರಾಮನವಮಿಯ ಪ್ರಮುಖ ಉದ್ದೇಶವೆಂದರೆ ಭೂಮಿಯಲ್ಲಿರುವ ಪ್ರತಿಯೊಬ್ಬ ಮನುಷ್ಯನೂ ಶ್ರೀರಾಮನಲ್ಲಿದ್ದ ಗುಣಗಳನ್ನು ತನ್ನಲ್ಲಿ ಬೆಳೆಯಿಸಿಕೊಳ್ಳಬೇಕು ಎಂದಾಗಿದೆ. ಶ್ರೀರಾಮ ದೇವರಂತಾಗುವ ಪ್ರಯತ್ನವನ್ನೂ ಪ್ರತಿಯೊಬ್ಬನೂ ಮಾಡಬೇಕು ಎಂಬುದು ಹಬ್ಬದ ಹಿಂದಿರುವ ಪ್ರಮುಖ ಅಂಶವಾಗಿದೆ.

English summary

Significance Of Ram Navami

Ram Navami is a popular festival of India. Ram Navami is the birthday celebration of Lord Ram. This festival is usually celebrated during March-April. According to the Hindu calendar Ram Navami is the ninth day of the Chaitra month which is also the last day of Navratri.
Story first published: Tuesday, April 8, 2014, 12:06 [IST]
X
Desktop Bottom Promotion