For Quick Alerts
ALLOW NOTIFICATIONS  
For Daily Alerts

ಶಿವ ಮತ್ತು ಶಕ್ತಿಯೊಂದಿಗೆ ಆಶೀರ್ವಾದ ಪಡೆಯಲು ಶ್ರಾವಣ ನವಮಿ ಆಚರಣೆ

|

ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸವು ಪವಿತ್ರವಾದ ತಿಂಗಳು ಎಂದು ಪರಿಗಣಿಸಲಾಗಿದೆ. ಗ್ರಹಣದ ನಂತರ ನಿರೀಕ್ಷಿತ ತಿಂಗಳು ಹಾಗೂ ಬದಲಾವಣೆಯನ್ನು ಶ್ರಾವಣ ಮಾಸ ತಂದಿದೆ. ಶಿವ ಹಾಗೂ ಶಕ್ತಿಗೆ ಮೀಸಲಾದ ಈ ಮಾಸದಲ್ಲಿ ಋಣಾತ್ಮಕ ಶಕ್ತಿಯು ಹೆಚ್ಚಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಕೈಗೊಳ್ಳುವ ಪೂಜೆ-ಪುನಸ್ಕಾರಗಳು ದೇವರ ಮೆಚ್ಚುಗೆಗೆ ಪಾತ್ರವಾಗುವುದು. ಜೊತೆಗೆ ಉತ್ತಮ ಅದೃಷ್ಟವನ್ನು ಪಡೆದು ಕೊಳ್ಳಬಹುದು ಎಂದು ಹೇಳಲಾಗುವುದು.

ಶ್ರಾವಣ ನವಮಿಯು ವಿಶೇಷವಾದ ದಿನ. ಇದು ಕಾಲಾಸ್ಟಮಿಯ ಮರುದಿನ ಬರುತ್ತದೆ. ಇದನ್ನು ಶ್ರಾವಣ ಮಾಸ ಶುಕ್ಲ ಪಕ್ಷದಂದು ಆಚರಿಸಲಾಗುತ್ತದೆ. ಈ ಮಂಗಳಕರವಾದ ದಿನವನ್ನು ಪ್ರಾಥಮಿಕವಾಗಿ ದೇವತೆ ಶಕ್ತಿಯ ಪೂಜೆಗೆ ಸಮರ್ಪಿಸಲಾಗಿದೆ. ದುರ್ಗಾ ದೇವಿ, ಪಾರ್ವತಿ ದೇವಿ ಸೇರಿದಂತೆ ಶಕ್ತಿ ದೇವತೆಗಳ ಆರಾಧನೆ ಮಾಡಲಾಗುವುದು.

ಶ್ರಾವಣ ನವಮಿಯ ಆಚರಣೆ ಏಕೆ?

ಶಿವನನ್ನು ಪೂಜಿಸುವುದರಿಂದ ಭಕ್ತರ ಜೀವನದಲ್ಲಿ ಅದೃಷ್ಟವು ಒಲಿಯುವುದು ಎಂದು ಧರ್ಮಶಾಸ್ತ್ರಗಳು ವಿವರಿಸುತ್ತವೆ. ಸಂಪ್ರದಾಯದ ಪ್ರಕಾರ ಈ ದಿನದಂದು ಶಿವ ಮತ್ತು ಶಕ್ತಿ ದೇವತೆಯನ್ನು ಒಟ್ಟಾಗಿ ಪೂಜಿಸಲಾಗುವುದು. ಇದರಿಂದ ಜನರ ಬಯಕೆಯನ್ನು ಈಡೇರಿಸುವುದು ಎಂದು ಹೇಳಲಾಗುತ್ತದೆ. ಶಿವ ಮತ್ತು ಶಕ್ತಿ ದೇವತೆಯ ಪೂಜೆಯ ನಂತರ ಹುಡುಗಿಯರು ಹಳದಿ ಬಟ್ಟೆಯನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ಬಯಸಿದಂತಹ ವರ ಸಿಗುತ್ತಾನೆ ಎಂದು ಹೇಳಲಾಗುವುದು.

Lord Shiva

ಶಿವ ಪುರಾಣದ ವಿದ್ಯೇಶ್ವರ ಸನ್ನಿತದಲ್ಲಿ ಹೇಳಿರುವ ಪ್ರಕಾರ ಶ್ರಾವಣ ಮಾಸದ ಮೃಗಶೀರ ನಕ್ಷತ್ರದಲ್ಲಿ ದೇವಿ ಅಂಬಿಕೆಯನ್ನು ಪೂಜಿಸಲಾಗುತ್ತದೆ. ಈ ಪೂಜೆಯನ್ನು ಮಾಡುವುದರಿಂದ ಮನಸಿನ ಬಯಕೆಗಳೆಲ್ಲವೂ ಈಡೇರುವುದು ಎಂದು ಹೇಳಲಾಗುತ್ತದೆ. ಜೀವನದ ಎಲ್ಲಾ ಬಯಕೆಗಳನ್ನು ಈಡೇರಿಸಿಕೊಳ್ಳಲು ದೇವಿ ಅಂಬಿಕೆಯನ್ನು ಪೂಜಿಸಲಾಗುತ್ತದೆ. ಈ ದಿನದಂದು ಪೂಜೆ ಮಾಡುವುದರಿಂದ ವ್ಯಕ್ತಿ ಈವರೆಗೆ ಮಾಡಿದ ಪಾಪಗಳೆಲ್ಲವೂ ತೊಳೆದು ಪುಣ್ಯ ಪ್ರಾಪ್ತಿಯಾಗುವುದು. ಈ ದಿನದ ಪೂಜೆಯಿಂದ ದೇವಿಯ ಕೃಪೆಗೆ ಒಳಗಾಗಬಹುದು. ಸಾಡೇ ಸಾತ್ ಶನಿ, ಶನಿ ದೆಸೆಯಿಂದ ಉಂಟಾಗುವ ಸಮಸ್ಯೆಗಳನ್ನು ಈ ಪೂಜೆ ಪರಿಹರಿಸುವುದು.

ಶ್ರಾವಣ ನವಮಿಯಲ್ಲಿ ಪೂಜೆ ಮಾಡುವುದು ಹೇಗೆ?

ಮುಂಜಾನೆ ಬೇಗ ಎದ್ದು, ಬ್ರಹ್ಮ ಮುಹೂರ್ತದ ಸಮಯದಲ್ಲಿ ಸ್ನಾನ ಮಾಡಬೇಕು. ಸ್ನಾನದ ನಂತರ ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡಬೇಕು. ನಂತರ ಹೂವುಗಳನ್ನು ಅರ್ಪಿಸಿ, ದೂಪದ ಆರತಿ ಬೆಳಗಬೇಕು. ಇದಾದ ಬಳಿಕ ಐದು, ಏಳು, ಒಂಭತ್ತು ಸಂಖ್ಯೆಯ ಬಿಲ್ವ ಪತ್ರೆಯನ್ನು ಅರ್ಪಿಸಬೇಕು. ನಂತರ ನೀವು ಹಣ್ಣು, ಪುಷ್ಪ ಸೇರಿದಂತೆ ಇನ್ನಿತರ ವಸ್ತುಗಳನ್ನು ನೀಡಬಹುದು. ಪೂಜೆಯ ತಟ್ಟೆಯನ್ನು ಇಟ್ಟುಕೊಂಡು "ಗಂಗಾ ಸಿಂಧೂಶ್ಚಾ ಕಾವೇರಿ ಯಮುನಾ ಚಾ ಸರಸ್ವತಿ ರೆವಾ ಮಹಾನದಿ ಗೋದಾಸ್ಮಿನ್ ಜಲೇ ಸಿಂಧೂ ಕುರು" ಎನ್ನುವ ಮಂತ್ರವನ್ನು ಜಪಿಸಿ. ಆರತಿ ಬೆಳಗಿ ಪೂಜೆ ಮಾಡಿ. ನಂತರ ಭಕ್ತರಿಗೆ ಸಿಹಿ ಪ್ರಸಾದವನ್ನು ವಿತರಿಸಿ.

English summary

Shravana Navmi To Get The Blessings Of Shiva & Shakti Together

Shravana is considered to be an auspicious month in Hinduism. The most-awaited month of Shravana began just the next day after the eclipse. Here we are going to talk in detail about Shravana Navmi.
Story first published: Thursday, August 9, 2018, 18:09 [IST]
X
Desktop Bottom Promotion