Latest Updates
-
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ?
ಶ್ರಾವಣ ಮಾಸ: ಈ ತಿಂಗಳಿನಲ್ಲಿ ಬರುವ ಹಬ್ಬಗಳು, ವ್ರತಗಳು ಹಾಗೂ ಶುಭ ದಿನಗಳ ಸಂಪೂರ್ಣ ಮಾಹಿತಿ
ಶ್ರಾವಣ ಬಂತು ಶ್ರಾವಣ... ಸಡಗರವ ಹೊತ್ತು ಬಂತು ಶ್ರಾವಣ.... ಶ್ರಾವಣ ಮಾಸವೆಂದರೆ ನಮ್ಮಲ್ಲಿ ಅದೇನೋ ಸಡಗರ ಹಾಗೂ ಸಂಭ್ರಮ. ಆಷಾಢ ಮಾಸದಲ್ಲಿ ಅಷ್ಟೇನು ಫಂಕ್ಷನ್‌ಗಳಿರಲ್ಲ. ಆಷಾಢದಲ್ಲಿ ಪೂಜಾ ಕಾರ್ಯಕ್ರಮಗಳನ್ನು ಅಷ್ಟೇ ಮಾಡುತ್ತಾರೆ, ಕೆಲವು ಕಡೆ ಆಷಾಢದಲ್ಲಿ ಪೂಜೆನೂ ಮಾಡುವುದಿಲ್ಲ, ಆದರೆ ಶ್ರಾವಣ ಮಾಸ ಹಾಗಲ್ಲ, ಹಬ್ಬಗಳನ್ನು ಹೊತ್ತು ತರುವ ಮಾಸವಾಗಿದೆ. ಹಬ್ಬಗಳ ಮುನ್ನುಡಿಯಾದ ನಾಗರ ಪಂಚಮಿ ಹಬ್ಬ ಕೂಡ ಇದೇ ಮಾಸದಲ್ಲಿ ಬರಲಿದೆ.
2022ರ ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ:

ಶ್ರಾವಣ ಮಾಸ
ಕನ್ನಡ ಶ್ರಾವಣ ಮಾಸ ಜುಕೈ 29ರಿಂದ ಶುರುವಾಗು ಆಗಸ್ಟ್ 27ರವರೆಗೆ ಇರಲಿದೆ. ಈ ಶ್ರಾವಣ ಮಾಸದಲ್ಲಿ ನಾಗರ ಪಂಚಮಿ, ವರಲಕ್ಷ್ಮಿ ವ್ರತ, ರಿಗ್ ಮತ್ತು ಯಜುರ್ ಉಪಕರ್ಮ, ಶ್ರೀ ಕೃಷ್ಣ ಜಯಂತಿ ಹೀಗೆ ವಿಶೇಷ ದಿನಗಳಿವೆ.
ಈ ತಿಂಗಳಿನ ವಿಶೇಷ ದಿನಗಳ ಬಗ್ಗೆ ತಿಳಿಯೋಣ

ಮಂಗಳ ಗೌರಿ ವ್ರತ
ಮಂಗಳ ಗೌರಿ ವ್ರತವನ್ನು ಎಲ್ಲಾ ಮಂಗಳವಾರ ಮಾಡಲಾಗುವುದು. ಗೌರಿ ದೇವಿಯನ್ನು ಪೂಜಿಸಿ ಈ ವ್ರತವನ್ನು ಮುತ್ತೈದೆಯರು ಮಾಡುತ್ತಾರೆ. ಗೌರಿ ದೇವಿಯು ಮನೆಯವರಿಗೆ ಸಮೃದ್ಧಿ, ಉತ್ತಮ ಆರೋಗ್ಯ ನೀಡಲಿ ಹಾಗೂ ವೈವಾಹಿಕ ಜೀವನ ಆನಂದದಿಂದ ಕೂಡಿರಲು ಆ ತಾಯಿಯ ಆಶೀರ್ವವಾದವನ್ನು ಬಯಸಿ ಈ ವ್ರತವನ್ನು ಮಾಡಲಾಗುವುದು. ಮದುವೆಯಾದ ಮೊದಲ ಐದು ವರ್ಷಗಳಲ್ಲಿ ಮಹಿಳೆಯರು ಈ ವ್ರತವನ್ನು ಮಾಡುತ್ತಾರೆ.

ಪ್ರದೋಷ ವ್ರತ
ಶ್ರಾವಣ ಮಾಸ ಶಿವನಿಗೆ ವಿಶೇಷವಾದ ತಿಂಗಳಾಗಿದೆ. ಪ್ರತಿ ಸೋಮವಾರ ಶ್ರಾವಣ ಸೋಮವಾರ ಆಚರಿಸಲಾಗುವುದು
ಆಗಸ್ಟ್ 9 ಹಾಗೂ ಆಗಸ್ಟ್ 24ರಂದು ಪ್ರದೋಷ ವ್ರತ ಆಚರಿಸಲಾಗುವುದು.

ಶ್ರಾವಣದಲ್ಲಿ ಏಕಾದಶಿ ಉಪವಾಸ
ಪುತ್ರದಾ ಏಕಾದಶಿ- ಆಗಸ್ಟ್ 8
ಅಜಾ ಏಕಾದಶಿ: ಆಗಸ್ಟ್ 23

ಶ್ರಾವಣ ಮಾಸದಲ್ಲಿ ಗಣೇಶನ ಪೂಜೆ
ಆಗಸ್ಟ್ 15ರಂದು ಸಂಕಷ್ಟಿಯನ್ನು ಆಚರಿಸಲಾಗುವುದು. ಈ ಸಂಕಷ್ಟಿ ಆಚರಿಸುವುದರಿಂದ ಬದುಕಿನಲ್ಲಿ ಬರುವ ವಿಘ್ನಗಳು ದೂರಾಗುವುದು.

ಶ್ರಾವಣ ಮಾಸದಲ್ಲಿ ಶುಕ್ಲ ಪಕ್ಷ ಹಾಗೂ ಕೃಷ್ಣ ಪಕ್ಷ
ಶುಕ್ಲ ಪಕ್ಷ ಜುಲೈ 29ರಿಂದ ಆಗಸ್ಟ್ 12
ಕೃಷ್ಣ ಪಕ್ಷ: ಆಗಸ್ಟ್ 12ರಿಂದ ಆಗಸ್ಟ್ 27

ರಕ್ಷಾ ಬಂಧನ'
ಸಹೋದರ-ಸಹೋದರಿ ಸಂಬಂಧದ ಮಹತ್ವವನ್ನು ತಿಳಿಸುವ ಪವಿತ್ರ ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್ 11ರಂದು ಆಚರಿಸಲಾಗುವುದು.

ಶ್ರಾವಣ ಮಾಸದ ಹಬ್ಬಗಳು ಹಾಗೂ ಶುಭ ದಿನ
ಮಧುಶ್ರಾವಣಿ ತೃತೀಯಾ: ಜುಲೈ 31
ದ್ರುವ ಗಣಪತಿ ವ್ರತ: ಆಗಸ್ಟ್ 1
ನಾಗ ಪಂಚಮಿ: ಆಗಸ್ಟ್ 3
ಕಲ್ಕಿ ಜಯಂತಿ: ಆಗಸ್ಟ್ 3
ದ್ರುವ ಅಷ್ಟಮಿ : ಆಗಸ್ಟ್ 5
ವರಲಕ್ಷ್ಮಿ ವ್ರತ: ಆಗಸ್ಟ್ 12
ರಿಗ್ ಶ್ರಾವಣಿ: ಆಗಸ್ಟ್ 11
ರಕ್ಷಾ ಬಂಧನ: ಆಗಸ್ಟ್ 11
ಶ್ರೀ ಕೃಷ್ಣ ಜಯಂತಿ: ಆಗಸ್ಟ್ 18



Click it and Unblock the Notifications