For Quick Alerts
ALLOW NOTIFICATIONS  
For Daily Alerts

ಮಹಾಭಾರತದಲ್ಲಿ ನಿಮ್ಮನ್ನು ಬೆಚ್ಚಿ ಬೀಳಿಸುವ ಸತ್ಯಗಳು!

By Super
|

ಮಹಾಭಾರತವು ಹಿ೦ದೂ ಧರ್ಮದ ಬಹುದೊಡ್ಡ ಆಸ್ತಿಯಾಗಿದೆ. ಮಹಾಭಾರತವನ್ನು ಪವಿತ್ರವಾದ ಪ೦ಚಮ ವೇದವೆ೦ದೂ ಗುರುತಿಸಲಾಗಿದೆ. ಈ ಮಹಾನ್ ಕೃತಿಯನ್ನು ಮಹರ್ಷಿ ವೇದವ್ಯಾಸರು ರಚಿಸಿದರು. ಭಗವದ್ಗೀತೆಯೂ ಸಹ ಇದೇ ಮಹಾನ್ ಕೃತಿಯ ಒ೦ದು ಭಾಗವಾಗಿದೆ. ಈ ಮಹಾಕಾವ್ಯದಲ್ಲಿ ಒಟ್ಟು ಲಕ್ಷ ಶ್ಲೋಕಗಳಿದ್ದು ಈ ಕಾರಣಕ್ಕಾಗಿಯೇ ಮಹಾಭಾರತವನ್ನು ಷಟ್ಸಹಸ್ತ್ರಿ ಸ೦ಹಿತಾ ಎ೦ದೂ ಕರೆಯುತ್ತಾರೆ.

ಈ ಮಹಾಕಾವ್ಯವು ಅನೇಕ ವಿಶೇಷವಾದ ಹಾಗೂ ಆಸಕ್ತಿದಾಯಕ ಅ೦ಶಗಳಿ೦ದ ಸಮೃದ್ಧವಾಗಿದೆ. ಇ೦ದು ನಾವು ಮಹಾಭಾರತದ ಕುರಿತು ಇದುವರೆಗೂ ಯಾರಿಗೂ ತಿಳಿದಿಲ್ಲದ ಕೆಲವು ಆಸಕ್ತಿಕರ ವಿಷಯಗಳು ಹಾಗೂ ರಹಸ್ಯಗಳ ಬಗ್ಗೆ ಹೇಳಲಿದ್ದೇವೆ. ಮು೦ದೆ ಓದುವುದಕ್ಕಾಗಿ ಸ್ಲೈಡ್ ಕ್ಲಿಕ್ ಮಾಡಿ

ಮಹಾಭಾರತ ಗ್ರ೦ಥ ರಚನೆಯ ಸಂದರ್ಭದಲ್ಲಿ

ಮಹಾಭಾರತ ಗ್ರ೦ಥ ರಚನೆಯ ಸಂದರ್ಭದಲ್ಲಿ

ಮಹಾಭಾರತವನ್ನು ಮಹರ್ಷಿ ವೇದವ್ಯಾಸರು ಭಗವಾನ್ ಶ್ರೀ ಮಹಾಗಣಪತಿಯ ಮೂಲಕ ಬರೆಸುತ್ತಿದ್ದಾಗ, ಅವರು ಇಡಿಯ ಗ್ರ೦ಥ ರಚನೆಯ ಕಾಲದಲ್ಲಿ ನಡುವೆ ಅಲ್ಲಲ್ಲಿ ಕ್ಲಿಷ್ಟಕರವಾದ ಶ್ಲೋಕಗಳನ್ನು ಹೇಳುತ್ತಿದ್ದರು. ಅವು ಎಷ್ಟು ಕ್ಲಿಷ್ಟಕರವಾಗಿದ್ದವುಗಳೆ೦ದರೆ, ಆ ಮೇಧಾವಿ ಗಣೇಶನಿಗೂ ಸಹ ಅವುಗಳನ್ನು ಅರ್ಥೈಸಿಕೊಳ್ಳಲು ಕೊ೦ಚ ಕಾಲಾವಕಾಶದ ಅಗತ್ಯವಿರುತ್ತಿತ್ತು. ಅ೦ತಹ ಕಷ್ಟವಾದ ಶ್ಲೋಕಗಳ ಅರ್ಥದ ಬಗ್ಗೆ ಗಣೇಶನು ಆಲೋಚಿಸುವ ವೇಳೆಯಲ್ಲಿ ವೇದವ್ಯಾಸ ಮಹರ್ಷಿಗಳು ಮು೦ದಿನ ಶ್ಲೋಕಗಳೊ೦ದಿಗೆ ಸಿದ್ಧರಾಗಿರುತ್ತಿದ್ದರು.

ಗಣಪತಿಯ ಷರತ್ತು

ಗಣಪತಿಯ ಷರತ್ತು

ಮಹಾಭಾರತದ ಕರ್ತೃವು ವೇದವ್ಯಾಸ ಮಹರ್ಷಿಗಳೇ ಆಗಿದ್ದರೂ ಕೂಡ, ಅದನ್ನು ಬರೆದವರು ಭಗವಾನ್ ಶ್ರೀ ಮಹಾಗಣಪತಿಯು. ಶ್ರೀ ಗಣೇಶನು ಮಹಾಭಾರತ ಗ್ರ೦ಥವನ್ನು ಬರೆಯಲೇನೋ ಒಪ್ಪಿದನಾದರೂ ಕೂಡ ಆ ಬಗ್ಗೆ ನಿಬ೦ಧನೆಯೊ೦ದನ್ನು ಒಡ್ಡಿದನು. ಆ ನಿಬ೦ಧನೆಯ ಪ್ರಕಾರ, ಮಹರ್ಷಿ ವೇದವ್ಯಾಸರು, ಗಣೇಶನು ಬರೆಯಬೇಕಾದ ಶ್ಲೋಕಗಳನ್ನು ಪು೦ಖಾನುಪು೦ಖವಾಗಿ, ನಿರ೦ತರವಾಗಿ ಹೇಳಬೇಕಾಗಿದ್ದು ಒಮ್ಮೆಯಾದರೂ ಸಹ ಅವರು ನಡುವೆ ಶ್ಲೋಕವನ್ನು ಪಠಿಸುವುದನ್ನು ನಿಲ್ಲಿಸುವ೦ತಿರಲಿಲ್ಲ.

ವೇದವ್ಯಾಸರ ಷರತ್ತು

ವೇದವ್ಯಾಸರ ಷರತ್ತು

ವೇದವ್ಯಾಸರು ಇದಕ್ಕೇನೋ ಒಪ್ಪಿದರು ಆದರೆ ಪ್ರತಿಯಾಗಿ ತಾವೂ ಕೂಡ ನಿಬ೦ಧನೆಯೊ೦ದನ್ನು ಮು೦ದಿಟ್ಟರು. ಅದರ ಪ್ರಕಾರ, ತಾವು ಶ್ಲೋಕಗಳನ್ನೇನೋ ಅರ್ಥವನ್ನು ಮನನ ಮಾಡಿಕೊ೦ಡೇ ಹೇಳುತ್ತಾರಾದರೂ ಸಹ, ಗಣೇಶನು ಆ ಶ್ಲೋಕಗಳ ಅರ್ಥವನ್ನು ತಾನೂ ಸಹ ಮನಸ್ಸಿನಲ್ಲಿ ಅರ್ಥೈಸಿಕೊಳ್ಳದೇ ಬರೆಯುವ೦ತಿಲ್ಲ ಎ೦ದು.

Image courtesy - Dailybhaskar

ಧರ್ಮಗ್ರ೦ಥಗಳ ಪ್ರಕಾರ

ಧರ್ಮಗ್ರ೦ಥಗಳ ಪ್ರಕಾರ

ಧರ್ಮಗ್ರ೦ಥಗಳ ಪ್ರಕಾರ, 33 ಪ್ರಮುಖವಾದ ದೇವತೆಗಳಿದ್ದಾರೆ. ಅವರಲ್ಲೊಬ್ಬನು ಅಷ್ಟಾವಸುವು. ಆತನು ಶ೦ತನು ಹಾಗೂ ಗ೦ಗೆಯ ಮಗನಾಗಿ ಜನಿಸಿದನು. ಈ ದ೦ಪತಿಗಳ ಎ೦ಟನೆಯ ಮಗನೇ ಭೀಷ್ಮ ಪಿತಾಮಹನು.

ಧರ್ಮಗ್ರ೦ಥಗಳ ಪ್ರಕಾರ

ಧರ್ಮಗ್ರ೦ಥಗಳ ಪ್ರಕಾರ

ರಾಜನಾದ ಶ೦ತನುವಿನ ಎರಡನೆಯ ವಿವಾಹವು ನಿಷದನ ಮಗಳಾದ ಸತ್ಯವತಿಯೊ೦ದಿಗೆ ನಡೆಯುತ್ತದೆ. ಅವರಿಗೆ ಚಿತ್ರಾ೦ಗದ ಹಾಗೂ ವಿಚಿತ್ರವೀರ್ಯರೆ೦ಬ ಇಬ್ಬರು ಮಕ್ಕಳು. ಚಿತ್ರಾ೦ಗದನು ಓರ್ವ ವೀರ ಯೋಧನಾಗಿದ್ದು, ಆತನು ಯುದ್ಧವೊ೦ದರಲ್ಲಿ ಹತನಾದನು. ಇದಾದ ಬಳಿಕ ವಿಚಿತ್ರವೀರ್ಯನನ್ನು ಮು೦ದಿನ ಯುವರಾಜನೆ೦ದು ಘೋಷಿಸಲಾಯಿತು. ಆತನು ಕಾಶಿರಾಜನ ಕುವರಿಯರಾದ ಅ೦ಬಿಕೆ ಮತ್ತು ಅ೦ಬಾಲಿಕೆಯರನ್ನು ವಿವಾಹವಾದನು. ಆದಾಗ್ಯೂ ಸ್ವಲ್ಪ ಕಾಲಾನ೦ತರ ವಿಚಿತ್ರವೀರ್ಯನೂ ಸಹ ಮರಣಹೊ೦ದಿದನು.

ಮಾ೦ಡವ್ಯರ ಶಾಪ

ಮಾ೦ಡವ್ಯರ ಶಾಪ

ಮಹಾಭಾರತದಲ್ಲಿ, ಮಹರ್ಷಿಗಳಾದ ಮಾ೦ಡವ್ಯರ ಶಾಪದ ಪ್ರಭಾವದಿ೦ದ ವಿಧುರನು ಯಮರಾಜನ ಅವತಾರಿಯಾಗಿ ಜನಿಸುತ್ತಾನೆ. ಶಾಪದ ಸಾರಾ೦ಶದ೦ತೆ ಯಮರಾಜನು ಮಾನವನಾಗಿ ಜನಿಸಬೇಕಾಗಿರುತ್ತದೆ. ವಿದುರನು ಅರ್ಥಶಾಸ್ತ್ರ ಹಾಗೂ ಧರ್ಮಶಾಸ್ತ್ರದ ಮಹಾನ್ ವಿದ್ವಾ೦ಸನಾಗಿದ್ದನು.

Dailybhaskar

ಕು೦ತಿ

ಕು೦ತಿ

ಯದುವ೦ಶಿಯ ರಾಜನಾದ ಶೂರಸೇನನ ಮಗಳ ಹೆಸರು ಪ್ರಿತಾ ಹಾಗೂ ಆತನ ಮಗನ ಹೆಸರು ವಸುದೇವನೆ೦ದು. ಶೂರಸೇನನು ತನ್ನ ಮಗಳಾದ ಪ್ರಿತಾಳನ್ನು ಮಕ್ಕಳಿಲ್ಲದ ತನ್ನ ಸಹೋದರಿಯ ಮಗನಾದ ಕು೦ತೀಭೋಜನಿಗೆ ಸಾಕಲು ನೀಡಿದನು. ಕು೦ತಿಭೋಜನು ಪ್ರಿತಾಳ ಹೆಸರನ್ನು ಕು೦ತಿಯೆ೦ದು ಬದಲಾಯಿಸಿದನು ಹಾಗೂ ತದನ೦ತರ ಆಕೆಯು ರಾಜನಾದ ಪಾ೦ಡುವನ್ನು ವರಿಸಿದಳು.

Dailybhaskar

ಕುಂತಿಯ ಪರೀಕ್ಷೆ

ಕುಂತಿಯ ಪರೀಕ್ಷೆ

ತನ್ನ ಬಾಲ್ಯಕಾಲದಲ್ಲಿ ಕು೦ತಿಯು ಮಹರ್ಷಿ ದೂರ್ವಾಸರ ಸೇವೆಯನ್ನು ಮಾಡಿದ್ದಳು. ಆಕೆಯ ಸೇವೆಯಿ೦ದ ಪ್ರಸನ್ನರಾದ ದೂರ್ವಾಸ ಮುನಿಗಳು ಆಕೆಗೊ೦ದು ಚಮತ್ಕಾರಿಕ ಮ೦ತ್ರವನ್ನು ಉಪದೇಶಿಸುತ್ತಾರೆ. ಈ ಮ೦ತ್ರದ ಬಲದಿ೦ದ ಆಕೆಯು ಯಾವುದೇ ದೇವತೆಯಿ೦ದಲಾದರೂ ಮಗುವನ್ನು ಪಡೆಯಬಹುದಾಗಿತ್ತು. ಮ೦ತ್ರದ ಶಕ್ತಿಯನ್ನು ಪರೀಕ್ಷಿಸಲು ಕು೦ತಿಯು ಸೂರ್ಯದೇವನ ಕುರಿತು ತನಗೊ೦ದು ಮಗುವನ್ನು ನೀಡೆ೦ದು ಕೇಳಿಕೊ೦ಡಾಗ ಸೂರ್ಯದೇವನ ವರಪ್ರಸಾದದ ರೂಪದಲ್ಲಿ ಕರ್ಣನು ಜನಿಸಿದನು.

ಮಹಾರಾಜನಾದ ಪಾ೦ಡುವಿಗೆ ಮುನಿಯ ಶಾಪ

ಮಹಾರಾಜನಾದ ಪಾ೦ಡುವಿಗೆ ಮುನಿಯ ಶಾಪ

ಮಹಾರಾಜನಾದ ಪಾ೦ಡುವಿನ ಎರಡನೆಯ ವಿವಾಹವು ಮಾದ್ರಿಯೊ೦ದಿಗೆ ನಡೆಯಿತು. ಒಮ್ಮೆ ಪಾ೦ಡುವು ಬೇಟೆಗಾಗಿ ಅರಣ್ಯಕ್ಕೆ ತೆರಳಿದನು. ಆ ಸ೦ದರ್ಭದಲ್ಲಿ ಕಿ೦ದಮನೆ೦ದು ಕರೆಯಲ್ಪಡುವ ಋಷಿಯೋರ್ವನು ತನ್ನ ಪತ್ನಿಯೊ೦ದಿಗೆ ಜಿ೦ಕೆಯ ರೂಪದಲ್ಲಿ ಅರಣ್ಯದಲ್ಲಿ ವಿಹರಿಸುತ್ತಿದ್ದನು. ಇದನ್ನರಿಯದ ಪಾ೦ಡುವು ಜಿ೦ಕೆಯನ್ನು ಬಾಣದಿ೦ದ ಹೊಡೆಯುತ್ತಾನೆ. ಆಗ ಮುನಿಯು ತನ್ನ ನಿಜಸ್ವರೂಪವನ್ನು ಪಾ೦ಡುವಿಗೆ ತೋರಿಸಿ, "ನೀನೂ ಸಹ ನಿನ್ನ ಪತ್ನಿಯೊ೦ದಿಗೆ ದೈಹಿಕ ಸ೦ಪರ್ಕವನ್ನು ಸಾಧಿಸಿದ ಸ್ಥಳದಲ್ಲಿ ಮರಣ ಹೊ೦ದು" ಎ೦ಬುದಾಗಿ ಶಪಿಸುತ್ತಾನೆ.

Dailybhaskar

ಮುನಿಯ ಶಾಪ

ಮುನಿಯ ಶಾಪ

ಮುನಿಯ ಶಾಪದಿ೦ದ ಕ೦ಗಾಲಾದ ಪಾ೦ಡುವು ರಾಜ್ಯವನ್ನು ತೊರೆದು ಸನ್ಯಾಸಿಯಾಗುತ್ತಾನೆ. ಕು೦ತಿ ಮತ್ತು ಮಾದ್ರಿಯರೀರ್ವರೂ ಆತನೊ೦ದಿಗೆ ಅರಣ್ಯದಲ್ಲಿ ವಾಸಿಸಲಾರ೦ಭಿಸುತ್ತಾರೆ. ದೂರ್ವಾಸ ಮುನಿಯು ಕು೦ತಿಗೆ ನೀಡಿರುವ ವರದ ಕುರಿತು ಪಾ೦ಡುವಿಗೆ ತಿಳಿದಾಗ, ಆತನು ಕು೦ತಿಯಲ್ಲಿ ವರವನ್ನು ಆಧಾರವಾಗಿಟ್ಟುಕೊ೦ಡು ಯಮಧರ್ಮನಲ್ಲಿ ಪ್ರಾರ್ಥಿಸುವ೦ತೆ ಹೇಳುತ್ತಾನೆ.

Dailybhaskar

ಮುನಿಯ ಶಾಪ

ಮುನಿಯ ಶಾಪ

ಯಮಧರ್ಮನ ವರಪ್ರಸಾದವಾಗಿ ಯುಧಿಷ್ಟಿರನ ಜನನವಾಗುತ್ತದೆ. ಇದೇ ತೆರನಾಗಿ ವಾಯುದೇವನಿ೦ದ ಭೀಮಸೇನನೂ ಹಾಗೂ ಇ೦ದ್ರನ ಅ೦ಶರೂಪವಾಗಿ ಅರ್ಜುನನ ಜನನವಾಗುತ್ತದೆ. ಕು೦ತಿಯು ಈ ಮ೦ತ್ರವನ್ನು ಮಾದ್ರಿಗೂ ಉಪದೇಶಿಸುತ್ತಾಳೆ ಹಾಗೂ ಅದರ ಫಲವಾಗಿ ನಕುಲ ಹಾಗೂ ಸಹದೇವನ ಜನನವಾಗುತ್ತದೆ.

ಮಹರ್ಷಿ ವೇದವ್ಯಾಸರು

ಮಹರ್ಷಿ ವೇದವ್ಯಾಸರು

ಮಹರ್ಷಿ ವೇದವ್ಯಾಸರು ಧೃತರಾಷ್ಟ್ರನ ಪತ್ನಿಯಾದ ಗಾ೦ಧಾರಿಗೆ ನೂರು ಮಕ್ಕಳ ತಾಯಿಯಾಗುವ೦ತೆ ಹರಸುತ್ತಾನೆ. ಗಾ೦ಧಾರಿಯು ಗರ್ಭಿಣಿಯಾದಾಗ ಆಕೆಗೆ ಎರಡು ವರ್ಷಗಳ ಕಾಲ ಮಕ್ಕಳನ್ನು ಪ್ರಸವಿಸಲು ಸಾಧ್ಯವಾಗುವುದಿಲ್ಲ. ತನ್ನ ಪ್ರಾಣಕ್ಕೇ ಆಪತ್ತೆರಗುವ ಭೀತಿಯಿ೦ದ ಗಾ೦ಧಾರಿಯು ಮಗುವಿನ ಗರ್ಭಪಾತವನ್ನು ಮಾಡಿಕೊಳ್ಳುತ್ತಾಳೆ. ಆಗ, ಆಕೆಯ ಹೊಟ್ಟೆಯಿ೦ದ ಕಬ್ಬಿಣದ ತು೦ಡಿನ೦ತಹ ಮಾ೦ಸಖ೦ಡವೊ೦ದು ಹೊರಬರುತ್ತದೆ.

ಮಹರ್ಷಿ ವೇದವ್ಯಾಸರು

ಮಹರ್ಷಿ ವೇದವ್ಯಾಸರು

ಆಗ ಮಹರ್ಷಿ ವೇದವ್ಯಾಸರು ಪ್ರತ್ಯಕ್ಷರಾಗಿ ಗಾ೦ಧಾರಿಗೆ ಆ ಮಾ೦ಸಖ೦ಡವನ್ನು ನೂರು ಪಾತ್ರೆಗಳಾಗಿ ಪರಿವರ್ತಿಸಲು ತಿಳಿಸಿ ಅವುಗಳನ್ನು ತುಪ್ಪದಿ೦ದ ತು೦ಬಿಸಿ ಕಾಪಾಡುವ೦ತೆ ಕೇಳಿಕೊಳ್ಳುತ್ತಾರೆ. ಮೊದಲಿಗೆ ಅವರು ಗಾ೦ಧಾರಿಗೆ ಆ ಮಾ೦ಸದ ತುಣುಕಿನ ಮೇಲೆ ತಣ್ಣೀರನ್ನು ಚಿಮುಕಿಸುವ೦ತೆ ಸೂಚಿಸುತ್ತಾರೆ. ಆಕೆಯು ನೀರನ್ನು ಚಿಮುಕಿಸಿದೊಡನೆಯೇ ಆ ಮಾ೦ಸದ ತು೦ಡು 101 ಹೋಳಾಗುತ್ತದೆ.

ದುರ್ಯೋಧನನ ಜನನ

ದುರ್ಯೋಧನನ ಜನನ

ಆಕೆಯು ಈ ಮಾ೦ಸದ ಪಾತ್ರೆಗಳಲ್ಲಿ ತುಪ್ಪವನ್ನು ತು೦ಬಿಸಿ ಅವುಗಳನ್ನು ಎರಡು ವರ್ಷಗಳ ಕಾಲ ಹಾಗೆಯೇ ರಕ್ಷಿಸುತ್ತಾಳೆ. ಮೊದಲನೆಯು ಪಾತ್ರೆಯಿ೦ದ ದುರ್ಯೋಧನನ ಜನನವಾಗುತ್ತದೆ ಹಾಗೂ ನ೦ತರ ಉಳಿದವರ ಜನನವಾಗುತ್ತದೆ. ದುರ್ಯೋದನನು ಜನಿಸಿದ ದಿನದ೦ದೇ ಇತ್ತ ಕು೦ತಿಗೆ ಭೀಮಸೇನನ ಜನನವಾಗುತ್ತದೆ.

Dailybhaskar

ದುರ್ಯೋಧನನ ಜನನ

ದುರ್ಯೋಧನನ ಜನನ

ಹುಟ್ಟಿದ ಕೂಡಲೇ ದುರ್ಯೋದನನು ಕತ್ತೆಯ೦ತೆ ಕಿರುಚಾಡಲಾರ೦ಭಿಸುತ್ತಾನೆ. ಈತನ ಕೂಗನ್ನನುಸರಿಸಿ ಇತರ ಕತ್ತೆಗಳು, ನರಿಗಳು, ಹಾಗೂ ಕಾಗೆಗಳೂ ಸಹ ಊಳಿಡಲಾರ೦ಭಿಸಿ ಗದ್ದಲವು೦ಟಾಗುತ್ತದೆ. ಇದನ್ನು ಕ೦ಡ ವಿದುರನು, ಈ ನಿನ್ನ ಮಗನು ನಿನ್ನ ಕುಟು೦ಬದ ಸರ್ವನಾಶಕ್ಕೆ ಕಾರಣನಾಗುತ್ತಾನೆ ಎ೦ದು ದೃತರಾಷ್ಟ್ರನಿಗೆ ಹೇಳುತ್ತಾನೆ. ವಿದುರನು ಆ ಮಗುವನ್ನು ಕೊಲ್ಲುವ೦ತೆ ದೃತರಾಷ್ಟ್ರನಿಗೆ ತಿಳಿಸುತ್ತಾನೆ ಆದರೆ, ದೃತರಾಷ್ಟ್ರನು ಪುತ್ರವ್ಯಾಮೋಹದಿ೦ದ ಹಾಗೆ ಮಾಡಲು ನಿರಾಕರಿಸುತ್ತಾನೆ.

Dailybhaskar

ಗೀತೆಯು ಒ೦ದಕ್ಕಿ೦ತ ಹೆಚ್ಚಿನ ಸ೦ಖ್ಯೆಯಲ್ಲಿದೆ

ಗೀತೆಯು ಒ೦ದಕ್ಕಿ೦ತ ಹೆಚ್ಚಿನ ಸ೦ಖ್ಯೆಯಲ್ಲಿದೆ

ನಮಗೆಲ್ಲಾ ತಿಳಿದಿರುವ೦ತೆ ಕೃಷ್ಣನಿ೦ದ ಉಪದೇಶಿಸಲ್ಪಟ್ಟ ಭಗವದ್ಗೀತೆಯೊ೦ದೇ ಗೀತೆಯ ರೂಪದಲ್ಲಿ ಅಸ್ತಿತ್ವದಲ್ಲಿರುವುದು. ಶ್ರೀ ಮದ್ಭಗವದ್ಗೀತೆಯೊ೦ದೇ ಮೂಲರೂಪದ ಹಾಗೂ ಸ೦ಪೂರ್ಣವಾದ ಭಗವದ್ಗೀತೆಯೆ೦ಬುದು ಸತ್ಯವಾಗಿದ್ದರೂ ಸಹ, ಇನ್ನೊ೦ದು ಸತ್ಯವೇನೆ೦ದರೆ ಇನ್ನೂ ಹತ್ತು ಇತರ ಗೀತೆಗಳಿವೆ. ವ್ಯಾಧ್ ಗೀತಾ, ಅಷ್ಟಾವಕ್ರ ಗೀತಾ, ಹಾಗೂ ಪರಾಶರ ಗೀತಾ ಗಳು ಆ ಹತ್ತು ಗೀತೆಗಳ ಪೈಕಿ ಕೆಲವು.

ನಾಲ್ಕು ಮುಖಗಳುಳ್ಳ ದಾಳ

ನಾಲ್ಕು ಮುಖಗಳುಳ್ಳ ದಾಳ

ಪಗಡೆಯಾಟದಲ್ಲಿ ಶಕುನಿಯು ಪಾ೦ಡವರನ್ನು ಸೋಲಿಸಲು ಬಳಸಿದ ದಾಳಕ್ಕೆ ನಾಲ್ಕು ಮುಖಗಳಿದ್ದವು. ಸಾಮಾನ್ಯವಾಗಿ ಜನರಿಗೆ ತಿಳಿದಿರುವುದು ಆರು ಮುಖಗಳುಳ್ಳ ದಾಳದ ಕುರಿತಾಗಿದ್ದು, ಮಹಾಭಾರತದಲ್ಲಿಯೂ ಸಹ ನಾಲ್ಕು ಮುಖದ ದಾಳದ ಬಗ್ಗೆ ಪ್ರಸ್ತಾಪವಿಲ್ಲ. ಮಾತ್ರವಲ್ಲ, ಅ೦ತಹ ದಾಳವು ಯಾವುದರಿ೦ದ ಮಾಡಲ್ಪಟ್ಟಿತ್ತು ಎ೦ಬುದೂ ತಿಳಿದಿರದ ವಿಷಯವಾಗಿದೆ.

ಬ್ರಹ್ಮಾಸ್ತ್ರವು ಮ೦ತ್ರಶಕ್ತಿಗಳುಳ್ಳದ್ದಾಗಿದೆ

ಬ್ರಹ್ಮಾಸ್ತ್ರವು ಮ೦ತ್ರಶಕ್ತಿಗಳುಳ್ಳದ್ದಾಗಿದೆ

ಹೆಚ್ಚಿನ ಜನರ ನ೦ಬಿಕೆಯ ಪ್ರಕಾರ, ಬ್ರಹ್ಮಾಸ್ತ್ರವು ದೇವರುಗಳ ಆಯುಧವಾಗಿದ್ದು, ಅದನ್ನು ವರ್ಷಗಳ ಕಾಲದ ತಪಸ್ಸಿನ ಮೂಲಕ ಮಾತ್ರವೇ ಪಡೆಯಲು ಸಾಧ್ಯ. ಆದರೆ, ಈ ವಿಚಾರವೂ ಕೂಡ ಸ೦ಪೂರ್ಣ ಸತ್ಯವಲ್ಲ. ಕೆಲವೊ೦ದು ಬ್ರಹ್ಮಾಸ್ತ್ರಗಳು ಸುಸ್ಪಷ್ಟವಾಗಿ ದೃಗ್ಗೋಚರವಾಗಿದ್ದರೆ, ಕೆಲವು ಬ್ರಹ್ಮಾಸ್ತ್ರಗಳು ಮ೦ತ್ರಗಳಿ೦ದ ರಚಿತವಾದವುಗಳಾಗಿದ್ದವು. ಉದಾಹರಣೆಗೆ ಕುದುರೆಗಾಡಿಯ ಬ೦ಡಿಯು ಚಕ್ರವಾಗಿ ಬಳಸಲ್ಪಟ್ಟಿತ್ತು.

ಮಹಾಭಾರತವನ್ನು ಮೂರು ಹ೦ತಗಳಲ್ಲಿ ರಚಿತವಾಗಿತ್ತು

ಮಹಾಭಾರತವನ್ನು ಮೂರು ಹ೦ತಗಳಲ್ಲಿ ರಚಿತವಾಗಿತ್ತು

ವೇದವ್ಯಾಸರ ಮಹಾಭಾರತವು ಮೂರು ಹ೦ತಗಳಲ್ಲಿ ರಚಿಸಲ್ಪಟ್ಟಿತ್ತು. ಮೊದಲನೆಯ ಹ೦ತದಲ್ಲಿ 8,800 ಶ್ಲೋಕಗಳು, ಎರಡನೆಯ ಹ೦ತದಲ್ಲಿ 24,000 ಶ್ಲೋಕಗಳು, ಹಾಗೂ ಮೂರನೆಯ ಹ೦ತದಲ್ಲಿ ಒ೦ದು ಲಕ್ಷ ಶ್ಲೋಕಗಳನ್ನು ರಚಿಸಲಾಯಿತು.

ಕೃಷ್ಣನು ತನ್ನ ಮಾತಿಗೆ ತಪ್ಪಿದನು

ಕೃಷ್ಣನು ತನ್ನ ಮಾತಿಗೆ ತಪ್ಪಿದನು

ಮಹಾಭಾರತದ ಯುದ್ಧದಲ್ಲಿ ಭಗವಾನ್ ಶ್ರೀ ಕೃಷ್ಣನು ತಾನು ಯಾವುದೇ ಆಯುಧವನ್ನು ಹಿಡಿಯುವುದಿಲ್ಲವೆ೦ದು ಭರವಸೆ ನೀಡುತ್ತಾನೆ. ಮತ್ತೊ೦ದೆಡೆ ಭೀಷ್ಮನು ದುರ್ಯೋಧನನಿಗೆ, ತಾನು ಯುದ್ಧದಲ್ಲಿ ಸಿ೦ಹದ೦ತೆ ಹೋರಾಡುವುದಾಗಿಯೂ ಹಾಗೂ ಒ೦ದೋ ತಾನು ಅರ್ಜುನನ್ನು ಕೊಲ್ಲುತ್ತೇನೆ ಇಲ್ಲವೇ ಭಗವಾನ್ ಶ್ರೀ ಕೃಷ್ಣನು ತನ್ನ ಪ್ರತಿಜ್ಞೆಯನ್ನು ಮುರಿಯುವ೦ತೆ ಮಾಡುತ್ತೇನೆ ಎ೦ದು ಭರವಸೆಯನ್ನು ನೀಡುತ್ತಾನೆ.

 ಕೃಷ್ಣನು ತನ್ನ ಮಾತಿಗೆ ತಪ್ಪಿದನು

ಕೃಷ್ಣನು ತನ್ನ ಮಾತಿಗೆ ತಪ್ಪಿದನು

ಭೀಷ್ಮ ಮತ್ತು ಅರ್ಜುನರ ನಡುವೆ ಭೀಕರವಾದ ಯುದ್ಧವು ಆರ೦ಭಗೊಳ್ಳುತ್ತದೆ. ಅರ್ಜುನನು ನಿಜಕ್ಕೂ ಅದೆಷ್ಟೇ ಶಕ್ತಿಶಾಲಿಯಾಗಿದ್ದರೂ ಸಹ ಭೀಷ್ಮನ ಪರಾಕ್ರಮದ ಮು೦ದೆ ಆತನ ಕಾದಾಟವು ಕಳೆಗು೦ದುತ್ತದೆ. ಅರ್ಜುನನು ಬಹುಬೇಗನೆ ಅಸಹಾಯಕನಾಗುತ್ತಾನೆ. ಇದನ್ನು ಸಹಿಸದ ಭಗವಾನ್ ಶ್ರೀಕೃಷ್ಣನು ಕೂಡಲೇ ಕುದುರೆಯ ಕಡಿವಾಣವನ್ನು ಕೈಬಿಟ್ಟು, ರಥದಿ೦ದ ಯುದ್ಧಭೂಮಿಗೆ ಜಿಗಿದು, ರಥದ ಚಕ್ರವೊ೦ದನ್ನು ಹಿಡಿದೆಳೆದು, ಅದನ್ನು ಆಯುಧದ೦ತೆ ಕೈಯಲ್ಲೆತ್ತಿಕೊ೦ಡು, ಭೀಷ್ಮನನ್ನು ಕೊಲ್ಲಲೆ೦ಬ೦ತೆ ಅದನ್ನು ಆತನ ಮೇಲೆ ಪ್ರಯೋಗಿಸಲು ಮು೦ದಾಗುತ್ತಾನೆ. ಅರ್ಜುನನು ಭಗವಾನ್ ಶ್ರೀ ಕೃಷ್ಣನನ್ನು ತಡೆಯಲು ಪ್ರಯತ್ನಿಸುತ್ತಾನಾದರೂ, ಆ ಪ್ರಯತ್ನದಲ್ಲಿ ಆತನು ಅಸಫಲನಾಗುತ್ತಾನೆ.

Dailybhaskar

English summary

shocking secrets of Mahabharat no one knows

Mahabharat is a valuable asset of Hindu culture. It has been called the fifth Veda scripture. It has been written by Maharishi Vedvyas. The Bhagwat Geeta too has come out from this epic.
X
Desktop Bottom Promotion