For Quick Alerts
ALLOW NOTIFICATIONS  
For Daily Alerts

Shattila Ekadashi 2023 : ಜ.18ಕ್ಕೆ ಷಟ್ತಿಲಾ ಏಕಾದಶಿ: ನಿಮ್ಮ ಇಷ್ಟಾರ್ಥ ನೆರವೇರಲು ಎಳ್ಳು, ಅನ್ನದಾನ ಮಾಡಿ

|

ವರ್ಷದಲ್ಲಿ 24 ಏಕಾದಶಿ ಆಚರಿಸಲಾಗುವುದು, ಒಂದೊಂದು ಏಕಾದಶಿಗೂ ಅದರದ್ದೇ ಆದ ಮಹತ್ವವಿದೆ. ಇಂದು ಜನವರಿ 18ಕ್ಕೆ ಷಟ್ತಿಲಾ ಏಕಾದಶಿ ಆಚರಿಸಲಾಗುವುದು. ಮಾಘ ಮಾಸದ ಏಕಾದಶಿಯಂದು ಈ ಷಟ್ತಿಲಾ ಏಕಾದಶಿ ಆಚರಿಸಲಾಗುವುದು.

Shattila Ekadashi 2023

ಈಗಷ್ಟೇ ಸಂಕ್ರಾಂತಿ ಹಬ್ಬ ಮುಗಿದಿದೆ, ಸಂಕ್ರಾಂತಿಯನ್ನು ಎಳ್ಳು ಬೆಲ್ಲ ಹಂಚಿ ಖುಷಿಪಟ್ಟಿದ್ದೆವು, ಅದಾದ ಮೇಲೆ ಬಂದಿರುವ ಈ ಷಟ್ತಿಲಾ ಎಕಾದಶಿಯಲ್ಲೂ ಎಳ್ಳಿಗೆ ತುಂಬಾನೇ ಮಹತ್ವವಿದೆ. ಈ ದಿನ ಎಳ್ಳು ದಾನ ಮಾಡಬೇಕೆಂದು ಹೇಳಲಾಗುವುದು.

ಷಟ್ತಿಲಾ ಆಚರಣೆಯ ಪ್ರಯೋಜನಗಳೇನು? ಈ ದಿನ ಎಳ್ಳು ಏಕೆ ದಾನ ಮಾಡಬೇಕು, ಈ ಏಕಾದಶಿಯಂದು ಏನು ಮಾಡಬೇಕು, ಏನು ಮಾಡಬಾರದು, ಪೌರಾಣಿಕ ಹಿನ್ನೆಲೆ ತಿಳಿಯೋಣ ಬನ್ನಿ:

ಏಕಾದಶಿ

ಏಕಾದಶಿ

ಏಕಾದಶಿ ತಿಥಿ ಪ್ರಾರಂಭ: ಜನವರಿ 17 ಸಂಜೆ 06:05ಕ್ಕೆ

ಏಕಾದಶಿ ತಿಥಿ ಮುಕ್ತಾಯ: 18, ಜನವರಿ ಸಂಜೆ 04:03ಕ್ಕೆ

ಜನವರಿ 18ಕ್ಕೆ ಉಪವಾಸವಿದ್ದು ಏಕಾದಶಿ ಆಚರಿಸಲಾಗುವುದು.

ಷಟ್ತಿಲಾ ಏಕಾದಶಿಯಂದು ಏನು ಮಾಡಬೇಕು?

ಷಟ್ತಿಲಾ ಏಕಾದಶಿಯಂದು ಏನು ಮಾಡಬೇಕು?

ಷಟ್ತಿಲಾ ಏಕಾದಶಿ ಕತೆ ಕೇಳಿ

ಯಾರು ಈ ಉಪವಾಸ ಆಚರಿಸುತ್ತಾರೋ ಅವರಿಗೆ ಕಷ್ಟಗಳು ನಿವಾರಣೆಯಾಗಿ ಅವರ ಇಷ್ಟಾರ್ಥಗಳು ನೆರವೇರುವುದು. ಮನೆಯಲ್ಲಿ ಸುಳ-ನೆಮ್ಮದಿ-ಐಶ್ವರ್ಯ ಇರುತ್ತದೆ. ಈ ದಿನ ಉಪವಾಸ ಇರಲು ಸಾಧ್ಯವಾಗದಿದ್ದರೆ ಏಕಾದಶಿ ಕತೆಯನ್ನು ಕೇಳಿದರೂ ಪುಣ್ಯ ಲಭಿಸಲಿದೆ.

ಷಟ್ತಿಲಾ ಏಕಾದಶಿಯಂದು ಏನು ಮಾಡಬೇಕು?

*ಷಟ್ತಿಲಾ ಏಕಾದಶಿಯ ದಿನ ಹಸುವಿನ ಸಗಣಿ, ಹತ್ತಿ, ಎಳ್ಳು ಬೆರೆಸಿ ಹಸುವಿನ ರೊಟ್ಟಿಗಳನ್ನು ಮಾಡಿ ಹವನ ಮಾಡಬೇಕು.

* ಏಕಾದಶಿಯ ದಿನದಂದು ದೇವರನ್ನು ಪೂಜಿಸಿ ರಾತ್ರಿ ಜಾಗರಣೆ ಮಾಡಿ ಧ್ಯಾನ ಮಾಡಿ.

* ಏಕಾದಶಿಯ ದಿನದಂದು ಸಿಹಿತಿಂಡಿ, ತೆಂಗಿನಕಾಯಿ ಮತ್ತು ಸುಪಾರಿಯೊಂದಿಗೆ ಅರ್ಘ್ಯವನ್ನು ಅರ್ಪಿಸಿ ವಿಷ್ಣುವನ್ನು ಸ್ತುತಿಸಿ.

* ಮರುದಿನ, ವಿಷ್ಣು ದೇವರನ್ನು ಧೂಪ, ದೀಪದಿಂದ ಪೂಜಿಸಿ ಮತ್ತು ನೈವೇದ್ಯ ಅರ್ಪಿಸಿ.

* ಈ ದಿನ ತಪ್ಪದೆ ಅನ್ನದಾನ ಮಾಡಿ

ಷಟ್ತಿಲಾ ಏಕಾದಶಿ ವ್ರತ ಕಥೆ: ಅನ್ನದಾನದ ಮಹತ್ವ

ಷಟ್ತಿಲಾ ಏಕಾದಶಿ ವ್ರತ ಕಥೆ: ಅನ್ನದಾನದ ಮಹತ್ವ

ಪದ್ಮ ಪುರಾಣದ ಪ್ರಕಾರ, ಪ್ರಾಚೀನ ಕಾಲದಲ್ಲಿ ಒಬ್ಬ ಮಹಿಳೆಯಿದ್ದಳು,ಅ ವಳು ವಿಷ್ಣುವನ್ನು ತುಂಬಾ ರಾಧಿಸುತ್ತಿದ್ದಳು. ವಿಷ್ಣುವಿನ ಯಾವುದೇ ಪಪೂಜೆ, ಉಪವಾಸ ತಪ್ಪಿಸುತ್ತಿರಲಿಲ್ಲ. ಉಪವಾಸವನ್ನು ಮಾಡಿದ್ದರಿಂದ ಆಕೆಯ ದೇಹ ಶುದ್ಧವಾಯಿತು. ಶ್ರೀ ವಿಷ್ಣುವಿನ ಭಕ್ತೆಯಾದ ನನಗೆ ಮೋಕ್ಷ ಸಿಗುವುದೆಂದೇ ನಂಬಿದ್ದಳು. ಆದರೆ ಅವರು ತಮ್ಮ ಜೀವಿತಾವಧಿಯಲ್ಲಿ ಆಹಾರವನ್ನು ದಾನ ಮಾಡಿರಲಿಲ್ಲ. ಆ ಮಹಿಳೆ ತನ್ನ ಮರಣದ ನಂತರ ವೈಕುಂಠ ತಲುಪಿದಾಗ ಅಲ್ಲಿ ಅವಳಿ ಆಶ್ಚಯ ಎದುರಾಗಿತ್ತು, ವಿಷ್ಣುವಿನ ಪ್ರತಿಯೊಂದು ಪೂಜೆ, ಪುರಸ್ಕಾರ ಮಾಡಿದರೂ ವೈಕುಂಠದಲ್ಲಿ ಅವಳಿಗಾಗಿ ಖಾಲಿ ಗುಡಿಸಲು ನೀಡಲಾಗಿತ್ತು.

ಮಹಿಳೆಗೆ ತುಂಬಾ ದುಃಖವಾಯಿತು, ಶ್ರೀವಿಷ್ಣುವಿನ ಬಳಿ ಹೋಗಿ ನಾನು ನಿನ್ನ ಭಕ್ತೆ, ಪ್ರತಿಯೊಂದು ಉಪವಾಸ ಮಾಡುತ್ತಿದ್ದೆ, ಪೂಜೆ ನಿಯಮಗಳನ್ನು ಚಾಚು ತಪ್ಪದೆ ಪಾಲಿಸುತ್ತಿದ್ದೆ ನನಗೇಕೆ ಖಾಲಿ ಗುಡಿಸಲು ಸಿಕ್ಕಿದೆ..? ಆಗ ದೇವರು ನೀನು ಪೂಜೆ , ಪುರಸ್ಕಾರ ಎಲ್ಲಾ ಮಾಡಿದ್ದೀಯ, ನಿನ್ನ ಪೂಜೆಯ ಫಲದಿಂದ ವೈಕುಂಠಕ್ಕೆ ಬಂದಿದ್ದೀಯ, ಆದರೆ ನಿನ್ನ ಜೀವನದಲ್ಲಿ ನೀನು ಯಾವತ್ತೂ ಏನನ್ನೂ ದಾನ ಮಾಡಿಲ್ಲ ಆದ್ದರಿಂದ ನಿನಗೆ ಈ ಫಲ ಸಿಕ್ಕಿದೆ ಎಂದು ಹೇಳುತ್ತಾನೆ. ನಂತರ ವಿಷ್ಣು ಒಮ್ಮೆ ನಾನು ನಿನ್ನ ಉದ್ಧಾರಕ್ಕಾಗಿ ಭಿಕ್ಷೆ ಕೇಳಲು ಬಂದಿದ್ದೆ, ಆದರೆ ನೀನು ಆಹಾರ ನೀಡುವ ಬದಲಿಗೆ ನನಗೆ ಮಣ್ಣಿನ ಮುದ್ದೆ ನೀಡಿದೆ. ಹಾಗಾಗಿ ವೈಕುಂಠದಲ್ಲಿ ತೃಪ್ತಿ ಸಿಗಲ್ಲ ಎಂದು ಹೇಳುತ್ತಾನೆ.

ಭಗವಾನ್ ವಿಷ್ಣುವಿನ ಮಾತುಗಳನ್ನು ಕೇಳಿದ ಮಹಿಳೆಗೆ ತುಂಬಾ ಪಶ್ಚಾತ್ತಾಪವಾಗುತ್ತೆ, ಆಕೆ ನಾನು ಮಾಡಿದ ತಪ್ಪನ್ನು ಸರಿಪಡಿಸುವ ಮಾರ್ಗವನ್ನು ಭಗವಂತನಲ್ಲಿ ಕೇಳಿದಳು. ಆಗ ಶ್ರೀ ಹರಿಯು ದೇವ ಕನ್ಯೆಯರು ನಿನ್ನನ್ನು ಭೇಟಿಯಾಗಲು ಬರುತ್ತಾರೆ, ಅವರನ್ನು ನಿನ್ನಗುಡಿಸಲಿಗೆ ಆಹ್ವಾನಿಸಬೇಕು, ನಂತರ ಅವರು ಷಟ್ತಿಲಾ ಏಕಾದಶಿಯ ಉಪವಾಸದ ಕತೆ ಬಗ್ಗೆ ಹೇಳುವವರೆಗೆ ಗುಡಿಸಲ ಬಾಗಿಲು ತೆರೆಯಬೇಡ ಎಂದನು. ಅದರಂತೆ ದೇವಕನ್ಯೆಯರು ಬಂದಾಗ ಮಹಿಳೆ ಅವರನ್ನು ತನ್ನ ಗುಡಿಸಿಲಿಗೆ ಆಹ್ವಾನಿಸಿ ಅವರ ಬಳಿ ಷಟ್ತಿಲಾ ಏಕಾದಶಿ ಬಗ್ಗೆ ಕತೆ ಹೇಳಲು ಬೇಡಿಕೊಳ್ಳುತ್ತಾಳೆ. ಅವರು ಷಟ್ತಿಲಾ ಏಕಾದಶಿಯ ಮಹತ್ವವನ್ನು ಹೇಳುತ್ತಾರೆ. ಅದರ ನಂತರ ಮಹಿಳೆಯು ವಿಧಿ - ವಿಧಾನಗಳ ಪ್ರಕಾರ ಷಟ್ತಿಲಾ ಏಕಾದಶಿ ವ್ರತವನ್ನು ಪೂರ್ಣಗೊಳಿಸುತ್ತಾಳೆ. ಇದರಿಂದ ಆಕೆಯ ಪಾಪಗಳು ಕಳೆದು ಗುಡಿಸಲಿನಲ್ಲಿ ಅವಳು ಬಯಸಿದಂತೆ ಆಹಾರ ಮತ್ತು ಐಶ್ವರ್ಯ ಸಿಗುವುದು, ವೈಕುಂಠದಲ್ಲಿ ಸಂತೋಷದಿಂದ ಇರುತ್ತಾಳೆ.

English summary

Shattila Ekadashi 2023: Date, Muhurat, Siginificance and Vrat Katha

Shattila Ekadashi 2023:Here are date, muhurat and why important to annadana, read on...
X
Desktop Bottom Promotion