For Quick Alerts
ALLOW NOTIFICATIONS  
For Daily Alerts

ಅ. 19ಕ್ಕೆ ಶರದ್ ಪೂರ್ಣಿಮೆ: ಈ ದಿನ ಲಕ್ಷ್ಮಿಯನ್ನು ಪೂಜಿಸಿದರೆ ಸಂಪತ್ತು ವೃದ್ಧಿಸುವುದು

|

ನವರಾತ್ರಿ ಆಚರಣೆಯ ಬಳಿಕ ಅಶ್ವಿನ್ ತಿಂಗಳ ಹುಣ್ಣಿಮೆಯನ್ನು ಶರದ್ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಶರದ್ ಪೂರ್ಣಿಮಾಗೆ ವಿಶೇಷವಾದ ಮಹತ್ವವಿದೆ. ಶರದ್ ಪೂರ್ಣಿಮೆ ಹೆಸರೇ ಸೂಚಿಸುವಂತೆ ಮೆಲ್ಲನೆ ಚಳಿಯ ಪ್ರಾರಂಭ ಎಂದು ಹೇಳಬಹುದು. ಈ ಸಮಯದಲ್ಲಿ ಚಂದ್ರನು ತುಂಬಾ ಪ್ರಕಾಶಮಾನವಾಗಿರುವುದರಿಂದ ಈ ದಿನ ಚಂದ್ರನು ಅಮೃತವನ್ನು ಸುರಿಸುತ್ತಾನೆ ಎಂದು ನಂಬಲಾಗಿದೆ.

ಶರದ್ ಪೂರ್ಣಿಮೆಯಂದು ಚಂದ್ರನನ್ನು ಪೂಜಿಸುವುದರಿಂದ ಆರೋಗ್ಯ ಪ್ರಾಪ್ರಿಯಾಗುವುದು, ಜೊತೆಗೆ ಈ ದಿನ ಲಕ್ಷ್ಮಿ ದೇವಿಯ ಆರಾಧನೆಯು ತುಂಬಾ ಮಹತ್ವದ್ದಾಗಿದೆ. ಈ ದಿನ ಅಷ್ಟಲಕ್ಷ್ಮಿಯರನ್ನು ಪೂಜಿಸುವುದರಿಂದ ಸಂಪತ್ತು ಮತ್ತು ಧಾನ್ಯ ಹೆಚ್ಚಾಗುವುದು ಎಂದು ಹೇಳಲಾಗುವುದು.

ಈ ದಿನ ಲಕ್ಷ್ಮಿ ಪೂಜೆ ಹೇಗೆ ಮಾಡಬೇಕು, ಲಕ್ಷ್ಮಿ ಪೂಜೆಯಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ:

ಶರದ್ ಪೂರ್ಣಿಮಾ ದಿನಾಂಕ ಮತ್ತು ಸಮಯ

ಶರದ್ ಪೂರ್ಣಿಮಾ ದಿನಾಂಕ ಮತ್ತು ಸಮಯ

ಶರದ್‌ ಪೂರ್ಣಿಮೆ ದಿನಾಂಕ: ಅಕ್ಟೋಬರ್ 19, ಮಂಗಳವಾರ

ಚಂದ್ರೋದಯ: ಅಕ್ಟೋಬರ್‌ 19, ಸಂಜೆ 05:20ಕ್ಕೆ

ಪೂರ್ಣಿಮಾ ತಿಥಿ ಪ್ರಾರಂಭ: ಅಕ್ಟೋಬರ್‌ 19, ಸಂಜೆ 7:03ಕ್ಕೆ

ಪೂರ್ಣಿಮಾ ತಿಥಿ ಮುಕ್ತಾಯ: ಅಕ್ಟೋಬರ್‌ 20 ಬೆಳಗ್ಗೆ 08:26ಕ್ಕೆ

ಶರದ್ ಪೂರ್ಣಿಮೆಯಂದು ಚಂದ್ರ, ಲಕ್ಷ್ಮಿ ಪೂಜೆ ಮಹತ್ವ

ಶರದ್ ಪೂರ್ಣಿಮೆಯಂದು ಚಂದ್ರ, ಲಕ್ಷ್ಮಿ ಪೂಜೆ ಮಹತ್ವ

ಈ ದಿನ ಚಂದ್ರನ ಕಿರಣಕ್ಕೆ ಔಷಧೀಯ ಗುಣವಿದೆ ಎಂದು ಹೇಳಲಾಗುವುದು. ಈ ದಿನ ಚಂದ್ರನ ಕಿರಣಗಳು ಅಮೃತವನ್ನು ಸುರಿಸುತ್ತದೆ ಎಂಬ ನಂಬಿಕೆಯಿದೆ. ಖೀರ್ ಪಾಯಸ ಮಾಡಿ ಅದನ್ನು ಚಂದ್ರನಿಗೆ ಅರ್ಪಿಸಿ ಅದನ್ನು ತಿಂದರೆ ಆರೋಗ್ಯ ವೃದ್ಧಿಯೆಂದು ಹೇಳಲಾಗುವುದು.

ಇನ್ನು ಪೌರಾಣಿಕ ಕತೆಯ ಪ್ರಕಾರ ಸಮುದ್ರ ಮಂಥನದಲ್ಲಿ ಲಕ್ಷ್ಮಿಯು ಜನಿಸಿದ ದಿನವೆಂದು ಹೇಳಲಾಗಿದೆ. ಈ ದಿನ ಲಕ್ಷ್ಮಿಯು ಸಂಚರಿಸುತ್ತಿರುತ್ತಾಳೆ. ಲಕ್ಷ್ಮಿಯನ್ನು ಆರಾಧಿಸುವುದರಿಂದ ಸಂಪತ್ತು ವೃದ್ಧಿಯಾಗುವುದು ಎಂದು ಹೇಳಲಾಗುವುದು. ದೀಪಾವಳಿಯ ಹಿಂದಿನ ಶರದ್‌ ಪೂರ್ಣಿಮೆಯೆಂದು ಲಕ್ಷ್ಮಿ ದೇವಿಯನ್ನು ಆರಾಧಿಸಿದರೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

ಸಂಪತ್ತು ವೃದ್ಧಿಗಾಗಿ ಲಕ್ಷ್ಮಿ ಆರಾಧನೆ ಹೇಗಿರಬೇಕು?

ಸಂಪತ್ತು ವೃದ್ಧಿಗಾಗಿ ಲಕ್ಷ್ಮಿ ಆರಾಧನೆ ಹೇಗಿರಬೇಕು?

*ಕವಡೆಗಳನ್ನು ಇಟ್ಟು ಪೂಜಿಸಿ: ಲಕ್ಷ್ಮಿ ದೇವಿಗೆ ಬಿಳಿ ಹಾಗೂ ಹಳದಿ ಬಣ್ಣದ ಕವಡೆಗಳನ್ನು ಇಟ್ಟು ಪೂಜಿಸಿ, ಆ ಕವಡೆಗಳನ್ನು ಕೆಂಪು ವಸ್ತ್ರದಲ್ಲಿ ಸುತ್ತಿ ಮನೆಯ ಬೀರುವಿನಲ್ಲಿ ಇಟ್ಟರೆ ಹಣ ವೃದ್ಧಿಯಾಗುವುದು ಎಂದು ಹೇಳಲಾಗುವುದು.

* ವೀಳ್ಯೆದೆಲೆ, ಅಡಿಕೆ ಇಟ್ಟು ಪೂಜಿಸಿ: ಲಕ್ಷ್ಮಿ ಪೂಜೆಗೆ ವೀಳ್ಯೆದೆಲೆ ಹಾಗೂ ಅಡಿಕೆಯನ್ನು ಇಟ್ಟು ಪೂಜಿಸುವುದರಿಂದ ಶುಭ ಉಂಟಾಗುವುದು. ಈ ದಿನ ತಾಂಬೂಲ ತಿನ್ನುವುದು ಶುಭಕರ ಎಂದು ನಂಬಲಾಗಿದೆ.

ಉಪವಾಸ ವ್ರತ

ಉಪವಾಸ ವ್ರತ

ಈ ದಿನ ಲಕ್ಷ್ಮಿ ಪೂಜೆ ಮಾಡುವವರು ಉಪವಾಸವಿದ್ದು ಪೂಜೆಯನ್ನು ಸಲ್ಲಿಸುತ್ತಾರೆ. ಬೆಳಗ್ಗೆ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ ಲಕ್ಷ್ಮಿ ದೇವಿಯ ಆರಾಧನೆ ಮಾಡಲಾಗುವುದು. ಲಕ್ಷ್ಮಿಗೆ ಬಿಳಿ ಹೂಗಳು ಹಾಗೂ ಬಿಳಿ ಬಣ್ಣದ ಸಿಹಿ ತಿಂಡಿಗಳನ್ನು ಅರ್ಪಿಸಲಾಗುವುದು. ಸಂಜೆ ಹೊತ್ತು ದೀಪ ಹಚ್ಚಿ ಲಕ್ಷ್ಮಿ ಆರಾಧನೆ ಮಾಡಬೇಕು. ಇದರಿಂದ ಮನೆಯಲ್ಲಿ ಅಷ್ಟೈಶ್ವರ್ಯ ಹೆಚ್ಚಾಗುವುದು.

ಲಕ್ಷ್ಮಿ ಸ್ತೋತ್ರ ಪಠಿಸಿ

ಲಕ್ಷ್ಮಿ ಸ್ತೋತ್ರ ಪಠಿಸಿ

ಆದಿಲಕ್ಷ್ಮಿ ಸುಮನಸ ವಂದಿತ ಸುಂದರಿ ಮಾಧವಿ, ಚಂದ್ರ ಸಹೊದರಿ ಹೇಮಮಯೇ ಮುನಿಗಣ ವಂದಿತ ಮೋಕ್ಷಪ್ರದಾಯನಿ, ಮಂಜುಲ ಭಾಷಿಣಿ ವೇದನುತೇ

ಪಂಕಜವಾಸಿನಿ ದೇವ ಸುಪೂಜಿತ, ಸದ್ಗುಣ ವರ್ಷಿಣಿ ಶಾಂತಿಯುತೇ ಜಯ ಜಯಹೇ ಮಧುಸೂದನ ಕಾಮಿನಿ, ಆದಿಲಕ್ಷಿ ಪರಿಪಾಲಯ ಮಾಮ್ (1)

ಧಾನ್ಯಲಕ್ಷ್ಮಿ ಅಯಿಕಲಿ ಕಲ್ಮಷ ನಾಶಿನಿ ಕಾಮಿನಿ, ವೈದಿಕ ರೂಪಿಣಿ ವೇದಮಯೇ ಕ್ಷೀರ ಸಮುದ್ಭವ ಮಂಗಳ ರೂಪಿಣಿ, ಮಂತ್ರನಿವಾಸಿನಿ ಮಂತ್ರನುತೇ

ಮಂಗಳದಾಯಿನಿ ಅಂಬುಜವಾಸಿನಿ, ದೇವಗಣಾಶ್ರಿತ ಪಾದಯುತೇ ಜಯ ಜಯಹೇ ಮಧುಸೂದನ ಕಾಮಿನಿ, ಧಾನ್ಯಲಕ್ಷ್ಮಿ ಪರಿಪಾಲಯ ಮಾಮ್ (2)

ಧೈರ್ಯಲಕ್ಷ್ಮಿ ಜಯವರವರ್ಷಿಣಿ ವೈಷ್ಣವಿ ಭಾರ್ಗವಿ, ಮಂತ್ರ ಸ್ವರೂಪಿಣಿ ಮಂತ್ರಮಯೇ

ಸುರಗಣ ಪೂಜಿತ ಶೀಘ್ರ ಫಲಪ್ರದ, ಜ್ಞನ ವಿಕಾಸಿನಿ ಶಾಸ್ತ್ರನುತೇ

ಭವಭಯಹಾರಿಣಿ ಪಾಪವಿಮೋಚನಿ, ಸಾಧು ಜನಾಶ್ರಿತ ಪಾದಯುತೇ ಜಯ ಜಯಹೇ ಮಧು ಸೂಧನ ಕಾಮಿನಿ, ಧೈರ್ಯಲಕ್ಷ್ಮೀ ಪರಿಪಾಲಯ ಮಾಮ್ (3)

ಗಜಲಕ್ಷ್ಮಿ ಜಯ ಜಯ ದುರ್ಗತಿ ನಾಶಿನಿ ಕಾಮಿನಿ, ಸರ್ವಫಲಪ್ರದ ಶಾಸ್ತ್ರಮಯೇ ರಧಗಜ ತುರಗಪದಾತಿ ಸಮಾವೃತ, ಪರಿಜನ ಮಂಡಿತ ಲೋಕನುತೇ

ಹರಿಹರ ಬ್ರಹ್ಮ ಸುಪೂಜಿತ ಸೇವಿತ, ತಾಪ ನಿವಾರಿಣಿ ಪಾದಯುತೇ ಜಯ ಜಯಹೇ ಮಧುಸೂದನ ಕಾಮಿನಿ, ಗಜಲಕ್ಷ್ಮಿ ರೂಪೇಣ ಪಾಲಯ ಮಾಮ್ (4)

ಸಂತಾನಲಕ್ಷ್ಮಿ ಅಯಿಖಗ ವಾಹಿನಿ ಮೋಹಿನಿ ಚಕ್ರಿಣಿ, ರಾಗವಿವರ್ಧಿನಿ ಜ್ಞಾನಮಯೇ ಗುಣಗಣವಾರಧಿ ಲೋಕಹಿತೈಷಿಣಿ, ಸಪ್ತಸ್ವರ ಭೂಷಿತ ಗಾನನುತೇ

ಸಕಲ ಸುರಾಸುರ ದೇವ ಮುನೀಶ್ವರ, ಮಾನವ ವಂದಿತ ಪಾದಯುತೇ ಜಯ ಜಯಹೇ ಮಧುಸೂದನ ಕಾಮಿನಿ, ಸಂತಾನಲಕ್ಷ್ಮೀ ಪರಿಪಾಲಯ ಮಾಮ್ (5)

ವಿಜಯಲಕ್ಷ್ಮಿ ಜಯ ಕಮಲಾಸಿನಿ ಸದ್ಗತಿ ದಾಯಿನಿ, ಜ್ಞಾನವಿಕಾಸಿನಿ ಗಾನಮಯೇ ಅನುದಿನ ಮರ್ಚಿತ ಕುಂಕುಮ ಧೂಸರ, ಭೂಷಿತ ವಾಸಿತ ವಾದ್ಯನುತೇ

ಕನಕಧರಾಸ್ತುತಿ ವೈಭವ ವಂದಿತ, ಶಂಕರದೇಶಿಕ ಮಾನ್ಯಪದೇ ಜಯ ಜಯಹೇ ಮಧುಸೂದನ ಕಾಮಿನಿ, ವಿಜಯಲಕ್ಷ್ಮೀ ಪರಿಪಾಲಯ ಮಾಮ್ (6)

ವಿದ್ಯಾಲಕ್ಷ್ಮಿ ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ, ಶೋಕವಿನಾಶಿನಿ ರತ್ನಮಯೇ ಮಣಿಮಯ ಭೂಷಿತ ಕರ್ಣವಿಭೂಷಣ, ಶಾಂತಿ ಸಮಾವೃತ ಹಾಸ್ಯಮುಖೇ

ನವನಿಧಿ ದಾಯಿನಿ ಕಲಿಮಲಹಾರಿಣಿ, ಕಾಮಿತ ಫಲಪ್ರದ ಹಸ್ತಯುತೇ ಜಯ ಜಯಹೇ ಮಧುಸೂದನ ಕಾಮಿನಿ, ವಿದ್ಯಾಲಕ್ಷ್ಮೀ ಸದಾ ಪಾಲಯ ಮಾಮ್ (7)

ಧನಲಕ್ಷ್ಮಿ ಧಿಮಿಧಿಮಿ ಧಿಂಧಿಮಿ ಧಿಂಧಿಮಿ-ದಿಂಧಿಮಿ, ದುಂಧುಭಿ ನಾದ ಸುಪೂರ್ಣಮಯೇ ಘಮಘುಮ ಘುಂಘುಮ ಘುಂಘುಮ ಘುಂಘುಮ, ಶಂಖ ನಿನಾದ ಸುವಾದ್ಯನುತೇ

ವೇದ ಪೂರಾಣೇತಿಹಾಸ ಸುಪೂಜಿತ, ವೈದಿಕ ಮಾರ್ಗ ಪ್ರದರ್ಶಯುತೇ ಜಯ ಜಯಹೇ ಮಧುಸೂದನ ಕಾಮಿನಿ, ಧನಲಕ್ಷ್ಮಿ ರೂಪೇಣಾ ಪಾಲಯ ಮಾಮ್ (8)

ಫಲಶೃತಿ ಶ್ಲೋ|| ಅಷ್ಟಲಕ್ಷ್ಮೀ ನಮಸ್ತುಭ್ಯಂ ವರದೇ ಕಾಮರೂಪಿಣಿ | ವಿಷ್ಣುವಕ್ಷಃ ಸ್ಥಲಾ ರೂಢ ಭಕ್ತ ಮೋಕ್ಷ ಪ್ರದಾಯಿನಿ ||

ಶ್ಲೋ|| ಶಂಖ ಚಕ್ರಗದಾಹಸ್ತೇ ವಿಶ್ವರೂಪಿಣಿತೇ ಜಯಃ | ಜಗನ್ಮಾತ್ರೇ ಚ ಮೋಹಿನ್ಯ ಮಂಗಳಂ ಶುಭ ಮಂಗಳಮ್ ||

English summary

Sharad Purnima 2021 : Importance of worshipping Maa Lakshmi and Moon on the day

Sharad Purnima 2021 : Importance of worshipping Maa Lakshmi and Moon on the day, Read on...
Story first published: Monday, October 18, 2021, 15:59 [IST]
X
Desktop Bottom Promotion