Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶನಿ ಜಯಂತಿ: ಶುಭ ಕಾರ್ಯಕ್ಕೆ ಏನು ಮಾಡಬೇಕು? ಈ ಲೇಖನ ಓದಿ...
ಶನಿಯ ಅನುಗ್ರಹ ಪೂರ್ವಕ ದೃಷ್ಟಿ ಅಥವಾ ಶುಭದೃಷ್ಟಿ ಯಾವಾಗ ಓರ್ವ ವ್ಯಕ್ತಿಯ ಮೇಲೆ ಬಿತ್ತೋ, ಆ ವ್ಯಕ್ತಿಗ ಅದೃಷ್ಟ ಖುಲಾಯಿಸಿತೆಂದೇ ಹೇಳಬಹುದು. ದಿವಾಳಿಯಾಗಿದ್ದ ವ್ಯಕ್ತಿ ರಾಜಕುಮಾರನಾಗಬಹುದು.
ಶನಿಯ ಪ್ರಭಾವವನ್ನು ಕಡಿಮೆ ಮಾಡಿಕೊಂಡು ಅವರ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕಾಗಿ ಶನಿ ಜಯಂತಿಯನ್ನು ಭಾರತದ ಹಲವೆಡೆಗಳಲ್ಲಿ 25 ನೇ ಮೇ 2017 ರಂದು ದೇಶದ ಇತರೆಡೆಗಳಲ್ಲಿ ವೈಶಾಖ ಮಾಸದ ಅಮವಾಸ್ಯೆ ತಿಥಿಯಂದು ಶನಿ ಜಯಂತಿಯನ್ನು ಆಚರಿಸುವವರಿದ್ದು, ತಾವು ಅನುಸರಿಸುವ ಬೇರೆ ಬೇರೆ ಕ್ಯಾಲೆಂಡರ್‌ಗಳನ್ನು ಆಧರಿಸಿ ಈ ಜಯಂತಿಯನ್ನು ಅವರು ಆಚರಿಸುತ್ತಾರೆ.
ಜ್ಯೋತಿಷ್ಯಾಸ್ತ್ರದ ಪ್ರಕಾರ ವೃತ್ತಿಜೀವನಕ್ಕೆ ಸೂರ್ಯ ಸದಾ ಆಶೀರ್ವಾದ ನೀಡುತ್ತಿರುತ್ತಾನೆ. ಆದರೆ ಶನಿಯ ಅನುಗ್ರಹ ಪೂರ್ವಕ ದೃಷ್ಟಿ ಅಥವಾ ಶುಭದೃಷ್ಟಿ ಯಾವಾಗ ಓರ್ವ ವ್ಯಕ್ತಿಯ ಮೇಲೆ ಬಿತ್ತೋ, ಆ ವ್ಯಕ್ತಿಗ ಅದೃಷ್ಟ ಖುಲಾಯಿಸಿತೆಂದೇ ಹೇಳಬಹುದು. ದಿವಾಳಿಯಾಗಿದ್ದ ವ್ಯಕ್ತಿ ರಾಜಕುಮಾರನಾಗಬಹುದು.
ಆದ್ದರಿಂದ ಈ ಶುಭದಿನದಂದು ಕೈಗೊಳ್ಳುವ ಪರಿಹಾರ ಕಾರ್ಯಗಳು ನಿಮ್ಮ ವೃತ್ತಿಜೀವನಕ್ಕೆ ಬಹಳಷ್ಟು ಪೂರಕವಾಗಿರಬಹುದು. ಈ ದಿನದಂದು ಏನು ಮಾಡಬೇಕೆಂಬುದನ್ನು ಇಂದಿನ ದಿನದಲ್ಲಿ ವಿವರಿಸಲಾಗಿದ್ದು ಈ ಸುಲಭ ಸಲಹೆಗಳನ್ನು ಪಾಲಿಸುವ ಮೂಲಕ ಶನಿದೇವನ ಅನುಗ್ರಹಕ್ಕೆ ಪಾತ್ರರಾಗಬಹುದು.....

ಮನೆಯ ಹೊಸ್ತಿಲಿನಲ್ಲಿ
ನಿಮ್ಮ ಮನೆಯ ಹೊಸ್ತಿನ ಎರಡೂ ಬದಿಗಳಲ್ಲಿ ಎರಡು ಮಣ್ಣಿನ ದೀವಟಿಗೆಗಳನ್ನು ಹಚ್ಚಿಡಿ. ಇದರಿಂದ ನಿಮ್ಮ ಮನೆಯೊಳಗೆ ಋಣಾತ್ಮಕ ಶಕ್ತಿ ಪ್ರವೇಶ ಪಡೆಯಲು ಸಾಧ್ಯವಾಗದು.

ದೀವಟಿಗೆಯ ಮಹತ್ವ
ನಿಮ್ಮ ದೀವಟಿಗೆಯಲ್ಲಿರುವ ಎಣ್ಣೆ ಕೊಳೆ ಅಥವಾ ಕುಂದುಗಳನ್ನು ಪ್ರತಿನಿಧಿಸುತ್ತದೆ. ಅತಿಯಾಸೆ, ಮತ್ಸರ, ದ್ವೇಶ, ಲಾಲಸೆ ಮೊದಲಾದವುಗಳನ್ನು ಮಾನವರು ತಮ್ಮ ಉಪಪ್ರಜ್ಞೆಯಲ್ಲಿ ಬೆಳೆಸಿಕೊಂಡು ಬಂದಿದ್ದು ಎಣ್ಣೆಯನ್ನು ಉರಿಸುವ ಮೂಲಕ ಈ ಗುಣಗಳನ್ನು ಸುಡುವುದು ಸಾಂಕೇತಿಕವಾಗಿದೆ. ಹತ್ತಿಯ ಬತ್ತಿ ಆತ್ಮದ ಪ್ರತೀಕವಾಗಿದ್ದು ಇದರ ಮೂಲಕ ಎಣ್ಣೆಯನ್ನು ಉರಿಸಿ ಜ್ಞಾನ ಹಾಗೂ ತಿಳಿವಳಿಕೆಯನ್ನು ಪಡೆಯುವುದಾಗಿದೆ.

ಪೂಜಾಗೃಹದಲ್ಲಿ
ನಿಮ್ಮ ಪೂಜಾಗೃಹದಲ್ಲಿಯೂ ದೀಪವೊಂದನ್ನು ಹಚ್ಚಿ. ಈ ಪವಿತ್ರ ದೀಪವನ್ನು ಹಚ್ಚುವುದರಿಂದ ಕುಟುಂಬದಲ್ಲಿ ಸಮೃದ್ಧಿಯುಂಟಾಗುವುದು ಎಂದು ಹೇಳಲಾಗುತ್ತದೆ.

ತುಳಸಿ ಕಟ್ಟೆ
ನಿಮ್ಮ ಮನೆಯ ತುಳಸಿ ಕಟ್ಟೆಯ ಸಮೀಪದಲ್ಲಿಯೂ ಒಂದು ದೀಪವನ್ನು ಸಂಜೆಯ ಹೊತ್ತು ಅಂದರೆ ಸೂರ್ಯಾಸ್ತವಾದ ತಕ್ಷಣ ಹಚ್ಚಿ. ಅಮಾವಾಸ್ಯೆ ಇರುವ ರಾತ್ರಿಯಂದು ಈ ದೀಪ ಇಡಿಯ ರಾತ್ರಿ ಬೆಳಗುತ್ತಿರುವಂತೆ ಮಾಡುವುದರಿಂದ ಶುಭಕರವಾಗುತ್ತದೆ. ತುಳಸಿಕಟ್ಟೆಯ ಬಳಿ ಇರುವ ಈ ಪವಿತ್ರ ಬೆಳಕು ದೇವತೆಗಳನ್ನು ಆಕರ್ಷಿಸುತ್ತದೆ ಎನ್ನಲಾಗುತ್ತದೆ.

ಅಮಾವಾಸ್ಯೆಯ ರಾತ್ರಿಯ ಸಮಯದಲ್ಲಿ
ನಿಮ್ಮ ಮನೆಯ ಛಾವಣಿಯನ್ನೂ ಮರೆಯಕೂಡದು. ಅಮಾವಾಸ್ಯೆಯ ರಾತ್ರಿಯ ಸಮಯದಲ್ಲಿ ನಿಮ್ಮ ಮನೆಯ ಛಾವಣಿಯ ಮೇಲೂ ಕೆಲವು ಚಿಕ್ಕ ದೀಪಗಳನ್ನು ಹಚ್ಚಿಡಿ. ಒಂದು ವೇಳೆ ಛಾವಣೆಯ ಮೇಲೆ ವಿದ್ಯುತ್ ದೀಪವಿದ್ದರೆ ಇದನ್ನು ಬೆಳಗಿಸಿ. ಈ ಬೆಳಕು ಇಡಿಯ ರಾತ್ರಿ ಬೆಳಗುವಂತೆ ಮಾಡಿ. ಇದರಿಂದ ಋಣಾತ್ಮಾ ಶಕ್ತಿ ನಿಮ್ಮ ಮನೆಯ ಪ್ರದೇಶವನ್ನು ಆವರಿಸುವುದರಿಂದ ತಡೆದಂತಾಗುತ್ತದೆ.

ಅರಳಿ ಮರ
ನಿಮ್ಮ ಮನೆಯ ಹತ್ತಿರ ಅರಳಿ ಮರವಿದ್ದರೆ ಅದರ ಬುಡದಲ್ಲಿಯೂ ಒಂದು ದೀಪವನ್ನು ಬೆಳಗಿಸಿ. ಇದರಿಂದ ನಿಮ್ಮ ಜೀವನದಲ್ಲಿ ಶನಿಗೆ ಸಂಬಂಧಿಸಿದ ತೊಂದರೆಗಳು ದೂರಾಗುತ್ತವೆ.

ದೀಪದ ಬೆಳಕು ಜ್ಞಾನವನ್ನು ಪ್ರತಿನಿಧಿಸುತ್ತದೆ
ಹೌದು, ದೀಪದ ಬೆಳಕು ಜ್ಞಾನವನ್ನು ಪ್ರತಿನಿಧಿಸುತ್ತದೆ. ದೀಪವನ್ನು ಬೆಳಗಿಸುವುದೆಂದರೆ ಮುಗ್ಧ ಮನಸ್ಸಿನ ವ್ಯಕ್ತಿ ಅಂಧಕಾರದಿಂದ ಜ್ಞಾನದ ಬೆಳಕನ್ನು ಪಡೆಯುವುದೇ ಆಗಿದೆ. ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ ಮನಸ್ಸಿನಲ್ಲಿರುವ ಅಜ್ಞಾನವನ್ನು ತೊಡೆದು ಜ್ಞಾನವನ್ನು ಪಡೆಯುವುದಾಗಿದೆ. ಈ ಜ್ಞಾನವನ್ನು ಒಳ್ಳೆಯ ಮತ್ತು ಸಮಾಜದ ಏಳ್ಗೆಗಾಗಿ, ಸದುದ್ದೇಶಗಳಿಗಾಗಿ ಉಪಯೋಗಿಸುವುದು ಈ ಜ್ಞಾನವನ್ನು ಪಡೆಯುವ ಮುಖ್ಯ ಉದ್ದೇಶವಾಗಿರುವುದು ಸಹಾ ಅಗತ್ಯವಾಗಿದೆ.



Click it and Unblock the Notifications