Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಮೇ 22 ಶನಿ ಜಯಂತಿ: ಕಷ್ಟದಿಂದ ಮುಕ್ತಿಗೆ ಏನು ಮಾಡಬೇಕು?
ಮೇ 22, 2020 ವೈಶಾಖ ಮಾಸದ ಅಮಾವಾಸ್ಯೆಯ ದಿನ, ಶನಿ ದೇವನ ಜನ್ಮ ದಿನವಾಗಿದ್ದು, ಈ ದಿನವನ್ನು ಶನಿ ಜಯಂತಿಯೆಂದು ಆಚರಿಸಲಾಗುವುದು. ಈ ದಿನ ಶನೇಶ್ವರನಿಗೆ ಪೂಜೆ ಮಾಡುವುದರಿಂದ ಶನಿದೋಷದಿಂದ ಮುಕ್ತಿ ಹೊಂದಬಹುದು.

ಜೀವನದಲ್ಲಿ ಕಷ್ಟ ಬಂದಾಗ ಇದು ಶನಿಯ ಪ್ರಭಾವ ಎಂದೇ ಹೇಳುವುದನ್ನು ನೀವು ಕೇಳಿರಬಹುದು. ಶನಿ ಕಾಟ ಜೀವನದಲ್ಲಿ ಒಮ್ಮೆಯಾದರೂ ಇರುತ್ತದೆ ಎಂದು ಹೇಳಲಾಗುತ್ತದೆ. ಧರ್ಮರಾಯ, ಸತ್ಯ ಹರಿಶ್ಚಂದ್ರ, ಕೃಷ್ಣಪರಮಾತ್ಮನಿಗೂ ಕೂಡ ಶನಿ ಹೇಗೆ ಕಾಟ ಕೊಟ್ಟಿದ್ದ ಎಂಬ ಕತೆಗಳನ್ನು ಕೇಳಿರಬಹುದು. ಶನಿಯ ದೋಷದಿಂದ ಪಾರಾಗಿ ಅವನ ಕೃಪೆ ದೊರೆಯಬೇಕಾದರೆ ಶನಿ ದೇವನ ವಿಗ್ರಹವನ್ನು ಗಂಗಾಜಲದ\, ಪಂಚಾಮೃತ, ಎಳ್ಳೆಣ್ಣೆಯಿಂದ ಅಭಿಷೇಕ ಮಾಡಿ, ನಂತರ ಪೂಜೆ ಸಲ್ಲಿಸಲಾಗುವುದು.

ಶನಿ ದೇವನಿಗೆ ಎಳ್ಳೆಣ್ಣೆ ಅಭಿಷೇಕ ಮಾಡುವುದರ ಹಿಂದಿರುವ ಪೌರಾಣಿಕ ಕತೆ
ಸೀತಾಮಾತೆಯನ್ನು ಹುಡುಕಿಕೊಂಡು ಹನುಮಂತ ಲಂಕೆಗೆ ಹೋದಾಗ ಶನಿದೇವನು ಅಗ್ನಿಯಿಂದ ಸುಟ್ಟು ಬೆಂದು ಹೋಗಿರುವ ಸ್ಥಿತಿಯಲ್ಲಿ ಶನಿ ದೇವನನ್ನು ಕಂಡ ಹನುಮಂತ ಬೆಂಕಿ ಗಾಯದ ಉರಿಯಿಂದ ಶನಿಯನ್ನು ರಕ್ಷಿಸಲು ಎಳ್ಳೆಣ್ಣೆ ಲೇಪನ ಮಾಡುತ್ತಾನೆ. ಇದರಿಂದ ಶನಿಗೆ ಆಗುತ್ತಿದ್ದ ಉರಿ ಮತ್ತು ನೋವು ಕಡಿಮೆಯಾಗುತ್ತದೆ. ಆಗ ಶನಿ ನನಗೆ ಯಾರು ಎಳ್ಳೆಣ್ಣೆ ಅರ್ಪಿಸುತ್ತಾರೋ ಅವರಿಗೆ ಕಾಡುವುದಿಲ್ಲ ಎಂಬುವುದಾಗಿ ಹೇಳುತ್ತಾನೆ. ಹಾಗಾಗಿ ಶನಿ ದೇವನ ಕೃಪೆಗಾಗಿ ಎಳ್ಳೆಣ್ಣೆ ಅರ್ಪಿಸುತ್ತಾರೆ.

ಶನಿದೇವನಿಗೆ ಪೂಜೆಗೆ ಸೂಕ್ತ ಸಮಯ
ಶನಿ ಪೂಜೆಗೆ ಸಮಯ ಮೇ 21, ಗುರುವಾರ9.35
ಶನಿ ತಿಥಿ ಮೇ 22, ಶುಕ್ರವಾರ ರಾತ್ರಿ 11.08

ಶನಿ ಜಯಂತಿಯಂದು ಏನು ಮಾಡಬೇಕು?
- ಈ ದಿನ ಇರುವೆಗಳುಗೆ ಗೋಧಿ, ಬೆಲ್ಲವನ್ನು ಹಾಕಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.
- ಶನಿಯನ್ನು ಪೂಜಿಸುವಾಗ ''ಓಂ ಶಂ ಶನೈಶ್ಚರಾಯ ನಮಃ'' ಎಂದು ಮಂತ್ರ ಹೇಳುವುದರಿಂದ ಶನಿಯನ್ನು ಬೇಗನೆ ಒಲಿಸಿಕೊಳ್ಳಬಹುದು.
- ಶನಿ ಜಯಂತಿಯಂದು ಕಪ್ಪು ಬಟ್ಟೆ, ಕಪ್ಪು ಬೇಳೆ ಮೊದಲಾವುಗಳನ್ನು ದಾನ ಮಾಡುವುದು ಒಳ್ಳೆಯದು.
- ಈ ದಿನ ಕಪ್ಪು ನಾಯಿಗೆ ಎಳ್ಳೆಣ್ಣೆ ಹಾಕಿ ಗೋಧಿ ಚಪಾತಿ ಮಾಡಿ ನೀಡುವುದರಿಂದ ಒಳಿತಾಗುವುದು.
- ನವಗ್ರಹ ದೇವಸ್ಥಾನಕ್ಕೆ ಭೇಟಿ ನೀಡುವುದು ಒಳ್ಳೆಯದು. ಆದರೆ ಈ ವರ್ಷ ಲಾಕ್‌ಡೌನ್‌ನಿಂದಾಗಿ ಅದು ಸಾಧ್ಯವಾಗುವುದಿಲ್ಲ, ಆದರೆ ನವಗ್ರಹಗಳನ್ನು ಮನಸ್ಸಿನಲ್ಲಿ ಸ್ಮರಿಸಿ ಪೂಜಿಸಿದರೆ ಅವರ ಪ್ರಭಾವದಿಂದ ಕಷ್ಟದಿಂದ ಮುಕ್ತಿ ಸಿಗುವುದು.
- ಶನಿ ದೋಷದಿಂದಾಗಿ ತುಂಬಾ ಕಷ್ಟ ಅನುಭವಿಸುತ್ತಿದ್ದರೆ ಶನಿಗೆ ನವರತ್ನ ಹಾರ ಅರ್ಪಿಸಿದರೆ ಒಳಿತಾಗುವುದು.
- ಈ ದಿನ ಹನುಂತನ ದೇವಾಲಯಕ್ಕೆ ಹೋಗಿ ಆಂಜನೇಯವನ್ನು ಸ್ಮರಿಸುವುದರಿಂದ ಹನುಮಂತನ ಭಕ್ತರನ್ನು ಶನಿ ಕಾಡುವುದಿಲ್ಲ.
- ಗ್ರಹದೋಷದಿಂದಾಗಿ ಸಾಕಷ್ಟು ಕಷ್ಟಗಳು ಎದುರಾಗಿದ್ದರೆ ಅದು ನಿವಾರನೆಯಾಗುವುದು
- ಅದೃಷ್ಟ ಲಕ್ಷ್ಮಿ ಒಲಿಯುವುದು
- ಬದುಕಿನಲ್ಲಿ ಒಳ್ಳೆಯ ಘಟನೆಗಳು ನಡೆಯುವುದು
- ಉದ್ಯೋಗ, ವ್ಯಾಪಾರದಲ್ಲಿ ಪ್ರಗತಿ ಹೊಂದುವಿರಿ.

ಶನಿಕೃಪೆಗಾಗಿ ಪೂಜಾ ವಿಧಾನ




Click it and Unblock the Notifications
