For Quick Alerts
ALLOW NOTIFICATIONS  
For Daily Alerts

ಡಿ.4ಕ್ಕೆ ಶನಿ ಅಮಾವಾಸ್ಯೆ: ಜಾತಕದಲ್ಲಿ ಶನಿದೋಷವಿದ್ದರೆ, ಈ ಪರಿಹಾರ ಕ್ರಮಗಳನ್ನು ಮಾಡಿದರೆ ಸಾಕು!

|

ಹಿಂದೂ ಧರ್ಮದಲ್ಲಿ ಅಮವಾಸ್ಯೆಗೆ ವಿಶೇಷ ಮಹತ್ವವಿದ್ದು, ಅದರಲ್ಲೂ ಸೋಮವಾರ, ಮಂಗಳವಾರ ಮತ್ತು ಶನಿವಾರದಂದು ಬರುವ ಅಮವಾಸ್ಯೆಗೆ ವಿಶೇಷ ಪ್ರಾಶಸ್ತ್ಯವಿದೆ. ಕಾರ್ತಿಕ ಮಾಸದ ಕೊನೆಯ ಅಮಾವಾಸ್ಯೆಯು ಈ ಬಾರಿ ಶನಿವಾರ ಬಂದಿದೆ. ಆದ್ದರಿಂದ ಇದನ್ನು ಶನಿ ಅಮಾವಾಸ್ಯೆ ಅಥವಾ ಶನಿಶ್ಚರಿ ಅಮಾವಾಸ್ಯೆ ಎಂದು ಕರೆಯುತ್ತಾರೆ.

ಈ ಬಾರಿ ಡಿಸೆಂಬರ್ 4ರಂದು ಶನಿ ಅಮಾವಾಸ್ಯೆ. ಈ ದಿನ ಪವಿತ್ರ ಸ್ನಾನ, ದಾನ ಮತ್ತು ಪೂಜೆಗೆ ವಿಶೇಷ ಮಹತ್ವವಿದ್ದು, ಈ ಕಾರ್ಯಗಳಿಂದ ಅನೇಕ ಪಟ್ಟು ಹೆಚ್ಚಿನ ಪುಣ್ಯವನ್ನು ಲಭ್ಯವಾಗುತ್ತದೆ, ಜೊತೆಗೆ ಸಾವಿನ ನಂತರ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಶನಿವಾರವನ್ನು ನ್ಯಾಯದ ದೇವರಾದ ಶನಿ ದೇವನಿಗೆ ಸಮರ್ಪಿಸಲಾಗಿದೆ. ಜಾತಕದಲ್ಲಿ ಇರುವ ಶನಿ ದೋಷವನ್ನು ಸರಿಪಡಿಸಲು ಈ ದಿನ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಬಹುದು. ಹೀಗೆ ಮಾಡುವುದರಿಂದ ಶನಿ ದೋಷದಿಂದ ಮುಕ್ತಿ ಸಿಗುತ್ತದೆ. ಅಲ್ಲದೇ, ಬೇಡಿಕೆಗಳೆಲ್ಲಾ ಈಡೇರಿಕೆಯಾಗುತ್ತದೆ. ಹಾಗಾದರೆ, ಶನಿಶ್ಚರಿ ಅಮಾವಾಸ್ಯೆಯಂದು ಶನಿ ದೋಷದಿಂದ ಪರಿಹಾರ ಪಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ತಿಳಿಯೋಣ.

ಶನಿ ಅಮವಾಸ್ಯೆ ಶುಭಮುಹೂರ್ತ:

ಶನಿ ಅಮವಾಸ್ಯೆ ಶುಭಮುಹೂರ್ತ:

ಪಂಚಾಗದ ಪ್ರಕಾರ, ಕಾರ್ತಿಕ ಮಾಸದ ಕೊನೆಯ ಅಮವಾಸ್ಯೆ ದಿನಾಂಕವು ಡಿಸೆಂಬರ್ 03 ರಂದು ಸಂಜೆ 04:55 ರಿಂದ ಡಿಸೆಂಬರ್ 04 ರ ಶನಿವಾರದಂದು ಮಧ್ಯಾಹ್ನ 01.12 ರವರೆಗೆ ಇರುತ್ತದೆ. ಆದ್ದರಿಂದ ಶನಿ ಅಮಾವಾಸ್ಯೆಯು ಡಿಸೆಂಬರ್ 04ಕ್ಕೆ ಸೂಕ್ತವಾಗಿರುತ್ತದೆ.

ಶನಿ ದೋಷವನ್ನು ಕಡಿಮೆಮಾಡಲು ಪರಿಹಾರಗಳು ಹೀಗಿವೆ:

ಶನಿ ದೋಷವನ್ನು ಕಡಿಮೆಮಾಡಲು ಪರಿಹಾರಗಳು ಹೀಗಿವೆ:

ಶನಿಗೆ ಇವುಗಳಿಂದ ಅಭಿಷೇಕ ಮಾಡಿ:

ಶನಿ ಅಮಾವಾಸ್ಯೆಯ ದಿನದಂದು ಸ್ನಾನ ಇತ್ಯಾದಿಗಳನ್ನು ಮಾಡಿದ ನಂತರ, ಉಪವಾಸದ ಪ್ರತಿಜ್ಞೆ ಮಾಡಿ, ನಂತರ ಶನಿ ದೇವರನ್ನು ಕ್ರಮಬದ್ಧವಾಗಿ ಪೂಜಿಸಿ. ಈ ದಿನ ಶನಿದೇವನಿಗೆ ಸಾಸಿವೆ ಎಣ್ಣೆ ಮತ್ತು ಕಪ್ಪು ಎಳ್ಳಿನಿಂದ ಅಭಿಷೇಕ ಮಾಡಿ. ಶನಿ ದೇವಸ್ಥಾನಕ್ಕೆ ಹೋಗಿ, ಶನಿದೇವನ ಆಶೀರ್ವಾದ ಪಡೆಯಿರಿ. ಹಾಗೂ ಶನಿ ದೋಷದಿಂದ ಮುಕ್ತಿಗಾಗಿ ಪ್ರಾರ್ಥಿಸಿ.

ಅರಳಿ ಮರಕ್ಕೆ ನೀರನ್ನು ಅರ್ಪಿಸಿ:

ಅರಳಿ ಮರಕ್ಕೆ ನೀರನ್ನು ಅರ್ಪಿಸಿ:

ಜಾತಕದಲ್ಲಿರುವ ಶನಿ ದೋಷವನ್ನು ತೊಡೆದುಹಾಕಲು, ಶನಿ ಅಮಾವಾಸ್ಯೆಯಂದು ಅರಳಿ ಮರಕ್ಕೆ ನೀರನ್ನು ಅರ್ಪಿಸಿ. ಇದರಿಂದ ಶನಿದೋಷ ನಿವಾರಣೆಯಾಗುವುದು.

ಇವುಗಳಿಗೆ ಆಹಾರ ನೀಡಿ:

ಇವುಗಳಿಗೆ ಆಹಾರ ನೀಡಿ:

ಈ ದಿನ ಕಪ್ಪು ನಾಯಿಗೆ ಸಾಸಿವೆ ಎಣ್ಣೆಯಿಂದ ಮಾಡಿದ ರೊಟ್ಟಿಯನ್ನು ನೀಡಬಹುದು, ಅಷ್ಟೇ ಅಲ್ಲ ಕಾಗೆಗಳಿಗೆ ಆಹಾರ ನೀಡಬಹುದು. ಶಾಸ್ತ್ರಗಳ ಪ್ರಕಾರ, ಇದನ್ನು ಮಾಡುವುದರಿಂದ ಶನಿದೇವನು ಸಂತುಷ್ಟನಾಗುತ್ತಾನೆ.

ಹನುಮನನ್ನು ಆರಾಧಿಸಿ:

ಹನುಮನನ್ನು ಆರಾಧಿಸಿ:

ಧಾರ್ಮಿಕ ಗ್ರಂಥಗಳ ಪ್ರಕಾರ, ಶನಿ ದೇವನು ಹನುಮನ ಭಕ್ತರಿಗೆ ಎಂದಿಗೂ ತೊಂದರೆ ನೀಡುವುದಿಲ್ಲ ಎಂಬ ನಂಬಿಕೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ಶನಿ ಅಮಾವಾಸ್ಯೆಯ ದಿನ, ಹನುಮನಿಗೆ ಮಲ್ಲಿಗೆ ಎಣ್ಣೆಯ ದೀಪವನ್ನು ದಾನ ಮಾಡಿ ಮತ್ತು ಕೆಂಪು ವಸ್ತ್ರವನ್ನು ಅರ್ಪಿಸಿ. ಜೊತೆಗೆ ಶನಿ ದೋಷವನ್ನು ತೊಡೆದುಹಾಕಲು ಹನುಮಾನ್ ಚಾಲೀಸಾ ಅಥವಾ ಸುಂದರಕಾಂಡವನ್ನು ಪಠಿಸಬೇಕು ಎಂದು ಹೇಳಲಾಗುತ್ತದೆ.

ಬಡವರಿಗೆ ದಾನ ಮಾಡಿ:

ಬಡವರಿಗೆ ದಾನ ಮಾಡಿ:

ಬಡವರ ಸೇವೆ ಮಾಡುವ ಮೂಲಕ ಶನಿದೇವನು ಪ್ರಸನ್ನನಾಗುತ್ತಾನೆ ಎಂದು ಹೇಳಲಾಗುತ್ತದೆ. ಈ ದಿನದಂದು ಕಪ್ಪು ಎಳ್ಳು, ಬಟ್ಟೆ, ಉದ್ದಿನ ಬೇಳೆ, ಪಾದರಕ್ಷೆ, ಹೊದಿಕೆ ಇತ್ಯಾದಿಗಳನ್ನು ಬಡವರಿಗೆ ದಾನ ಮಾಡಬಹುದು.

English summary

Shani Amavasya 2021 : Remedies do on this day to get rid of Shani dosh in Kannada

Here we talking about Shani Amavasya 2021 : Remedies do on this day to get rid of shani dosh in kannada, read on
Story first published: Friday, December 3, 2021, 17:54 [IST]
X
Desktop Bottom Promotion