For Quick Alerts
ALLOW NOTIFICATIONS  
For Daily Alerts

ಶಬರಿ ದಿನಾಚಾರಣೆ 2019:ರಾಮನ ಪ್ರಿಯ ಭಕ್ತೆ ಶಬರಿಯ ಆ ನಿಸ್ವಾರ್ಥ ಪ್ರೀತಿ- ಭಕ್ತಿಗೆ ಬೆಲೆ ಕಟ್ಟಲಾಗದು

|

ರಾಮಾಯಣದಲ್ಲಿ ಹಲವಾರು ಕಥೆಗಳು ಇದೆ. ಇದರಲ್ಲಿ ಮುಖ್ಯವಾಗಿ ರಾಮನ ಧೈರ್ಯ, ಸಾಹಸ, ವಿನಯಶೀಲತೆ, ಸ್ನೇಹ ಇತ್ಯಾದಿಗಳ ಬಗ್ಗೆ ವಿವರಿಸಲಾಗಿದೆ. ವಿಷ್ಣುವಿನ ಅವತಾರವಾಗಿರುವಂತಹ ರಾಮ ಭೂಮಿ ಮೇಲೆ ತುಂಬಾ ತಾಳ್ಮೆ ಹಾಗೂ ಶಾಂತತೆ ಹೊಂದಿದ ವ್ಯಕ್ತಿ. ಕೃಷ್ಣ ದೇವರನ್ನು ಸೂಕ್ಷ್ಮ ಹಾಗೂ ಚುರುಕು ಬುದ್ಧಿಗೆ ತುಂಬಾ ಗುರುತಿಸಲಾಗುತ್ತದೆ. ಅದೇ ರೀತಿಯಾಗಿ ರಾಮ ದೇವರನ್ನು ನಾವೆಲ್ಲರೂ ಧೈರ್ಯಕ್ಕೆ ಮೆಚ್ಚುತ್ತೇವೆ. ಕೃಷ್ಣ ದೇವರು ಶತ್ರುಗಳ ಸಂಹಾರ ಮಾಡಲು ಕೆಲವೊಂದು ತಂತ್ರಗಳನ್ನು ಹೂಡಿರುವರು. ರಾಮ ದೇವರು ಮಾತ್ರ ತನ್ನ ಶಕ್ತಿಯಿಂದಾಗಿಯೇ ಪ್ರಾಮಾಣಿಕವಾಗಿ ಗೆದ್ದು ಬಂದವರು.

ಈ ಕಾರಣದಿಂದಾಗಿಯೇ ರಾಮನಿಗೆ ಶಬರಿಯು ತನ್ನ ಹೃದಯವನ್ನು ಕೊಟ್ಟು ಬಿಟ್ಟಳು. ಬಳಿಕ ಆಕೆ ತನ್ನ ಸಾಂಸಾರಿಕ ಜೀವನ ಬಿಟ್ಟು ರಾಮನ ಧಾನ್ಯದಲ್ಲಿ ಮುಳುಗಿದಳು. ಶಬರಿ ಭಕ್ತಿಯ ಬಗ್ಗೆ ತುಂಬಾ ಜನಪ್ರಿಯ ಕಥೆಯು ಇದೆ. ಆದರೆ ಆಕೆಯನ್ನು ಒಂದು ವಿಷಯಕ್ಕಾಗಿ ತುಂಬಾ ನೆನಪಿಸಲಾಗುತ್ತದೆ. ರಾಮನಿಗಾಗಿ ಆಕೆಯಲ್ಲಿ ಇದ್ದಂತಹ ಭಕ್ತಿ ಮತ್ತು ರಾಮನನ್ನು ಕಾಣಬೇಕು ಎಂದು ಆಕೆ ಹಲವಾರು ವರ್ಷಗಳ ಕಾಲ ಧ್ಯಾನ ಮಾಡಿ ಕುಳಿತು ಅಂತಿಮವಾಗಿ ರಾಮ ದೇವರನ್ನು ಕಣ್ಣಾರೆ ಕಾಣುವಳು. ಇಂದಿನ ದಿನದಲ್ಲೂ ರಾಮ ದೇವರ ಪರಮಭಕ್ತದಲ್ಲಿ ಮೊದಲಾಗಿ ಹನುಮಂತ ದೇವರು ಮತ್ತು ಶಬರಿಯನ್ನು ಹೆಚ್ಚಾಗಿ ನೆನಪಿಸಲಾಗುತ್ತದೆ. ಶಬರಿಯ ಭಕ್ತಿಯ ನೆನಪಿಗಾಗಿ ಶಬರಿ ಜಯಂತಿಯನ್ನು ಕೂಡ ಆಚರಿಸಲಾಗುತ್ತದೆ. ಶಬರಿ ಜಯಂತಿ ಮತ್ತು ಶಬರಿ ಬಗ್ಗೆ ನೀವು ತಿಳಿಯಿರಿ.

2019ರಲ್ಲಿ ಶಬರಿ ಜಯಂತಿ

2019ರಲ್ಲಿ ಶಬರಿ ಜಯಂತಿ

ಫಾಲ್ಗುಣಿ ಮಾಸದಲ್ಲಿ ಬರುವಂತಹ ಕೃಷ್ಣ ಪಕ್ಷದ ಸಪ್ತಮಿ ತಿಥಿಯಲ್ಲಿ ಶಬರಿ ಜಯಂತಿ ಆಚರಣೆ ಮಾಡಲಾಗುತ್ತದೆ. ಈ ವರ್ಷ ಇದನ್ನು ಫೆಬ್ರವರಿ 25, 2019ರಂದು ಆಚರಣೆ ಮಾಡಲಾಗುತ್ತದೆ. ಸಪ್ತಮಿ ತಿಥಿಯು ಫೆ.25ರ ಬೆಳಗ್ಗೆ 5.04 ಗಂಟೆಗೆ ಆರಂಭವಾಗುವುದು ಮತ್ತು ಇದು ಫೆಬ್ರವರಿ 26ರ ಬೆಳಗ್ಗೆ 4.46 ಗಂಟೆ ತನಕ ಇರುವುದು.

ಶಬರಿ ಯಾರು?

ಶಬರಿ ಯಾರು?

ಶಬರಿಯ ನಿಜವಾದ ಹೆಸರು ಶ್ರಮನ. ಆಕೆಯು ತುಂಬಾ ಕೆಳಜಾತಿಯ ಕುಟುಂಬ ಮತ್ತು ಶಬರಿ ಎಂದು ಕರೆಯುವ ಬುಡಕಟ್ಟು ಜನಾಂಗಕ್ಕೆ ಸೇರಿರುವಾಕೆ. ಶಬರಿ ಎನ್ನುವುದು ಆಕೆ ಜನ್ಮ ಪಡೆದಂತಹ ಬುಡಕಟ್ಟು ಜನಾಂಗದ್ದು. ಇದರಿಂದಲೇ ಆಕೆ ತುಂಬಾ ಜನಪ್ರಿಯಳಾದಳು. ಶ್ರಮನ ಬಾಲ್ಯದಿಂದಲೇ ರಾಮ ದೇವರ ಪೂಜೆ ಮಾಡುವುದು ಮತ್ತು ಭಜನೆ ಹಾಡುವುದರಲ್ಲೇ ಹೆಚ್ಚು ವ್ಯಸ್ತವಾಗಿದ್ದಳು. ಆಕೆ ರಾಮ ನಾಮ ಜಪ ಮಾಡುತ್ತಾ ಮತ್ತು ರಾಮ ದೇವರ ಗುಣಗಾನ ಮಾಡುತ್ತಾ ಸಮಯ ಕಳೆಯುತ್ತಿದ್ದಳು. ಶ್ರಮನ ಹದಿಹರೆಯಕ್ಕೆ ಬರುತ್ತಾ ಇರುವಂತೆ ಆಕೆಗೆ ಮದುವೆ ಮಾಡಿಕೊಡಲಾಯಿತು. ಆದರೆ ಆಕೆಯ ಪತಿಯಲ್ಲಿ ರಾಕ್ಷಸರ ಸ್ವಭಾವವಿತ್ತು. ತುಂಬಾ ವಿನಯಶೀಲ ಸ್ವಭಾವದ ಮಹಿಳೆಯಾಗಿದ್ದಳು. ಆದರೆ ಆಕೆಯ ಪತಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿದ್ದ. ಆತನಲ್ಲಿ ಎಲ್ಲಾ ರೀತಿಯ ಕೆಟ್ಟ ಅಭ್ಯಾಸಗಳು ಮತ್ತು ಅನಾರೋಗ್ಯಕರ ಸಾಮಾಜಿಕ ಚಟುವಟಿಕೆಗಳು ಇದ್ದವು. ಆತ ಜನರಿಗೆ ತುಂಬಾ ಹಿಂಸೆ ನೀಡುತ್ತಿದ್ದ ಕಾರಣದಿಂದಾಗಿ ಜನರು ಶ್ರಮನಳನ್ನು ದೂರ ಮಾಡಿದ್ದಳು. ಇದರಿಂದಾಗಿ ಆಕೆಯ ಜೀವನ ಕೂಡ ತುಂಬಾ ಸಮಸ್ಯೆಯಲ್ಲಿ ಸಿಲುಕಿಕೊಂಡಿತು.

ಶ್ರಮನ ಭೌತಿಕ ಜಗತ್ತನ್ನು ತ್ಯಜಿಸಿದಳು

ಶ್ರಮನ ಭೌತಿಕ ಜಗತ್ತನ್ನು ತ್ಯಜಿಸಿದಳು

ತನ್ನ ಪತಿಯ ದುಷ್ಟ ಬುದ್ಧಿಯಿಂದ ಬೇಸತ್ತು ಹೋದ ಶ್ರಮನ ಆತನಿಂದ ದೂರವಾಗಲು ಮತ್ತು ಭೌತಿಕ ಜಗತ್ತನ್ನು ಬಿಟ್ಟುಬಿಡಲು ನಿರ್ಧಾರ ಮಾಡಿದಳು. ತನ್ನಂತೆ ರಾಮ ದೇವರ ಭಕ್ತರು ಇರುವಂತಹ ಆಶ್ರಮವನ್ನು ಹುಡುಕಲು ಆಕೆ ಆರಂಭಿಸಿದಳು. ಈ ಹುಡುಕಾಟದಲ್ಲಿ ಆಕೆ ಋಷಿ ಮತಂಗ ಆಶ್ರಮಕ್ಕೆ ತಲುಪಿದಳು. ಆ ಕಾಲದಲ್ಲಿ ಋಷಿ ಮತಂಗ ಅವರು ತುಂಬಾ ಹೆಸರುವಾಸಿಯಾಗಿದ್ದರು.

Most Read: ಸಂಕಷ್ಟ ನಿವಾರಣೆಗೆ ಇಂತಹ ದೇವರುಗಳ ಮುಂದೆ ದೀಪ ಹಚ್ಚಿಡಿ

ಆಶ್ರಮದೊಳಗೆ ಹೋದಲು ಶ್ರಮನಗೆ ಅವಕಾಶ ನೀಡಲಿಲ್ಲ

ಆಶ್ರಮದೊಳಗೆ ಹೋದಲು ಶ್ರಮನಗೆ ಅವಕಾಶ ನೀಡಲಿಲ್ಲ

ಆಶ್ರಮವನ್ನು ನೋಡಿದ ಶ್ರಮನ ಮುಂದೆ ಹೋಗಲು ನಿರ್ಧರಿಸಿದಳು. ಆದರೆ ಆಕೆಗೆ ಇಲ್ಲಿ ಕೂಡ ಅಡೆತಡೆಗಳು ಬರುತ್ತದೆ ಎಂದು ಆಕೆ ನಿರೀಕ್ಷೆ ಮಾಡಿರಲಿಲ್ಲ. ದೇವರನ್ನು ತಲುಪುವ ಮೊದಲು ಭಕ್ತರು ಹಲವಾರು ಅಡೆತಡೆಗಳನ್ನು ಎದುರಿಸ ಬೇಕಾಗುತ್ತದೆ ಎನ್ನುವಂತಹ ಮಾತು ಕೂಡ ಇದೆ. ಇದರಂತೆ ಶ್ರಮನಗೆ ಕೂಡ ಹಲವಾರು ಅಡೆತಡೆಗಳು ಬಂದವು. ಆಶ್ರಮದ ಒಳಗೆ ಹೋಗಲು ಅಲ್ಲಿದ್ದವರು ಆಕೆಗೆ ಅವಕಾಶ ನೀಡಲಿಲ್ಲ. ಆಕೆ ಕೀಳು ಜಾತಿಯವಳು ಎಂದು ಅಲ್ಲಿದ್ದವರು ಹೀಯಾಳಿಸಿದರು. ಇದರಿಂದ ಆಕೆಗೆ ತುಂಬಾ ನೋವಾಯಿತು ಮತ್ತು ಆಕೆ ಆಶ್ರಮದ ಹೊರಗಡೆ ಕುಳಿತುಬಿಟ್ಟಳು.

ಆಶ್ರಮದೊಳಗೆ ಹೋದಲು ಶ್ರಮನಗೆ ಅವಕಾಶ ನೀಡಲಿಲ್ಲ

ಆಶ್ರಮದೊಳಗೆ ಹೋದಲು ಶ್ರಮನಗೆ ಅವಕಾಶ ನೀಡಲಿಲ್ಲ

ಅದಾಗ್ಯೂ, ಇಲ್ಲಿ ನಡೆದಿರುವಂತಹ ಘಟನೆ ಮತ್ತು ಶ್ರಮನ ಆಶ್ರಮದ ಹೊರಗಡೆ ಕುಳಿತಿರುವುದು ಮತಂಗ ಮುನಿಗಳಿಗೆ ತಿಳಿಯಿತು. ಅವರು ಆಕೆಯಲ್ಲಿಗೆ ಬಂದು ಆಶ್ರಮಕ್ಕೆ ಬಂದಿರುವ ಉದ್ದೇಶ ಏನು ಎಂದು ಹೇಳಿದರು. ರಾಮ ದೇವರ ಬಗ್ಗೆ ತನಗೆ ಇರುವಂತಹ ಪ್ರೀತಿ ಮತ್ತು ತನ್ನ ಮುಂದಿನ ಜೀವನವನ್ನು ರಾಮ ದೇವರಿಗಾಗಿ ಮುಡಿಪಾಗಿಡಲು ಬಯಸಿದ್ದೇನೆ ಎಂದು ಶ್ರಮನಳು ಮುನಿಗಳಿಗೆ ತಿಳಿಸುವಳು. ಬಾಲ್ಯದಿಂದಲೇ ರಾಮ ದೇವರ ಬಗ್ಗೆ ತುಂಬಾ ಪ್ರೀತಿ ಹಾಗೂ ಭಕ್ತಿಯನ್ನು ಇಟ್ಟುಕೊಂಡಿರುವಂತಹ ಶ್ರಮನ ಬಗ್ಗೆ ತಿಳಿದುಕೊಂಡ ಮತಂಗ ಮುನಿಗಳು ಆಕೆಯನ್ನು ತನ್ನ ಆಶ್ರಮದಲ್ಲಿ ಸೇರಿಸಿಕೊಳ್ಳಲು ಒಪ್ಪಿಕೊಂಡರು ಮತ್ತು ತನ್ನ ಶಿಷ್ಯೆಯಾಗಿ ಸ್ವೀಕರಿಸಿದರು.

ಮತಂಗ ಆಶ್ರಮದಲ್ಲಿ ಶ್ರಮನ

ಮತಂಗ ಆಶ್ರಮದಲ್ಲಿ ಶ್ರಮನ

ಆಶ್ರಮದಲ್ಲಿದ್ದ ಶ್ರಮನ ಯಾವಾಗಲೂ ಹೋಗಿ ಹಣ್ಣುಗಳನ್ನು ತಂದು ಅದನ್ನು ಶ್ರೀರಾಮ ದೇವರಿಗಾಗಿ ಶೇಖರಿಸುತ್ತಾ ಇದ್ದಳು. ಶ್ರೀರಾಮ ದೇವರನ್ನು ಭೇಟಿಯಾಗುವುದು ಆಕೆ ಆಶ್ರಮದಲ್ಲಿ ಉಳಿಯಲು ಇದ್ದ ಬಹುದೊಡ್ಡ ಕಾರಣವಾಗಿದೆ. ಮತಂಗ ಮುನಿಗಳು ಹೇಳುತ್ತಿದ್ದಂತಹ ಮಾತುಗಳು ಆಕೆಯ ಧೈರ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು. ನೀವು ಒಂದು ದಿನ ಖಂಡಿತವಾಗಿಯೂ ರಾಮ ದೇವರನ್ನು ಭೇಟಿಯಾಗುತ್ತಿ ಎಂದು ಮುನಿಗಳು ಹೇಳುತ್ತಲಿದ್ದರು.

ರಾಮ ದೇವರು ಶಬರಿಯ ಭೇಟಿಯಾದರು

ರಾಮ ದೇವರು ಶಬರಿಯ ಭೇಟಿಯಾದರು

ಮುನಿಗಳು ಹೇಳಿದಂತೆ ಒಂದು ದಿನ ಇದು ನಡೆದೇ ಹೋಯಿತು. ವನವಾಸದಲ್ಲಿದ್ದ ವೇಳೆ ಲಕ್ಷ್ಮಣ ಮತ್ತು ರಾಮ ದೇವರು ಚಿತ್ರಕೂಟ ಬೆಟ್ಟದಲ್ಲಿ ವಿಶ್ರಾಂತಿ ಪಡೆಯಲು ತೆರಳಿದರು. ಅದೇ ಬೆಟ್ಟದಲ್ಲಿ ಶಬರಿ ಕೂಡ ನೆಲೆಸಿದ್ದಳು. ತನ್ನ ಕಣ್ಣೆದುರಿನಲ್ಲಿ ರಾಮ ದೇವರನ್ನು ನೋಡಿದ ಆಕೆಗೆ ಮಾತುಗಳೇ ಹೊರಗೆ ಬರಲಿಲ್ಲ. ಕೆನ್ನೆಗಳ ಮೇಲೆ ಆನಂದ ಭಾಷ್ಪವು ಹರಿದುಬಂತು. ಆಕೆ ಜೀವನದಲ್ಲಿ ತಾನು ಇಟ್ಟುಕೊಂಡಿದ್ದ ಗುರಿಯನ್ನು ಈಡೇರಿಸಿಕೊಂಡಳು. ಈ ಗುರಿಯು ಅಷ್ಟು ಸುಲಭವಾಗಿ ಇರಲಿಲ್ಲ.

Most Read: ತಿರುಪತಿಯ ಶ್ರೀನಿವಾಸ/ಬಾಲಾಜಿ ದೇವರಿಗೆ ಮುಡಿಕೊಡುವುದರ ಮಹತ್ವ...

ಮುಗ್ದೆ ಶಬರಿ ಅರ್ಧ ತಿಂದ ಹಣ್ಣನ್ನು ರಾಮ ದೇವರಿಗೆ ನೀಡಿದಳು

ಮುಗ್ದೆ ಶಬರಿ ಅರ್ಧ ತಿಂದ ಹಣ್ಣನ್ನು ರಾಮ ದೇವರಿಗೆ ನೀಡಿದಳು

ಶ್ರೀರಾಮ ದೇವರಿಗೆ ಹಣ್ಣುಗಳು ಹುಳಿಯಾಗಿ ಇರಬಾರದು ಎಂಬ ಕಾರಣಕ್ಕಾಗಿ ಶಬರಿ ಅದನ್ನು ತಿಂದು ನೋಡಿ ಬಳಿಕ ನೀಡುತ್ತಲಿದ್ದಳು. ಆಕೆ ಸಿಹಿಯಾಗಿರುವುದನ್ನು ಮಾತ್ರ ನೀಡುತ್ತಳಿದ್ದಳು ಮತ್ತು ಹುಳಿಯಾಗಿರುವುದನ್ನು ಬಿಡುತ್ತಿದ್ದಳು. ದೇವರಿಗೆ ನಾವು ಮಾಡಿದಂತಹ ಮೊದಲ ಆಹಾರವನ್ನು ಅರ್ಪಿಸಬೇಕು. ಇಲ್ಲವಾದಲ್ಲಿ ದೇವರು ತುಂಬಾ ಕೋಪ ಗೊಳ್ಳುವರು ಎಂದು ನಾವು ನಂಬಿಕೊಂಡು ಬಂದಿದ್ದೇವೆ. ಆದರೆ ಶಬರಿ ನೀಡಿರುವಂತಹ ಅರ್ಧ ತಿಂದಿರುವ ನೇರಳೆ ಹಣ್ಣುಗಳು ಕೂಡ ರಾಮ ದೇವರ ಮನಗೆಲ್ಲಲು ನೆರವಾಯಿತು. ತುಂಬಾ ಮುಗ್ದೆಯಾಗಿದ್ದ ಶ್ರಮನಳನ್ನು ಇಂದು ಕೂಡ ಜನರು ರಾಮನ ಪರಮಭಕ್ತೆ ಎಂದು ನೆನಪಿಸಿಕೊಳ್ಳುವರು. ಪ್ರತೀ ವರ್ಷವು ಆಕೆಯ ಜನ್ಮ ದಿನವನ್ನು ಶಬರಿ ಜಯಂತಿ ಎಂದು ಆಚರಿಸಲಾಗುತ್ತದೆ.

English summary

shabari jayanti: The story of shabari and ram

Shabari, as she was called after the name of her tribe, was an ardent devotee of Lord Ram. Though the love for God occupied and flourished in her heart since childhood, and she succeeded in attaining God, the supreme aim of her life, life was no cakewalk for her. Rather, numerous obstacles tested her faith, secretly conspiring to help her meet Lord Ram.
X