Just In
- 53 min ago
ಆಫ್ರಿಕಾ ಸುಂದರಿ ಮುಡಿಗೇರಿದ 2019 ವಿಶ್ವ ಸುಂದರಿ ಪಟ್ಟ
- 1 hr ago
ಹೇರ್ ಡೈ ಬಳಸಿದರೆ ಬರುವ 6 ಅಪಾಯಕಾರಿ ಕಾಯಿಲೆಗಳು
- 3 hrs ago
ಪಾರ್ಟಿ ಲುಕ್ಗೆ ಶಿಮ್ಮರಿ ಐ ಮೇಕಪ್ ಹೀಗಿರಲಿ
- 9 hrs ago
ಸೋಮವಾರದ ದಿನ ಭವಿಷ್ಯ (9-12-2019)
Don't Miss
- News
ಚಿಕ್ಕಬಳ್ಳಾಪುರ; ಬಿಜೆಪಿಯ ಡಾ.ಕೆ.ಸುಧಾಕರ್ ಗೆಲುವಿನ ನಗೆ
- Education
ECIL Recruitment 2019: 64 ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ವಾಟ್ಸಪ್ ಚಾಟ್ ಅನ್ನು PDF ಫಾರ್ಮೇಟ್ಗೆ ಕನ್ವರ್ಟ್ ಮಾಡುವುದು ಹೇಗೆ ಗೊತ್ತಾ?
- Movies
28 ದಿನದ ಬಳಿಕ ಆಸ್ಪತ್ರೆಯಿಂದ ಮನೆಗೆ ಮರಳಿದ ಲತಾ ಮಂಗೇಶ್ಕರ್
- Automobiles
ವಿಶೇಷವಾಗಿ ಮಾಡಿಫೈಗೊಂಡ ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟರ್
- Sports
ಹೀಗೆ ಫೀಲ್ಡಿಂಗ್ ಮಾಡಿದ್ರೆ ಯಾವ ಮೊತ್ತವೂ ಎದುರಾಳಿಗೆ ಸಾಕಾಗದು!; ಕೊಹ್ಲಿ
- Finance
ದೇಶದ ಆರ್ಥಿಕತೆ ಪ್ರಗತಿ ಹಿಂಜರಿತದಲ್ಲಿ ಸಿಲುಕಿಕೊಂಡಿದೆ: ರಘುರಾಂ ರಾಜನ್
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಅಶ್ವತ್ಥ ಮರವನ್ನು ಪೂಜಿಸಿದರೆ ಕಾಲಸರ್ಪ ದೋಷ ನಿವಾರಣೆಯಾಗುವುದು
ಹಿಂದೂ ಧರ್ಮಿಯರಿಗೆ ಅಶ್ವತ್ಥ ಮರವೆಂದರೆ ತುಂಬಾ ಪೂಜ್ಯನೀಯವಾಗಿದೆ. ಅಶ್ವತ್ಥ ಮರದ ಎಲೆ ಹಾಗೂ ಕಡ್ಡಿಗಳನ್ನು ವಿವಿಧ ರೀತಿಯ ಪೂಜೆ ಹಾಗೂ ಹವನಗಳಿಗೂ ಬಳಸಲಾಗುತ್ತದೆ. ಶನಿವಾರದಂದು ಅಶ್ವತ್ಥ ಮರಕ್ಕೆ ಸುತ್ತು ಬಂದರೆ ಅದರಿಂದ ತುಂಬಾ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ. ಅಶ್ವತ್ಥ ಮರದಲ್ಲಿ ಶನಿವಾರದಂದು ವಿಷ್ಣುವಿನ ಜತೆಗೆ ಲಕ್ಷ್ಮೀಯು ನೆಲೆಸಿರುತ್ತಾಳೆ ಎಂದು ಪುರಾಣಗಳು ಹೇಳುತ್ತವೆ.
ದೈವ ಸ್ವರೂಪಿ 'ಅಶ್ವತ್ಥ ಮರ'ದ ಎಲೆಗಳ ಔಷಧೀಯ ಗುಣಗಳು
ಮರವು ದೇವದೇವತೆಗಳಿಗೆ ಸ್ವರ್ಗ ಎಂದು ಅಥರ್ವ ವೇದ ಮತ್ತು ಛೋದೋಗ್ಯ ಉಪನಿಷತ್ ನಲ್ಲಿ ಹೇಳಲಾಗಿದೆ. ಪುರಾಣಗಳ ಪ್ರಕಾರ ಅಶ್ವತ್ಥ ಮರದ ಬೇರಿನಲ್ಲಿ ಬ್ರಹ್ಮ, ಕೊಂಬೆಯಲ್ಲಿ ವಿಷ್ಣು ಮತ್ತು ಎಲೆಗಳಲ್ಲಿ ಶಿವ ನೆಲೆಸಿರುತ್ತಾನೆ. ಅಶ್ವತ್ಥ ಮರವನ್ನು ಪೂಜಿಸುವವರಿಗೆ ಸಂಪತ್ತು ಸಿಗುವುದು ಮತ್ತು ಇದರಲ್ಲಿ ತಪ್ಪು ಮಾಡುವವರಿಗೆ ಬಡತನ ಕಾಡುವುದು ಎನ್ನಲಾಗಿದೆ. ಅಶ್ವತ್ಥ ಮರವನ್ನು ಪೂಜಿಸುವವರಿಗೆ ಇರುವ ನಿಯಮಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಇದನ್ನು ತಿಳಿದು ಅಶ್ವತ್ಥ ಮರ ಪೂಜಿಸಿ.....

ವೈಜ್ಞಾನಿಕ ಕಾರಣಗಳು
ಹೆಚ್ಚಿನ ಮರಗಳು ಕಾರ್ಬನ್ ಡೈಯಾಕ್ಸೈಡ್ ನ್ನು ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುತ್ತದೆ. ರಾತ್ರಿ ವೇಳೆ ಮರಗಳು ಆಮ್ಲಜನಕವನ್ನು ಹೀರಿಕೊಂಡು ಕಾರ್ಬನ್ ಡೈಯಾಕ್ಸೈಡ್ ನ್ನು ಬಿಡುಗಡೆ ಮಾಡುವುದು. ಇದರಿಂದ ರಾತ್ರಿ ವೇಳೆ ಮರಗಳ ಸಮೀಪ ಮಲಗಬಾರದು ಎನ್ನಲಾಗುತ್ತದೆ.

ವೈಜ್ಞಾನಿಕ ಕಾರಣಗಳು
ಅಶ್ವತ್ಥ ಮರವು ರಾತ್ರಿ ವೇಳೆ ಕೂಡ ಆಮ್ಲಜನಕವನ್ನು ಬಿಡುಗಡೆ ಮಾಡುವುದು. ಅಶ್ವತ್ಥ ಮರವು ರಾತ್ರಿ ವೇಳೆಯೂ ಆಮ್ಲಜನಕವನ್ನು ಬಿಡುಗಡೆ ಮಾಡುವುದು. ಯಾಕೆಂದರೆ ಕ್ರಾಸ್ಲುಲೇಶನ್ ಮೆಟಾಬಾಲಿಸಮ್ ಅನ್ನು ಎನ್ನುವ ಒಂದು ರೀತಿಯ ದ್ಯುತಿಸಂಶ್ಲೇಷಣೆ ನಿರ್ವಹಿಸುವ ಸಾಮರ್ಥ್ಯ ಇದಕ್ಕಿದೆ.

ವೈಜ್ಞಾನಿಕ ಕಾರಣಗಳು
ನಿಮ್ಮ ಸುತ್ತಮುತ್ತ ಅಶ್ವತ್ಥ ಮರಗಳು ಹೆಚ್ಚಾಗಿದ್ದರೆ ಅದು ಆರೋಗ್ಯಕ್ಕೆ ಒಳ್ಳೆಯದು. ಯಾಕೆಂದರೆ ಇದು ವಾತಾವರಣವನ್ನು ಶುದ್ಧೀಕರಿಸುವುದು.

ಧಾರ್ಮಿಕ ಕಾರಣಗಳು
ಅಶ್ವತ್ಥ ಮರದಲ್ಲಿ ನಾನು ನೆಲೆಸಿರುತ್ತೇನೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ದೇವರು ಹೇಳಿದ್ದಾರೆ. ಅಶ್ವತ್ಥ ಮರಕ್ಕೆ ನೀರು ಹಾಕುವುದು, ಪೂಜಿಸುವುದು ಮತ್ತು ಸುತ್ತು ಬರುವುದರಿಂದ ಸಂಪತ್ತು, ಸಂತೋಷ ಮತ್ತು ಒಳ್ಳೆಯ ಅದೃಷ್ಟ ಬರುವುದು ಎಂದು ನಂಬಲಾಗಿದೆ. ಅಶ್ವತ್ಥ ಮರವನ್ನು ಪೂಜಿಸಿದರೆ ಪಿತ್ತ ದೋಷ ಮತ್ತು ಕಾಲಸರ್ಪ ದೋಷವು ನಿವಾರಣೆಯಾಗುವುದು ಎಂದು ಪುರಾಣಗಳಲ್ಲಿ ಇದೆ.

ಅಮವಾಸ್ಯೆಯ ದಿನ
ಅಮವಾಸ್ಯೆಯ ದಿನ ಹನುಮಾನ್ ಚಾಲೀಸ ಹೇಳಿಕೊಂಡು ಅಶ್ವತ್ಥ ಮರಕ್ಕೆ ಸುತ್ತು ಬಂದರೆ ಅದರಿಂದ ಜೀವನದಲ್ಲಿ ಬರುವ ಹಲವಾರು ರೀತಿಯ ಸಂಕಷ್ಟಗಳು ದೂರವಾಗುವುದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಅಶ್ವತ್ಥ ಮರದ ಕೆಳಗೆ ಪ್ರತೀದಿನ ಸಾಸಿವೆ ಎಣ್ಣೆಯ ದೀಪ ಹಚ್ಚಿದರೆ ತುಂಬಾ ಒಳ್ಳೆಯದು