For Quick Alerts
ALLOW NOTIFICATIONS  
For Daily Alerts

Uagdi 2020 : ಯುಗಾದಿ ಹಬ್ಬದ ಹಿಂದಿರುವ ವೈಜ್ಞಾನಿಕ ಕಾರಣ ಗೊತ್ತೆ?

|

ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. ಹೌದು ಯುಗಾದಿ ಹಬ್ಬವನ್ನು ನಾವೆಲ್ಲರೂ ಆಚರಿಸುತ್ತೇವೆ. ಸಂಭ್ರಮದ ಯುಗಾದಿಗೆ ಇನ್ನೇನು ಕೆಲವೇ ದಿನಗಳು ಬಾಕಿ. ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ಯುಗಾದಿ ಹಬ್ಬದ ಆಚರಣೆ ಯಾಕೆ ಮಾಡಬೇಕು ಎಂಬ ಬಗ್ಗೆ ಮಾಹಿತಿಯೇ ತಿಳಿದಿಲ್ಲ. ಯುಗಾದಿ ಹಬ್ಬದ ಆಚರಣೆಯ ಹಿಂದೆ ಒಂದಷ್ಟು ವೈಜ್ಞಾನಿಕ ಕಾರಣಗಳಿವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.

ಇದು ಕೇವಲ ಒಂದು ಧಾರ್ಮಿಕ ಹಬ್ಬವಷ್ಟೇ ಅಲ್ಲ ಬದಲಾಗಿ ವೈಜ್ಞಾನಿಕ ಕಾರಣಗಳನ್ನೊಳಗೊಂಡಿರುವ ವಿಶೇಷ ಆಚರಣೆಯ ದಿನ. ಹಾಗಾದ್ರೆ ಯುಗಾದಿ ಆಚರಣೆಯ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ಸಣ್ಣದಾಗಿ ವಿವರಿಸುತ್ತಿದ್ದೇವೆ. ಮುಂದೆ ಓದಿ.

ಯುಗಾದಿ ಹಬ್ಬವು ಕೇವಲ ಪಾಶ್ಚಾತ್ಯ ಕ್ಯಾಲೆಂಡರ್ ನ ಬದಲಾವಣೆ ಅಲ್ಲ ಬದಲಾಗಿ ನೈಸರ್ಗಿಕ ಬದಲಾವಣೆ!

ಯುಗಾದಿ ಹಬ್ಬವು ಕೇವಲ ಪಾಶ್ಚಾತ್ಯ ಕ್ಯಾಲೆಂಡರ್ ನ ಬದಲಾವಣೆ ಅಲ್ಲ ಬದಲಾಗಿ ನೈಸರ್ಗಿಕ ಬದಲಾವಣೆ!

 • ಹಿಂದೂ ಕ್ಯಾಲೆಂಡರ್ ಪ್ರಕಾರ ಚಾಂದ್ರಮಾನ ಯುಗಾದಿ (ಚೈತ್ರ ಶುದ್ಧ ಪಾಡ್ಯ) ವು ಹೊಸ ವರ್ಷದ ಆರಂಭವಾಗಿದೆ.
 • ಇದನ್ನು ಸಾಮಾನ್ಯವಾಗಿ ಆಂಧ್ರದಲ್ಲಿ ತೆಲುಗು ಮಾತನಾಡುವ ಜನರು ಮತ್ತು ಕರ್ನಾಟಕದಲ್ಲಿ ಕನ್ನಡಿಗರು ಹೆಚ್ಚು ಆಚರಿಸುತ್ತಾರೆ. ಮಹಾರಾಷ್ಟ್ರದ ಜನರು ಕೂಡ ಯುಗಾದಿ ಆಚರಿಸುತ್ತಾರೆ ಮತ್ತು ಯುಗಾದಿಯನ್ನು ಗುಡಿ ಪಾಡ್ವ ಎಂದು ಕರೆಯುತ್ತಾರೆ.
 • ಜನವರಿ 1 ಕೇವಲ ಕ್ಯಾಲೆಂಡರ್ ನಲ್ಲಿ ದಿನಾಂಕದ ಬದಲಾವಣೆ ಅಷ್ಟೇ. ಆದರೆ ವೈಜ್ಞಾನಿಕವಾಗಿ ಅಥವಾ ಖಗೋಳಾಗಿ ಯಾವುದೇ ಬದಲಾವಣೆಯೂ ಕೂಡ ಜನವರಿ 1 ರಂದು ಆಗುವುದಿಲ್ಲ.
 • ▪ ಯುಗಾದಿ ಹಬ್ಬದಂದು ಆಗುವ ಖಗೋಳ ಮತ್ತು ವೈಜ್ಞಾನಿಕ ಬದಲಾವಣೆಯನ್ನು ನಾವು ನಿಮಗೆ ವಿವರಿಸುತ್ತೇವೆ. ಚಂದ್ರಮಾನವನ್ನು ವಿಂದ್ಯ ಪರ್ವತದ ಬಳಿ ವಾಸಿಸುವ ಮಂದಿ ಗಮನಿಸಬಹುದಾಗಿದೆ.
 • ಯುಗಾದಿಯ ಖಗೋಳ ಘಟನೆಗಳು
 • ಯುಗಾದಿ ಅನ್ನೋ ಪದವು ಸಂಸ್ಕೃತದ ಯುಗ+ಆದಿ ಅನ್ನೋ ಪದದಿಂದ ಹುಟ್ಟಿದ್ದು ಯುಗ ಅಂದರೆ ಅವಧಿ ಮತ್ತು ಆದಿ ಅಂದರೆ ಪ್ರಾರಂಭ ಎಂಬುದಾಗಿದೆ. ಇದರರ್ಥ ಹೊಸ ಸಮಯದ ಪ್ರಾರಂಭ ಎಂಬುದಾಗಿದೆ.
 • ಇಂದು ಭೂಮಿಯ ಆಕ್ಸಿಸ್ ವಾಲುತ್ತದೆ. ಉತ್ತರ ಗೋಳಾರ್ಧವು ಹೆಚ್ಚಿನ ಪ್ರಮಾಣದ ಸೂರ್ಯನ ಶಕ್ತಿಯನ್ನು ಪಡೆದುಕೊಳ್ಳುತ್ತದೆ.
 • ಈ ಸಮಯದಲ್ಲಿ ಭೂಮಿಯು ಹೆಚ್ಚು ಉಷ್ಣತೆಗೆ ಒಳಗಾಗುತ್ತದೆ ಆದ್ದರಿಂತ ಮನುಷ್ಯರಿಗೆ ಹೆಚ್ಚು ಶಾಖದ ಅನುಭವವಾಗುತ್ತದೆ. ಅದನ್ನು ಸಹಿಸುವ ಶಕ್ತಿಯನ್ನು ಯುಗಾದಿ ಆಚರಣೆ ನೀಡುತ್ತದೆ
 • ಖಗೋಳಶಾಸ್ತ್ರದ ಪ್ರಕಾರ ಯುಗಾದಿಯ ಹಿಂದಿನ ದಿನ ಅಮವಾಸ್ಯೆಯಾಗಿರುತ್ತದೆ.
 • ಹೊಸ ಸಂವತ್ಸರದ ಪ್ರಾರಂಭದ ದಿನ ಇದು. ವಸಂತ ಋತುವಿನ ಪ್ರಾರಂಭದ ದಿನ ಇದಾಗಿರುತ್ತದೆ. ಇನ್ನು ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು ಎಂಬ ಹಾಡಿನಂತೆ ಪ್ರಕೃತಿಯೂ ಕೂಡ ಚಿಗುರೆಲೆಗಳಿಂದ ಹೊಸ ಋತುವಿಗೆ ಸ್ವಾಗತ ಕೋರಲು ಸಜ್ಜಾಗಿರುವ ಸಮಯ ಇದಾಗಿದೆ.
 • ಈ ಸಮಯದಲ್ಲಿ ಮರಗಳ ಎಲೆಗಳು ಉದುರುತ್ತದೆ ಮತ್ತು ಹೊಸ ಚಿಗುರು ಪ್ರಾರಂಭವಾಗುತ್ತದೆ. ಹಾಗಾಗಿ ಹೊಸತನದ ಸಂಕೇತವನ್ನು ಪ್ರಕೃತಿಯೂ ಕೂಡ ನೀಡಲು ಪ್ರಾರಂಭಿಸುವ ಸುದಿನ ಇದು.
 • ಪ್ರಕೃತಿ ಕೂಡ ಈ ಸಮಯದಲ್ಲಿ ಹೊಸ ಪ್ರಾರಂಭವನ್ನು ಸೂಚಿಸುತ್ತದೆ.
 • ಪಂಚಾಂಗದ ಪ್ರಕಾರ ಯುಗಾದಿಯ ದಿನದಂದು ಹೊಸ ಹಿಂದೂ ಕ್ಯಾಲೆಂಡರ್ ಪ್ರಾರಂಭವಾಗುತ್ತದೆ.
 • ಹಿಂದೂ ಕ್ಯಾಲೆಂಡರ್ ಕೇವಲ ಸಾಂಪ್ರದಾಯಿಕವಾಗಿ ಮಾತ್ರವೇ ಮಹತ್ವಪೂರ್ಣದ್ದಾಗಿಲ್ಲ ಆದರೆ ಇದು ವೈಜ್ಞಾನಿಕವಾಗಿಯೂ ಮತ್ತು ಖಗೋಳಶಾಸ್ತ್ರದ ಪ್ರಕಾರವೂ ಕೂಡ ಹಲವು ಗ್ರಹಗಳ ಕ್ಷಣಗಳನ್ನು ವಿವರಿಸುವ ಸಂಪರ್ಕ ಸಾಧನವಾಗಿದೆ.
 • ನಮ್ಮ ಭಾರತೀಯ ಶ್ರೇಷ್ಟ ಗಣಿತಜ್ಞರೆನಿಸಿರುವ ಭಾಸ್ಕರಾಚಾರ್ಯ ಪ್ರಕಾರ ಯುಗಾದಿಯ ಸುರ್ಯೋದಯವು ಹೊಸ ವರ್ಷದ ಪ್ರಾರಂಭವಾಗಿದೆ. ಯಾಕೆಂದರೆ ಭೂಮಿಯು ಸೂರ್ಯನ ಸುತ್ತ ಸುತ್ತುವಿಕೆಯು ಒಂದು ಯುಗಾದಿಯಿಂದ ಇನ್ನೊಂದು ಯುಗಾದಿಗೆ ಒಮ್ಮೆ ಪೂರ್ಣಗೊಂಡಿರುತ್ತದೆ.
ಯುಗಾದಿಯ ಖಗೋಳ ಘಟನೆಗಳು

ಯುಗಾದಿಯ ದಿನದಂದು ಜನರು ನಡೆಸುವ ಕೆಲವು ಆಚರಣೆಗಳು

ಯುಗಾದಿಯ ದಿನದಂದು ಜನರು ನಡೆಸುವ ಕೆಲವು ಆಚರಣೆಗಳು

 • ಯುಗಾದಿಯ ದಿನದಂದು ಜನರು ಬೆಳಿಗ್ಗೆ ಸೂರ್ಯೋದಕ್ಕೂ ಮುನ್ನವೇ ಏಳುತ್ತಾರೆ ಮತ್ತು ಹರಳೆಣ್ಣೆಯನ್ನು ತಲೆಗೆ ಹಾಕಿ ಸ್ನಾನ ಮಾಡುತ್ತಾರೆ. ಹಾಗಾದ್ರೆ ಜನರು ಹರಳೆಣ್ಣೆ ತಲೆಗೆ ಸವರಿಕೊಂಡು ಸ್ನಾನ ಮಾಡುವುದರ ಹಿಂದಿರುವ ಕಾರಣವೇನು? ಖಂಡಿತವಾಗ್ಲೂ ಇದಕ್ಕೊಂದು ವೈಜ್ಞಾನಿಕ ಕಾರಣವಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆ ಕಾರಣವೇನು ಎಂಬ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.
 • ಭೂಮಿಯ ಉತ್ತರ ಗೋಳಾರ್ಧವು ಸೂರ್ಯನ ಅತ್ಯುನ್ನತ ಶಕ್ತಿಯನ್ನು ಪಡೆದುಕೊಳ್ಳುವುದರಿಂದಾಗಿ ಆ ಹೆಚ್ಚಿನ ತಾಪಮಾನವನ್ನು ಮನುಷ್ಯನಿಗೆ ಸ್ವಲ್ಪ ಅನಾನುಕೂಲವಾಗಿರುತ್ತದೆ.ಅದೇ ಕಾರಣಕ್ಕೆ ನಾವು ಹರಳೆಣ್ಣೆಯಂತಹ ಕೂಲಿಂಗ್ ಏಜೆಂಟ್ ನ್ನು ಬಳಕೆ ಮಾಡಬೇಕಾಗುತ್ತದೆ. ವರ್ಷದ ಶಾಖದ ದಿನಗಳನ್ನು ಕಳೆಯುವುದಕ್ಕೆ ದೇಹವನ್ನು ಸಜ್ಜುಗೊಳಿಸುವ ಒಂದು ಪ್ರಕ್ರಿಯೆ ಇದಾಗಿದ್ದು ಯುಗಾದಿಯು ಇದರ ಪ್ರಾರಂಭವಾಗಿದೆ.
 • ಇದಾದ ನಂತರ ಜನರು ತಾಜಾ ಮಾವಿನ ಎಲೆಗಳಿಂದ ಮನೆಯ ಮುಂಭಾಗವನ್ನು ಅಲಂಕರಿಸುತ್ತಾರೆ. ಇದಕ್ಕೂ ಕೂಡ ವೈಜ್ಞಾನಿಕ ಕಾರಣವಿದೆ. ಹೀಗೆ ತಾಜಾ ಮಾವಿನ ಎಲೆಗಳನ್ನು ಮನೆಯ ಮುಂಭಾಗದಲ್ಲಿ ಹಾಕುವುದರಿಂದಾಗಿ ತಾಜಾ ಗಾಳಿ ಮನೆಯೊಳಗೆ ಪ್ರವೇಶಿಸುತ್ತದೆ ಮತ್ತು ಇದು ತಂಪಾದ ಅನುಭವವನ್ನು ಮನೆಯೊಳಗೆ ನೀಡುತ್ತದೆ.
 • ಜನರು ಹೊಸ ಬಟ್ಟೆಗಳನ್ನು ತೊಡುತ್ತಾರೆ ಯಾಕೆಂದರೆ ಇದರಿಂದ ಅವರೊಳಗೊಂದು ಹೊಸತನದ ಭಾವನೆ ಹುಟ್ಟುತ್ತದೆ.
ಯುಗಾದಿ ದಿನದಂದು ಮಾಡುವ ಇತರೆ ಆಚರಣೆಗಳು

ಯುಗಾದಿ ದಿನದಂದು ಮಾಡುವ ಇತರೆ ಆಚರಣೆಗಳು

 • ತುಪ್ಪದಲ್ಲಿ ಪ್ರತಿಫಲನ: ಯುಗಾದಿ ದಿನದಂದು ಕರಗಿಸಿದ ತುಪ್ಪವನ್ನು ಒಂದು ಬೌಲ್ ನಲ್ಲಿ ಹಾಕಿ ಮುಖವನ್ನು ನೋಡಿಕೊಳ್ಳುವ ಪದ್ದತಿ ಕೆಲವು ಕಡೆಗಳಲ್ಲಿ ರೂಢಿಯಲ್ಲಿದೆ.
 • ಎಣ್ಣೆ(ಆಯಿಲ್) ಶಾಸ್ತ್ರ: ಕುಟುಂಬದ ಹಿರಿಯ ಮಹಿಳೆಯು ಕುಟುಂಬದ ಕಿರಿಯ ಸದಸ್ಯರಿಗೆ ಕುಂಕುಮ ಹಚ್ಚಿ ಆರತಿ ಎತ್ತುವ ಪದ್ದತಿ ರೂಢಿಯಲ್ಲಿದೆ.
 • ಅಭ್ಯಂಗ: ಕುಟುಂಬದ ಎಲ್ಲಾ ಸದಸ್ಯರು ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದು ಹಬ್ಬದ ದಿನದಂದು ರೂಢಿಯಲ್ಲಿರುವ ಶಾಸ್ತ್ರಗಳಲ್ಲಿ ಒಂದೆನಿಸಿದೆ.
 • ಹೊಸ ಬಟ್ಟೆಗಳು: ಕುಟುಂಬದ ಎಲ್ಲಾ ಸದಸ್ಯರು ಹೊಸ ಬಟ್ಟೆಗಳನ್ನು ಧರಿಸುವುದು.
 • ದೇವರಿಗೆ ಅಭ್ಯಂಗ ಸ್ನಾನ: ದೇವರ ಪ್ರತಿಮೆಗಳಿಗೆ ಎಣ್ಣೆಯ ಅಭ್ಯಂಗ ಸ್ನಾನ ಮಾಡಲಾಗುತ್ತದೆ.
 • ಹೂವುಗಳು: ಬೇವು, ಮಾವು ಮತ್ತು ಹುಣಸೆ ಹೂವುಗಳನ್ನು ದೇವರಿಗೆ ಸಮರ್ಪಿಸಲಾಗುತ್ತದೆ.
 • ಪೂಜೆ: ಅಭಿಷೇಕ, ಅಲಂಕಾರ, ನೈವೇದ್ಯ ಮತ್ತು ಮಂಗಳಾರತಿಯನ್ನು ಹಂತಹಂತವಾಗಿ ಮಾಡುವ ಮೂಲಕ ಪೂಜಾ ವಿಧಾನವನ್ನು ನೆರವೇರಿಸಲಾಗುತ್ತದೆ.
 • ಪಂಚಾಂಗ ಪೂಜೆ: ದೇವರನ್ನು ಪ್ರಾರ್ಥೆನೆಗೈದ ನಂತರ ಹೊಸ ಸಂವತ್ಸರಕ್ಕಾಗಿ ಅಥವಾ ಹೊಸ ವರ್ಷಕ್ಕಾಗಿ ಹೊಸ ಪಂಚಾಂಗ ಶ್ರವಣ ಮತ್ತು ಅದರ ಪೂಜಾ ಕೈಂಕರ್ಯವನ್ನು ಕೈಗೊಳ್ಳಲಾಗುತ್ತದೆ.
 • ಗುಡಿ ಅಥವಾ ಇಂದ್ರ ತಾಜಾ ಪೂಜೆ: ಇಂದ್ರ ತಾಜಾ ಪೂಜೆಯನ್ನು ನಡೆಸಲಾಗುತ್ತದೆ.
 • ಮುಂಭಾಗದ ಬಾಗಿಲಿಗೆ ಅಲಂಕಾರ: ಕೆಮ್ಮಣ್ಣು( ಕೆಂಪು ಮಣ್ಣು) , ರಂಗೋಲಿ ಮತ್ತು ಮಾವಿನ ಎಲೆಗಳಿಂದ ಬಾಗಿಲಿನ ಮುಂಭಾಗವನ್ನು ಅಲಂಕರಿಸುವುದು. ಕೆಲವೊಮ್ಮೆ ಬೇವಿನ ಎಲೆಗಳನ್ನು ಕೂಡ ಬಳಸಲಾಗುತ್ತದೆ.
 • ಬೇವು ಬೆಲ್ಲ: ಹಬ್ಬದಲ್ಲಿ ಬೆಲ್ಲ ಮತ್ತು ಬೇವನ್ನು ಸೇವಿಸುವುದೆಂದರೆ ಸಿಹಿ ಮತ್ತು ಕಹಿ ಘಟನೆಗಳೆರಡನ್ನೂ ಕೂಡ ಜೀವನದಲ್ಲಿ ಸಮಾನ ದೃಷ್ಟಿಯಲ್ಲಿ ಎದುರಿಸುವಿಕೆ ಎಂದರ್ಥ.
 • ಊಟ: ದೇವರಿಗೆ ಊಟವನ್ನು ತಯಾರಿಸಿ ನೇವೇದ್ಯ ಮಾಡಿ ನಂತರ ಪ್ರಸಾದದ ರೂಪದಲ್ಲಿ ಆ ಊಟವನ್ನು ಸೇವಿಸುವುದು.
 • ದೇವಸ್ಥಾನಕ್ಕೆ ಭೇಟಿ ನೀಡುವುದು: ದೇವಸ್ಥಾನಗಳಿಗೆ ಭೇಟಿ ನೀಡುವುದು ಮತ್ತು ದೇವರಿಗೆ ಸರ್ವವೂ ಒಳಿತಾಗಳಿ ಎಂದು ಪ್ರಾರ್ಥಿಸುವುದು.
ಯುಗಾದಿ ಹಬ್ಬದಲ್ಲಿ ಬೇವುಬೆಲ್ಲ ಮಿಶ್ರಣವನ್ನು ಸೇವಿಸುವಾಗ ಹೇಳಬೇಕಿರುವ ಸ್ತೋತ್ರ

ಯುಗಾದಿ ಹಬ್ಬದಲ್ಲಿ ಬೇವುಬೆಲ್ಲ ಮಿಶ್ರಣವನ್ನು ಸೇವಿಸುವಾಗ ಹೇಳಬೇಕಿರುವ ಸ್ತೋತ್ರ

| |ಶತಾಯುರ್ ವಜ್ರ ದೇಹಾಯ. ಸರ್ವ ಸಂಪತ್ ಕರಾಯಚ. ಸರ್ವಾ ರಿಷ್ಟ ವಿನಾಶಾಯ, ನಿಂಬಕಂ ದಲ ಭಕ್ಷಣಂ|l

ಮೇಲಿನ ಶ್ಲೋಕದ ಅರ್ಥವೇನೆಂದರೆ

"ನನ್ನ ದೇಹವು ವಜ್ರದಂತೆ ನೂರು ವರ್ಷಕ್ಕೂ ಅಧಿಕ ಅವಧಿಗಾಗಿ ಹೆಚ್ಚು ಶಕ್ತಿಯುತವಾಗಲಿ.; ಓ ದೇವರೆ ನನಗೆ ಸಂಪತ್ತು ಮತ್ತು ಸಮೃದ್ಧಿಯನ್ನು ಕರುಣಿಸು.ಈ ಪ್ರಾರ್ಥನೆಯ ಮೂಲಕ ವಿಶ್ವದಲ್ಲಿರುವ ಎಲ್ಲಾ ಕೆಟ್ಟದ್ದನ್ನು ನಾಶಗೊಳಿಸು. ಅದಕ್ಕಾಗಿ ನಾನು ಈ ಕಹಿಬೇವು ಮತ್ತು ಬೆಲ್ಲವನ್ನು ಸೇವಿಸುತ್ತಿದ್ದೇನೆ"

 • ಜೀವನ ಅನ್ನುವುದು ಸಿಹಿ ಮತ್ತು ಕಹಿಯ ಮಿಶ್ರಣವಾಗಿದೆ. ಈ ಏರಿಳಿತವನ್ನು ನಿಭಾಯಿಸಲು ನಾನು ಕಲಿಯುತ್ತೇನೆ.
 • ಇದರ ಆಂತರಿಕ ಮಹತ್ವವೆಂದರೆ ಜೀವನವು ಒಳ್ಳೆಯದು ಮತ್ತು ಕೆಟ್ಟದು, ಸಂತೋಷ ಮತ್ತು ದುಃಖ, ಯಶಸ್ಸು ಮತ್ತು ನಿರಾಶೆಯ ಮಿಶ್ರಣವಾಗಿದೆ ಮತ್ತು ಇವುಗಳೆಲ್ಲವನ್ನೂ ಒಂದೇ ರೀತಿ ಪರಿಗಣಿಸಬೇಕು.
 • ಎಲ್ಲಾ ಅನುಭವವನ್ನು ನಾನು ಸಮಾನ ದೃಷ್ಟಿಯಲ್ಲಿ ಪರಿಗಣಿಸುತ್ತೇನೆ
 • ಪ್ರತಿಯೊಬ್ಬರೂ ಕೂಡ ಈ ವರ್ಷದಲ್ಲಿ ಏನಾಗುತ್ತದೆಯೋ ಅದನ್ನು ಶಾಂತವಾಗಿ ಎದುರಿಸಲು ನಿರ್ಧರಿಸಬೇಕು,ಅದನ್ನು ಉತ್ತಮ ಅನುಗ್ರಹದಿಂದ ಸ್ವೀಕರಿಸಬೇಕು, ಪ್ರತಿಯೊಂದನ್ನು ಕೂಡ ಪ್ರತಿಯೊಬ್ಬರ ಒಳಿತಿಗೆಂದು ಪರಿಗಣಿಸಬೇಕು.
 • ಪುರುಷರು ದುಃಖ, ಸಂತೋಷ,ಯಶಸ್ಸು ಮತ್ತು ವೈಫಲ್ಯವನ್ನು ಮೀರಿ ನಿಲ್ಲಬೇಕು.
 • ಯುಗಾದಿಯಂತಹ ಶುಭ ದಿನವನ್ನು ನಮ್ಮ ಜೀವನವನ್ನು ಬದಲಾಯಿಸುವ ಮತ್ತು ನಮ್ಮೆಲ್ಲಾ ಕೆಟ್ಟ ಗುಣಗಳನ್ನು ತ್ಯಜಿಸುವ ಮೂಲಕ ನಮ್ಮ ನಡವಳಿಕೆಯಲ್ಲಿ ಬದಲಾವಣೆಯ ನಿರ್ಣಯ ಕೈಗೊಳ್ಳುವುದಕ್ಕೆ ಬಳಸಬೇಕು.

English summary

Scientific Reasons Behind Celebrating Ugadi Festival

Here we are discussing about Scientific Reasons Behind Ugadi Festival. We Celebrate Ugadi festival but so many of us don't know the science behind it. Read more.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X