For Quick Alerts
ALLOW NOTIFICATIONS  
For Daily Alerts

ಮೇ ತಿಂಗಳಿನಲ್ಲಿ ಸತ್ಯ ನಾರಾಯಣ ಪೂಜೆ ಯಾವಾಗ? ಪೂಜಾ ವಿಧಿಗಳೇನು?

|

ಹಿಂದೂ ಧರ್ಮದಲ್ಲಿ ಸತ್ಯ ನಾರಾಯಣ ಪೂಜೆಗೆ ತುಂಬಾನೇ ಮಹತ್ವವಿದೆ. ಮನೆ ಗೃಹ ಪ್ರವೇಶ, ಶುಭ ಕಾರ್ಯಗಳಲ್ಲಿ ಸತ್ಯನಾರಾಯಣ ಪೂಜೆ ಮಾಡಲಾಗುವುದು. ಯಾವುದೇ ಒಳ್ಳೆಯ ಕಾರ್ಯ ಮಾಡುವಾಗ ಯಾವುದೇ ಅಡೆತಡೆಗಳು ಉಂಟಾಗದಿರಲಿ ಎಂದು ಗಣಪತಿ ಪೂಜೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಮಾಡಲಾಗುವುದು. ಸತ್ಯನಾರಾಯಣ ಶ್ರೀ ವಿಷ್ಣುವಿನ ಒಂದು ರೂಪವಾಗಿದ್ದು ಈ ಪೂಜೆ ಮಾಡುವುದರಿಂದ ಎಲ್ಲವೂ ಸರಾಗವಾಗಿ ನೆರವೇರುವುದು, ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡುವುದರಿಂದ ಒಳಿತಾಗುತ್ತದೆ ಎಂಬ ನಂಬಿಕೆ.

ಸತ್ಯ ನಾರಾಯಣ ಪೂಜೆಯನ್ನು ತಿಂಗಳ ಹುಣ್ಣಿಮೆ ದಿನ , ಏಕಾದಶಿ, ಪೂರ್ಣಿಮಾ ತಿಥಿಯಂದು ಆಚರಿಸಲಾಗುವುದು. ಸತ್ಯ ನಾರಾಯಣ ಪೂಜೆಯನ್ನು ಇದೇ ದಿನ, ಇದೇ ಸಮಯದಲ್ಲಿ ಮಾಡಬೇಕೆಂಬ ಕಟ್ಟುಪಾಡಿಲ್ಲ. ಸತ್ಯದ ಸಂಕೇತವಾಗಿರುವ ಸತ್ಯ ನಾರಾಯಣನನ್ನು ಪೂಜಿಸುವುದರಿಂದ ಬೇರೆಯವರ ಸುಳ್ಳು, ವಂಚನೆ, ದ್ವೇಷ ಇವುಗಳು ನಮ್ಮ ಮೇಲೆ, ನಾವು ಮಾಡುವ ಪೂಜೆಯ ಮೇಲೆ ಯಾವ ಕೆಟ್ಟ ಪರಿಣಾಮ ಬೀರದಿರಲಿ ಎಂದು ಸತ್ಯ ನಾರಾಯಣ ಪೂಜೆ ಮಾಡಲಾಗುವುದು.

ಸತ್ಯ ನಾರಾಯಣ ಪೂಜೆಯ ಮಹತ್ವ

ಸತ್ಯ ನಾರಾಯಣ ಪೂಜೆಯ ಮಹತ್ವ

ಸತ್ಯ ನಾರಾಯಣ ಪೂಜೆ ಮಾಡುವುದರಿಂದ ಶ್ರೀ ನಾರಾಯಣನ ಕೃಪೆಯಿಂದ ಎಲ್ಲಾ ತೊಂದರೆಗಳಿಂದ ಮುಕ್ತಿ ಸಿಗುವುದು. ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸುವುದು, ಮಾಡುವ ಕಾರ್ಯಕ್ಕೆ ಒಳ್ಳೆಯ ಫಲ ಸಿಗುವುದು.

ಸತ್ಯ ನಾರಾಯಣ ಪೂಜೆಯನ್ನು ಲಿಂಗ ಬೇಧವಿಲ್ಲದೆ ಮನೆಯಲ್ಲಿ ಅಥವಾ ಕಚೇರಿಗಳಲ್ಲಿ ಪೂಜೆಯನ್ನು ನಡೆಸಬಹುದಾಗಿದೆ.

ಸತ್ಯ ನಾರಾಯಣ ವ್ರತ ಕತೆ

ಸತ್ಯ ನಾರಾಯಣ ವ್ರತ ಕತೆ

ಒಮ್ಮೆ ನಾರದ ಮುನಿಗಳು ಭೂಮಿಯ ಮೇಲಿನ ಮನುಷ್ಯರ ಕಷ್ಟಗಳನ್ನು ನಿವಾರಿಸಲು ಶ್ರೀವಿಷ್ಣುವಿನ ಬಳಿ ಪರಿಹಾರ ಕೇಳುತ್ತಾರೆ. ಆಗ ಶ್ರೀ ಮಹಾವಿಷ್ಣುವು ಜನರು ಸತ್ಯನಾರಾಯಣ ಪೂಜೆ ಮಾಡಿದರೆ ಅವರ ಕಷ್ಟಗಳೆಲ್ಲಾ ದೂರಾಗುವುದು ಎಂಬ ಪರಿಹಾರ ಸೂಚಿಸುತ್ತಾನೆ ಎಂಬ ಪೌರಾಣಕ ಕತೆಯಿದೆ.

ಸತ್ಯನಾರಾಯಣ ಪೂಜೆಯ ಪೂಜಾ ವಿಧಿ

ಸತ್ಯನಾರಾಯಣ ಪೂಜೆಯ ಪೂಜಾ ವಿಧಿ

ಸತ್ಯ ನಾರಾಯಣ ಪೂಜೆಯನ್ನು ಯಾವಾಗ ಬೇಕಾದರೂ ಮಾಡಬಹುದು, ಮೊದಲೇ ಹೇಳಿದಂತೆ ಹುಣ್ಣಿಮೆಯಂದು ಹೆಚ್ಚಾಗಿ ಮಾಡುತ್ತಾರೆ. ಪೂಜಾಗೃಹ ಅಥವಾ ದೇವರನ್ನು ಕೂರಿಸುವ ಸ್ಥಳವನ್ನು(ಕುರ್ಚಿ, ಮೇಜು) ಸ್ವಚ್ಛಗೊಳಿಸಿ ನಾಲ್ಕೂ ಬದಿಗೆ ಬಾಳೆ ಕಂಡು ಕಟ್ಟಿ, ಮಾವಿನ ಎಲೆಯ ತೋರಣಗಳಿಂದ ಅಲಂಕರಿಸಿ ರಂಗೋಲಿಯನ್ನು ಹಾಕಿ ಶ್ರೀವಿಷ್ಣುವಿನ ಫೋಟೋ ಅಥವಾ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕು. ಒಂದು ಚೊಂಬಿಗೆ ನೀರು ಹಾಕಿ , ಅದಕ್ಕೆ ನಿಮ್ಮದೇ ಒಡವೆಗಳನ್ನು ಹಾಕಿ, ಚೊಂಬಿನ ಬಾಯಿಗೆ 2 ವೀಳ್ಯೆದ ಎಲೆಯಿಟ್ಟು ಜುಟ್ಟು ಇರುವ ತೆಂಗಿನಕಾಯಿ ಇಟ್ಟು ಕಳಸ ತಯಾರಿಸಬೇಕು. ಕಳಸಕ್ಕೆ ಹೊಸ ಶಲ್ಯ ಹೊದಿಸಬೇಕು.

ಒಂದು ತಟ್ಟೆಗೆ ಅಕ್ಕಿ ಹಾಕಿ ಅದರ ಮೇಲೆ ಕಳಸವನ್ನು ಪ್ರತಿಷ್ಠಾಪನೆ ಮಾಡಬೇಕು. ಮತ್ತೊಂದು ತಟ್ಟೆಯಲ್ಲಿ ನವಗ್ರಹ ಧ್ಯಾನ್ಯಗಳನ್ನು ಇರಿಸಬೇಕು. ಪ್ರತಿ ಧಾನ್ಯದ ಮುಂದೆ ದಕ್ಷಿಣೆ ಇಡಬೇಕು.

ಪೂಜಾ ವಿಧಿ

ಪೂಜಾ ವಿಧಿ

ಸತ್ಯ ನಾರಾಯಣ ಪೂಜೆ ಮಾಡುವ ಮೊದಲು ಗಣಪತಿ ಪೂಜೆ ಮಾಡಬೇಕು. ನಂತರ ಇಂದ್ರಾದಿ ಸೇರಿ ದಶದಿಕ್ಪಾಲಕರನ್ನು, ರಾಮ, ಸೀತೆ, ಲಕ್ಷಣ, ರಾಧಾ, ಕೃಷ್ಣರನ್ನೂ ಪೂಜಿಸಬೇಕುನಂತರ ಸತ್ಯ ನಾರಾಯಣ ಪೂಜೆ ಮಾಡಬೇಕು. ಸತ್ಯ ನಾರಾಯಣನಿಗೆ ಪೂಜೆ ಸಲ್ಲಿಸಿದ ಬಳಿಕ ಲಕ್ಷ್ಮೀ ದೇವಿಯನ್ನು ನಂತರ ಪಾರ್ವತಿ-ಪರಶಿವ, ಬ್ರಹ್ಮ ದೇವರನ್ನು ಪೂಜಿಸಬೇಕು.

ನಂತರ ದೇವರಿಗೆ ಆರತಿ ಬೆಳಗಿ ಪ್ರಸಾದವನ್ನು ಅರ್ಪಿಸಿ, ನೆರೆದಿರುವ ಭಕ್ತರಿಗೆ ಪ್ರಸಾದವನ್ನು ಹಂಚಬೇಕು.

ನಂತರ ಪೂಜೆ ಮಾಡಿದ ಪುರೋಹಿತರಿಗೆ ನಮಸ್ಕರಿಸಿ ಬಟ್ಟೆ ಹಾಗೂ ದಕ್ಷಿಣೆ, ಫಲಾಹಾರಗಳನ್ನು ದಕ್ಷಿಣೆ ನೀಡಬೇಕು.

ಮೇ ತಿಂಗಳಿನಲ್ಲಿ ಸತ್ಯ ನಾರಾಯಣ ಪೂಜೆ ಯಾವಾಗ?

ಮೇ 15, 2022 ಭಾನುವಾರ , ಶುಕ್ಲ ಪೂರ್ಣಿಮಾ

ವೈಶಾಖ ಶುಕ್ಲ ಪೂರ್ಣಿಮಾ ತಿಥಿ ಪ್ರಾರಂಭ: ಮೇ 15 ಮಧ್ಯಾಹ್ನ 12:45ಕ್ಕೆ

ಪೂರ್ಣಿಮಾ ತಿಥಿ ಮುಕ್ತಾಯ: ಮೇ 16 ಬೆಳಗ್ಗೆ 09:43ಕ್ಕೆ

ಈ ವರ್ಷ ಇನ್ನು ಯಾವಾಗೆಲ್ಲಾ ಸತ್ಯ ನಾರಾಯಣ ಪೂಜೆ ದಿನಾಂಕವಿದೆ?

ಜೂನ್‌ 14

ಜುಲೈ 13

ಆಗಸ್ಟ್ 11

ಸೆಪ್ಟೆಂಬರ್ 10

ಅಕ್ಟೋಬರ್ 9

ನವೆಂಬರ್ 8

ಡಿಸೆಂಬರ್ 7

English summary

Satyanarayan Puja May 2022 Date; Know Shubh Muhurat, Puja Vidhi, Rituals, Vrat Katha in kannada

Satyanarayan Puja May 2022 Date; Know Shubh Muhurat, Puja Vidhi, Ritauls, Vrat Katha in kannada, read on.......
X
Desktop Bottom Promotion