For Quick Alerts
ALLOW NOTIFICATIONS  
For Daily Alerts

ಇಂದು ಸಂಕಷ್ಟಿ ಚತುರ್ಥಿ: ಮುಟ್ಟಾದಾಗ ಉಪವಾಸ ವ್ರತ ಮಾಡಬಹುದೇ?

|

ಇಂದು ಮೇ 19 ಗುರುವಾರ. ಪಂಚಾಂಗದ ಪ್ರಕಾರ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿ ಈ ದಿನ ಏಕದಂತ ಸಂಕಷ್ಟ ಚತುರ್ಥಿ ಉಪವಾಸ ಮಾಡಲಾಗುವುದು. ಈ ದಿನ ಉಪವಾಸವಿದ್ದು ಗಣೇಶನ ಆರಾಧನೆ ಮಾಡಿದರೆ ಸಂಕಟ, ಯಾವುದಾದರೂ ಒಳ್ಳೆಯ ಕಾರ್ಯಕ್ಕಿರುವ ವಿಘ್ನ, ತೊಂದರೆ ಎಲ್ಲವೂ ನಿವಾರಣೆಯಾಗುವುದು.

ಈ ದಿನದಂದು ಗಣೇಶನಿಗೆ ಪೂಜೆಯನ್ನು ಸಲ್ಲಿಸಿ ಏಕದಂತ ಸಂಕಷ್ಟ ಚತುರ್ಥಿ ಉಪವಾಸದ ಕಥೆಯನ್ನು ಹೇಳುವುದರಿಂದಒಳಿತಾಗುವುದು ಎಂಬ ನಂಬಿಕೆ. ಗಣೇಶನ ಬಲವಾಗಿ ನಂಬಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬುವುದು ಅವನ ಭಕ್ತರ ಅಚಲ ನಂಬಿಕೆ.

ಸಂಕಷ್ಟಿ ಚತುರ್ಥಿಯಂದು ರಾತ್ರಿ ಚಂದ್ರನ ಆರಾಧನೆ

ಸಂಕಷ್ಟಿ ಚತುರ್ಥಿಯಂದು ರಾತ್ರಿ ಚಂದ್ರನ ಆರಾಧನೆ

ಸಂಕಷ್ಟಿ ಚತುರ್ಥಿ ಉಪವಾಸ ವ್ರತಕ್ಕೂ ರಾತ್ರಿ ಚಂದ್ರೋದಯಕ್ಕೂ ಸಂಬಂಧವಿದೆ. ಚಂದ್ರನನ್ನು ನೋಡಿದ ಬಳಿಕ ಗಣೇಶನಿಗೆ ಸಲ್ಲಿಸಿದ ಬಳಿಕವಷ್ಟೇ ಸಂಕಷ್ಟಿ ಉಪವಾಸವನ್ನು ಮುರಿಯಬಹುದು. ಸಂಕಷ್ಟಿ ಚತುರ್ಥಿ ವ್ರತದಲ್ಲಿ ರಾತ್ರಿ ಚಂದ್ರನ ಆರಾಧನೆ ಕಡ್ಡಾಯ. ಇದು ಇಲ್ಲದೆ ಸಂಕಷ್ಟ ಚತುರ್ಥಿ ಉಪವಾಸವು ಪೂರ್ಣಗೊಳ್ಳುವುದಿಲ್ಲ. ಆದರೆ, ವಿನಾಯಕ ಚತುರ್ಥಿ ಉಪವಾಸದ ಸಮಯದಲ್ಲಿ ಚಂದ್ರನನ್ನು ನೋಡುವುದನ್ನು ಸಹ ನಿಷೇಧಿಸಲಾಗಿದೆ, ಏಕೆಂದರೆ ಸುಳ್ಳು ಕಳಂಕದ ಅಪವಾದ ನಮ್ಮ ಮೇಲೆ ಉಂಟಾಗುತ್ತದೆ ಎಂದು ಹೇಳಲಾಗುವುದು. ಈ ದಿನ ಗಣೇಶ ಮಂತ್ರಗಳನ್ನು ಹೇಳುತ್ತಾ ಪೂಜೆಯನ್ನು ಸಲ್ಲಿಸಲಾಗುವುದು.

ಅಲ್ಲದೆ ಈ ದಿನ ಗುರುವಾರವಾಗಿರುವುದರಿಂದ ಗಣಪತಿಗೆ ಪೂಜೆ ಸಲ್ಲಿಸಿದ ಬಳಿಕ ವಿಷ್ಣು ಹಾಗೂ ಗುರುದೇವ ಬೃಹಸ್ಪತಿಯನ್ನು ಪೂಜಿಸಿದರೆ ಇನ್ನಷ್ಟು ಒಳ್ಳೆಯದು,. ಇದರಿಂದ ಮನೆಯಲ್ಲಿ ಶುಭ ಕಾರ್ಯಗಳು ನೆರವೇರುವುದು.

ಮದುವೆ ವಿಳಂಬವಾಗುತ್ತಿದ್ದರೆ ಗುರುವಾರದ ಪೂಜೆಯಿಂದ ಬೇಗನೆ ಫಲ ಸಿಗುವುದು

ಮದುವೆ ವಿಳಂಬವಾಗುತ್ತಿದ್ದರೆ ಗುರುವಾರದ ಪೂಜೆಯಿಂದ ಬೇಗನೆ ಫಲ ಸಿಗುವುದು

ಕೆಲವರಿಗೆ ಮದುವೆ ತುಂಬಾ ವಿಳಂವವಾಗಿರುತ್ತದೆ ಅಂಥವರಿಗೆ ಮೊದಲಿಗೆ ಶ್ರೀ ಗಣೇಶನಿಗೆ ಪೂಜೆ ಸಲ್ಲಿಸಿ ನಂತರ ವಿಷ್ಣು-ಲಕ್ಷ್ಮಿಯನ್ನು ಪೂಜಿಸುವುದರಿಂದ ಬೇಗ ಕಂಕಣ ಭಾಗ್ಯ ಕೂಡಿ ಬರುತ್ತದೆ.

ಸಂಕಷ್ಟಿ ಚತುರ್ಥಿ

ಸಂಕಷ್ಟಿ ಚತುರ್ಥಿ

ಜ್ಯೇಷ್ಠ - ಕೃಷ್ಣ ಪಕ್ಷ - ಚತುರ್ಥಿ ತಿಥಿ - ಗುರುವಾರ

ನಕ್ಷತ್ರಪುಂಜ - ಮೂಲ

ಪ್ರಮುಖ ಯೋಗ - ಸಾಧ್ಯ ಯೋಗ

ಧನು ರಾಶಿಗೆ ಚಂದ್ರನ ಸಂಚಾರ

ಇಂದಿನ ಶುಭ ಮುಹೂರ್ತ - ಬೆಳಗ್ಗೆ 11.52 ರಿಂದ 12.35 ರವರೆಗೆ

ರಾಹುಕಾಲ - 01.34 ಗಂಟೆಯಿಂದ 02.55 ಗಂಟೆಯವರೆಗೆ

ಸಂಕಷ್ಟಿ ಚತುರ್ಥಿ ತಿಥಿ ಮುಕ್ತಾಯ: ಮೇ 19 ರಾತ್ರಿ 08:23ಕ್ಕೆ

ಮುಟ್ಟಿನ ಸಮಯದಲ್ಲಿ ಸಂಕಷ್ಟಿ ಮಾಡಬಹುದೇ?

ಮುಟ್ಟಿನ ಸಮಯದಲ್ಲಿ ಸಂಕಷ್ಟಿ ಮಾಡಬಹುದೇ?

ನಿರ್ಣಯ ಸಿಂಧೂರಕದಲ್ಲಿ ಈ ಕುರಿತು ಸ್ಪಷ್ಟವಾಗಿ ಹೇಳಲಾಗಿದೆ. ಒಂದು ವೇಳೆ ಸೂತಕವಶದರೆ ಶಾರೀರಿಕ ಧರ್ಮ ಪಾಲಿಸುವ ಮೂಲಕ ವ್ರತವನ್ನು ಮಾಡಬಹುದು. ಮುಟ್ಟಿನ ಸಮಯದಲ್ಲಿ ಮಾನಸಿಕ ಪೂಜೆ ಸಲ್ಲಿಸಲು ಯಾವುದೇ ಅಡ್ಡಿಯಿಲ್ಲ. ಪೂಜೆಯನ್ನು ನಿಮ್ಮ ಪರವಾಗಿ ಮನೆಯಲ್ಲಿ ಬೇರೆ ಯಾರಾದರೂ ಮಾಡಬಹುದು, ನಿಮ್ಮ ಪರವಾಗಿ ಅವರು ಸಂಕಲ್ಪ ಮಾಡಬಹುದು. ನೀವು ಏನಾದರೂ ದಾನ ಮಾಡುವುದಾದರೆ ಶುದ್ಧವಾದ ಬಳಿಕ ಮಾಡಬಹುದು.

ಉಪವಾಸವನ್ನು ಯಾವಾಗ ಮುರಿಯಬಹುದು?

ಚಂದ್ರೋದಯದ ಬಳಿಕ ಚಂದ್ರನಿಗೆ ಆರ್ಘ್ಯವನ್ನು ಸಲ್ಲಿಸಿ ನಂತರ ಉಪವಾಸವನ್ನು ಮುರಿಯಬೇಕು.

English summary

Sankashti Chaturthi May 2022 Date, Tithi Time, Moonrise Time to Break Fast in Kannada

Sankashti Chaturthi May 2022 Date, Tithi Time, Moonrise Time to Break Fast in Kannada, read on....
Story first published: Thursday, May 19, 2022, 13:30 [IST]
X
Desktop Bottom Promotion