For Quick Alerts
ALLOW NOTIFICATIONS  
For Daily Alerts

ಯುಗಾದಿ ಹಬ್ಬದ ನಂಬಿಕೆಗಳು ಮತ್ತು ಆಚರಣೆಗಳು

|

ದಕ್ಷಿಣ ವಲಯದವರಿಗೆ ಯುಗಾದಿ ಹೊಸ ವರ್ಷದ ಆಚರಣೆಯಾಗಿದೆ. ಯುಗಾದಿಯನ್ನು ಹೊಸ ವರ್ಷದ ಆರಂಭ ಎಂಬ ಅರ್ಥದಲ್ಲೂ ಕರೆಯುತ್ತಾರೆ. ಆಂಧ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೊಂಕಣ ಪ್ರದೇಶದವರಿಗೆ ಯುಗಾದಿ ಹೊಸ ವರ್ಷದ ಆರಂಭದ ಸೂಚನೆಯಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಬೋಲ್ಡ್ ಸ್ಕೈ ಅಡುಗೆ ಮನೆಯಲ್ಲಿ 8 ಯುಗಾದಿ ಖಾದ್ಯಗಳು

ಹಿಂದೂ ಶಾಸ್ತ್ರಗಳ ಪ್ರಕಾರ, ಈ ದಿನದಂದು ಬ್ರಹ್ಮನು ಜೀವಿಗಳ ಸೃಷ್ಟಿಗೆ ತೊಡಗಿದನು ಎಂಬುದು ಜನಜನಿತ. ದಕ್ಷಿಣ ಭಾರತದೆಲ್ಲೆಡೆ ಯುಗಾದಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಮರಗಿಡಗಳು ಹಣ್ಣು ಹೂವುಗಳನ್ನು ನೀಡಲು ಪ್ರಾರಂಭಿಸಿದಂತೆ ಹೊಸ ಜೀವನದ ಆರಂಭಕ್ಕೆ ಯುಗಾದಿ ಕಾರಣವಾಗಿದೆ ಎಂಬುದು ಇದರ ಹಿಂದಿರುವ ನಂಬಿಕೆಯಾಗಿದೆ.

ಆಚರಣೆಗಳ ಪ್ರಕಾರ, ಯಗಾದಿಯ ಆಚರಣೆ ಎರಡು ದಿನಗಳ ಹಿಂದೆಯೇ ಪ್ರಾರಂಭಗೊಳ್ಳುತ್ತದೆ. ಹಬ್ಬ ಪ್ರಾರಂಭವಾಗುವ ಮುನ್ನವೇ ಮನೆಯನ್ನು ಸ್ವಚ್ಛಗೊಳಿಸುವ ಕೆಲಸಗಳು ಹಬ್ಬದ ತಯಾರಿ ಮುಗಿದಿರಬೇಕು ಎಂಬುದು ಕಟ್ಟುನಿಟ್ಟಿನ ಕ್ರಮವಾಗಿದೆ. ಮನೆಯನ್ನು ಪರಿಸರವನ್ನು ಸ್ವಚ್ಛಗೊಳಿಸುವುದಲ್ಲದೆ ಯುಗಾದಿ ಕೆಲವೊಂದು ಆಚರಣೆಗಳನ್ನು ಹೊತ್ತು ತರುತ್ತದೆ. ಅವುಗಳು ಯಾವುವು ಎಂಬುದನ್ನು ನೋಡಲು ಮುಂದೆ ಓದಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಯುಗಾದಿ ಸ್ಪೆಶಲ್ ಮಸಾಲಾ ಗರೇಲು ರೆಸಿಪಿ!

ಯುಗಾದಿ ಪಚಡಿ:

ಯುಗಾದಿ ಪಚಡಿ:

ಯುಗಾದಿಗೆಂದೇ ತಯಾರಿಸಲಾಗುವ ವಿಶೇಷ ಖಾದ್ಯವಾದ ಯುಗಾದಿ ಪಚಡಿಯನ್ನು ಈ ದಿನ ತಯಾರಿಸಲಾಗುತ್ತದೆ. ಇದು ಆರು ರುಚಿಗಳನ್ನು ಹೊಂದಿದೆ. ಉಪ್ಪು, ಸಿಹಿ, ಹುಳಿ, ಒಗರು, ಕಹಿ ಮತ್ತು ಖಾರ. ಸಂತೋಷಕ್ಕೆ ಸೂಚನೆಯಾದ ಬೆಲ್ಲ, ಜೀವನದಲ್ಲಿ ಆಸಕ್ತಿ ಸೂಚಿಸುವ ಉಪ್ಪು, ಜೀವನದಲ್ಲಿ ಬರುವ ಕಷ್ಟಗಳ ಸೂಚನೆಯಾದ ಬೇವು, ಬದುಕಿನ ಸವಾಲಿನ ಕ್ಷಣಗಳಿಗೆ ಸೂಚನೆಯಾದ ಹುಳಿ, ಹೊಸ ಸವಾಲುಗಳು ಮತ್ತು ಕಾತರವನ್ನು ಸೂಚಿಸುವ ಎಳೆ ಮಾವಿನಕಾಯಿ ತುಂಡುಗಳು, ಬದುಕಿನಲ್ಲಿ ಸಿಟ್ಟಿಗೆ ಕಾರಣವಾದ ಕ್ಷಣಗಳನ್ನು ಸೂಚಿಸುವ ಮೆಣಸಿನ ಹುಡಿ ಹೀಗೆ ಈ ಆರೂ ಸಾಮಾಗ್ರಿಗಳನ್ನು ಬಳಸಿ ಪಚಡಿಯನ್ನು ತಯಾರಿಸಲಾಗುತ್ತದೆ. ಮನುಷ್ಯನು ತನ್ನ ಬದುಕನ್ನು ಸುಂದರಗೊಳಿಸಲು ಈ ಆರೂ ಕಷ್ಟಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು ಎಂಬುದು ಇದರ ಹಿಂದಿರುವ ಮರ್ಮವಾಗಿದೆ.

ಪ್ರಾತಃ ಕಾಲದ ಸ್ನಾನ:

ಪ್ರಾತಃ ಕಾಲದ ಸ್ನಾನ:

ಜನರು ಬೆಳಗ್ಗೆ ಬೇಗನೆದ್ದು ಸ್ನಾನ ಮಾಡುತ್ತಾರೆ. ತಮ್ಮ ಮನೆಗಳನ್ನು ಮಾವಿನಲೆಯ ತೋರಣಗಳಿಂದ ಅಲಂಕರಿಸುತ್ತಾರೆ. ಶಿವ ಮತ್ತು ಪಾರ್ವತಿಯ ಮಕ್ಕಳಾದ ಗಣೇಶ ಮತ್ತು ಕಾರ್ತಿಕೇಯರಿಗೆ ಮಾವಿನ ಕಾಯಿಗಳೆಂದರೆ ತುಂಬಾ ಇಷ್ಟ ಎಂಬ ಪ್ರತೀತಿ ಇದೆ. ಆದ್ದರಿಂದ ಈ ದೇವರ ಕೃಪೆ ತಮ್ಮ ಮೇಲಿರಲಿ ಎಂದು ಜನರು ಮಾವಿನ ತೋರಣಗಳಿಂದ ಮನೆಯನ್ನು ಅಲಂಕರಿಸುತ್ತಾರೆ.

ರಂಗೋಲಿ:

ರಂಗೋಲಿ:

ತಮ್ಮ ಮನೆಯ ಅಂಗಳವನ್ನು ಸೆಗಣಿಯಿಂದ ಸಾರಿಸಿ ಸ್ವಚ್ಛಗೊಳಿಸುತ್ತಾರೆ. ಮನೆಯ ಹೊರಗೆ ಸುಂದರವಾದ ರಂಗೋಲಿಯನ್ನು ಬಿಡಿಸುತ್ತಾರೆ.

ಪಂಚಾಂಗ ಶ್ರವಣಂ:

ಪಂಚಾಂಗ ಶ್ರವಣಂ:

ಮನೆಯವರ ಪಂಚಾಂಗವನ್ನು ಸಿದ್ಧಪಡಿಸುವ ಸಂಪ್ರದಾಯ ಯುಗಾದಿ ಆಚರಣೆಗಳಲ್ಲಿ ಒಂದಾಗಿದೆ. ಮನೆಯವರೆಲ್ಲರ ಪಂಚಾಂಗವನ್ನು ಯುಗಾದಿಯಂದು ಪಂಡಿತರು ತಯಾರಿಸುತ್ತಾರೆ.

ಕವಿ ಸಮ್ಮೇಳನ:

ಕವಿ ಸಮ್ಮೇಳನ:

ಹಾಡು ಕವನಗಳ ವಾಚನ ಮುಂತಾದ ಕಾರ್ಯಕ್ರಮಗಳೊಂದಿಗೆ ಮನೆಯ ಸದಸ್ಯರು ಬಂಧುಗಳೆಲ್ಲರೂ ಸೇರಿ ಯುಗಾದಿಯಂದು ಸಾಹಿತ್ಯ ವಿಮರ್ಶೆಯನ್ನು ಮಾಡುತ್ತಾರೆ. ಅತಿಥಿಗಳು ಹಾಗೂ ಮನೆಯವರಿಗಾಗಿ ಭೂರೀ ಭೋಜನವನ್ನು ಯುಗಾದಿಯಂದು ಸಿದ್ಧಪಡಿಸಲಾಗುತ್ತದೆ.

English summary

Rituals & Traditions Of Ugadi

Ugadi is the new year celebration for the people of the Deccan region. The term Ugadi is derived from the Sanskrit word 'Yugadi' where 'Yug' means age and 'Adi' means beginning. Ugadi marks the beginning of new year for the people of Andhra Pradesh, Karnataka, Maharashtra and the Konkan areas.
Story first published: Tuesday, March 25, 2014, 11:32 [IST]
X
Desktop Bottom Promotion