For Quick Alerts
ALLOW NOTIFICATIONS  
For Daily Alerts

ಬೇವು- ಬೆಲ್ಲ ಸವಿಯುವ ಯುಗಾದಿ ಹಬ್ಬದ ವೈಶಿಷ್ಟ್ಯತೆ

By Jaya subramanya
|

ಹೋಳಿಹಬ್ಬದ ರ೦ಗುಗಳು ಮಾಸಲಾರ೦ಭಿಸುತ್ತಿದ್ದ೦ತೆಯೇ, ಪ್ರಕೃತಿಯ ತರುಲತೆಗಳಲ್ಲಿ ಚಿಗುರೆಲೆಗಳು ಕಾಣಿಸಿಕೊ೦ಡು ಅವು ನವಜೀವನವನ್ನು ಪಡೆದುಕೊಳ್ಳುವುದರ ಮೂಲಕ ವಸ೦ತಾಗಮನವನ್ನು ಸಾರುತ್ತವೆ. ಹಿ೦ದೂ ಧರ್ಮದ ಪ್ರಕಾರ, ಸೃಷ್ಟಿಕರ್ತನಾದ ಬ್ರಹ್ಮನು ತನ್ನ ಸೃಷ್ಟಿಕಾರ್ಯವನ್ನು ಚೈತ್ರಮಾಸದ ಈ ತಿ೦ಗಳಿನಲ್ಲಿ (ಮಾರ್ಚ್ - ಏಪ್ರಿಲ್) ಆರ೦ಭಿಸಿದನೆ೦ದು ನ೦ಬಲಾಗಿದೆ. ಹಿಂದೂ ಶಾಸ್ತ್ರಗಳ ಪ್ರಕಾರ, ಈ ದಿನದಂದು ಬ್ರಹ್ಮನು ಜೀವಿಗಳ ಸೃಷ್ಟಿಗೆ ತೊಡಗಿದನು ಎಂಬುದು ಜನಜನಿತ. ಬೋಲ್ಡ್ ಸ್ಕೈ ಅಡುಗೆ ಮನೆಯಲ್ಲಿ 8 ಯುಗಾದಿ ಖಾದ್ಯಗಳು

ದಕ್ಷಿಣ ಭಾರತದೆಲ್ಲೆಡೆ ಯುಗಾದಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಮರಗಿಡಗಳು ಹಣ್ಣು ಹೂವುಗಳನ್ನು ನೀಡಲು ಪ್ರಾರಂಭಿಸಿದಂತೆ ಹೊಸ ಜೀವನದ ಆರಂಭಕ್ಕೆ ಯುಗಾದಿ ಕಾರಣವಾಗಿದೆ ಎಂಬುದು ಇದರ ಹಿಂದಿರುವ ನಂಬಿಕೆಯಾಗಿದೆ. ಯುಗ ಎಂಬುದು ವರ್ಷದ ಅರ್ಥವನ್ನು ಸೂಚಿಸುತ್ತಿದ್ದರೆ ಆದಿ ಎಂಬ ಪದವು ಪ್ರಾರಂಭ ಎಂದಾಗಿದೆ. ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮತ್ತು ಕೊಂಕಣ ಪ್ರದೇಶದ ಜನರಿಗೆ ಯುಗಾದಿಯು ಹೊಸ ವರ್ಷದ ಆರಂಭದ ದ್ಯೋತಕವಾಗಿದೆ. ಹಿಂದೂ ಶಾಸ್ತ್ರದ ಪ್ರಕಾರ, ಬ್ರಹ್ಮ ದೇವನು ಸೃಷ್ಟಿಯ ಕಾರ್ಯವನ್ನು ಈ ದಿನ ಆರಂಭಿಸಿದನು ಎಂಬ ಮಾತಿದೆ. ಆದ್ದರಿಂದ ಯುಗಾದಿ ಆಚರಣೆಯನ್ನು ದಕ್ಷಿಣದಲ್ಲಿ ಹೆಚ್ಚು ವಿಜೃಂಭಣೆಯಿಂದ ಮಾಡಲಾಗುತ್ತದೆ. ಹೊಸ ವರ್ಷಕ್ಕೆ ಇರಲೇಬೇಕು 'ಯುಗಾದಿ ಪಚಡಿ'

ಯುಗಾದಿಯು ವಸಂತ ಋತುವಿನ ಆರಂಭದ ಸೂಚನೆಯಾಗಿದ್ದು ಹೊಸ ಜೀವನದ ಆರಂಭ ಎಂಬಂತೆ ಹೂಗಿಡಗಳು ಪುಷ್ಟ ಮತ್ತು ಹಣ್ಣುಗಳಿಂದ ಸಾಲಂಕೃತಗೊಂಡು ಮಿನುಗುತ್ತಿರುತ್ತವೆ. ಹಿಂದೂ ಸಂಪ್ರದಾಯದ ತಾರೀಕು ಪಟ್ಟಿ ಅಥವಾ ಕ್ಯಾಲೆಂಡರ್ ಯುಗಾದಿ ಹಬ್ಬದೊಂದಿಗೆ ಆರಂಭಗೊಳ್ಳುತ್ತದೆ. ಆಚರಣೆಗಳ ಪ್ರಕಾರ, ಯಗಾದಿಯ ಆಚರಣೆ ಎರಡು ದಿನಗಳ ಹಿಂದೆಯೇ ಪ್ರಾರಂಭಗೊಳ್ಳುತ್ತದೆ. ಹಬ್ಬ ಪ್ರಾರಂಭವಾಗುವ ಮುನ್ನವೇ ಮನೆಯನ್ನು ಸ್ವಚ್ಛಗೊಳಿಸುವ ಕೆಲಸಗಳು ಹಬ್ಬದ ತಯಾರಿ ಮುಗಿದಿರಬೇಕು ಎಂಬುದು ಕಟ್ಟುನಿಟ್ಟಿನ ಕ್ರಮವಾಗಿದೆ. ಮನೆಯನ್ನು ಪರಿಸರವನ್ನು ಸ್ವಚ್ಛಗೊಳಿಸುವುದಲ್ಲದೆ ಯುಗಾದಿ ಕೆಲವೊಂದು ಆಚರಣೆಗಳನ್ನು ಹೊತ್ತು ತರುತ್ತದೆ. ಅವುಗಳು ಯಾವುವು ಎಂಬುದನ್ನು ನೋಡಲು ಮುಂದೆ ಓದಿ....

ಯುಗಾದಿಯ ಮಹತ್ವ

ಯುಗಾದಿಯ ಮಹತ್ವ

ಯುಗಾದಿ/ಉಗಾದಿ ಎ೦ಬ ಪದವನ್ನು ಯುಗ (ತಲೆಮಾರು) ಹಾಗೂ ಆದಿ (ಆರ೦ಭ) ಎ೦ದು ವಿವರಿಸಲಾಗಿದ್ದು, ಇದರರ್ಥವು "ಹೊಸ ತಲೆಮಾರು ಅಥವಾ ಹೊಸ ಶಕೆ"ಯ ಆರ೦ಭವೆ೦ದಾಗಿದೆ. ಭಾರತದೇಶದ ಡೆಕನ್ ಪ್ರಾ೦ತದ ಜನರ ಪಾಲಿಗೆ ಯುಗಾದಿಯು ಹೊಸ ವರುಷದ ಆರ೦ಭದ ಮೊದಲ ದಿನವಾಗಿರುತ್ತದೆ. ಈ ದಿನವು ವಸ೦ತಋತುವಿನ ಆರ೦ಭದ ದಿನವಾಗಿದ್ದು ಅ೦ತೆಯೇ ಹೊಸ ವರ್ಷದ ಪ್ರಥಮ ಋತುವಿನ ಆರ೦ಭದ ದಿನವೂ ಹೌದು. ಈ ದಿನದ೦ದು ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುವನು. ಮೇಷರಾಶಿಯು ಸೌರಚಿಹ್ನೆಯ ಪ್ರಥಮ ಚಿಹ್ನೆಯಾಗಿದ್ದು, ಇದು ಹಿ೦ದೂ ತಾರೀಖುಪಟ್ಟಿಯ ಪ್ರಥಮ ತಿ೦ಗಳಾದ ಚೈತ್ರಮಾಸದ ಆರ೦ಭವನ್ನೂ ಸ೦ಕೇತಿಸುತ್ತದೆ.

ಹಬ್ಬದ ವೈಶಿಷ್ಟ್ಯತೆ

ಹಬ್ಬದ ವೈಶಿಷ್ಟ್ಯತೆ

ಎಲ್ಲಾ ಭಾರತೀಯರೂ ಈ ಹಬ್ಬವನ್ನು ಹೊಸ ವರ್ಷದ ಆರ೦ಭವನ್ನಾಗಿ ಆಚರಿಸುವುದಿಲ್ಲ, ಆದರೆ ಈ ಹಬ್ಬವು ದಕ್ಷಿಣ ಭಾರತದ ರಾಜ್ಯಗಳಾದ ಆ೦ಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಜನರ ಪಾಲಿಗೆ ಈ ಹಬ್ಬವು ಅತ್ಯ೦ತ ಮಹತ್ತರ ಹಬ್ಬವಾಗಿರುತ್ತದೆ. ಆ೦ಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಜನರು ಈ ಹಬ್ಬವನ್ನು ಯುಗಾದಿ ಎ೦ಬ ಹೆಸರಿನಲ್ಲಿ ಆಚರಿಸಿದರೆ, ಇದೇ ಹಬ್ಬವನ್ನು ಮಹಾರಾಷ್ಟ್ರ ರಾಜ್ಯದ ಜನರು ಗುಡಿ ಪಡ್ವವೆ೦ದೂ, ಹಾಗೂ ಸಿ೦ಧಿ ಜನರು ಚೈತ್ರ ಶುದ್ಧ ಪಾಡ್ಯಮಿಯ೦ದು ಈ ಹಬ್ಬವನ್ನು ಚೇಟೀ ಚಾ೦ದ್ ಎ೦ದೂ ಆಚರಿಸುತ್ತಾರೆ.

ಪ್ರಾತಃ ಕಾಲದ ಸ್ನಾನ

ಪ್ರಾತಃ ಕಾಲದ ಸ್ನಾನ

ಜನರು ಬೆಳಗ್ಗೆ ಬೇಗನೆದ್ದು ಸ್ನಾನ ಮಾಡುತ್ತಾರೆ. ತಮ್ಮ ಮನೆಗಳನ್ನು ಮಾವಿನಲೆಯ ತೋರಣಗಳಿಂದ ಅಲಂಕರಿಸುತ್ತಾರೆ. ಶಿವ ಮತ್ತು ಪಾರ್ವತಿಯ ಮಕ್ಕಳಾದ ಗಣೇಶ ಮತ್ತು ಕಾರ್ತಿಕೇಯರಿಗೆ ಮಾವಿನ ಕಾಯಿಗಳೆಂದರೆ ತುಂಬಾ ಇಷ್ಟ ಎಂಬ ಪ್ರತೀತಿ ಇದೆ. ಆದ್ದರಿಂದ ಈ ದೇವರ ಕೃಪೆ ತಮ್ಮ ಮೇಲಿರಲಿ ಎಂದು ಜನರು ಮಾವಿನ ತೋರಣಗಳಿಂದ ಮನೆಯನ್ನು ಅಲಂಕರಿಸುತ್ತಾರೆ.

ಯುಗಾದಿ ಪಚಡಿ

ಯುಗಾದಿ ಪಚಡಿ

ಯುಗಾದಿಗೆಂದೇ ತಯಾರಿಸಲಾಗುವ ವಿಶೇಷ ಖಾದ್ಯವಾದ ಯುಗಾದಿ ಪಚಡಿಯನ್ನು ಈ ದಿನ ತಯಾರಿಸಲಾಗುತ್ತದೆ. ಇದು ಆರು ರುಚಿಗಳನ್ನು ಹೊಂದಿದೆ. ಉಪ್ಪು, ಸಿಹಿ, ಹುಳಿ, ಒಗರು, ಕಹಿ ಮತ್ತು ಖಾರ. ಸಂತೋಷಕ್ಕೆ ಸೂಚನೆಯಾದ ಬೆಲ್ಲ, ಜೀವನದಲ್ಲಿ ಆಸಕ್ತಿ ಸೂಚಿಸುವ ಉಪ್ಪು, ಜೀವನದಲ್ಲಿ ಬರುವ ಕಷ್ಟಗಳ ಸೂಚನೆಯಾದ ಬೇವು, ಬದುಕಿನ ಸವಾಲಿನ ಕ್ಷಣಗಳಿಗೆ ಸೂಚನೆಯಾದ ಹುಳಿ, ಹೊಸ ಸವಾಲುಗಳು ಮತ್ತು ಕಾತರವನ್ನು ಸೂಚಿಸುವ ಎಳೆ ಮಾವಿನಕಾಯಿ ತುಂಡುಗಳು, ಬದುಕಿನಲ್ಲಿ ಸಿಟ್ಟಿಗೆ ಕಾರಣವಾದ ಕ್ಷಣಗಳನ್ನು ಸೂಚಿಸುವ ಮೆಣಸಿನ ಹುಡಿ ಹೀಗೆ ಈ ಆರೂ ಸಾಮಾಗ್ರಿಗಳನ್ನು ಬಳಸಿ ಪಚಡಿಯನ್ನು ತಯಾರಿಸಲಾಗುತ್ತದೆ. ಮನುಷ್ಯನು ತನ್ನ ಬದುಕನ್ನು ಸುಂದರಗೊಳಿಸಲು ಈ ಆರೂ ಕಷ್ಟಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು ಎಂಬುದು ಇದರ ಹಿಂದಿರುವ ಮರ್ಮವಾಗಿದೆ.

ವಿಶೇಷ ಭಕ್ಷ್ಯಗಳು

ವಿಶೇಷ ಭಕ್ಷ್ಯಗಳು

ನಮ್ಮ ಯುಗಾದಿ ಹಬ್ಬವು ಪಚಡಿ (ಚಟ್ನಿ) ಯ ಬಳಿಕ ಸವಿಯಬಹುದಾದ ವೈವಿಧ್ಯಮಯ ಸಾ೦ಪ್ರದಾಯಿಕ ರೆಸಿಪಿಗಳನ್ನೊಳಗೊ೦ಡಿದೆ. ಯಗಾದಿಯ ಹಬ್ಬದ೦ದು ತಯಾರಿಸಲಾಗುವ ವಿಶೇಷ ಭಕ್ಷ್ಯವು ಒಬ್ಬಟ್ಟು ಹೋಲುವ೦ತಹ (ಆಕಾರದಲ್ಲಿ) ಸಿಹಿತಿ೦ಡಿಯಾಗಿದ್ದು ಇದನ್ನು ತುಪ್ಪ ಅಥವಾ ಹಾಲು ಅಥವಾ ತೆ೦ಗಿನಹಾಲನ್ನು ಮೇಲೋಗರದ ರೂಪದಲ್ಲಿ ಸೇರಿಸಿಕೊ೦ಡು ಸೇವಿಸಬಹುದು. ಆ೦ಧ್ರಪ್ರದೇಶದಲ್ಲಿ ಬೊಬ್ಬಟ್ಟನ್ನು (ಪುರಾಣ್ ಪೊಳಿ) ಯುಗಾದಿಯ೦ದು ತಯಾರಿಸಲಾಗುತ್ತದೆ.

ರಂಗೋಲಿ

ರಂಗೋಲಿ

ತಮ್ಮ ಮನೆಯ ಅಂಗಳವನ್ನು ಸೆಗಣಿಯಿಂದ ಸಾರಿಸಿ ಸ್ವಚ್ಛಗೊಳಿಸುತ್ತಾರೆ. ಮನೆಯ ಹೊರಗೆ ಸುಂದರವಾದ ರಂಗೋಲಿಯನ್ನು ಬಿಡಿಸುತ್ತಾರೆ.

ಹೊಸ ವರ್ಷದ ಆಗುಹೋಗುಗಳ ಪ್ರತಿಪಾದನೆ

ಹೊಸ ವರ್ಷದ ಆಗುಹೋಗುಗಳ ಪ್ರತಿಪಾದನೆ

ಯುಗಾದಿ ಹಬ್ಬದ ಪರ್ವದಿನದ೦ದು ಜನರು ಸಾ೦ಪ್ರದಾಯಿಕ ರೀತಿಯಲ್ಲಿ ಜತೆಗೂಡಿ ನೂತನ ವರ್ಷದ ಪ೦ಚಾ೦ಗ ಶ್ರವಣ ಮಾಡುತ್ತಾರೆ. ಸಾಮಾನ್ಯವಾಗಿ ಈ ವಿಧಿವಿಧಾನವು ದೇವಾಲಯಗಳಲ್ಲಿ ಇಲ್ಲವೇ ಧಾರ್ಮಿಕ ಸಭಾಬವನದಲ್ಲಿ ನಡೆಯುತ್ತದೆ. ಇದೇ ದಿನದ೦ದು ನೂತನ ಸಾಹಿತ್ಯಿಕ ಬರವಣಿಗೆಗಳ ಹಾಗೂ ಕಾವ್ಯ, ಕವನಗಳ ವಾಚನವನ್ನೂ ಕೈಗೊಳ್ಳಲಾಗುತ್ತದೆ ಹಾಗೂ ಸಾಹಿತ್ಯ ಕೃತಿಗಳ ಕರ್ತೃಗಳನ್ನು ಪ್ರಶಸ್ತಿ, ಪುರಸ್ಕಾರಗಳ ಮೂಲಕ ಗೌರವಿಸುವ ದಿನವೂ ಇದಾಗಿರುತ್ತದೆ.

English summary

Rituals Customs Traditions of Ugadi

According to the tradition, preparations for Ugadi begin a day or two prior to the actual festival. The ritualistic washing and cleaning of the house has to be completed before the festival starts. Apart from the cleaning there are a few other rituals, customs and traditions of Ugadi. Take a look.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X