For Quick Alerts
ALLOW NOTIFICATIONS  
For Daily Alerts

ಜನ್ಮಾಷ್ಟಮಿ ವಿಶೇಷ: ಶ್ರೀ ಕೃಷ್ಣ ಜಗತ್ತಿಗೆ ಸಾರಿದ ಉಪದೇಶ

By Super
|

ಮಹಾಭಾರತದ ಪಾತ್ರಗಳಲ್ಲಿ ಅತಿ ವೈವಿಧ್ಯ ಮತ್ತು ಸಂಬಂಧಗಳಿಗೆ ಒತ್ತು ಕೊಡುವ ಪಾತ್ರವೆಂದರೆ ಶ್ರೀಕೃಷ್ಣನದ್ದು. ಅಣ್ಣತಮ್ಮಂದಿರ, ಪತಿ ಪತ್ನಿಯರ, ಗುರು ಶಿಷ್ಯರ ಅಥವಾ ಸ್ನೇಹಿತರ ನಡುವಣ ಸಂಬಂಧಗಳು ಹೇಗಿರಬೇಕು, ಹೇಗೆ ನಿಭಾಯಿಸಬೇಕು ಎಂಬುದನ್ನು ತಿಳಿಸಿಕೊಡುವಲ್ಲಿ ಕೃಷ್ಣನ ಕೊಡುಗೆ ಮಹತ್ವದ್ದಾಗಿದೆ. ಇದು ಇಡಿಯ ಮಹಾಭಾರತದಲ್ಲಿ ಸಾಕಷ್ಟು ಕಡೆ ಉಲ್ಲೇಖಿಸಲ್ಪಟ್ಟಿದೆ.

ಸಂಬಂಧಗಳು ಮಹತ್ವದ ಬಗ್ಗೆ ಆತ ಹಲವು ದೃಷ್ಟಾಂತಗಳ ಮೂಲಕ ನೀಡುವ ಪಾಠಗಳು ಎಂದೆಂದಿಗೂ ಸಲ್ಲುವಂತಹದ್ದಾಗಿದೆ. ಕೃಷ್ಣ ಮಹತ್ವ ನೀಡಿದ್ದ ಸಂಬಂಧಗಳ ಬಗ್ಗೆ ಕೆಲವು ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ..

Relationship lessons people can learn from Lord Krishna

ಗೆಳೆತನಕ್ಕಾಗಿ ಒಣ ಅನ್ನವನ್ನು ತಿಂದ ಕೃಷ್ಣ
ಚಿಕ್ಕಂದಿನಲ್ಲಿ ಕೃಷ್ಣನ ಗೆಳೆಯನಾಗಿದ್ದ ಕುಚೇಲ (ಸುಧಾಮ) ತಂದಿದ್ದ ಒಣಗಿದ್ದ ಅನ್ನವನ್ನೇ ಕೃಷ್ಣ ಒಂದಿನಿತೂ ಬೇಸರವಿಲ್ಲದೇ ಸೇವಿಸಿದ್ದ. ಏಕೆಂದರೆ ಇದನ್ನು ತಿರಸ್ಕರಿಸಿದರೆ ಗೆಳೆಯನ ಮನ ನೊಂದುಕೊಳ್ಳುವುದೆಂದು ಆತ ಅರಿತಿದ್ದ. ಸುಧಾಮ ಬಡಕುಟುಂಬದಲ್ಲಿ ಹುಟ್ಟಿದ್ದ. ಶ್ರೀಮಂತನಾಗಿದ್ದ ಕೃಷ್ಣ ಮತ್ತು ಸುಧಾಮರ ನಡುವಣ ಸ್ನೇಹಕ್ಕೆ ಅಂತಸ್ತಿನ ಮತ್ತು ಧನದ ಅಂತರವೆಂದೂ ಅಡ್ಡಿಯಾಗಲಿಲ್ಲ. ಶ್ರೀ ಕೃಷ್ಣಾವತಾರದ ಸಮಾಪ್ತಿ; ನೀವು ಕೇಳರಿಯದ ಕಥೆಗಳು

ಗೆಳೆಯನಿಗಾಗಿ ಬರಿಗಾಲಿನಿಂದ ಓಡಿದ ಕೃಷ್ಣ
ಒಮ್ಮೆ ಸುಧಾಮ ಕೃಷ್ಣನನ್ನು ಭೇಟಿಯಾಗಲೆಂದು ಆತನ ಅರಮನೆಗೆ ಬಂದಿದ್ದ. ಆದರೆ ಬಡವನಾಗಿದ್ದ ಸುಧಾಮನ ಉಡುಗೆಗಳನ್ನು ಕಂಡ ದ್ವಾರಪಾಲಕರು ಆತನನ್ನು ಒಳಗೆ ಬಿಡಲಿಲ್ಲ. ಬೇಸರದಿಂದ ಹಿಂದಿರುಗಿದ ಸುಧಾಮನ ಬಗ್ಗೆ ತಿಳಿದ ಕೃಷ್ಣ ತಕ್ಷಣ ಬರಿಗಾಲಿನಲ್ಲಿಯೇ ಓಡಿ ಸ್ನೇಹಿತನನ್ನು ಅಪ್ಪಿ ಅರಮನೆಗೆ ಕರೆತಂದ. ಇದು ಗೆಳೆತನಕ್ಕೆ ಆತ ನೀಡುವ ಬೆಲೆಯಾಗಿದೆ.

ಎಲ್ಲರನ್ನೂ ಸಮಾನರಾಗಿ ಕಾಣಿ
ಚಿಕ್ಕಂದಿನಲ್ಲಿ ಗೋಕುಲದಲ್ಲಿದ್ದಾಗ ಆತನ ಸಹವರ್ತಿಗಳಾಗಿದ್ದ ಗೋಪಾಲಕ ಮತ್ತು ಗೋಪಿಕೆಯರೊಡನೆ ಹೇಗೆ ವರ್ತಿಸುತ್ತಿದ್ದನೋ ನಂತರ ಮಥುರೆಗೆ ಹೋದ ಬಳಿಕವೂ ಅಲ್ಲಿನ ಬುದ್ಧಿಜೀವಿಗಳೊಂದಿಗೂ ಹಾಗೇ ವರ್ತಿಸುತ್ತಿದ್ದ. ಇದರಿಂದ ಜೀವನದಲ್ಲಿ ಅಂತಸ್ತಿಗೆ ಮಹತ್ವ ನೀಡದೇ ಎಲ್ಲರನ್ನೂ ಸಮಾನರಾಗಿ ಕಾಣಿ ಎಂದು ಕೃಷ್ಣನಿಂದ ಕಲಿಯಬೇಕಾದ ಪಾಠವಾಗಿದೆ. ಜಗನ್ನಾಟಕ ಸೂತ್ರಧಾರಿ ಕೃಷ್ಣನಿಗೆ ಹದಿನಾರು ಸಾವಿರ ಪತ್ನಿಯರು ಇದ್ದರೇ?

ಯಾವುದೇ ಸಂದರ್ಭದಲ್ಲೂ ಸಮಸ್ಥಿತರಾಗಿರಿ
ಕೃಷ್ಣ ಹುಟ್ಟಿದ್ದ ಸಂದರ್ಭದಲ್ಲಿ ದುಷ್ಟ ಕಂಸಮಾವನ ಹೆದರಿಕೆಯಿತ್ತು. ಆ ಸಂದರ್ಭದಲ್ಲಿ ಅಳದ ಕೃಷ್ಣನಿಂದಾಗಿ ಸುರಕ್ಷಿತವಾಗಿ ಹೊರಹೋಗಲು ಸಾಧ್ಯವಾಯಿತು. ಅಂತೆಯೇ ಆತನ ಬಾಲ್ಯ ಮತ್ತು ಯೌವನದಲ್ಲಿ ಹಲವು ಕಠಿಣ ಪರಿಸ್ಥಿತಿಗಳು ಎದುರಾದರೂ ಎದೆಗುಂದದೇ ಪರಿಸ್ಥಿತಿಗಳನ್ನು ಎದುರಿಸುವ ಮೂಲಕ ಸತ್ಯವನ್ನು ಜಯಿಸುವ ಕೃಷ್ಣ ಯಾವುದೇ ಸಂದರ್ಭದಲ್ಲಿ ಸಮಸ್ಥಿತರಾಗಿರಲು ನೀಡುವ ಪಾಠವಾಗಿದೆ.

ನಿಮ್ಮ ಕರ್ತ್ಯವ್ಯಗಳಿಗೆ ಬದ್ಧರಾಗಿರಿ
ವಯಸ್ಕನಾಗುತ್ತಿದ್ದಂತೆಯೇ ಕೃಷ್ಣನಿಗೆ ಹತ್ತು ಹಲವು ಜವಾಬ್ದಾರಿಗಳು ಎದುರಾಗುತ್ತವೆ. ರಾಜನ ಆಸ್ಥಾನದಲ್ಲಿದ್ದು ಪ್ರಜೆಗಳ ಕುಂದು ಕೊರತೆಯ ವಿಚಾರಣೆ, ಆತ್ತ ತನ್ನ ಭಕ್ತರ ಮೊರೆ ಆಲಿಸಲು, ಇತ್ತ ಗೋಪಿಕೆಯರೊಡನೆ ಸಮಯ ಕಳೆಯಲು ಒಂದೇ ಸಮಯದಲ್ಲಿ ಉಪಸ್ಥಿತನಾಗಿರಬೇಕಿತ್ತು. ಆದರೂ ಆತ ಎಲ್ಲಾ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದ. ಇದು ನಮ್ಮ ಕರ್ತವ್ಯಗಳಿಗೆ ಬದ್ಧರಾಗಿರಲು ಕೃಷ್ಣ ನೀಡುವ ಪಾಠವಾಗಿದೆ.

English summary

Relationship lessons people can learn from Lord Krishna

Lord Krishna always valued every relationship in his life. Be it a relationship of brother, husband, disciple or friend. Such examples are many in the life of Krishna. He has explained the importance of all his relations. Click on this slide show to know more about Krishna maintained his relations….Lord Krishna ate the dry rice brought by his childhood friend Sudama and kept his image.
X
Desktop Bottom Promotion