For Quick Alerts
ALLOW NOTIFICATIONS  
For Daily Alerts

ಈ ಕಾರಣಗಳಿಗೇ ವರ್ಷದ ಎಲ್ಲಾ ತಿಂಗಳಿಗಿಂತ ಕಾರ್ತಿಕ ಮಾಸ ಅತ್ಯಂತ ಮಂಗಳಕರವೆನ್ನುವುದು

|

ಕಾರ್ತಿಕ ಮಾಸವು ಹಿಂದೂಗಳಲ್ಲಿ ಅತ್ಯಂತ ಮಂಗಳಕರವಾದ ತಿಂಗಳು. ಕಾರ್ತಿಕ ಮಾಸದಲ್ಲಿ ಹಲವಾರು ಪ್ರಮುಖ ಹಬ್ಬಗಳು ಬರಲಿವೆ. ಶಿವ ಹಾಗೂ ವಿಷ್ಣುವಿನ ಆರಾಧನೆಗಾಗಿ ಉತ್ತಮವಾದ ಈ ತಿಂಗಳನ್ನು ಪುರುಷೋತ್ತಮ ಮಾಸ ಎಂದೂ ಕರೆಯುತ್ತಾರೆ ಏಕೆಂದರೆ ಈ ಪವಿತ್ರ ಮಾಸದಲ್ಲಿ ಶಿವ ಮತ್ತುವಿಷ್ಣು ಜೊತೆಯಾಗಿ ಇರುತ್ತಾರೆ ಎಂದು ನಂಬಲಾಗಿದೆ.

ಈ ಮಾಸದಲ್ಲಿ ದೀಪಾರಾಧನೆ, ಉಪವಾಸ, ರುದ್ರಾಭಿಷೇಕ, ಬಿಲ್ವಪೂಜೆ ಮತ್ತು ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಹೆಚ್ಚಿನ ಪ್ರಯೋಜನಗಳು ಪ್ರಾಪ್ತವಾಗುತ್ತದೆ, ನಮ್ಮನ್ನು ಎಲ್ಲಾ ಪಾಪಗಳಿಂದ ಮುಕ್ತಗೊಳಿಸುತ್ತದೆ ಎಂಬ ನಂಬಿಕೆಯಿದೆ. ಇಂತಹ ಪವಿತ್ರ ತಿಂಗಳಿನ ಕುರಿತ ಇನ್ನಷ್ಟು ಮಾಹಿತಿ ನಿಮಗಾಗಿ ಇಲ್ಲಿದೆ.

ಕಾರ್ತಿಕ ಮಾಸವನ್ನು ಮಂಗಳಕರ ಎಂದು ಏಕೆ ಕರೆಯುತ್ತಾರೆ ಎಂಬುದರ ಕುರಿತ ಸಂಪೂರ್ಣ ಚಿತ್ರಣ ಈ ಕೆಳಗಿದೆ:

ದೀಪೋತ್ಸವ:

ದೀಪೋತ್ಸವ:

ಹೆಚ್ಚಿನ ದೇವಾಲಯಗಳ ದೀಪೋತ್ಸವವು ಈ ಸಮಯದಲ್ಲೇ ನಡೆಯುವುದು ಗಮನಿಸಿರಬಹುದು. ಜೊತೆಗೆ ದೀಪಾವಳಿಯೂ ಇದೇ ಸಮಯದಲ್ಲಿ ಬರುವುದು ಇದೇ ಕಾರಣಕ್ಕೆ. ಕಾರ್ತಿಕ ದೀಪೋತ್ಸವವು ದೀಪಗಳ ಬೆಳಕನ್ನು ಸೂಚಿಸುತ್ತದೆ. ದೀಪ ನಮ್ಮ ದೇಹವನ್ನು ಸಂಕೇತಿಸಿದರೆ, ಬೆಳಕು ನಮ್ಮ ಆತ್ಮವನ್ನು ಸಂಕೇತಿಸುತ್ತದೆ. ನಾವು ದೀಪವನ್ನು ಹಚ್ಚಿದಾಗ, ನಮ್ಮ ಮನಸ್ಸು ಶುದ್ಧವಾಗಿ, ಕತ್ತಲೆ, ಅಜ್ಞಾನ, ಕೋಪ, ದುರಾಸೆ, ಅಸೂಯೆ, ದ್ವೇಷ, ಕಹಿ ಮತ್ತು ಅಸಮಾಧಾನದ ರೂಪದಲ್ಲಿ ಸಂಗ್ರಹವಾದ ಎಲ್ಲಾ ನಕಾರಾತ್ಮಕತೆಯಿಂದ ಮುಕ್ತಗೊಳ್ಳುತ್ತೇವೆ ಎಂಬ ನಂಬಿಕೆಯಿದೆ. ಇದು ಆಂತರಿಕ ಆಧ್ಯಾತ್ಮಿಕ ಬೆಳವಣಿಗೆಗೆ ಮತ್ತು ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ಇದು ಮುಂದೆ ನೋಡಲು ಉತ್ತಮ ಅವಕಾಶವನ್ನು ನೀಡುತ್ತದೆ. ನಿಜವಾದ ಸಂತೋಷವನ್ನು ಅನುಭವಿಸಲು ಮನಸ್ಸು, ದೇಹ ಮತ್ತು ಆತ್ಮದ ಶುದ್ಧತೆಯನ್ನು ಅಭ್ಯಾಸ ಮಾಡುವುದು ಮತ್ತು ನಮ್ಮ ಪ್ರಜ್ಞೆಯ ಮಟ್ಟವನ್ನು ಹೆಚ್ಚಿಸುವುದು ಅತ್ಯಂತ ಮುಖ್ಯವಾಗಿದೆ.

ನೆಲ್ಲಿಕಾಯಿ ಮರವನ್ನು ಪೂಜಿಸುವುದು:

ನೆಲ್ಲಿಕಾಯಿ ಮರವನ್ನು ಪೂಜಿಸುವುದು:

ನೆಲ್ಲಿಕಾಯಿ ಮರವನ್ನು ಪವಿತ್ರ ಕಾರ್ತಿಕ ಮಾಸದಲ್ಲಿ ಪೂಜಿಸಲಾಗುತ್ತದೆ. ಕಲ್ಪವೃಕ್ಷ ಮತ್ತು ಅಮೃತಫಲ ಎಂದೂ ಕರೆಯಲ್ಪಡುವ ಈ ಮರವು ಶಿವ ಪುರಾಣದಲ್ಲಿ ಉಲ್ಲೇಖವನ್ನು ಹೊಂದಿದೆ.

ಕಾರ್ತಿಕ ಪೌರ್ಣಮಿ:

ಕಾರ್ತಿಕ ಪೌರ್ಣಮಿ:

ಕಾರ್ತಿಕ ಪೌರ್ಣಿಮೆಯಂದು ಶಿವ ಭೂಮಿಗೆ ಇಳಿದು ಇಡೀ ವಿಶ್ವದೊಂದಿಗೆ ಒಂದಾಗುತ್ತಾನೆ ಎಂದು ನಂಬಲಾಗಿದೆ. ಈ ದಿನ 365 ಬತ್ತಿಯೊಂದಿಗೆ ತುಪ್ಪದ ದೀಪಗಳನ್ನು ಹಚ್ಚುವುದು ವರ್ಷದ ಪ್ರತಿ ದಿನ ದೀಪ ಹಚ್ಚುವುದಕ್ಕೆ ಸಮಾನವಾಗಿರುತ್ತದೆ. ಕಾರ್ತಿಕ ಪೌರ್ಣಮಿಯಂದು ಉಪವಾಸ ಮತ್ತು ಸಾತ್ವಿಕ ಆಹಾರವನ್ನು ಸೇವಿಸುವುದು ನಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸುತ್ತದೆ. ಈ ದಿನ ಬ್ರಾಹ್ಮಣರಿಗೆ ನೈವೇದ್ಯವನ್ನು ಅಕ್ಕಿ, ಬೆಲ್ಲ, ಹಣ್ಣುಗಳು ಮತ್ತು ಹಾಲಿನ ರೂಪದಲ್ಲಿ ನೀಡಬೇಕು.

ಶಿವಮಂತ್ರ ಪಠಣೆ:

ಶಿವಮಂತ್ರ ಪಠಣೆ:

ಓಂ ನಮಃ ಶಿವಾಯಃ ಮಂತ್ರ ಪಠಣವು ನಮ್ಮ ಮನಸ್ಸನ್ನು ಉನ್ನತ ಮಟ್ಟಕ್ಕೆ ಏರಿಸುತ್ತದೆ. ಆದ್ದರಿಂದ ಕಾರ್ತಿಕ ಮಾಸದಲ್ಲಿ ದೇವಾಲಯ ಅಥವಾ ಮನೆಯಲ್ಲಿಯೇ ಕೂತು ಈ ಮಂತ್ರವನ್ನು ಪಠಿಸಿ.

ಹಬ್ಬಗಳ ಪರ್ವ:

ಹಬ್ಬಗಳ ಪರ್ವ:

ಈ ಶುಭಮಾಸದಲ್ಲಿ ದೀಪಾವಳಿ, ಏಕಾದಶಿ, ಗೋಪೂಜೆ ಸೇರಿದಂತೆ ನಾನಾ ಹಬ್ಬಗಳು ಬರಲಿವೆ. ಇವುಗಳನ್ನು ಭಕ್ತಿಯಿಂದ ಆಚರಿಸಿದರೆ, ಶಿವನ ಆಶೀರ್ವಾದ ದೊರೆಯಲಿದೆ.

ಸಾಮಾಜಿಕ ಮಹತ್ವ:

ಸಾಮಾಜಿಕ ಮಹತ್ವ:

ಕಾರ್ತಿಕ ಮಾಸದ ಆಚರಣೆಗಳನ್ನು ಅನುಸರಿಸುವ ಮೂಲಕ ವೈಯಕ್ತಿಕ ಶಿಸ್ತು, ಸಮಾಜದ ಮೌಲ್ಯಗಳನ್ನು ಪಡೆಯಬಹುದು. ನದಿಗಳು ಅಥವಾ ಸರೋವರಗಳ ಬಳಿ ಸೂರ್ಯೋದಯಕ್ಕೆ ಮುಂಚೆ ಸ್ನಾನ ಮಾಡುವುದರಿಂದ ನಾವು ಬೆಳಿಗ್ಗೆ ಬೇಗನೆ ಎದ್ದೇಳಲು ಕಲಿಯುತ್ತೇವೆ. ತಣ್ಣೀರು ಸ್ನಾನದ ಮೂಲಕ ನಾವು ಚಳಿಗಾಲವನ್ನು ಎದುರಿಸಬಹುದು. ನಾವು ನೀರಿನ ಮಾಲಿನ್ಯ ಮತ್ತು ಆರೋಗ್ಯದ ಬಗ್ಗೆ ತಿಳಿದುಕೊಳ್ಳಬಹುದು

English summary

Kartik Month 2021: Reasons Why Kartik Month is the Holiest Month in Kannada

Here we talking about Kartik Month 2021: Reasons why Kartik month is the holiest month, read on
X
Desktop Bottom Promotion