For Quick Alerts
ALLOW NOTIFICATIONS  
For Daily Alerts

ರಥಯಾತ್ರೆಯಿಂದಾಗಿ ಕಾಳಿಂಗ ರಾಜ ಪದ್ಮಾವತಿಯನ್ನು ವರಿಸಿದ ಕತೆ

|

ಒಡಿಶಾದ ಪುರಿ ಜಗನ್ನಾಥ ರಥ ಯಾತ್ರೆ ವಿಶ್ವ ವಿಖ್ಯಾತವಾದದ್ದು. ಇದೊಂದು ಧಾರ್ಮಿಕವಾದ ಹಬ್ಬ ಮಾತ್ರವಲ್ಲ ನಂಬಿಕೆ, ಒಗ್ಗಟ್ಟನ್ನು ಸಾರುವ ಹಬ್ಬವಾಗಿದೆ. ಮಹಾಪ್ರಭು ಜಗ್ನನಾಥನ ರಥಯಾತ್ರೆಯ ಹಿಂದಿದೆ ಸುಂದರವಾದ ಪೌರಾಣಿಕವಾದ ಕತೆ, ಬನ್ನಿ ಅವುಗಳತ್ತ ಕಣ್ಣಾಡಿಸೋಣ:

Rathayatra

1434ನೇ ಇಸವಿಯಲ್ಲಿ ಕಾಳಿಂಗ ರಾಜ್ಯವನ್ನು (ರಾಜ ಕಪೀಂದ್ರ ದೇವ ಆಳುತ್ತಿದ್ದ, ಗಜಪತಿ (ಈಗೀನ ಒಡಿಶಾ) ಈತನ ರಾಜಧಾನಿ. ಈತನ ಆಡಳಿತದ ಸಮಯದಲ್ಲಿ ಈಗೀನ ಪಶ್ಚಿಮ ಬಂಗಾಳ, ಮಧ್ಯಪ್ರದೇಶದ ಪೂರ್ವ ಭಾಗ, ಜಾರ್ಕಂಡ್, ಆಂಧ್ರ ಪ್ರದೇಶದ ದಕ್ಷಿಣ ಭಾಗ ಕಾಳಿಂಗ ರಾಜ್ಯದ ಭಾಗವಾಗಿತ್ತು.

ಕಪೀಂದ್ರ ದೇವನ ಆಡಳಿತ ಬಳಿಕ ಆತನ ಎರಡನೇ ಮಗ ಪುರುಷತ್ತಮ ದೇವ 1467ರಲ್ಲಿ ರಾಜನಾಗುತ್ತಾನೆ. ಆದರೆ ಈತನ ಹಿರಿಯ ಸಹೋದರ ಹಿಮವೀರ ದೇವನಿಗೆ ನಾನಾ ಕಾರಣಗಳಿಂದ ರಾಜನಾಗಲು ಸಾಧ್ಯವಾಗುವುದಿಲ್ಲ. ಆತನಿಗೆ ಹೋಲಿಸಿದರೆ ಪುರುಷತ್ತಮ ಬುದ್ಧಿವಂತನು, ಧೈರ್ಯವಂತನು, ಉತ್ತಮನೂ ಆಗಿರುತ್ತಾನೆ.

ಪುರುಷತ್ತಮ ರಾಜನಾದಾಗ

ಪುರುಷತ್ತಮ ರಾಜನಾದಾಗ

ತನಗೆ ರಾಜ್ಯ ಸಿಗದ ದ್ವೇಷದಲ್ಲಿ ಹಿಮವೀರ ಬಹಾಮಣಿ ಸುಲ್ತಾನ್ ಶಾ ಲಷ್ಕರಿ ಜೊತೆ ಸೇರಿಕೊಂಡು ಕಾಳಿಂಗ ರಾಜ್ಯದ ಮೇಲೆ ದಂಡೆತ್ತಿ ಬಂದು ದಕ್ಷಿಣ ಭಾಗವನ್ನು ಆಕ್ರಮಿಸಿಕೊಳ್ಳುತ್ತಾನೆ, ಸುಲ್ತಾನನಿಗೆ ರಾಜಮುಂದ್ರಿ ಹಾಗೂ ಕೊಂಡಪಲ್ಲಿ ಭಾಗವನ್ನು ಕಪ್ಪ ಕಾಣಿಕೆಯಾಗಿ ಸಲ್ಲಿಸುತ್ತಾನೆ.

ಪುರುಷತ್ತಮನೂ ತನ್ನ ಸೈನ್ಯವನ್ನು ಕಟ್ಟಿಕೊಂಡು ಹಿಮವೀರ ಹಾಗೂ ಸಲ್ತಾನನ ವಿರುದ್ಧ ಯುದ್ಧ ಸಾರಿ ಅವರನ್ನು ಸೋಲಿಸಿ ರಾಜಮುಂದ್ರಿ ಹಾಗೂ ಕೊಂಡಪಲ್ಲಿಯನ್ನು ವಶಪಡಿಸಿಕೊಳ್ಳುತ್ತಾರೆ.

ತನ್ನ ರಾಜ್ಯವನ್ನು ಪುರುಷತ್ತಮ ದೇವನು ವಿಜಯನಗರ ಹಾಗೂ ಕೃಷ್ಣ ಗೋದಾವರಿ ತೀರದವರೆಗೆ ವಿಸ್ತರಿಸುತ್ತಾನೆ.

ಪುರುಷತ್ತಮ ಅಧಿಕಾರ ಬಂದಾಗ ಅವನು ಅನೇಕ ಯುದ್ಧಗಳನ್ನು ಎದುರಿಸಬೇಕಾಯಿತು, ಹಿಮವೀರ ದೇವ, ಸಾಲ್ವ ನರಸಿಂಹ ದೇವ ಪುರುಷತ್ತಮನ ವಿರುದ್ಧ ದಂಡೆತ್ತಿ ಬಂದು ಕಾಳಿಂಗದ ಪ್ರಮುಖ ಭಾಗವಾದ ಉದಯಗಿರಿ ಹಾಗೂ ಚಂದ್ರಗಿರಿಯನ್ನು ವಶಪಡಿಸಿಕೊಳ್ಳುತ್ತಾರೆ.

ಜಗನ್ನಾಥನ ಮಹಿಮೆ

ಜಗನ್ನಾಥನ ಮಹಿಮೆ

ಪುರುಷತ್ತಮನ ಸೇನೆ ಸಾಲ್ವ ನರಸಿಂಹ ದೇವನ ಸೇನೆಯ ವಿರುದ್ಧ ಸೋಲುತ್ತದೆ, ಅಷ್ಟೇ ಅಲ್ಲ ಪುರುಷತ್ತಮನಿಗೆ ಯುದ್ಧದಲ್ಲಿ ಅಪಾಯ ಗಾಯ-ನೋವುಗಳು ಉಂಟಾಗುವುದು, ಕಷ್ಟದಲ್ಲಿ ಬದುಕಿ ಬಂದ ಪುರುಷತ್ತಮ ಶ್ರೀ ಮಂದಿರದಲ್ಲಿರುವ ಜಗನ್ನಾಥನ ಪಾದಕ್ಕೆ ಬಿದ್ದು ತನ್ನನ್ನು ರಕ್ಷಿಸುವವಂತೆ ಬೇಡುತ್ತಾನೆ ಎಂದು 'ಕಾಂಚಿ ಕಾವೇರಿ ಉಪಾಖ್ಯಾನ'ದಲ್ಲಿ ಹೇಳಲಾಗಿದೆ.

ಕಾಳಿಂಗ ರಾಜ್ಯದ ರಕ್ಷಣೆಯನ್ನು ಜಗನ್ನಾಥ ಮಾಡುತ್ತಾನೆ ಎಂಬ ನಂಬಿಕೆ, ಜಗನ್ನಾಥನು ಪುರುಷತ್ತಮನಿಗೆ ಬೆಂಬಲವಾಗಿ ನಿಂತು ಯುದ್ಧ ನಿಲ್ಲಲು ಸಹಾಯ ಮಾಡುತ್ತಾನೆ ಎಂಬುವುದಾಗಿ ಒಡಿಶಾ ಜನಪದ ಹಾಡುಗಳಲ್ಲಿ ಜಗನ್ನಾಥನ ಮಹಿಮೆಯನ್ನು ಕೊಂಡಾಡಲಾಗಿದೆ.

ಜಗನ್ನಾಥ ಪುರುಷತ್ತಮನ ಸೇನೆಯಲ್ಲಿ ಸೇರಿಕೊಂಡು ಯುದ್ಧಕ್ಕೆ ಹೋಗುವಾಗ ಮಾರ್ಗಮಧ್ಯದಲ್ಲಿ ಅವರಿಗೆ ಮಾಣಿಕ ಎಂಬ ಮಹಿಳೆ ಆಹಾರ, ನೀರು, ಹಾಲನ್ನು ನೀಡಿ ಸತ್ಕರಿಸುತ್ತಾಳೆ, ಇದಕ್ಕೆ ಪ್ರತಿಫಲವಾಗಿ ಜಗನ್ನಾಥ ಆಕೆಗೆ ಉಂಗುರವನ್ನು ನೀಡಿ ಹೇಳುತ್ತಾನೆ ನಾವು ಕಾಳಿಂಗ ರಾಜ್ಯದ ಪರವಾಗಿ ಯುದ್ಧಕ್ಕೆ ಹೋಗುತ್ತಿದ್ದೇವೆ, ಈ ಉಂಗುರವನ್ನು ತೋರಿಸಿದಾಗ ನಿನಗೆ ಹಣವನ್ನು ಕೊಡುತ್ತಾರೆ ಎಮದು ಹೇಳುತ್ತಾನೆ. ಅದರಂತೆ ಆಕೆ ಆ ಉಂಗುರ ತೋರಿಸಿ ಹಣ ಪಡೆಯುತ್ತಿರುತ್ತಾಳೆ. ಒಂದು ರಾಜ ಪುರುಷತ್ತಮ ಆ ಉಂಗುರವನ್ನು ನೋಡುತ್ತಾನೆ, ಅದು ಶ್ರೀ ಮಂದಿರದಲ್ಲಿರುವ ಜಗನ್ನಾಥನ ಉಂಗುರವಾಗಿರುತ್ತದೆ, ಆಗ ನಮ್ಮ ಜೊತೆ ಜಗನ್ನಾಥನೇ ಇದ್ದು ಯುದ್ಧ ಗೆಲ್ಲಲು ನೆರವಾಗಿದ್ದಾರೆ ಎಂಬ ಸತ್ಯದ ಅರಿವಾಗುವುದು. ಆಕೆಗೆ ಕೈ ತುಂಬಾ ಉಡುಗಿರೆ ನೀಡಿ ಆಕೆಯ ಊರನ್ನು ಮಾಣಿಕಪಟ್ನಾ ಎಂದು ಹೆಸರಿಡುತ್ತಾನೆ.

ಶ್ರೀ ಜಗನ್ನಾಥನ ಸೇವೆಗಾಗಿ ಗಜಪತಿಯ ರಾಜ ಒಂದು ದಿನ ಕಸ ಗುಡಿಸವವನು ಆಗುವ ಸಂಪ್ರದಾಯ ಅಲ್ಲಿಂದ ಜಾರಿಗೆ ಬರುವುದು. ಈಗಲು ಸೂರ್ಯವಂಶದ ಗಜಪತಿ ರಥಯಾತ್ರೆಗೆ ಮುನ್ನ ಚಿನ್ನದ ಪೊರಕೆಯಲ್ಲಿ ರಸ್ತೆಯನ್ನು ಗುಡಿಸುತ್ತಾರೆ.

ರಥಯಾತ್ರೆಯಿಂದಾಗಿ ಕಾಳಿಂಗ ರಾಜ ಪದ್ಮಾವತಿಯನ್ನು ವರಿಸಿದ ಕತೆ

ರಥಯಾತ್ರೆಯಿಂದಾಗಿ ಕಾಳಿಂಗ ರಾಜ ಪದ್ಮಾವತಿಯನ್ನು ವರಿಸಿದ ಕತೆ

ಸಾಲ್ವ ನರಸಿಂಹ ದೇವನಿಗೆ ತುಂಬಾ ರೂಪವತಿಯಾದ ಮಗಳಿರುತ್ತಾಳೆ, ಅವಳನ್ನು ಮದುವೆಯಾಗಲು ಬಯಸಿ ನರಸಿಂಹ ದೇವನ ಬಳಿ ಹೆಣ್ಣು ಕೇಳಿ ಹೋಗುತ್ತಾನೆ. ಆಗ ರಾಜ ಒಂದು ದಿನ ರಸ್ತೆ ಗುಡಿಸುವ ಸಂಪ್ರದಾಯ ತಿಳಿದು ಕಸ ಗುಡಿಸುವವನಿಗೆ ನನ್ನ ಮಗಳನ್ನು ಕೊಡಲ್ಲ ಅಂತಾನೆ. ತನಗೆ ಅವಮಾನ ಮಾಡಿದ ಸಾಲ್ವ ನರಸಿಂಹ ರಾಜನ ಮೇಲೆ ಕೋಪಗೊಂಡ ಪುರುಷತ್ತಮ ಆತನ ವಿರುದ್ಧ ಯುದ್ಧ ಸಾರಿ ಆತನನ್ನು ಸೋಲಿಸುತ್ತಾನೆ ಅಲ್ಲದೆ ಆತನ ಮಗಳನ್ನು ಕಸ ಗುಡಿಸುವವನ ಜೊತೆ ಮದುವೆ ಮಾಡಲು ಆದೇಶ ನೀಡುತ್ತಾನೆ.

ಇದನ್ನು ಕೇಳಿ ಮಂತ್ರಿಗಳಿಗೆ ಚಿಂತೆಯಾಗುವುದು, ರಾಜಕುಮಾರಿಯನ್ನು ಹೇಗೆ ಕಸ ಗುಡಿಸುವವನ ಜೊತೆ ಮದುವೆ ಮಾಡಲು ಸಾಧ್ಯ ಎಂಬ ಚಿಂತೆ ಕಾಡುತ್ತೆ. ಆಗ ಅವರಿಗೆ ಒಂದು ಉಪಾಯವೂ ಹೊಳೆಯುವುದು. ಅದರಂತೆ ರಥಯಾತ್ರೆಗೆ ಮುನ್ನ ರಾಜನೇ ಕಸ ಗುಡಿಸುವವನಾದಾಗ ರಾಜಕುಮಾರಿ ಪದ್ಮಾವತಿ ಬಂದು ಪುರುಷೊತ್ತಮನ ಕುತ್ತಿಗೆಗೆ ಮಾಲೆ ಹಾಕುತ್ತಾಳೆ. ಹೀಗೆ ರಾಜನ ಆದೇಶವೂ ಈಡೇರುವುದು, ರಾಜನಿಗೆ ಬಯಸಿದ ಹುಡುಗಿಯೂ ಸಿಗುವುದು. ಹೀಗೆ ರಾಣಿ ಪದ್ಮಾವತಿ ಕಾಳಿಂಗ ಅರಸಿಯಾಗುತ್ತಾಳೆ.

ಹೀಗೆ ಜಗನ್ನಾಥನ ಕುರಿತು, ರಥಯಾತ್ರೆಗೆ ಮುನ್ನ ಚಿನ್ನದ ಪೊರಕೆಯನ್ನು ರಸ್ತೆಯನ್ನು ಸ್ವಚ್ಛ ಮಾಡುವುದರ ಬಗ್ಗೆ ಸುಂದರವಾದ ಕತೆಯಿದೆ.

English summary

Rathayatra Special: The Story Of The Wedding Of A Princess Padmavathi From The South To the Gajapati of Kalinga

Rathayatra special: The story of the wedding of a princess Padmavathi from the South To the Gajapati of Kalinga, read on...
X
Desktop Bottom Promotion