Latest Updates
-
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ! -
ಫಿಟ್ನೆಸ್ ಕ್ರೇಜ್: ಮನೆಯಲ್ಲೇ ಫಿಟ್ ಆಗಿರೋದು ಹೇಗೆ? -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ!
ಸರ್ವ ವಿಘ್ನಗಳನ್ನು ದೂರಮಾಡುವ ಶಕ್ತಿ ಸ್ವರೂಪ ಗಣೇಶ ಮಂತ್ರಗಳು
ಮಂತ್ರಗಳು ಹೆಚ್ಚಿನ ಶಕ್ತಿಯನ್ನು ಪಡೆದುಕೊಂಡಿದ್ದು ಇದು ದೇವರ ಬಗೆಗೆ ನಮ್ಮ ಭಕ್ತಯನ್ನು ವೃದ್ಧಿಗೊಳಿಸಲು ಸಹಾಯ ಮಾಡುವ ಅಂಶಗಳಾಗಿವೆ. ಪರಿಸರದಲ್ಲಿ ಈ ಮಂತ್ರಗಳು ಹೆಚ್ಚಿನ ಶಕ್ತಿಯನ್ನು ಉಂಟುಮಾಡಿ ದೈವಿಕ ಅಂಶವನ್ನು ನಮ್ಮಲ್ಲಿ ಉದ್ದೀಪನಗೊಳಿಸುತ್ತದೆ. ನಮ್ಮಲ್ಲಿ ಶಾಂತಿ ಸಮಾಧಾನವನ್ನುಂಟು ಮಾಡಲು ಮಂತ್ರಗಳು ನಮಗೆ ಸಹಾಯ ಮಾಡುತ್ತವೆ.
ಇಂದಿನ ಲೇಖನದಲ್ಲಿ ನಾವು ಹೆಚ್ಚು ಶಕ್ತಿಶಾಲಿಯಾಗಿರುವ ಗಣೇಶ ಮಂತ್ರಗಳ ಬಗ್ಗೆ ತಿಳಿಸುತ್ತಿದ್ದೇವೆ. ಈ ಮಂತ್ರಗಳು ಹೆಚ್ಚಿನ ಶಕ್ತಿಯನ್ನು ತುಂಬಿಕೊಂಡಿದ್ದು ನೀವು ಶ್ರದ್ಧೆ ಭಕ್ತಿಯಿಂದ ಈ ಮಂತ್ರಗಳನ್ನು ಪಠಿಸಿದಲ್ಲಿ ನಿಮಗೆ ಹೆಚ್ಚಿನ ಸಿದ್ಧಿ ಉಂಟಾಗುತ್ತದೆ. ನಿಮ್ಮ ಕಷ್ಟಕರ ಸಂದರ್ಭಗಳಲ್ಲಿ ಈ ಮಂತ್ರಗಳು ನಿಮ್ಮಲ್ಲಿ ಹೆಚ್ಚಿನ ಶಕ್ತಿಯನ್ನು ಉಂಟುಮಾಡಲಿವೆ.

ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಈ ಮಂತ್ರಗಳ ವಿಶೇಷತೆಗಳೇನು ಎಂಬುದನ್ನು ಅರಿತುಕೊಳ್ಳೋಣ. ಇಲ್ಲಿ ನಾವು ನೀಡಿರುವ ಗಣೇಶನ ಮಂತ್ರಗಳು ಹೆಚ್ಚು ಸಿದ್ಧಿಯನ್ನು ಪಡೆದುಕೊಂಡಿದ್ದು ನಿಮ್ಮ ಮನಸ್ಸಿನಲ್ಲಿರುವ ಸಕಲ ಇಷ್ಟಾರ್ಥಗಳನ್ನು ನೆರವೇರಿಸುವುದು ಖಂಡಿತ. ಸ್ನಾನಾದಿಗಳನ್ನು ಮಾಡಿ, ಊಟಕ್ಕೂ ಮುನ್ನ ಈ ಮಂತ್ರವನ್ನು ನೀವು ಪಠಿಸಬೇಕು. ನಿಮ್ಮ ಅಂತರಾಳದ ಶಕ್ತಿಯನ್ನು ಬಲಪಡಿಸಲು ಈ ಮಂತ್ರಗಳು ಸಹಕಾರಿಯಾಗಿದ್ದು, ಈ ಮಂತ್ರಗಳನ್ನು ಬೆಳಗ್ಗೆ ಮತ್ತು ಸಾಯಂಕಾಲ ಪಠನೆ ಮಾಡಬೇಕು.
ಓಂ ಗಮ್ ಗಣಪತಯೇ ನಮಃ
ಇದನ್ನು ಬೀಜ ಮಂತ್ರವೆಂದೂ ಕರೆಯಲಾಗುತ್ತದೆ. ಇದನ್ನು ಯೋಗಸಾಧಕ ಮಂತ್ರವೆಂಬುದಾಗಿ ಕೂಡ ಕರೆಯಲಾಗುತ್ತದೆ ಮತ್ತು ಗಣಪನನ್ನು ಒಲಿಸಿಕೊಳ್ಳಲು ಈ ಮಂತ್ರವು ಸಹಕಾರಿಯಾಗಿದೆ.
ಓಂ ಶ್ರೀ ಗಣೇಶಾಯ ನಮಃ
ಗಣೇಶನಿಗೆ ಜಯವಾಗಲಿ ಎಂಬುದು ಈ ಮಂತ್ರದ ಸಾರವಾಗಿದೆ.
ಓಂ ಏಕದಂತಾಯ ನಮಃ
ಗಣಪನಿಗೆ ಇರುವ ಒಂದು ದಂತವನ್ನು ಇದು ಪ್ರತಿನಿಧಿಸುತ್ತದೆ. ಏಕ ಮನಸ್ಸಿನಲ್ಲಿ ಗಣಪನನ್ನು ಪ್ರಾರ್ಥಿಸಬೇಕು. ಶ್ರದ್ಧೆ ಭಕ್ತಿ ನಿಮ್ಮಲ್ಲಿ ತುಂಬಿರಲಿ.
ಓಂ ಸುಮುಖಾಯ ನಮಃ
ಈ ಮಂತ್ರವು ಸರಳ ಅರ್ಥವನ್ನು ಹೊಂದಿದೆ. ಮುಖ, ಆತ್ಮ ಎಲ್ಲವೂ ಸುಂದರವಾಗಿದೆ ಎಂಬ ಅರ್ಥವನ್ನು ಇದು ನೀಡುತ್ತದೆ. ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮಲ್ಲಿ ಒಂದು ಸುಂದರತೆ ಮೂಡುತ್ತದೆ. ನಿಮ್ಮಲ್ಲಿ ಮಾತನಾಡುವವರು ಹೆಚ್ಚಿನ ಪ್ರೀತಿಯಿಂದ ನಿಮ್ಮಲ್ಲಿ ಸಂವಾದ ನಡೆಸುತ್ತಾರೆ.
ಓಂ ಕ್ಷಿಪ್ರ ಪ್ರಸಾದಾಯ ನಮಃ
ಕ್ಷಿಪ್ರವೆಂದರೆ ಶೀಘ್ರ ಎಂಬ ಅರ್ಥವನ್ನು ನೀಡುತ್ತದೆ. ನಿಮ್ಮ ದಾರಿಯಲ್ಲಿ ಬರುವ ಯಾವುದೇ ಅಪಾಯವನ್ನು ತೊಡೆದುಹಾಕುವಲ್ಲಿ ಇದು ಸಮರ್ಥವಾಗಿದೆ. ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಮನಸ್ಸು ದೇಹ ಪರಿಶುದ್ಧವಾಗುತ್ತದೆ.
ಓಂ ಬಾಲಚಂದ್ರಾಯ ನಮಃ
ಸಂಸ್ಕೃತದಲ್ಲಿ ಬಾಲವೆಂದರೆ ಹಣೆಯ ಮಧ್ಯಭಾಗವಾಗಿದೆ. ಚಂದ್ರ ಎಂದರೆ ಚಂದ್ರದೇವನಾಗಿದ್ದಾನೆ. ಹಣೆಯ ಮಧ್ಯಭಾಗದಲ್ಲಿ ಚಂದ್ರನನ್ನು ಇರಿಸಿಕೊಂಡವರು ಎಂದರೆ ನಿಮ್ಮೊಳಗಿನ ಅಂತರಾಳವನ್ನು ಪರಿಶೋಧಿಸುವುದು ಎಂಬ ಅರ್ಥವನ್ನು ನೀಡುತ್ತದೆ. ಇದು ಬೆಳವಣಿಗೆ ಮತ್ತು ಶಾಂತಿಯ ಸಂಕೇತವಾಗಿದೆ.
ಓಂ ಗಣಾಧ್ಯಕ್ಷಾಯ ನಮಃ
ನೀವು ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮಲ್ಲಿ ಒಂದು ರೀತಿಯ ಚೈತನ್ಯ ಉಂಟಾಗುತ್ತದೆ.
ಓಂ ವಿನಾಯಕಾಯ ನಮಃ
ವಿನಾಯಕ ಎಂಬುದು ಗಣೇಶನ ಇನ್ನೊಂದು ಹೆಸರಾಗಿದೆ. ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಜೀವನದಲ್ಲಿ ಸ್ವರ್ಣಯುಗ ತೊಡಗುತ್ತದೆ ಎಂದಾಗಿದೆ. ನಿಮ್ಮ ಕಚೇರಿ, ಮನೆಯಲ್ಲಿ ನೀವೇ ಬಾಸ್ ಆಗುತ್ತೀರಿ.
ಓಂ ವಿಘ್ನನಾಶಾಯ ನಮಃ
ನಿಮ್ಮ ಜೀವನ ಮತ್ತು ಕೆಲಸದಲ್ಲಿನ ವಿಘ್ನಗಳನ್ನು ನಿವಾರಿಸಲು ಈ ಮಂತ್ರ ಸಹಾಯ ಮಾಡಲಿದೆ. ಈ ಮಂತ್ರವನ್ನು ನಿತ್ಯವೂ ಪಠಿಸುವುದರಿಂದ ನಿಮ್ಮ ಎಲ್ಲಾ ದುರಿತಗಳು ನಿವಾರಣೆಯಾಗುತ್ತದೆ.
ಓಂ ಲಂಬೋಧರಾಯ ನಮಃ
ಈ ವಿಶ್ವದಲ್ಲಿ ನೀವಿದ್ದೀರಿ ಎಂಬುದನ್ನು ಇದು ನಿಮಗೆ ನೆನಪಿಸುತ್ತದೆ. ನೀವೇ ಸಂಪೂರ್ಣ ವಿಶ್ವ ಎಂಬ ಭಾವನೆ ನಿಮ್ಮಲ್ಲಿ ಉಂಟಾಗುತ್ತದೆ. ಓಂ ಮಂತ್ರವು ನಿಮ್ಮಲ್ಲಿ ಹೊಸದೊಂದು ಚೇತನವನ್ನು ಪುನರುಜ್ಜೀವನಗೊಳಿಸುತ್ತದೆ.
ಓಂ ಗಜಕರ್ಣಿಕಾಯ ನಮಃ
ನಿಮ್ಮ ಬಗ್ಗೆ ಜನರು ಏನೇ ಕೆಟ್ಟದ್ದು ಮಾತನಾಡಿದರೂ ಅದು ನಿಮ್ಮನ್ನು ತಾಗುವುದಿಲ್ಲ ಏಕೆಂದರೆ ಗಣೇಶನ ಈ ಮಂತ್ರವು ನಿಮ್ಮನ್ನು ರಕ್ಷಣೆ ಮಾಡುತ್ತಿರುತ್ತದೆ ಎಂದಾಗಿದೆ.
ಓಂ ಕಪಿಲಾಯ ನಮಃ
ಕಪಿಲ ಎಂದರೆ ನಿಮ್ಮ ಸುತ್ತ ಮತ್ತು ಇತರರ ಸುತ್ತ ಬಣ್ಣವನ್ನು ತುಂಬುವುದು ಎಂಬ ಅರ್ಥವನ್ನು ನೀಡುತ್ತದೆ. ಈ ಮಂತ್ರವನ್ನು ಪಠಿಸುವುದು ಎಂದರೆ ಬಣ್ಣವನ್ನು ರಚಿಸುವುದಾಗಿದೆ ಎಂದಾಗಿದೆ. ನೀವು ಮನಸ್ಸಿನಲ್ಲಿ ನೆನೆಯುವುದು ಕಾರ್ಯರೂಪಕ್ಕೆ ತರುವುದು ಎಂದಾಗಿದೆ.
ಓಂ ವಿಕ್‌ತ್ರಾಯ ನಮಃ
ಈ ವಿಶ್ವವನ್ನು ಒಂದು ನಾಟಕದಂತೆ ಕಾಣುವುದಾಗಿದೆ. ಈ ಸಂಪೂರ್ಣ ವಿಶ್ವವೇ ಒಂದು ಕನಸು ಎಂಬಂತೆ ಕಾಣುವುದಾಗಿದೆ.
ಮಂತ್ರ ಪಠಣೆ ಹೇಗೆ
ಸ್ನಾನದ ನಂತರ ಊಟಕ್ಕೂ ಮುನ್ನ ಈ ಮಂತ್ರವನ್ನು 108 ಬಾರಿ ಪಠಿಸುವುದರಿಂದ ಸರ್ವ ಸಿದ್ಧಿಗಳು ನಿಮಗೆ ಉಂಟಾಗುತ್ತದೆ. ಬೆಳಗ್ಗೆ ಮತ್ತು ಸಾಯಂಕಾಲ ಒಂಭತ್ತು ಬಾರಿ ಕೂಡ ಈ ಮಂತ್ರವನ್ನು ಪಠಿಸುವುದರಿಂದ ನಿಮಗೆ ಶ್ರೇಯಸ್ಸು ಉಂಟಾಗುತ್ತದೆ.



Click it and Unblock the Notifications






