Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಪಿತೃದೋಷದ ಸೂಚನೆಗಳು ಮತ್ತು ಅದಕ್ಕೆ ಪರಿಹಾರಗಳು
"ಪಿತೃ" ಎಂಬುದು ಒಂದು ಸಂಸ್ಕೃತ ಪದವಾಗಿದ್ದು ಇದು ತಮ್ಮ ತಲೆಮಾರಿನ ಹಿರಿಯರನ್ನು ಪ್ರತಿಬಿಂಬಿಸುತ್ತದೆ. ಮನುಷ್ಯರು ಸಾವಿನ ನಂತರ ಪಿತೃಲೋಕಕ್ಕೆ ತೆರಳುತ್ತಾರೆ ಎಂಬ ನಂಬಿಕೆಗಳಿವೆ.ಅಲ್ಲಿಂದಲೇ ಅವರು ಕಾಲಾನಂತರವೂ ತಮ್ಮ ವಂಶದ ಮುಂದಿನ ಪೀಳಿಗೆಯನ್ನು ಆಶೀರ್ವದಿಸುತ್ತಾ ಬೆಂಬಲಿಸುತ್ತಾ ಇರುತ್ತಾರೆ.
ಪಿತೃಲೋಕದಿಂದಲ್ಲಿ ಇರುವ ಹಿರಿಯರಿಗೆ ವರ್ಷದಲ್ಲಿನ ಕೆಲವು ದಿನಗಳು ಅವರ ವಂಶಸ್ಥರು ಅಡುಗೆ ಮಾಡಿ ನೀಡಬೇಕು ಎಂಬ ಪ್ರತೀತಿ ಇದೆ.ಪಿತೃಲೋಕದಲ್ಲಿರುವ ಅವರಿಗೆ ತಾವೇ ಸ್ವತಃ ಅಡುಗೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಆದ್ದರಿಂದ ಭೂಮಿ ಮೇಲೆ ಇರುವ ಅವರ ಮಕ್ಕಳು ಕೆಲವು ದಿನಗಳು ಅವರಿಗೆ ಅಡುಗೆಯನ್ನು ಮಾಡಿ ನೀಡಬೇಕು ಎಂದು ಹೇಳುತ್ತಾರೆ.

ಹಿರಿಯರಿಗೆ ನಾವು ಮೇಲೆ ಹೇಳಿದ ರೀತಿ ಆಹಾರವನ್ನು ನೀಡದೆ ಇದ್ದಾರೆ ಅವರು ಶಪಿಸುತ್ತಾರೆ ಮತ್ತು ಇದರಿಂದ ಅವರ ಇಡೀ ವಂಶದ ಮೇಲೆ ಪರಿಣಾಮವುಂಟಾಗುತ್ತದೆ ಹಾಗು ಅವರ ವಂಶ ಸಂಕಷ್ಟಕ್ಕೆ ಒಳಗಾಗುತ್ತದೆ ಎಂದು ಹೇಳಲಾಗುತ್ತದೆ .ಈ ಶಾಪವನ್ನೇ ಪಿತೃ ದೋಷವೆಂದು ಕರೆಯುತ್ತಾರೆ. ಈಗ ನಮ್ಮಲ್ಲಿ ಮೂಡುವ ಪ್ರಶ್ನೆಯೇನೆಂದರೆ ಒಂದು ಕುಟುಂಬ ಅಥವಾ ವಂಶಕ್ಕೆ ಪಿತೃ ದೋಷವಿದೆ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು?

ಪಿತೃದೋಷದ ಸೂಚನೆಗಳು
ಒಂದು ಕುಟುಂಬದಲ್ಲಿ ಪಿತೃದೋಷವಿದ್ದರೆ ಅಲ್ಲಿ ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ಇರುತ್ತವೆ.ಅಂತಹವರ ಮನೆಯಲ್ಲಿ ಹಲವಾರು ಬಾರಿ ಗರ್ಭಪಾತಗಳಾಗುತ್ತವೆ.ಮನೆಯಲ್ಲಿರುವ ಮಕ್ಕಳಿಗೆ ಆರೋಗ್ಯದ ಸಮಸ್ಯೆಗಳು ಉಂಟಾಗುತ್ತವೆ.ಈ ಸಮಸ್ಯೆ ಹೆಚ್ಚಾಗಿ ಮನೆಯಲ್ಲಿರುವ ಗಂಡು ಮಕ್ಕಳಿಗೆ ಉಂಟಾಗುತ್ತದೆ.ಅವರ ಸಂಸಾರ ಬಡತನದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಕೆಲವೊಮ್ಮೆ ಸಾಮಾನ್ಯವಾದ ಜೀವನವನ್ನು ನಡೆಸಲೂ ಅವರಿಗೆ ಕಷ್ಟವಾಗಬಹುದು.ಇದರೊಂದಿಗೆ ಮನೆಯಲ್ಲಿ ಪದೇ ಪದೇ ಜಗಳಗಳೂ ನಡೆಯಬಹುದು. ಪಿತೃದೋಷದಿಂದ ಹೊರಗೆ ಬರಲು ಕೆಲವು ಪರಿಹಾರಗಳಿವೆ. ಅವೇನೆಂದು ತಿಳಿಯೋಣ

ಪಿತೃಪಕ್ಷ ಅಥವಾ ಶ್ರಾದ್ಧವನ್ನು ಆಚರಿಸುವುದು
ಪಿತೃಪಕ್ಷ ಎನ್ನುವುದು ೧೦ ದಿನಗಳ ಅವಧಿಯಲ್ಲಿ ಆಚರಿಸುವ ಒಂದು ಪದ್ಧತಿ.ಈ ಸಮಯವು ಬಹಳ ಮಂಗಳಕರವಾಗಿದ್ದು ನಮ್ಮ ಪೂರ್ವಿಕರಿಗೆ ಸಲ್ಲಿಸಬೇಕಾದ ಎಲ್ಲ ಕಾರ್ಯಗಳನ್ನು ಮಾಡುವುದು ಬಹಳ ಪ್ರಶಸ್ತ.ಈ ದಿನಗಳಲ್ಲಿ ನಾವು ನಮ್ಮ ಕರ್ತವ್ಯಗಳನ್ನು ಪಾಲಿಸಿ ನಮ್ಮ ಹಿರಿಯರ ಕಾರ್ಯಗಳನ್ನು ಮಾಡಬೇಕು.ಈ ಆಚರಣೆಗಳಲ್ಲಿ ಮುಖ್ಯವಾಗಿ ನಾವು ತೀರಿ ಹೋಗಿರುವ ನಮ್ಮ ಹಿರಿಯರಿಗೆ ವಸ್ತ್ರಗಳನ್ನು ಹಾಗೂ ಆಹಾರವನ್ನು ನೀಡಬೇಕು.ಈ ೧೫ ದಿನಗಳ ಸಮಯದಲ್ಲಿ ಹಿರಿಯರ ಆತ್ಮಗಳು ಮನೆಗೆ ಭೇಟಿ ನೀಡಿ ಹೋಗುತ್ತವೆ ಎಂಬ ನಂಬಿಕೆಗಳಿವೆ.

ಅರಳಿ ಮರಕ್ಕೆ ನೀರೆರೆಯುವುದು
ಅರಳಿ ಮರಕ್ಕೆ ಆಗಾಗ್ಗೆ ನೀರನ್ನು ಹಾಕುವುದರಿಂದ ಪಿತೃ ದೋಷದಿಂದ ಪರಿಹಾರವನ್ನು ಕಂಡುಕೊಳ್ಳಬಹುದು.ಪ್ರತಿ ದಿನವೂ ಅರಳಿ ಮರದ ಬೇರುಗಳಿಗೆ ನೀರೆರೆಯುವುದು ಬಹಳ ಒಳ್ಳೆಯದು.ಅರಳಿ ಮರವು ಬ್ರಹ್ಮ ದೇವರು ಹಾಗು ನಮ್ಮ ಪೂರ್ವಿಕರೊಂದಿಗೆ ಬಾಂಧವ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.ಹಿಂದೂ ಧರ್ಮದಲ್ಲಿ ಪಿತೃ ಗಳನ್ನು ಪೂಜಿಸಲಾಗುತ್ತದೆ, ಹಾಗಾಗಿ ಪ್ರತಿ ದೇವಸ್ಥಾನದಲ್ಲೂ ಅರಳಿ ಮರಗಳು ಇರುತ್ತವೆ.ಇದರೊಂದಿಗೆ ವ್ಯಕ್ತಿಗಳು ಸತ್ತಾಗ ಅವರ ಎಲ್ಲಾ ಕಾರ್ಯಗಳನ್ನು ಶ್ರದ್ಧೆಯಿಂದ ಮಾಡಬೇಕು.

ಅಮಾವಾಸ್ಯೆ ಪೂಜೆ
ಅಮಾವಾಸ್ಯೆಯೂ ಕೂಡ ನಮ್ಮ ಹಿರಿಯರಿಗೆ ಮೀಸಲಾಗಿದೆ.ಶ್ರಾದ್ಧದ ದಿನಗಳಂದು ನಡೆಯುವ ಆಚರಣೆಗಳನ್ನು ಅಮಾವಾಸ್ಯೆಯ ಸಂದರ್ಭದಲ್ಲೂ ಮಾಡಬಹುದು.ಮಹಿಳೆಯರು ಕೆಲವು ವಸ್ತುಗಳನ್ನು (ಅವರ ಕುಟುಂಬದ ಸಂಪ್ರದಾಯದಿಂದ ಬಂದಿರುವ) ನೀಡಿ ಹಿರಿಯರನ್ನು ಬೇಡಿಕೊಳ್ಳುತ್ತಾರೆ. ಬಹಳಷ್ಟು ಜನರು ಪಿತೃ ಪೂಜೆಯನ್ನು ಕೂಡ ಅಮಾವಾಸ್ಯೆಯಂದು ಮಾಡುತ್ತಾರೆ.



Click it and Unblock the Notifications