For Quick Alerts
ALLOW NOTIFICATIONS  
For Daily Alerts

ದೀಪಾವಳಿ 2019: ಲಕ್ಷ್ಮೀ ದೇವಿಗೆ ಪೂಜೆ ಮಾಡುವಾಗ ಈ ತಪ್ಪುಗಳನ್ನು ಮಾಡದಿರಿ, ಆಕೆ ಮುನಿಸಿಕೊಳ್ಳಬಹುದು!

By Hemanth
|

ಹಿಂದೂ ಧರ್ಮೀಯರು ಸಂಪತ್ತು ಹಾಗೂ ಸಮೃದ್ಧಿ ನೀಡುವ ದೇವಿ ಲಕ್ಷ್ಮೀಯನ್ನು ಆರಾಧಿಸದೆ ಇರುವುದೇ ಇಲ್ಲ. ಪ್ರತಿಯೊಬ್ಬರು ಆಕೆಯ ಭಕ್ತರೇ. ಕೆಲವರಿಗೆ ಆಕೆ ಒಲಿಯುತ್ತಾಳೆ. ಇನ್ನು ಕೆಲವರು ಆಕೆಯ ಕೃಪೆ ಪಡೆಯಲು ಇನ್ನಿಲ್ಲದ ಪ್ರಯತ್ನ ಮಾಡುವರು. ಲಕ್ಷ್ಮೀ ದೇವಿಯು ತುಂಬಾ ಚಂಚಲೆ ಎನ್ನಲಾಗುತ್ತದೆ.

Lakshmi

ಲಕ್ಷ್ಮೀ ದೇವಿಯ ಒಲಿಸಿಕೊಳ್ಳಲು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನೀವು ಮಾಡುವಂತಹ ಸಣ್ಣ ತಪ್ಪುಗಳಿಗೆ ಆಕೆ ಮುನಿಸಿಕೊಂಡು ಮನೆಬಿಟ್ಟು ಹೋಗಬಹುದು ಎಂದು ನಂಬಲಾಗುತ್ತದೆ.

ಈ ಸಾಲಿನ ದೀಪಾವಳಿ ಹಬ್ಬದ ಲಕ್ಷ್ಮೀ ಪೂಜೆ 27ರಂದು ಸೋಮವಾರ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಲಕ್ಷ್ಮೀಯನ್ನು ಮನೆಯಲ್ಲೇ ಉಳಿಸಿಕೊಳ್ಳಬೇಕಾದರೆ ಯಾವ ರೀತಿಯ ನಿಯಮಗಳನ್ನು ಪಾಲಿಸಬೇಕು ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ. ಇದನ್ನು ತಿಳಿದುಕೊಂಡರೆ ನೀವು ಸಂಪತ್ತು ಹಾಗೂ ಸಮೃದ್ಧಿಯ ದೇವಿಯನ್ನು ಒಲಿಸಿಕೊಳ್ಳಬಹುದು. ಅದಕ್ಕಾಗಿ ನೀವು ಈ ಲೇಖನ ಓದಲೇಬೇಕು....

ಕೊಳಕು ಬಟ್ಟೆ ಧರಿಸುವುದು

ಕೊಳಕು ಬಟ್ಟೆ ಧರಿಸುವುದು

ಇದನ್ನು ಧರ್ಮಗ್ರಂಥಗಳು ಕೂಡ ಒತ್ತಿ ಹೇಳುತ್ತವೆ. ಕೊಳಕಾದ ಬಟ್ಟೆ ಧರಿಸುವುದು ಅಥವಾ ಪ್ರತಿನಿತ್ಯ ಸ್ನಾನ ಮಾಡದೆ ನಿಮ್ಮನ್ನು ಕೊಳಕಾಗಿ ಇಟ್ಟುಕೊಳ್ಳುವುದರಿಂದ ಲಕ್ಷ್ಮೀಯು ಮುನಿಸಿಕೊಂಡು ನಿಮ್ಮ ಮನೆಬಿಟ್ಟು ಹೋಗಬಹುದು ಎಂದು ಧರ್ಮ ಗ್ರಂಥಗಳಲ್ಲಿ ಹೇಳಲಾಗಿದೆ. ಸ್ನಾನ ಮಾಡಲು ಸರಿಯಾದ ಸಮಯ ಸೂರ್ಯ ಉದಯಿಸುವ ಮೊದಲು. ಇದನ್ನು ಬ್ರಹ್ಮ ಮುಹೂರ್ತವೆನ್ನಲಾಗುತ್ತದೆ ಮತ್ತು ಈ ವೇಳೆ ಸ್ನಾನ ಮಾಡಿದರೆ ಲಕ್ಷ್ಮೀದೇವಿ ಮಾತ್ರವಲ್ಲದೆ ಎಲ್ಲಾ ದೇವರುಗಳು ಒಲಿಯುವರು. ಈ ಮುಹೂರ್ತದಲ್ಲಿ ಸಾಧ್ಯವಿಲ್ಲದೇ ಇದ್ದರೂ ಪ್ರತಿನಿತ್ಯ ಸ್ನಾನ ಮಾಡುವುದನ್ನು ಬಿಡಬಾರದು.

ಮನೆಯನ್ನು ಅಸ್ತವ್ಯಸ್ತವಾಗಿಡುವುದು

ಮನೆಯನ್ನು ಅಸ್ತವ್ಯಸ್ತವಾಗಿಡುವುದು

ಲಕ್ಷ್ಮೀದೇವಿಗೆ ಅಸ್ವಚ್ಛತೆ ಇಷ್ಟವಿಲ್ಲದೆಂದು ನಿಮಗೆ ಈಗಾಗಲೇ ಹೇಳಲಾಗಿದೆ. ಇದರಿಂದ ಮನೆಯನ್ನು ಯಾವಾಗಲೂ ಸ್ವಚ್ಛ ಮತ್ತು ಅಚ್ಚುಕಟ್ಟಾಗಿಡಿ. ಮನೆಯೊಳಗಡೆ ಜೇಡಬಲೆಗಳು ಇಲ್ಲದಂತೆ ನೋಡಿಕೊಳ್ಳಿ. ಇದನ್ನು ನಿಯಮಿತವಾಗಿ ತೆಗೆಯುತ್ತಲಿರಿ. ಸೂರ್ಯಾಸ್ತದ ಮೊದಲು ನೀವು ಜೇಡರ ಬಲೆ ತೆಗೆದು ಸ್ವಚ್ಛಗೊಳಿಸಬೇಕು ಎಂದು ಪುರಾಣಗಳು ಹೇಳುತ್ತವೆ. ಇದರಿಂದ ಸೂರ್ಯ ಮುಳುಗುವ ಮೊದಲು ನೀವು ಇದನ್ನು ಮಾಡಿ ಮುಗಿಸಬೇಕು. ದೇಹವನ್ನು ಸ್ವಚ್ಛಗೊಳಿಸಿದ ಬಳಿಕ ಮನೆಯನ್ನು ಶುದ್ಧೀಕರಿಸಬೇಕು ಎಂದು ಹೇಳಲಾಗುತ್ತದೆ.

 ಮಹಿಳೆಯರನ್ನು ಗೌರವಿಸಿ

ಮಹಿಳೆಯರನ್ನು ಗೌರವಿಸಿ

ಮಹಿಳೆಯರನ್ನು ಗೌರವಿಸಿದಲ್ಲಿ ದೇವರು ನೆಲೆಸುತ್ತಾನೆ ಎನ್ನುತ್ತವೆ ಧರ್ಮಗ್ರಂಥಗಳು. ಮನೆಯಲ್ಲಿರುವ ಮಹಿಳೆಯರು ದೇವರ ಮತ್ತೊಂದು ರೂಪವೆಂದು ಹೇಳಬಹುದು. ಇದರಿಂದ ಮಹಿಳೆಯರಿಗೆ ಅಗೌರವ ನೀಡಿದರೆ ಅದು ದೇವರನ್ನು ಅಗೌರವಿಸಿದಂತೆ. ಮಹಿಳೆಯರು ದೇವರಿಗೆ ಸಮಾನವೆನ್ನುವ ನಂಬಿಕೆಯಿಂದಾಗಿ ಹಿಂದೂ ಹುಡುಗಿಯರು ಹಿರಿಯರ ಕಾಲು ಮುಟ್ಟಿ ನಮಸ್ಕರಿಸಬಾರದು ಎನ್ನಲಾಗುತ್ತದೆ.

ಬೇಗ ಏಳದೇ ಇರುವುದು

ಬೇಗ ಏಳದೇ ಇರುವುದು

ಬೆಳಗ್ಗೆ ಬೇಗನೆ ಏಳದಿರುವುದು ಉದಾಸೀನತೆ. ಇದು ಲಕ್ಷ್ಮೀ ದೇವಿಯನ್ನು ಹೆಚ್ಚು ಕೆರಳಿಸುತ್ತದೆ ಎಂದು ಧರ್ಮಗ್ರಂಥಗಳು ಹೇಳುತ್ತವೆ. ಇದರಿಂದ ನೀವು ನಿದ್ರೆಯಿಂದ ಏಳದೆ ಹಣ ಸಂಪಾದನೆ ಮಾಡಲು ಹೋಗುವುದಿಲ್ಲವೆಂದು ಅರ್ಥ. ಇದನ್ನು ಲಕ್ಷ್ಮೀ ದೇವಿಯು ಇಷ್ಟಪಡುವುದಿಲ್ಲ. ಮನೆಯಲ್ಲಿರುವ ಜನರು ಸಂಪಾದನೆ ಮಾಡಲು ಹೋಗದಿರುವುದು ಆಕೆಗೆ ಇಷ್ಟವಾಗದು.

ಕೋಪ ಮತ್ತು ಜಗಳ

ಕೋಪ ಮತ್ತು ಜಗಳ

ಮನೆಯಲ್ಲಿರುವ ಜನರು ಕೋಪ ಮತ್ತು ಜಗಳ ಮಾಡಲೇಬಾರದು. ಜಗಳ ಮತ್ತು ವಾಗ್ವಾದಕ್ಕೆ ಕಾರಣವಾಗುವ ಕೋಪವನ್ನು ನಿಯಂತ್ರಿಸಿಕೊಳ್ಳಬೇಕು. ಜನರು ಇಂತಹ ವಿಚಾರಗಳಲ್ಲಿ ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳುವ ಬದಲು ಪ್ರಗತಿಗೆ ಹೊಸ ಯೋಜನೆಗಳನ್ನು ಹುಡುಕಬೇಕು. ಜಗಳದಿಂದ ಲಕ್ಷ್ಮೀದೇವಿ ತುಂಬಾ ಕುಪಿತಳಾಗುವಳು. ಇದರಿಂದ ಮನೆಯಲ್ಲಿ ಲಕ್ಷ್ಮೀದೇವಿಯ ಉಳಿಸಿಕೊಳ್ಳಬೇಕಾದರೆ ಜಗಳ ಬಿಟ್ಟಾಕಿ.

ದಾನ ಮಾಡದಿರುವುದು

ದಾನ ಮಾಡದಿರುವುದು

ದಾನಧರ್ಮ ಮಾಡುವುದು ತುಂಬಾ ಪುಣ್ಯದ ಕೆಲಸವೆಂದು ಹಿಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ದೇವರನ್ನು ಒಲಿಸಿಕೊಳ್ಳಲು ನೀವು ದಾನಧರ್ಮ ಮಾಡಿ, ಇತರರಿಗೆ ನೆರವಾಗಬೇಕು. ನಿಮ್ಮ ಸಂಪಾದನೆಯ ಸ್ವಲ್ಪವನ್ನು ನಿಸ್ಸಾಯಕರಿಗೆ ನೀಡಬೇಕೆಂದು ಪ್ರತಿಯೊಂದು ಧರ್ಮದಲ್ಲೂ ಹೇಳಲಾಗುತ್ತದೆ. ದಾನಧರ್ಮ ಮಾಡಿದರೆ ಹೆಚ್ಚಿನ ಸಂಪತ್ತು ಬರುವುದು ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಮೋಕ್ಷದ ಆಶೀರ್ವಾದ ಸಿಗುವುದು ಎಂದು ನಂಬಲಾಗಿದೆ.

English summary

Never Do These Things If You Don't Want To Disappoint Lakshmi!

Goddess Lakshmi is one of the primary deities in Hinduism and she is the Goddess of wealth. Just another incarnation of Shakti, Goddess Lakshmi is believed to be one of the most unstable goddesses. There are certain rules which need to be observed if you have to please Goddess Lakshmi. Some mistakes might even displease her, and she might even leave your house, as is believed in Hinduism. Take a reading of these points which you need to keep in mind, so that the Goddess keeps showering her blessings on you and the prosperity stays with you forever.
X
Desktop Bottom Promotion