For Quick Alerts
ALLOW NOTIFICATIONS  
For Daily Alerts

ಒಂಬತ್ತು ದಿನಗಳ ಕಾಲ ದೇವಿಯ ಆರಾಧನೆಗಾಗಿ 'ಶಕ್ತಿಯುತ' ಮಂತ್ರಗಳು

|

ನವರಾತ್ರಿ ಆಚರಣೆಯನ್ನು ಒಂಭತ್ತು ದಿನಗಳ ಕಾಲ ಒಂಭತ್ತು ರಾತ್ರಿ ದುರ್ಗೆಯನ್ನು ಪೂಜಿಸುವುದರ ಮೂಲಕ ಆಚರಿಸಲಾಗುತ್ತದೆ. ಈ ದಿನಗಳಲ್ಲಿ ಭಕ್ತರು ದುರ್ಗೆಯನ್ನು ಪೂಜಿಸಿ ಅವರ ಅನುಗ್ರಹವನ್ನು ಪಡೆದುಕೊಳ್ಳಬಹುದಾಗಿದೆ. ದುರ್ಗೆಯ ಬೇರೆ ಬೇರೆ ಅವತಾರಗಳನ್ನು ಅಲಂಕರಿಸಿ ಈ ಶುಭ ಸಂದರ್ಭದಲ್ಲಿ ತಾಯಿಗೆ ಪೂಜೆಯನ್ನು ಮಾಡಲಾಗುತ್ತದೆ. ಒಂಭತ್ತು ದಿನಗಳ ಕಾಲ ದುರ್ಗೆಯ ಶಕ್ತಿ ಅತ್ಯಂತ ಪ್ರಭಾವಿತವಾಗಿರುತ್ತದೆ ಮತ್ತು ಭಕ್ತರು ಈ ಸಮಯದಲ್ಲಿ ದೇವಿಯನ್ನು ಪೂಜಿಸುವುದರಿಂದ ತಮ್ಮ ಮನೋಕಾಮನೆಗಳನ್ನು ಪೂರ್ತಿಯಾಗಿಸಿಕೊಳ್ಳಬಹುದು.

Navratri Puja Mantra

ದುರ್ಗೆಯು ಕೆಟ್ಟದ್ದನ್ನು ದಮನ ಮಾಡಿ ಒಳಿತನ್ನು ವಿಜೃಂಭಿಸುವುದಕ್ಕಾಗಿ ಅವಾತರಗಳನ್ನು ತಾಳುತ್ತಾರೆ. ಮಾತೆ ಪಾರ್ವತಿಯೇ ಬೇರೆ ಬೇರೆ ರೂಪಗಳನ್ನು ಧರಿಸಿ ಅಸುರ ಸಂಹಾರವನ್ನು ಮಾಡಿ ಅಲ್ಲಿನ ಜ್ಞಾನ ದೀವಿಗೆಯನ್ನು ಬೆಳಗಿಸಿದ್ದಾರೆ. ಮಾನವ ದೇಹದಲ್ಲಿರುವ ಅಸುರ ಶಕ್ತಿಗಳಾದ ಕಾಮ, ಕ್ರೋಧ, ಮೋಹ, ಮದ ಮತ್ಸರ, ಲೋಭಗಳೆಂಬ ಅರಿಷಡ್ವರ್ಗಗಳನ್ನು ದೇವಿ ದಮನ ಮಾಡಿ ಅಲ್ಲಿ ಜ್ಞಾನವೆಂಬ ಅಮೃತ ಸುಧೆಯನ್ನು ಹರಿಸಲಿದ್ದಾರೆ. ಇಂದಿನ ನಮ್ಮ ಲೇಖನದಲ್ಲಿ ದೇವಿಯನ್ನು ಪಠಿಸಲು ಅನುಕೂಲಕರವಾಗಿರುವ ಮಂತ್ರಗಳು ಮತ್ತು ಅವುಗಳ ಮಹತ್ವವನ್ನು ತಿಳಿಸುತ್ತಿದ್ದು ನೀವು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ನವರಾತ್ರಿ ಪೂಜಾ ಮಂತ್ರಗಳು ಶೈಲಪುತ್ರಿಗೆ ನವರಾತ್ರಿಯ ಮೊದಲ ದಿನದ ಪೂಜೆ ಆ ಮಂತ್ರಗಳು ಹೀಗಿವೆ
ಶೈಲಪುತ್ರಿ ಅವತಾರಕ್ಕೆ ಮಂತ್ರ

ಶೈಲಪುತ್ರಿ ಅವತಾರಕ್ಕೆ ಮಂತ್ರ

ಓಂ ಹ್ರೀಮ್ ಶ್ರೀಮ್ ಶೈಲಪುತ್ರಿ ದುರ್ಗಾಯೆ ನಮಃ

ಸಾವಿರ ಚಂದ್ರನ ಕಾಂತಿಯಿಂದ ಮಾತೆ ಹೊಳೆಯುತ್ತಿದ್ದು ನಮ್ಮೆಲ್ಲಾ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ದೇವಿಯನ್ನು ಸ್ಮರಿಸಿ ಪೂಜಿಸಬೇಕು.

ಬ್ರಹ್ಮಚಾರಿ ದೇವಿಯ ಮಂತ್ರ

ಬ್ರಹ್ಮಚಾರಿ ದೇವಿಯ ಮಂತ್ರ

ಎರಡನೇ ದಿನ ಬ್ರಹ್ಮಚಾರಿ ದೇವಿಯನ್ನು ಪೂಜಿಸಲಾಗುತ್ತದೆ

ಈ ದೇವಿಯನ್ನು ಒಲಿಸಲು ಇರುವ ಮಂತ್ರ

ಓಂ ಹ್ರೀಮ್ ಶ್ರೀ ಬ್ರಹ್ಮಚಾರಿಣಿ ದುರ್ಗಾಯೆ ನಮಃ

ನಿಮ್ಮ ಜೀವನದ ಉದ್ದೇಶವನ್ನು ಸಾಧಿಸಲು ಏನಾದರೂ ಬೇಡಿಕೆಯನ್ನು ಹೊಂದಿದದ್ದರೆ, ಈ ಬ್ರಹ್ಮಚಾರಿಣಿ ಮಂತ್ರವನ್ನು ಎರಡನೇ ದಿನ ಪಠಿಸಿ.

Most Read: ಬಾಯಿ ವಾಸನೆ ಬರುತ್ತಿದೆಯೇ? ಹಾಗಾದರೆ ಈ ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ

ಚಂದ್ರಘಂಟ ದೇವಿಯ ಮಂತ್ರ

ಚಂದ್ರಘಂಟ ದೇವಿಯ ಮಂತ್ರ

ಮೂರನೇ ದಿನ ಚಂದ್ರಘಂಟ ದೇವಿಗೆ ಪೂಜೆಯನ್ನು ನಡೆಸಲಾಗುತ್ತದೆ

ಅ ದಿನ ನಿಮ್ಮ ಮನೋಕಾಮನೆಯನ್ನು ಈಡೇರಿಸಲು ಪಠಿಸಬೇಕಾದ ಮಂತ್ರ

ಓಂ ಹ್ರೀಮ್ ಶ್ರೀ ಚಂದ್ರಘಂಟ ದುರ್ಗಾಯೆ ನಮಃ

ಜ್ಞಾನಕ್ಕಾಗಿ ನೀವು ದೇವಿಯನ್ನು ಪೂಜಿಸುತ್ತಿದ್ದಲ್ಲಿ ಮೂರನೇ ದಿನ ಈ ಮಂತ್ರವನ್ನು ಪಠಿಸಿ ಆಕೆಗೆ ಪೂಜೆಯನ್ನು ನಡೆಸಬೇಕು

ಕುಶ್ಮಾಂಡ ದೇವಿಯ ಮಂತ್ರ

ಕುಶ್ಮಾಂಡ ದೇವಿಯ ಮಂತ್ರ

ನಾಲ್ಕನೇ ದಿನ ಕುಶ್ಮಾಂಡ ದೇವಿಗೆ ಪೂಜೆಯನ್ನು ನಡೆಸಲಾಗುತ್ತದೆ. ಸೃಷ್ಟಿಕತರ್ತೆ ಮತ್ತು ಸೂರ್ಯನ ತಾಯಿ ಎಂಬುದಾಗಿ ಕೂಶ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ.

ಸೃಷ್ಟಿಕರ್ತೆಯ ಆಶೀರ್ವಾದವನ್ನು ನೀವು ಪಡೆಯಬೇಕು ಎಂದಾದಲ್ಲಿ ಆಕೆಯ ಮಂತ್ರವನ್ನು ಪಠಿಸಬೇಕು

ಓಂ ಹ್ರೀಮ್ ಶ್ರೀ ಕೂಶ್ಮಾಂಡ ದುರ್ಗಾಯೆ ನಮಃ

ಸೂರ್ಯನ ಪರಿಣಾಮಗಳಿಂದ ಜನ್ಮಕುಂಡಲಿಯಲ್ಲಿ ದೋಷಗಳಿದ್ದರೆ ಆಕೆಯ ಶುಭಾಶಿರ್ವಾದವನ್ನು ಪಡೆದುಕೊಳ್ಳಲು ಆಕೆಯ ಮಂತ್ರವನ್ನು ಪಠಿಸಿ ಆಕೆಯನ್ನು ಪೂಜಿಸಬೇಕು.

Most Read: ಈ ಊರಿನಲ್ಲಿ 'ನವರಾತ್ರಿ' ದಿನ ದೇವಿಗೆ ಪ್ರಾಣಿ ಬಲಿ ಕೊಡುತ್ತಾರಂತೆ!

ಸ್ಕಂದ ಮಾತೆಯ ಮಂತ್ರ

ಸ್ಕಂದ ಮಾತೆಯ ಮಂತ್ರ

ಐದನೇ ದಿನ ಸ್ಕಂದ ಮಾತೆಗೆ ಮಂತ್ರ

ಭಗವಾನ್ ಕಾರ್ತಿಕೇಯನ ಇನ್ನೊಂದು ಹೆಸರು ಸ್ಕಂದ ಎಂದಾಗಿದೆ. ತಾಯಿಯ ಪುತ್ರನ ಹೆಸರಿನಿಂದ ದುರ್ಗೆಯನ್ನು ಕರೆಯಲಾಗುತ್ತದೆ.

ಓಂ ಹ್ರೀಮ್ ಶ್ರೀಮ್ ಸ್ಕಂದಮಾತಾಯೇ ದುರ್ಗಾಯೆ ನಮಃ

ತಾಯಿ ಮತ್ತು ಮಗನ ಸಂಬಂಧವನ್ನು ಈ ಹೆಸರೇ ಸೂಚಿಸುತ್ತದೆ. ದುರ್ಗಾ ಮಾತೆಯು ತಾಯಿಯ ರೂಪದಲ್ಲಿದ್ದು ಆಕೆಯಿಂದ ತಾಯಿಯ ಪ್ರೀತಿಯನ್ನು ನೀವು ನಿರೀಕ್ಷಿಸಬಹುದು. ನಿಮ್ಮ ಜೀವನದ ಸಮಸ್ಯೆಯನ್ನು ಆ ತಾಯಿ ಪರಿಹರಿಸುತ್ತಾರೆ. ಐದನೇ ದಿನ ಮಂತ್ರವನ್ನು ಪಠಿಸಿ ಆಕೆಯನ್ನು ನೀವು ಪೂಜಿಸಬೇಕು.

ಮಾ ಕಾತ್ಯಾಯಿನಿಯ ಮಂತ್ರ

ಮಾ ಕಾತ್ಯಾಯಿನಿಯ ಮಂತ್ರ

ಆರನೇ ದಿನ ಮಾ ಕಾತ್ಯಾಯಿನಿಗೆ ಪೂಜೆ

ಅಸುರರನ್ನು ವಧಿಸಲು ತಾಯಿ ರಿಶಿ ಕಾತ್ಯಾನನ್‌ನಲ್ಲಿ ಜನ್ಮವನ್ನು ತಾಳಿದರು. ಆಕೆಯ ಹೆಸರನ್ನು ಸಪ್ತಸತಿ ದುರ್ಗಾ ಎಂದು ನಮೂದಿಸಲಾಗಿದೆ. ಕೆಟ್ಟದ್ದನ್ನು ವಧಿಸಲು ಆಕೆ ಜನ್ಮತಾಳಿದರು.

ಓಂ ಹ್ರೀಮ್ ಶ್ರೀ ಕಾತ್ಯಾನನಿಯ ದುರ್ಗಾಯೆ ನಮಃ

ಕೆಟ್ಟದ್ದನ್ನು ದಮನ ಮಾಡಿ ಒಳ್ಳೆಯದರ ಮೇಲೆ ಜಯ ಸಾಧಿಸಲು ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ನಿಮ್ಮ ಜೀವನದಲ್ಲಿ ಋಣಾತ್ಮಕ ಅಂಶಗಳಿಂದ ನೀವು ಬಳಲುತ್ತಿದ್ದರೆ ಆಕೆಯನ್ನು ಪೂಜಿಸಬೇಕು.

ದುರ್ಗೆಯ ಮಂತ್ರ

ದುರ್ಗೆಯ ಮಂತ್ರ

ಮಹಾ ಕಾಳರಾತ್ರಿಯ ಹೆಸರಿನಲ್ಲಿ ಏಳನೇ ದಿನ ದುರ್ಗಯೆನ್ನು ಪೂಜಿಸಲಾಗುತ್ತದೆ

ಮಹಾ ದುರ್ಗೆಯ ಅತಿ ಭಯಂಕರ ರೂಪವಾಗಿದೆ ಕಾಳರಾತ್ರಿ. ಆಕೆ ಈ ರೂಪವನ್ನು ಧರಿಸಿದಾಗ ಕೆಟ್ಟದ್ದನ್ನು ನಿಗ್ರಹಿಸುವ ಭರವಸೆಯನ್ನು ವಿಶ್ವಕ್ಕೆ ಮಾಡುತ್ತಾರೆ.

ಓಂ ಹ್ರೀಮ್ ಶ್ರೀ ಕಾಳರಾತ್ರಯೇ ದುರ್ಗಾಯೆ ನಮಃ

ನಿಮ್ಮ ಕುಟುಂಬದಲ್ಲಿ ಕೆಟ್ಟ ಶಕ್ತಿಯ ಪರಿಣಾಮ ಉಂಟಾಗಿದೆ ಎಂದು ನಿಮಗನ್ನಿಸಿದಲ್ಲಿ ಕಾಳರಾತ್ರಿ ರೂಪದಲ್ಲಿರುವ ಮಹಾ ದುರ್ಗೆಯನ್ನು ಮಂತ್ರವನ್ನು ಪಠಿಸಿ ಅವರನ್ನು ಪೂಜಿಸಬೇಕು. ಮನೆ ಮತ್ತು ವ್ಯವಹಾರದಲ್ಲಿ ಮಾಂತ್ರಿಕ ಪರಿಣಾಮಗಳು ಕೈಚಳಕ ತೋರಿದ್ದಲ್ಲಿ ಅದನ್ನು ಕಾಳರಾತ್ರಿಯ ದಯೆಯಿಂದ ಪರಿಹರಿಸಿಕೊಳ್ಳಬಹುದು. ಕಾಳರಾತ್ರಿ ಮಾತೆಯ ಬೀಜಮಂತ್ರವನ್ನು ಪಠಿಸಿ ಏಳನೇ ದಿನ ವಿಜಯಿಗಳಾಗಿ ಆನಂದದಿಂದ ಇರಬಹುದು.'

Most Read: ಮಾಜಿ ಪ್ರೇಮಿಯ ಹಿಂದಕ್ಕೆ ಪಡೆಯಲು ಪ್ರತೀ ರಾಶಿಯ ಮಹಿಳೆಯರು ಏನು ಮಾಡುವರು?

ಮಹಾಗೌರಿ ದುರ್ಗೆಯ ಮಂತ್ರ

ಮಹಾಗೌರಿ ದುರ್ಗೆಯ ಮಂತ್ರ

ಮಹಾಗೌರಿ ದುರ್ಗೆಯ ಎಂಟನೇ ದಿನದ ಎಂಟನೇ ರೂಪವಾಗಿದೆ

ನವದುರ್ಗೆಯ ಅತ್ಯಂತ ಪವಿತ್ರ ರೂಪವಾಗಿದೆ ಮಹಾಗೌರಿ. ಶುದ್ಧತೆಯ ಸಂಕೇತವನ್ನು ಆಕೆ ಪ್ರತಿಪಾದಿಸುತ್ತಾರೆ. ಸುಖ ಶಾಂತಿ ನೆಮ್ಮದಿಯನ್ನು ದೇವಿ ಈ ರೂಪದಲ್ಲಿ ಭಕ್ತರಿಗೆ ನೀಡುತ್ತಾರೆ. ಸಂತಸವಾಗಿರುವುದು ಮಾನವ ಜನ್ಮದಲ್ಲಿ ಮಾನವರು ಅನುಭವಿಸುವುದಾಗಿದ್ದು ಆ ಸಂತಸವನ್ನು ದೇವಿ ಮಾನವರಿಗೆ ನೀಡುತ್ತಾರೆ.

ಓಂ ಹ್ರೀಮ್ ಶ್ರೀ ಮಹಾಗೌರಿ ದುರ್ಗಾಯೆ ನಮಃ

ನಮ್ಮ ಜೀವನದಲ್ಲಿ ಸುಖ ಶಾಂತಿಯನ್ನುಂಟು ಮಾಡಲು ಮಹಾಗೌರಿ ಮಂತ್ರ ಸಹಕಾರಿಯಾಗಿದೆ. ಆಂತರಿಕ ಶಾಂತಿ ಮತ್ತು ಸಂತಸವನ್ನು ಪಡೆಯಲು ಈ ಮಂತ್ರವನ್ನು ಪಠಿಸಬೇಕು.

ಸಿದ್ಧಿದಾತ್ರಿ ತಾಯಿಯ ಮಂತ್ರ

ಸಿದ್ಧಿದಾತ್ರಿ ತಾಯಿಯ ಮಂತ್ರ

ಸಿದ್ಧಿದಾತ್ರಿ ಎಂಬುದು ಸಿದ್ಧಿಯನ್ನು ನೀಡುವ ತಾಯಿಯ ಒಂಭತ್ತನೇ ರೂಪವಾಗಿದೆ

ಹಿಂದೂ ಶಾಸ್ತ್ರದಲ್ಲಿ ಜ್ಞಾನವನ್ನು ಬೇರೆ ಬೇರೆ ವಿಭಾಗಗಳಾಗಿ ವಿಂಗಡಿಸಿದ್ದು 8 ಸಿದ್ಧಿಗಳಿದ್ದು 9 ನಿಧಿಗಳನ್ನು ವ್ಯಾಖ್ಯಾನಿಸಲಾಗಿದೆ. ಸಿದ್ಧಿ ಎಂಬುದು ಜ್ಞಾನವನ್ನು ಸಂಕೇತಿಸುತ್ತದೆ ಮತ್ತು ನಿಧಿ ಎಂಬುದು ವಿಶ್ವದ ಸಂಪತ್ತನ್ನು ಸೂಚಿಸುತ್ತದೆ.

ಓಂ ಹ್ರೀಮ್ ಶ್ರೀ ಸಿದ್ಧಿದಾತ್ರಿ ದುರ್ಗಾಯೆ ನಮಃ

9 ನೇ ದಿನ ಸಿದ್ಧಿದಾತ್ರಿಯನ್ನು ಪೂಜಿಸುವುದು 9 ದಿನ ಪೂಜಿಸುವುದಕ್ಕೆ ಸಮನಾಗಿದೆ.

ಈ ಒಂಭತ್ತು ದಿನಗಳು ದುರ್ಗಾ ಮಾತೆಯನ್ನು ಪೂಜಿಸುವ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ವಿಶ್ವಕ್ಕೆ ಆಕೆ ತಾಯಿಯಾಗಿದ್ದು ತಾಯಿಯ ಹೃದಯವನ್ನು ಮಾತೆ ಹೊಂದಿದ್ದಾರೆ. ಹೇಗೆ ತಾಯಿ ತನ್ನ ಮಗುವಿನ ಒಳಿತಿಗಾಗಿ ಆಶೀರ್ವಾದ ನೀಡುತ್ತಾರೋ ಅದೇ ರೀತಿ ಜಗನ್ಮಾತೆ ಭಕ್ತರನ್ನು ಆಶೀರ್ವದಿಸುತ್ತಾರೆ. ತನ್ನ ಭಕ್ತರನ್ನು ಆಕೆ ಮಗುವನಿಂತೆ ಪ್ರೀತಿಸುತ್ತಾರೆ ಮತ್ತು ಅವರ ಮನೋಕಾಮನೆಯನ್ನು ಪೂರ್ತಿ ಮಾಡುತ್ತಾರೆ. 9 ದಿನಗಳ ಕಾಲ ನಿಮ್ಮೆಲ್ಲಾ ಚಿಂತೆ ಕಷ್ಟಗಳನ್ನು ಮರೆತು ದೇವಿಯನ್ನು ಪೂಜಿಸಿ.

English summary

Navratri Puja Mantra which make your worship more effective

Navratri is a festival of worshipping maa durga for nine nights and nine days. It is the time to get connected with the divine.Each day of Navratri puja is celebrated in the name of different avatars of maa Durga. It is considered to be the best time to achieve riddhi (wealth and prosperity) and siddhi (achievement, name, fame or achievement of some powers). Power of Maa durga is very strongly visible in these 9 nights. Chanting of nine mantras on nine different days can manifest your desirefor wealth, prosperity or achieving Siddhi.
Story first published: Saturday, October 6, 2018, 17:36 [IST]
X
Desktop Bottom Promotion