For Quick Alerts
ALLOW NOTIFICATIONS  
For Daily Alerts

ನವರಾತ್ರಿಯ ಮೊದಲ ದಿನದ ದೇವತೆ 'ಶೈಲಪುತ್ರಿ ದೇವಿ' ಆರಾಧನೆ

By Hemanth
|

ನವರಾತ್ರಿ ವೇಳೆ ದುರ್ಗೆಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುವುದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಒಂಭತ್ತು ದಿನದಲ್ಲಿ ದುರ್ಗೆಯ ವಿವಿಧ ರೂಪಗಳಲ್ಲಿ ಬಂದು ರಾಕ್ಷಸರ ಸಂಹಾರ ಮಾಡಿದ್ದಾಳೆ ಎಂದು ಪುರಾಣಗಳು ಹೇಳುತ್ತವೆ. ಒಂಬತ್ತು ದಿನಗಳ ಕಾಲ ಪೂಜಿಸಲ್ಪಡುವ ದುರ್ಗೆಯ ವಿವಿಧ ರೂಪಗಳು ಯಾವುದು ಎಂದು ಈ ನವರಾತ್ರಿ ವೇಳೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಮೊದಲ ದಿನದಂದು ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ.

ಶೈಲಪುತ್ರಿಯೆಂದರೆ ಪರ್ವತರಾಜನ ಮಗಳು. ಶೈಲ ಅಂದರೆ ಪರ್ವತ ಮತ್ತು ಪುತ್ರಿ ಎಂದರೆ ಮಗಳು ಎಂದರ್ಥ. ಶೈಲಪುತ್ರಿಯನ್ನು ತಾಯಿ ಪಾರ್ವತಿಯೆಂದೂ ಕರೆಯಲಾಗುವುದು. ಅಕ್ಟೋಬರ್ 17ರಂದು ನವರಾತ್ರಿಯ ಮೊದಲ ದಿನ. ಈ ದಿನ ಶೈಲಪುತ್ರಿ ಪೂಜೆ ಹಾಗೂ ಘಟಸ್ಥಾಪನವು ನಡೆಯುವುದು. ಘಟಸ್ಥಾಪನದ ಮುಹೂರ್ತ ಹೀಗಿದೆ......

ನವ ದಿನಗಳ ಕಾಲ ಆರಾಧಿಸುವ ದೇವಿಗೆ ಪ್ರಿಯವಾದ ಸರಳ ಪ್ರಸಾದಗಳು

ಘಟಸ್ಥಾಪನ ಸಮಯ/ಮುಹೂರ್ತ: ಬೆಳಗ್ಗೆಬೆಳಗ್ಗೆ 06:23 ರಿಂದ10:12 ರವರೆಗೆ.

ಕಾಲಾವಧಿ:3 ಗಂಟೆ 49 ನಿಮಿಷ

ಘಟಸ್ಥಾಪನ ಅಭಿಜಿತ್ ಮುಹೂರ್ತ

ಬೆಳಗ್ಗೆ11:43ರಿಂದ 12:29ರವರೆಗೆ

ಕಾಲಾವಧಿ: 46 ನಿಮಿಷಮುಂದೆ

ಓದಿದರೆ ಶೈಲಪುತ್ರಿ ಮತ್ತು ಆಕೆಯ ಆರಾಧನೆ ಬಗ್ಗೆ ತಿಳಿಯಲಿದ್ದೀರಿ.

ಶೈಲಪುತ್ರಿ ಬಗ್ಗೆ ಇರುವ ದಂತಕಥೆ

ಶೈಲಪುತ್ರಿಯನ್ನು ಸತಿ ದೇವಿಯ ಪುನರ್ಜನ್ಮವೆಂದು ಕರೆಯಲಾಗುತ್ತದೆ. ಸತಿ ದೇವಿಯು ತನ್ನ ತಂದೆ ಯಜ್ಞ ಮಾಡುತ್ತಿದ್ದ ವೇಳೆ ಅಗ್ನಿಕುಂಡಕ್ಕೆ ಜಿಗಿದು ಪ್ರಾಣಾರ್ಪಣೆಗೈದಿದ್ದಳು. ತನ್ನ ಪತಿ ಶಿವನನ್ನು ತಂದೆ ಅವಮಾನಿಸಿದ ಕಾರಣಕ್ಕಾಗಿ ಸತಿ ಹೀಗೆ ಮಾಡಿದಳು. ಶಿವನನ್ನು ಮರಳಿ ಪಡೆಯಲು ಅವಳು ಪುನರ್ಜನ್ಮ ಪಡೆದುಕೊಂಡಳು. ಆದರೆ ಸತಿ ಸಾವಿನ ಬಳಿಕ ಶಿವನು ದೀರ್ಘವಾದ ಧ್ಯಾನದಲ್ಲಿ ಮುಳುಗಿಹೋದ. ದೇವಿ ಶೈಲಪುತ್ರಿಯು ಕಾಡಿಗೆ ಹೋಗಿ ತುಂಬಾ ಕಠಿಣ ತಪಸ್ಸಿನಲ್ಲಿ 16 ವರ್ಷ ಕಳೆದಳು. ಇದರ ಬಳಿಕವಷ್ಟೇ ಆಕೆ ತನ್ನ ಪತಿ ಶಿವನನ್ನು ಮರಳಿ ಪಡೆದಳು.

ಶೈಲಪುತ್ರಿ ಹೇಗೆ ಕಾಣಿಸುವಳು

ದೇವಿ ಶೈಲಪುತ್ರಿಯನ್ನು ಯಾವಾಗಲೂ ಆದಿಶಕ್ತಿಯೆಂದು ಗುರುತಿಸಲಾಗಿದೆ. ಆಕೆ ಗೂಳಿ ಮೇಲೆ ಸವಾರಿ ಮಾಡುತ್ತಿದ್ದ ಕಾರಣ ಆಕೆಯನ್ನು ವೃಷರುಧ ಎಂದು ಕರೆಯಲಾಗುತ್ತದೆ. ಆಕೆಗೆ ಎರಡು ಕೈಗಳಿದ್ದು, ಒಂದರಲ್ಲಿ ತ್ರಿಶೂಲ ಮತ್ತೊಂದರಲ್ಲಿ ಕಮಲದ ಹೂವಿದೆ. ಅರ್ಧಚಂದ್ರಾಕೃತಿಯು ಆಕೆಯ ಹಣೆಯಲ್ಲಿದೆ. ಆಕೆಯನ್ನು ಯಾವಾಗಲೂ ಬಿಳಿ ಬಟ್ಟೆಯಲ್ಲಿ ತೋರಿಸಲಾಗುತ್ತದೆ.

ಮೂಲಾಧಾರ ಚಕ್ರದ ದೇವತೆ

ಯೋಗದಲ್ಲಿ ಮೂಲಾಧಾರ ಚಕ್ರವು ಮೂಲವಾಗಿರುವುದು. ದೇವಿ ಶೈಲಪುತ್ರಿಯು ಈ ಚಕ್ರದ ದೇವತೆ. ಈ ಚಕ್ರವು ಸ್ಥಿರತೆ ಮತ್ತು ಶಕ್ತಿಯ ಪ್ರತೀಕವಾಗಿದೆ. ಈ ಚಕ್ರವು ಜಾಗೃತಗೊಂಡಾಗ ಆ ವ್ಯಕ್ತಿಯು ಆಧ್ಯಾತ್ಮಿಕ ಪ್ರಯಾಣಕ್ಕೆ ಹೋಗುವನು. ನಿಮಗೆ ಜೀವನದಲ್ಲಿ ಶಕ್ತಿ ಹಾಗೂ ಸ್ಥಿರತೆ ಬೇಕೆಂದರೆ ನವರಾತ್ರಿಯ ಮೊದಲ ದಿನ ಶೈಲಪುತ್ರಿ ದೇವಿಯ ಪೂಜಿಸಿ.

ನವರಾತ್ರಿಯ ಮೊದಲ ದಿನದ ಗ್ರಹ ಚಂದ್ರ

ಚಂದ್ರನು ಅದೃಷ್ಟ ತಂದುಕೊಡುತ್ತಾನೆ ಎಂದು ನಂಬಲಾಗಿದೆ. ನವರಾತ್ರಿಯ ಮೊದಲ ದಿನದ ಗ್ರಹವೇ ಚಂದ್ರ. ನಿಮ್ಮ ಅದೃಷ್ಟವು ಬದಲಾಗಬೇಕೆಂದಿದ್ದರೆ ನವರಾತ್ರಿಯ ಮೊದಲ ದಿನದಂದು ದೇವಿ ಶೈಲಪುತ್ರಿಯ ಪೂಜಿಸುವುದು ಅಗತ್ಯ.

ದೇವಿ ಶೈಲಪುತ್ರಿ-ಪತ್ರಿಯೊಂದರ ಹಿಂದಿನ ಶಕ್ತಿ

ಎಲ್ಲಾ ದೇವದೇವತೆಗಳ ಅಹಂ ಹಾಗೂ ಪ್ರತಿಷ್ಠೆಯನ್ನು ಶೈಲಪುತ್ರಿ ದೇವಿಯು ಯಾವ ರೀತಿ ಧ್ವಂಸ ಮಾಡಿದಳು ಎನ್ನುವ ಬಗ್ಗೆ ಉಪನಿಷತ್ ನಲ್ಲಿ ಉಲ್ಲೇಖವಿದೆ. ಎಲ್ಲಾ ದೇವದೇವತೆಗಳು ವಿನಮ್ರ ಹೃದಯದಿಂದ ಆಕೆಯನ್ನು ನಮಿಸಿದರು ಎಂದು ಹೇಳಲಾಗುತ್ತದೆ. ದೇವಿ ಶೈಲಪುತ್ರಿಯು ಅಂತಿಮ ಶಕ್ತಿ ಮತ್ತು ಪ್ರತಿಯೊಂದರ ಹಿಂದೆಯೂ ಆಕೆ ಇದ್ದಾಳೆ ಎಂದು ಅವರೆಲ್ಲರೂ ಹೇಳಿದರು. ತ್ರಿಮೂತ್ರಿಗಳಾದ ಬ್ರಹ್ಮ ವಿಷ್ಣು ಮತ್ತು ಶಿವ ಕೂಡ ತಮ್ಮ ಶಕ್ತಿಗಾಗಿ ಶೈಲಪುತ್ರಿಯನ್ನು ಅವಲಂಬಿಸಿದ್ದಾರೆ.

ಸಂಧಿ ಪೂಜೆಯ ವಿಶೇಷತೆ ನಿಮಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ...

ದೇವಿ ಶೈಲಪುತ್ರಿಗೆ ತುಂಬಾ ಇಷ್ಟದ ವಸ್ತು

ದೇವಿಯು ಮಲ್ಲಿಗೆ ಹೂವನ್ನು ತುಂಬಾ ಇಷ್ಟಪಡುತ್ತಾಳೆ. ಶೈಲಪುತ್ರಿಯ ಪೂಜಿಸುತ್ತಾ ಇದ್ದರೆ ನೀವು ಮೊದಲ ದಿನದಂದು ಮಲ್ಲಿಗೆ ಹೂ ಅರ್ಪಿಸಿ ನಿಮ್ಮ ಆಕಾಂಕ್ಷೆ ಈಡೇರಿಸಿಕೊಳ್ಳಿ. ನವರಾತ್ರಿಯ ಮೊದಲ ದಿನವು ಹಳದಿ ಬಣ್ಣಕ್ಕೆ ಸೀಮಿತವಾಗಿದೆ. ಈ ದಿನ ಸರಳವಾಗಿರುವ ಹಳದಿ ಬಣ್ಣದ ಬಟ್ಟೆ ಧರಿಸಬೇಕು.

ದೇವಿ ಶೈಲಪುತ್ರಿ ಕವಚ

ಓಂಕಾರಹಃ ಮೇ ಶಿರಾಹ್ ಪಟು ಮೂಲಾಧರ ನಿವಾಸಿನಿ |

ಹಿಮಾಕರಹಃ ಪಟು ಲಾಲೇಟ್ ಬಿಜರೂಪ ಮಹೇಶ್ವರಿ ||

ಶ್ರಿಂಕಾರ ಪಟು ವಾದನೇ ಲಾವಣ್ಯ ಮಹೇಶ್ವರಿ |

ಹಂಕಾರ ಪಟು ಹೃದಯಯಂ ತಾರಿಣಿ ಶಕ್ತಿ ಸ್ವಾಘ್ರಿತಾ

ಫಟ್ಕರಾ ಪಟು ಸರ್ವಾಂಗೆ ಸರ್ವ ಸಿದ್ಧಿ ಫಲಾಪ್ರದಾ ||

ರಕ್ಷಣೆಗಾಗಿ ಮತ್ತು ಶೈಲಪುತ್ರಿ ದೇವಿಯ ಆಶೀರ್ವಾದಕ್ಕಾಗಿ ಮೇಲಿನ ಶ್ಲೋಕವನ್ನು ಪಠಿಸಿ.

English summary

Navratri 2020 Day 1: Ghatasthapana muhurta, Color, Maa Shailputri Puja Vidhi, Mantra and Significance

During Navratri, each day is dedicated to a specific form of the Mother Goddess. The first day of Navratri is dedicated to the Goddess Shailputri. The name Shailputri means 'the daughter of the mountains' - shaila means 'mountain' and putri means 'daughter'. It is Goddess Shailputri who is known as Goddess Parvati too. 21st September 2017 will be celebrated as the first day of Navratri. It is also the day of Shailputri Pooja and the Ghatasthapana. The muhurt of Ghatasthapana is as follows:
X