ದೇವಿಯ ಒಂಬತ್ತು ಅವತಾರ- ಹಿನ್ನೆಲೆ ತಿಳಿದರೆ, ಮನಸ್ಸಿನಲ್ಲೇ ಭಕ್ತಿ ಮೂಡುವುದು

By: manu
Subscribe to Boldsky

ಹಿಂದೂ ಪಂಚಾಗದ ಪ್ರಕಾರ ವರ್ಷದುದ್ದಕ್ಕೂ ಉತ್ಸವ, ವ್ರತ ಹಾಗೂ ಹಬ್ಬ ಹರಿದಿನಗಳು ಸಾಲು ಸಾಲಾಗಿಯೇ ಬರುತ್ತವೆ. ಪ್ರತಿಯೊಂದು ಹಬ್ಬಗಳ ಆಚರಣೆಯ ಹಿಂದೆ ವಿಶಿಷ್ಟವಾದ ಕಥೆ-ಪುರಾಣಗಳು ಅಡಗಿವೆ. ಇವು ಹಿಂದೂ ಧರ್ಮದ ಘನತೆ ಹಾಗೂ ಗೌರವವನ್ನು ಎತ್ತಿ ಹಿಡಿಯುತ್ತವೆ. ಇಂತಹ ಅನೇಕ ಪವಿತ್ರ ಆಚರಣೆಗಳಲ್ಲಿ ನವರಾತ್ರಿಯೂ ಒಂದು. 9 ದಿನಗಳ ಕಾಲ ಆಚರಿಸುವ ಈ ಉತ್ಸವ ಹಿಂದೂ ಹಬ್ಬಗಳಲ್ಲಿಯೇ ದೊಡ್ಡ ಹಬ್ಬ ಎಂತಲೂ ಹೇಳಬಹುದು.

ಹೆಸರೇ ಹೇಳುವಂತೆ "ನವರಾತ್ರಿ" ಎಂದರೆ 9 ರಾತ್ರಿ ನಡೆಸುವ ವಿಜೃಂಭಣೆಯ ಉತ್ಸವ. ಸೆಪ್ಟಂಬರ್-ಅಕ್ಟೋಬರ್ ತಿಂಗಳಲ್ಲಿ ಬರುವ ಈ ಹಬ್ಬ ಹಿಂದೂಗಳಿಗೊಂದು ಸಂಭ್ರಮದ ಆಚರಣೆ. 9 ದಿನದ ಈ ಉತ್ಸವದಲ್ಲಿ ಪ್ರತಿಯೊಂದು ದಿನವೂ ದುರ್ಗಾದೇವಿಯ ವಿವಿಧ ಅವತಾರಗಳಿಗೆ ಆರಾಧಿಸಲಾಗುತ್ತದೆ. ದೇವಿಯ ಪ್ರತಿಯೊಂದು ಅವತಾರವೂ ಒಂದೊಂದು ವಿಶೇಷತೆಯನ್ನು ಸಾರುತ್ತದೆ. ಜೊತೆಗೆ ಮಹತ್ವವಾದ ಧಾರ್ಮಿಕ ಆಚರಣೆಯನ್ನು ಬಹಿರಂಗ ಪಡಿಸುತ್ತದೆ. ಆ 9 ದಿನಗಳ ದೇವಿಯ ವಿಶೇಷ ರೂಪದ ಬಗ್ಗೆ ತಿಳಿಯೋಣ ಬನ್ನಿ... 

ನವರಾತ್ರಿಯ 1ನೇ ದಿನ

ನವರಾತ್ರಿಯ 1ನೇ ದಿನ

ನವರಾತ್ರಿಯ ಮೊದಲ ದಿನವನ್ನು ದುರ್ಗಾ ದೇವಿಯು "ಶೈಲ ಪುತ್ರಿ" ಅವತಾರ ಎಂದು ಪೂಜಿಸಲಾಗುವುದು. ಇವಳು ಈಶ್ವರನ ಸಂಗಾತಿ ಹಾಗೂ ಶಕ್ತಿ ದೇವಿಯ ಪ್ರತಿರೂಪ ಎಂದು ಕರೆಯಲಾಗುವುದು.

ನವರಾತ್ರಿಯ 2ನೇ ದಿನ

ನವರಾತ್ರಿಯ 2ನೇ ದಿನ

ಎರಡನೆಯ ದಿನದಂದು ದುರ್ಗಾಮಾತೆ 'ಬ್ರಹ್ಮಚಾರಿಣಿ'ಯ ರೂಪ ಧರಿಸುತ್ತಾಳೆ. ಈ ಹೆಸರು ಬ್ರಹ್ಮ ನಿಂದ ಬಂದಿದ್ದಾಗಿದೆ. ತನ್ನ ತಪ್ಪಿಗಾಗಿ ಪ್ರಾಯಶ್ಚಿತ ಪಡುವ ಈ ರೂಪ ಶಿವನ ಸತಿಯಾದ ಪಾರ್ವತಿ (ಅಥವಾ ಶಕ್ತಿ)ಯ ಇನ್ನೊಂದು ರೂಪವೂ ಆಗಿದೆ. ಇವಳ ಉಪಾಸನೆಯಿಂದ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ವೃದ್ಧಿಯಾಗುತ್ತದೆ.

ನವರಾತ್ರಿ 3ನೇ ದಿನ

ನವರಾತ್ರಿ 3ನೇ ದಿನ

ಮೂರನೆಯ ದಿನದಂದು ದುರ್ಗಾಮಾತೆ "ಚಂದ್ರಘಂಟಾ" ರೂಪವನ್ನು ಧರಿಸುತ್ತಾಳೆ. ಈ ರೂಪ ಸೌಂದರ್ಯ ಮತ್ತು ಧೈರ್ಯವನ್ನು ಬಿಂಬಿಸುತ್ತದೆ. ಇವಳ ಸ್ವರೂಪ ಪರಮ ಶಾಂತಿದಾಯಕ ಹಾಗೂ ಶ್ರೇಯಸ್ಕರ. ದಶಹಸ್ತಗಳುಳ್ಳ ದೇವಿಯು ಶಸ್ತ್ರ ಸಜ್ಜಿತಳಾಗಿ, ಯುದ್ಧ ಸನ್ನದ್ಧಳಾಗಿರುವಂತೆ ಕಾಣುತ್ತಾಳೆ.

ನವರಾತ್ರಿಯ 4ನೇ ದಿನ

ನವರಾತ್ರಿಯ 4ನೇ ದಿನ

ನಾಲ್ಕನೇ ದಿನವನ್ನು ದೇವಿಯ "ಕೂಷ್ಮಾಂಡ"ದ ರೂಪವೆಂದು ಪೂಜಿಸಲಾಗುವುದು. ಪುರಾಣ ಹಾಗೂ ದಂತಕಥೆಯ ಪ್ರಕಾರ ಕೂಷ್ಮಾಂಡ ಎಂದರೆ ಇಡೀ ವಿಶ್ವದ ಸೃಷ್ಟಿ ಎನ್ನುವ ಅರ್ಥವನ್ನು ನೀಡುತ್ತದೆ. ಹಾಗಾಗಿ ದೇವಿಯು ಇಡೀ ವಿಶ್ವದ ಹೊಸ ಸೃಷ್ಟಿಗೆ ಕಾರಣಳಾದಳು ಎನ್ನುವ ಸಂಕೇತವಾಗಿ ಪೂಜಿಸಲಾಗುವುದು. ಈ ದಿನ ಆಕೆಗೆ ಪ್ರಿಯವಾದ ಬೂದುಗುಂಬಳಕ್ಕೆ ಹೆಚ್ಚಿನ ಮಹತ್ವವಿದೆ. ಆಕೆ ತನ್ನ ಎಂಟು ಕೈಗಳಲ್ಲಿ ಕಮಂಡಲು, ಧನುಷ, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆಯನ್ನು ಹಿಡಿದ್ದಾಳೆ.

ನವರಾತ್ರಿಯ 5ನೇ ದಿನ

ನವರಾತ್ರಿಯ 5ನೇ ದಿನ

ನವರಾತ್ರಿಯ 5ನೇ ದಿನ "ಸ್ಕಂದ ಮಾಲಾ" ಅವತಾರವನ್ನು ಪೂಜಿಸಲಾಗುವುದು. ದೇವಿಯ ಇನ್ನೊಂದು ಹೊಸ ರೂಪವಿದು. ದೇವತೆಗಳ ಸೈನಿಕ ದಳದ ತಾಯಿ ಎನ್ನುವ ಅರ್ಥವನ್ನು ಈ ಅವತಾರ ನೀಡುತ್ತದೆ.

ನವರಾತ್ರಿಯ 6ನೇ ದಿನ

ನವರಾತ್ರಿಯ 6ನೇ ದಿನ

ಆರನೆಯ ದಿನದಂದು ದುರ್ಗೆಯು 'ಕಾತ್ಯಾಯನಿ' ಯ ರೂಪ ಧರಿಸುತ್ತಾಳೆ. ನಾಲ್ಕು ಭುಜಗಳುಳ್ಳ ದುರ್ಗೆ ಇಂದೂ ಸಿಂಹದ ಮೇಲೆ ಕುಳಿತಿದ್ದು ಆಕೆಯ ವರ್ಣ ಬಂಗಾರದ್ದಾಗಿರುತ್ತದೆ. ಮುಖದಲ್ಲಿ ಮಂದಹಾಸವಿದ್ದು ಮೂರು ಕಣ್ಣುಗಳಿವೆ. ಎಡಬದಿಯ ಎರಡು ಕೈಗಳಲ್ಲಿ ಕಮಲ ಮತ್ತು ಖಡ್ಗ ಹಿಡಿದಿದ್ದು ಬಲ ಎರಡೂ ಕೈಗಳು ಅಭಯವನ್ನು ಸೂಚಿಸುತ್ತವೆ.

ನವರಾತ್ರಿಯ 7ನೇ ದಿನ

ನವರಾತ್ರಿಯ 7ನೇ ದಿನ

ಈ ದಿನ ದುರ್ಗೆಯು ತನ್ನ ಉಗ್ರರೂಪವಾದ 'ಕಾಲರಾತ್ರಿ' ಯ ರೂಪವನ್ನು ಧರಿಸುತ್ತಾಳೆ. ಅತ್ಯಂತ ಭಯಂಕರವಾದ ಸ್ವರೂಪವುಳ್ಳವಳಾಗಿದ್ದರೂ ಯಾವಾಗಲೂ ಉಪಾಸಕನಿಗೆ ಶುಭ ಫಲವನ್ನೇ ಕರುಣಿಸುತ್ತಾಳೆ. ಆದ್ದರಿಂದಲೇ ಇವಳನ್ನು ಶುಭಂಕರೀ ಎಂದೂ ಕರೆಯುತ್ತಾರೆ. ಈ ರೂಪದಲ್ಲಿ ಆಕೆಯ ಬಣ್ಣ ಕಪ್ಪಾಗಿದ್ದು ಕೆದರಿದ ನೀಳವಾದ ಕೂದಲು, ಹೊರಬಂದ ನಾಲಿಗೆ, ನಾಲ್ಕು ಕೈಗಳಲ್ಲಿ ಬಲಗೈಯಲ್ಲಿ ಕಸಾಯಿ ಕತ್ತಿ ಮತ್ತು ದೀಪವನ್ನು ಹಿಡಿದಿದ್ದರೆ ಎಡಗೈಗಳು ಮುದ್ರೆಯ ರೂಪದಲ್ಲಿದ್ದು ಅಭಯವನ್ನು ಸೂಚಿಸುತ್ತವೆ. ಈ ರೂಪದಲ್ಲಿ ಆಕೆ ನಿಧಾನಗತಿಯ ಕತ್ತೆಯ ಮೇಲೆ ಆಸೀನಳಾಗಿದ್ದಾಳೆ. ಕತ್ತಿನಲ್ಲಿ ಮಿಂಚಿನಂತೆ ಹೊಳೆಯುತ್ತಿರುವ ಮಾಲೆಯನ್ನು ಧರಿಸಿದ್ದಾಳೆ. ಮೂರೂ ಕಣ್ಣುಗಳು ತೆರೆದಿದ್ದು ಪ್ರಖರವಾಗಿವೆ.

ನವರಾತ್ರಿಯ 8ನೇ ದಿನ

ನವರಾತ್ರಿಯ 8ನೇ ದಿನ

ಎಂಟನೆಯ ದಿನದಂದು ದುರ್ಗಾಮಾತೆ 'ಮಹಾಗೌರಿ'ಯ ರೂಪ ಧರಿಸುತ್ತಾಳೆ. ಇದು ಆಕೆಯು ಅತ್ಯಂತ ಸೌಂದರ್ಯವತಿಯಾಗಿರುವ ರೂಪವಾಗಿದೆ. ಆಕೆಯ ಬಣ್ಣ ಹಿಮದಷ್ಟು ಬೆಳ್ಳಗಾಗಿದ್ದು ಬಿಳಿಯ ಅಥವಾ ಹಸಿರು ಸೀರೆಯುಟ್ಟು ಎತ್ತಿನ ಮೇಲೆ ಆಸೀನಳಾಗಿದ್ದಾಳೆ. ನಾಲ್ಕು ಕೈ ಮತ್ತು ಮೂರು ಕಣ್ಣುಗಳಿರುವ ಈಕೆಯ ರೂಪದಲ್ಲಿ ಶಾಂತಿ ಮತ್ತು ಜ್ಞಾನವನ್ನು ಕಂಡುಕೊಳ್ಳಲಾಗುತ್ತದೆ. ಎಡಕೈಗಳಲ್ಲಿ ಡಮರುಗ ಮತ್ತು ವರದಮುದ್ರೆ ಇದ್ದರೆ ಮೇಲಿನ ಬಲಗೈಯಲ್ಲಿ ಅಭಯ ಮುದ್ರೆ, ಕೆಳಗಿನ ಬಲಗೈಯಲ್ಲಿ ತ್ರಿಶೂಲವಿದೆ. ಇವಳ ಆರಾಧನೆಯಿಂದ ಅಲೌಕಿಕ ಸಿದ್ಧಿಗಳು ಪ್ರಾಪ್ತವಾಗುತ್ತವೆ ಎಂಬ ನಂಬಿಕೆಯಿದೆ

ನವರಾತ್ರಿಯ 9ನೇ ದಿನ

ನವರಾತ್ರಿಯ 9ನೇ ದಿನ

ಈ ದಿನ ದುರ್ಗೆಯನ್ನು 'ಸಿದ್ಧಿದಾತ್ರಿ' ರೂಪದಲ್ಲಿ ಪೂಜಿಸಲಾಗುತ್ತದೆ. ಸಾಧಕರಿಗೆ ಎಲ್ಲ ರೀತಿಯ ಸಿದ್ಧಿಗಳನ್ನೂ ಕರುಣಿಸುವವಳಾದ್ದರಿಂದ ಈ ಹೆಸರು ಬಂದಿದೆ. ಮಾರ್ಕಂಡೇಯ ಪುರಾಣದಲ್ಲಿ ತಿಳಿಸಿರುವಂತೆ ಅಷ್ಟ ಸಿದ್ಧಿಗಳಾದ `ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯೋ, ಈಶಿತ್ವ ಹಾಗೂ ವಶಿತ್ವ ಮುಂತಾದ ಎಲ್ಲಾ ಸಿದ್ಧಿಗಳನ್ನೂ ದಯಪಾಲಿಸುವವಳಾಗಿದ್ದಾಳೆ. ಸಿದ್ಧಿದಾತ್ರಿಗೆ ನಾಲ್ಕು ಕೈಗಳಿವೆ. ಕಮಲ ಪುಷ್ಪದ ಮೇಲೆ ಕುಳಿತಿದ್ದು. ಚಕ್ರ, ಶಂಖ, ಗದೆ ಹಾಗೂ ಕಮಲ ಪುಷ್ಪವನ್ನು ಕೈಗಳಲ್ಲಿ ಹಿಡಿದಿದ್ದಾಳೆ. ಈ ದಿನ ಆಕೆಯನ್ನು ದೇವ, ಗಾಂಧರ್ವ, ಅಸುರ, ಯಕ್ಷ ಮತ್ತು ಸಿದ್ಧಿಯೋಗಿಗಳೂ ಪೂಜಿಸುತ್ತಾರೆ. ಈ ರೂಪದಲ್ಲಿ ಆಕೆ ಕೇವಲ ಕೆಂಪು ಬಣ್ಣದ ಸೀರೆಯುಟ್ಟುಕೊಳ್ಳುವುದು ವಿಶೇಷವಾಗಿದೆ. ಸಾಮಾನ್ಯವಾಗಿ ನವರಾತ್ರಿಯ ಪ್ರಥಮ ಆರು ದಿನಗಳಂದು ಆಯಾ ಮನೆಗಳಲ್ಲಿ ಪ್ರತ್ಯೇಕವಾಗಿ ಆಚರಿಸಲಾಗುತ್ತದೆ. ಆದರೆ ಏಳನೆಯ ದಿನದಿಂದ ಒಂಬತ್ತನೆಯ ದಿನದವರೆಗೆ ಮೂರು ದಿನಗಳ ಕಾಲ ಈ ಉತ್ಸವ ಸಾರ್ವಜನಿಕವಾಗುತ್ತದೆ. ಇದು ಊರಿನ ಹಬ್ಬವಾಗಿದ್ದು ಇಡಿಯ ಊರೇ ಈ ಮೂರೂ ದಿನಗಳಂದು ಸಂಭ್ರಮದಲ್ಲಿ ಮುಳುಗುತ್ತದೆ. ಇದರ ಮರುದಿನ, ಅಂದರೆ ಹತ್ತನೆಯ ದಿನವೇ ವಿಜಯದಶಮಿ ಅಥವಾ ದಸರಾ. ಈ ದಿನದಂದು ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ದಸರಾ ಹಬ್ಬವನ್ನು ಕರ್ನಾಟಕ ಸರ್ಕಾರವೇ ಸಾರ್ವಜನಿಕ ಹಬ್ಬದ ರೂಪದಲ್ಲಿ ಆಚರಿಸಿಕೊಂಡು ಬರುತ್ತಿದೆ.

English summary

Navaratri Special: What Each Day Of Navaratri Signifies

Among all the 9 days of navratri, each day is devoted to the 9 different forms of the deity Durga. Goddess Durga is worshipped under 9 distinct names for 9 days of Navratri. The Goddess takes up a new look, a fresh character and a new responsibility each day. This article puts emphasis on the significance and meaning of each day of navratri...
Story first published: Monday, September 4, 2017, 23:36 [IST]
Subscribe Newsletter