ಈ ಪವಿತ್ರ ಗ್ರಂಥವನ್ನು ಭಕ್ತಿಯಿಂದ ಓದಿದರೆ, ಕಷ್ಟ-ಕಾರ್ಪಣ್ಯ ನಿವಾರಣೆಯಾಗುವುದು

By: Jaya subramanya
Subscribe to Boldsky

ಹಿಂದೂ ಧರ್ಮದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಗ್ರಂಥಗಳಿಗೆ ಮಹತ್ವದ ಸ್ಥಾನವಿದೆ. ಇದರಲ್ಲಿ ಮೇಲ್‌ಪತ್ತೂರ್ ನಾರಾಯಣ ಭಟ್ಟಾದಿರಿ ರಚಿಸಿರುವ ನಾರಾಯಣೀಯಂ ಮಹತ್ವದ್ದಾಗಿದೆ. ಕೇರಳದ ಸಣ್ಣ ಗ್ರಾಮವೊಂದರಲ್ಲಿ ಜನಿಸಿದ ನಾರಾಯಣ ಭಟ್ಟಾದಿರಿ ಗುರುವಾಯೂರಿನ ಕೃಷ್ಣನ ಮಹಾನ್ ಭಕ್ತರಾಗಿದ್ದರು.

ವೇದವ್ಯಾಸರು ರಚಿಸಿರುವ ಶ್ರೀಮದ್‌ಭಾಗವತದ ಹೃದಯ ಸ್ಪರ್ಶಿ ಹಿತವಾದ ಆವೃತ್ತಿಯನ್ನು ನಾರಾಯಣರು ರಚಿಸಿದ್ದಾರೆ. ಮೂಲ ಶ್ರೀಮದ್ ಭಾಗವತದ ಸಣ್ಣ ಆವೃತ್ತಿಯಾದ ನಾರಾಯಣೀಯಂನಲ್ಲಿ ಸಣ್ಣದಾಗಿ ಸ್ಫುಟವಾಗಿ ಕೃಷ್ಣನ ಕೀರ್ತನೆಗಳನ್ನು ರಚಿಸಲಾಗಿದೆ. ಶ್ರೀಮದ್ ಭಾಗವತವು 18000 ಶ್ಲೋಕಗಳನ್ನು ಹೊಂದಿದ್ದರೆ ನಾರಾಯಣರು ರಚಿಸಿರುವ ಭಾಗವತದಲ್ಲಿ 1036 ಶ್ಲೋಕಗಳಿವೆ. 100 ಅಧ್ಯಾಯಗಳಿಂದ ಸಂಗ್ರಹಿಸಲಾದ ಶ್ಲೋಕಗಳು ಇವುಗಳಾಗಿವೆ.

ಮೂಲ ಗ್ರಂಥಕ್ಕೆ ಹೋಲಿಸಿದಾಗ ನಾರಾಯಣೀಯಂ ಅನ್ನು ಚಿಕ್ಕದಾಗಿ ರಚಿಸಲಾಗಿದೆ. ಆದರೆ ಮೂಲ ಆವೃತ್ತಿಯ ಯಾವುದೇ ತತ್ವಗಳನ್ನು ಬಿಡದೆಯೇ ಇದನ್ನು ಅನುವಾದಿಸಲಾಗಿದೆ. ನಾರಾಯಣೀಯಂ ಸಂಸ್ಕೃತದಲ್ಲಿದ್ದು ಸುಂದರವಾಗಿ ಜಾಗರೂಕವಾಗಿ ಪದಗಳನ್ನು ಆಯ್ದು ರಚಿಸಲಾಗಿದೆ. ಇದನ್ನು ಓದುವುದು ಎಂದರೆ ಶ್ರೀಕೃಷ್ಣನೇ ನಮ್ಮೊಂದಿಗೆ ಇದ್ದಾರೆ ಎಂಬ ಭಾವನೆ ನಮ್ಮಲ್ಲಿ ಬಂದುಬಿಡುತ್ತದೆ.

ಇಂದಿನ ಲೇಖನದಲ್ಲಿ ಈ ಗ್ರಂಥದ ಕುರಿತಾದ ಕೆಲವೊಂದು ಪ್ರಮುಖ ಅಂಶಗಳನ್ನು ನಿಮಗೆ ತಿಳಿಸುತ್ತಿದ್ದೇವೆ. ಈ ಮಾಹಿತಿಗಳನ್ನು ತಿಳಿದುಕೊಳ್ಳುವುದರಿಂದ ಪುಸ್ತಕವನ್ನು ಓದಬೇಕೆಂಬ ಬಯಕೆ ನಿಮ್ಮಲ್ಲಿ ಮೂಡುತ್ತದೆ. ಸಂಸ್ಕೃತದಲ್ಲಿ ಈ ಗ್ರಂಥವು ದೊರಕುತ್ತಿದ್ದು ಇದರ ಅನುವಾದವನ್ನು ನಿಮಗೆ ಓದಿ ತಿಳಿದುಕೊಳ್ಳಬಹುದಾಗಿದೆ.

ಭಗವಾನ್ ಗುರುವಾಯೂರಪ್ಪನಿಗೆ ನಾರಾಯಣೀಯಂ ಗ್ರಂಥವನ್ನು ಅರ್ಪಿಸಲಾಗಿದೆ. ಕೃಷ್ಣನ ಮೆಚ್ಚಿನವುಗಳಲ್ಲಿ ಪವಿತ್ರ ಪುಸ್ತಕ ನಾರಾಯಣೀಯಂ ಕೂಡ ಒಂದಾಗಿದೆ. ಈ ಗ್ರಂಥವನ್ನು ಶ್ರದ್ಧೆ ಭಕ್ತಿಯಿಂದ ಓದು ಭಕ್ತರಿಗೆ ಇದು ಧನಾತ್ಮಕವಾಗಿ ಕಾರ್ಯನಿರ್ವಹಿಸಲಿದೆ. ಅಂತೆಯೇ ಉತ್ತಮ ಆರೋಗ್ಯವನ್ನು ಓದುವವರಿಗೆ ನೀಡಲಿದೆ. ಈ ಗ್ರಂಥದ ಮೂಲಕ ಮಾರಾಣಾಂತಿಕ ರೋಗವನ್ನು ಗುಣಪಡಿಸಲಾಗಿದೆ. ನಾರಾಯಣರು ಈ ಗ್ರಂಥವನ್ನು ಬರೆಯುವ ಸಂದರ್ಭದಲ್ಲಿ ಕುಂಟರಾಗಿದ್ದರು ಅಂತೆಯೇ ಗ್ರಂಥವನ್ನು ಬರೆದು ಮುಗಿಸಿದ ನಂತರ ಅವರ ಅಂಗವೈಕಲ್ಯ ನಿವಾರಣೆಯಾಯಿತು. ಇವರಿಗೆ ಅಚ್ಯುತ ಪಿಶಾರಿಡಿ ಎಂಬ ಗುರುಗಳಿದ್ದರು. ಗುರುಗಳು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು.

Lord Narayana

ನಾರಾಯಣರು ಶ್ರೀಕೃಷ್ಣನನ್ನು ಪ್ರಾರ್ಥಿಸಿಕೊಂಡರು. ರೋಗ ಗುಣಮುಖರಾಗದಿದ್ದಲ್ಲಿ ಅವರಿಗೆ ಈ ರೋಗ ಬರಲಿ ಎಂಬುದಾಗಿ ಬೇಡಿಕೊಂಡರು. ಅಂತೆಯೇ ನಾರಾಯಣರು ಈ ರೋಗವನ್ನು ತಮಗೆ ತಂದುಕೊಂಡು ಗುರುಗಳನ್ನು ಗುಣಮುಖರಾಗಿಸಿದರು. ಈ ಸಂದರ್ಭದಲ್ಲಿಯೇ ಅವರು ನಾರಾಯಣೀಯಂ ಅನ್ನು ಬರೆಯಲು ಪ್ರಾರಂಭಿಸಿದರು. ಆದರೆ ಇವರ ಭಕ್ತಿಗೆ ಮೆಚ್ಚಿದ ಶ್ರೀಕೃಷ್ಣನು ಗ್ರಂಥವನ್ನು ಪೂರೈಸಿದೊಡನೆ ಅವರ ಅಂಗವೈಕಲ್ಯವನ್ನು ನಿವಾರಿಸಿದರು.

ಎಳುತಚ್ಚನ್ ಸಲಹೆಯ ಮೇರೆಗೆ ಮೇಲ್‌ಪತ್ತೂರ್ ನಾರಾಯಣೀಯಂ ಅನ್ನು ಬರೆಯಲು ಆರಂಭಿಸಿದರು. ಮಲಯಾಳಂ ಭಾಷೆಯ ಅದ್ವಿತೀಯ ಕವಿ ಎಂದಾಗಿ ಎಳುತಚ್ಚನ್ ಪ್ರಸಿದ್ಧರಾಗಿದ್ದಾರೆ. ಅವರು ಮೇಲ್‌ಪತ್ತೂರ್‌ನ ರೋಗದ ಕುರಿತು ಕೇಳಿದೊಡನೆ ಇದನ್ನು ಗುಣಪಡಿಸಿಕೊಳ್ಳಲು ಅವರು ಮೀನು ಸೇವಿಸಬೇಕು ಎಂದು ಹೇಳಿದರು. ಮೇಲ್‌ಪತ್ತೂರ್ ಸಸ್ಯಾಹಾರಿಯಾಗಿದ್ದರು ಅಂತೆಯೇ ಮಾಂಸಹಾರದ ಸೇವನೆಯನ್ನು ಸಮುದಾಯವು ನಿಷೇಧಿಸಿತ್ತು.

ಆದರೆ ಕೃಷ್ಣನನ್ನು ಕುರಿತಾಗಿ ಗ್ರಂಥವನ್ನು ಬರೆಯಲು ಎಳುತಚ್ಚನ್ ತಿಳಿಸುತ್ತಿದ್ದಾರೆ ಎಂಬುದಾಗಿ ಗ್ರಹಿಸಿಕೊಂಡು ಮೇಲ್‌ಪತ್ತೂರ್ ನಾರಾಯಣೀಯಂ ಅನ್ನು ಬರೆಯಲು ಆರಂಭಿಸಿದರು. ಗುರುವಾಯೂರಪ್ಪನ ಮತ್ಸ್ಯ ಅವತಾರದ ಕುರಿತಾಗಿ ಎಳುತಚ್ಚನ್ ನುಡಿದದ್ದನ್ನು ಮೇಲ್‌ಪತ್ತೂರ್ ಅರಿತುಕೊಂಡರು. ಇಂದಿನ ಲೇಖನದಲ್ಲಿ ನಾರಾಯಣೀಯಂ ನಲ್ಲಿ ಪ್ರಸ್ತುತಪಡಿಸಿರುವ ಒಂದೊಂದು ಅಧ್ಯಾಯದ ಕುರಿತಾದ ಸಂಕ್ಷಿಪ್ತ ವಿವರವನ್ನು ನಾವಿಲ್ಲಿ ನೀಡಿದ್ದೇವೆ. ಯಾವ ಅಧ್ಯಾಯವನ್ನು ಓದಿದರೆ ಏನು ಫಲ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

2 - ಸ್ವರ್ಗದಲ್ಲಿ ಗೌರವಾನ್ವಿತರಾಗಲು

12- ಉನ್ನತ ಸ್ಥಿತಿಯನ್ನು ಪಡೆದುಕೊಳ್ಳಲು

13, ಧನ, ದೀರ್ಘ ಜೀವನ ಮತ್ತು ಪ್ರಸಿದ್ಧಿ

15- ವಿಷ್ಣುವಿನ ಪದತಳದಲ್ಲಿರುವ ಕಮಲದಂತೆ ಸಮೀಪಿಸಲು

16- ದೀರ್ಘ ಜೀವನ, ಪಾಪಗಳನ್ನು ನಿವಾರಿಸಿಕೊಳ್ಳಲು

17- ಅಪಾಯಗಳನ್ನು ನಿವಾರಿಸಿಕೊಳ್ಳಲು

18-ಜಯ, ಮಕ್ಕಳನ್ನು ಹೊಂದಲು

19-ಲೌಕಿಕ ಕಾಮನೆಗಳಿಂದ ಮುಕ್ತಿ ಹೊಂದಲು

22- ಕೆಟ್ಟ ಕೃತ್ಯಗಳಿಗೆ ಮನಸ್ಸು ಆಕರ್ಷಗೊಳ್ಳುವುದಿಲ್ಲ

23- ಭಯದಿಂದ ಮನಸ್ಸು ಮುಕ್ತಗೊಳ್ಳುತ್ತದೆ; ಪಾಪಗಳು ಪರಿಹಾರವಾಗುತ್ತದೆ

24-ಲೌಕಿಕ ಕಾಮನೆಗಳಿಂದ ಮುಕ್ತಿ ಹೊಂದಲು

25-ಅಪಾಯಗಳಿಂದ ರಕ್ಷಣೆಯನ್ನು ಪಡೆದುಕೊಳ್ಳಲು

26-ಪಾಪಗಳಿಂದ ನಿವಾರಣೆ, ಮನಸ್ಸು ಶಾಂತಗೊಳ್ಳುತ್ತದೆ ಮತ್ತು ಅಪಾಯಗಳಿಂದ ರಕ್ಷಣೆ

27,28-ಎಲ್ಲಾ ಕೆಲಸಗಳಲ್ಲೂ ಜಯವನ್ನು ಪಡೆದುಕೊಳ್ಳಲು, ಪ್ರಸಿದ್ಧರಾಗಲು

30,31 - ಎಲ್ಲಾ ಪಾಪಗಳಿಂದ ಪರಿಹಾರವನ್ನು ಕಂಡುಕೊಂಡು ಮೋಕ್ಷ ಹೊಂದಲು

32- ಎಲ್ಲಾ ಆಸೆಗಳು ಪೂರ್ಣಗೊಳ್ಳಲು

33- ಭಕ್ತಿ ಹೆಚ್ಚಿಸಿಕೊಳ್ಳಲು

40- ಭಕ್ತಿ ಹೆಚ್ಚಿಸಿಕೊಳ್ಳಲು

51 - ಎಲ್ಲಾ ಆಸೆಗಳು ಕೈಗೂಡಲು

52-ಎಲ್ಲಾ ಆಸೆಗಳು ಕೈಗೂಡಲು

60- (1-3 ಪ್ಯಾರಾ) - ಶೀಘ್ರದಲ್ಲಿ ವಿವಾಹಿತರಾಗಲು

69- ಮಹಾನ್ ಭಕ್ತಿಯನ್ನು ಪಡೆದುಕೊಂಡು ಅಜ್ಞಾನದಿಂದ ನಾಶ ಹೊಂದಲು

80-ಪಾಪಗಳು ನಾಶಗೊಳ್ಳುತ್ತದೆ, ಗಾಳಿಮಾತುಗಳು ನಿಮ್ಮನ್ನು ಜರ್ಝರಿತರಾಗಿಸುವುದಿಲ್ಲ

82- ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದಲು

83- ಎಲ್ಲಾ ಪಾಪಗಳೂ ನಿವಾರಣೆಯಾಗುತ್ತದೆ

85- ಜೀವನದಲ್ಲಿರುವ ಸಂಕಷ್ಟಗಳು ದೂರಾಗುತ್ತದೆ

87- ಧನಕನಕವನ್ನು ಹೊಂದಬಹುದು, ಬೇರ್ಪಡಬಹುದು

88- ಸಮಸ್ಯೆಗಳು ಪರಿಹಾರಗೊಳ್ಳುತ್ತದೆ

89- (7-10 ಪ್ಯಾರಾ) ಮೋಕ್ಷವನ್ನು ಪಡೆದುಕೊಳ್ಳಲು, ಸಮಸ್ಯೆಗಳು ಉದ್ಭವಿಸದೇ ಇರಲು

97- ಲೌಕಿಕ ಸುಖದಿಂದ ಮುಕ್ತಿ ಹೊಂದಿ ಮೋಕ್ಷ ಪಡೆಯಲು

100- ದೀರ್ಘಾಯುಷ್ಯ, ಸಂತೋಷ ಮತ್ತು ಆರೋಗ್ಯವನ್ನು ಪಡೆದುಕೊಳ್ಳಲು

English summary

Narayaneeyam: The Story Of Lord Narayana

Today, we list out some of the facts that you should know about the Holy book of Narayaneeyam. These facts may inspire you to read the book yourself. Naraayaneeyam is available in its original form in Sanskrit. If you are unable to understand Sanskrit, you may also read the translations. Narayaneeyam Is Dedicated To Lord Guruvayoorappan. The temple dedicated to Lord Krishna is situated in the city of Guruvayoor.
Story first published: Thursday, June 29, 2017, 23:38 [IST]
Subscribe Newsletter