For Quick Alerts
ALLOW NOTIFICATIONS  
For Daily Alerts

ನರಕ ಚರ್ತುದಶಿ 2020: ಅಭ್ಯಂಗ ಸ್ನಾನಕ್ಕೆ ಮುಹೂರ್ತ ಹಾಗೂ ಮಹತ್ವ

|

ದೀಪಾವಳಿ ಹಬ್ಬ ಎಂದರೆ 5 ದಿನ ಸಂಭ್ರಮವೋ ಸಂಭ್ರಮ, ದೀಪಾವಳಿಯ ಸಂಭ್ರಮ ಇಂದಿನಿಂದ ಶುರುವಾಗುತ್ತದೆ. ಇಂದು ದಂತೆರೇಸ್. ಈ ದಿನ ಚಿನ್ನ, ಬೆಳ್ಳಿ ಮುಂತಾದ ವಸ್ತುವನ್ನು ಕೊಳ್ಳುವುದು ಶುಭವೆಂದು ಹೇಳಲಾಗುತ್ತದೆ, ಇದಾದ ಬಳಿಕ ನಾಳೆ ನರಕ ಚರ್ತುದಶಿ.

ಕರ್ನಾಟಕದಲ್ಲಿ ನರಕ ಚರ್ತುದಶಿ ಹಾಗೂ ಲಕ್ಷ್ಮಿ ಪೂಜೆಯನ್ನು ಪ್ರಮುಖವಾಗಿ ಆಚರಿಸಲಾಗುತ್ತದೆ. ದೀಪಾವಳಿಯಲ್ಲಿ ಎಣ್ಣೆ ಸ್ನಾನ ತುಂಬನೇ ಪ್ರಾಮುಖ್ಯತೆಯನ್ನು ಪಡೆದಿದೆ. ಇದನ್ನು ಚರ್ತುದಶಿಯಂದು ಮಾಡಲಾಗುವುದು.

ಎಣ್ಣೆ ಸ್ನಾನದ ಹಿಂದಿರುವ ಸಾಂಪ್ರದಾಯಿಕ ಹಿನ್ನೆಲೆ

ಎಣ್ಣೆ ಸ್ನಾನದ ಹಿಂದಿರುವ ಸಾಂಪ್ರದಾಯಿಕ ಹಿನ್ನೆಲೆ

ಇದರ ಪೌರಾಣಿಕ ಹಿನ್ನೆಲೆ ಬಗ್ಗೆ ಹೇಳುವುದಾದರೆ ಕೃಷ್ಣ ಹಾಗೂ ಸತ್ಯಭಾಮೆ ನರಕಾಸುರನನ್ನು ಸಂಹಾರ ಮಾಡಿ ಯುದ್ಧಭೂಮಿಯಿ೦ದ ಮರಳಿ ಬ೦ದಾಗ, ಅವರ ಶರೀರಗಳೆಲ್ಲವೂ ರಕ್ತ ಹಾಗೂ ಧೂಳಿನಿ೦ದ ಹೊಲಸಾಗಿದ್ದು, ಅವುಗಳನ್ನು ಶ್ರೀಗ೦ಧದ ಮಾರ್ಜಕ ಹಾಗೂ ಪರಿಮಳಯುಕ್ತವಾದ ಎಣ್ಣೆಯನ್ನು ಬಳಸಿಕೊ೦ಡು ಸ್ವಚ್ಛಗೊಳಿಸಿಕೊಳ್ಳುವುದು ಅವಶ್ಯವಾಗಿತ್ತು.

ಮನಸ್ಸು ಮತ್ತು ದೇಹವನ್ನು ಉಲ್ಲಾಸಗೊಳಿಸಲು ಚರ್ತುದಶಿಯಂದು ಎಣ್ಣೆ ಸ್ನಾನ ಮಾಡಲಾಗುವುದು.

ಎಣ್ಣೆ ಸ್ನಾನದ ಹಿಂದಿರುವ ವೈಜ್ಞಾನಿಕ ಕಾರಣ

ಎಣ್ಣೆ ಸ್ನಾನದ ಹಿಂದಿರುವ ವೈಜ್ಞಾನಿಕ ಕಾರಣ

ದೀಪಾವಳಿ ನಂತರ ಕೊರೆಯುವ ಚಳಿ ಶುರುವಾಗುವುದು. ಈ ಚಳಿ ಎದುರಿಸಲು ದೇಹ ಹಾಗೂ ಚರ್ಮವನ್ನು ಚಳಿಯಿಂದ ಕಾಪಾಡಲು ಈ ಎಣ್ಣೆ ಸ್ನಾನ ಸಹಾಯ ಮಾಡುತ್ತೆ. ಅಲ್ಲದೆ ಈ ಸಮಯದಲ್ಲಿ ಭತ್ತದ ಕೊಯ್ಲು ಮುಗಿದಿರುತ್ತದೆ. ಇದರ ದಣಿವಾರಲು ಹಾಹೂ ದೇಹಕ್ಕೆ ಚೈತನ್ಯ ತುಂಬಲು ಇದು ಅನುಕೂಲಕರವಾಗಿದೆ.

 ಅಭ್ಯಂಗ ಸ್ನಾನಕ್ಕೆ ಸಮಯ

ಅಭ್ಯಂಗ ಸ್ನಾನಕ್ಕೆ ಸಮಯ

ಅಭ್ಯಂಗ ಸ್ನಾನವನ್ನು ಮುಂಜಾನೆ ಮಾಡಬೇಕು.

ನರಕ ಚರ್ತುದಶಿ ಶನಿವಾರ ನವೆಂಬರ್ 14

ಅಭ್ಯಂಗ ಸ್ನಾನಕ್ಕೆ ಸಮಯ:ಬೆಳಗ್ಗೆ 05:22:59 ಪ್ರಾರಂಭವಾಗಿ 06:43:18

ಕಾಲಾವಧಿ: 1 ಗಂಟೆ 20 ನಿಮಿಷ

ಅಭ್ಯಂಗ ಸ್ನಾನಕ್ಕೆ ಪಾಲಿಸುವ ಕ್ರಮಗಳು

ಅಭ್ಯಂಗ ಸ್ನಾನಕ್ಕೆ ಪಾಲಿಸುವ ಕ್ರಮಗಳು

ತ್ರಯೋದಶಿ ಅಂದರೆ ಇಂದು ಬಚ್ಚಲು ಮನೆಯ ನೀರಿನ ಹಂಡೆಗೆ ರಂಗೋಲಿ ಬಿಡಿಸಿ ಹೂವಿನ ಹಾರ ಹಾಕಿ, ನೀರು ತುಂಬಿ ಜಾಗಟೆ ಬಡಿದು ಪೂಜೆ ಮಾಡಬೇಕು. ಚಿಕ್ಕ ಮಕ್ಕಳನ್ನು ಸಂಜೆಯೇ ಮಾಡಿಸುತ್ತಾರೆ. ಬೆಳಗ್ಗೆ ಮೈಗೆ ಎಣ್ಣೆ ಹಚ್ಚಿ ಬಿಸಿ- ಬಿಸಿ ನೀರು ಹಾಕಿ ಹೊಸ ಬಟ್ಟೆ ತೊಡುವ ಸಂಪ್ರದಾಯವಿದೆ.

English summary

Naraka Chaturdashi 2020 Date, Muhurat Timing ,Puja Vidhi And Significance

Here are Narak Chaturdashi 2020 Date, Muhurat Timing ,Puja Vidhi And Significance, have a look,
X
Desktop Bottom Promotion