For Quick Alerts
ALLOW NOTIFICATIONS  
For Daily Alerts

ರುದ್ರಾಕ್ಷ ಮಣಿ ಬಳಸುವುದಾದರೆ ತಿಳಿಯಲೇಬೇಕಾದ ಸಂಗತಿಗಳು

|

ರುದ್ರಾಕ್ಷಿಯನ್ನು ಶಿವನ ಮೂರನೇ ಕಣ್ಣೆಂದೇ ಹೇಳಲಾಗುತ್ತದೆ. ಪೂಜೆ ಪುರಸ್ಕಾರಗಳಲ್ಲೂ ರುದ್ರಾಕ್ಷಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ರುದ್ರಾಕ್ಷಿಯನ್ನು ಕೊರಳ ಮಣಿಯಾಗಿ ಹಾಗೂ ಜಪ ಮಾಲೆಯಾಗಿ ಉಪಯೋಗಿಸಲಾಗುವುದು.

ಇದರ ಕುರಿತ ಅನೇಕ ಕತೆಗಳನ್ನು, ನಂಬಿಕೆಗಳನ್ನು ನೀವು ಕೇಳಿರಬಹುದು. ಅವರು ಧರಿಸ ಬಾರದು, ಇವರು ಧರಿಸಬಾರದು ಎಂದೆಲ್ಲಾ ಕೂಡ ಕೇಳಿರಬಹುದು. ನಾವಿಲ್ಲಿ ರುದ್ರಾಕ್ಷಿ ಕುರಿತು ನೀವು ತಿಳಿಯಲೇಬೇಕಾದ ಸಂಗತಿಗಳ ಬಗ್ಗೆ ಹೇಳಿದ್ದೇವೆ ನೋಡಿ:

ರುದ್ರಾಕ್ಷಿ ಎಂದರೇನು?

ರುದ್ರಾಕ್ಷಿ ಎಂದರೇನು?

ರುದ್ರಾಕ್ಷಿಯು ರುದ್ರಾಕ್ಷ ಮರದ ಒಣ ಬೀಜವಾಗಿದೆ. ಈ ಮರ ಪರ್ವತ ಪ್ರದೇಶಗಳಲ್ಲಿ ಬೆಳೆಯುತ್ತದೆ. ಹಿಮಾಲಯ, ನೇಪಾಳ, ಬರ್ಮಾ, ಥೈಲ್ಯಾಂಡ್, ಇಂಡೋನೇಷಿಯಾದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ರುದ್ರಾಕ್ಷಿಗಳನ್ನು ರೇಷ್ಮೆ ನೂಲು ಅಥವಾ ಹತ್ತಿಯ ನೂಲಿನಲ್ಲಿ ಪೋಣಿಸಿ ಮಾಲೆಯಾಗಿ ಧರಿಸಲಾಗುವುದು.

ರುದ್ರಾಕ್ಷಿಯ ಮಹತ್ವವೇನು?

ಸಾಂಪ್ರದಾಯಿಕವಾಗಿ ರುದ್ರಾಕ್ಷಿಯನ್ನು ಸಂನ್ಯಾಸಿಗಳು, ಋಷಿಗಳು ಧರಿಸುತ್ತಾರೆ. ಈ ಮಣಿಗಳು ಮನಸ್ಸನ್ನು ನಿಯಂತ್ರಿಸಲು ಸಹಕಾರಿ. ರುದ್ರಾಕ್ಷಿಯನ್ನು ಧರಿಸಿದಾಗ ಏಕಾಗ್ರತೆಗೆ ಸಹಕಾರಿ.

ಎಲ್ಲರೂ ರುದ್ರಾಕ್ಷಿ ಧರಿಸಬಹುದೇ?

ಹೌದು, ಜಾತಿ-ಧರ್ಮ, ಲಿಂಗ ಬೇಧವಿಲ್ಲದೆ ಯಾರು ಬೇಕಶದರೂ ರುದ್ರಾಕ್ಷಿ ಧರಿಸಬಹುದು. ರುದ್ರಾಕ್ಷಿಯ ಶಕ್ತಿಯ ಬಗ್ಗೆ ನಂಬಿಕೆ ಇರುವ, ಇಚ್ಛೆ ಪಡುವ ಯಾರು ಬೇಕಾದರೂ ಈ ರುದ್ರಾಕ್ಷಿ ಮಣಿ ಧರಿಸಬಹುದು.

 ರುದ್ರಾಕ್ಷಿ ಅಧಿಕ ರಕ್ತದೊತ್ತಡ ನಿಯಂತ್ರಿಸುವುದೇ?

ರುದ್ರಾಕ್ಷಿ ಅಧಿಕ ರಕ್ತದೊತ್ತಡ ನಿಯಂತ್ರಿಸುವುದೇ?

ರುದ್ರಾಕ್ಷಿ ಮಣಿ ಧರಿಸಿದಾಗ ಇದು ಅಧಿಕ ರಕ್ತದೊತ್ತಡ ನಿಯಂತ್ರಿಸುತ್ತದೆ ಎಂಬುವುದು ಅನೇಕರ ಅನುಭವದ ಮಾತಾಗಿದೆ. ರುದ್ರಾಕ್ಷಿಯನ್ನು ಪ್ರತ್ಯೇಕ ಚಿಕಿತ್ಸೆಯಲ್ಲೂ ಬಳಸಲಾಗುವುದು. ಮೂರು ಮುಖದ ಅಥವಾ 5 ಮುಖದ ರುದ್ರಾಕ್ಷಿಯನ್ನು ರಾತ್ರಿ ಒಂದು ಲೋಟ ಶುದ್ಧ ನೀರಿನಲ್ಲಿ ಹಾಕಿಡಬೇಕು. ಇದನ್ನು ಮಾರನೇಯ ದಿನ ಬೆಳಗ್ಗೆ ಬೇಗನೆ ಎದ್ದು ಹಲ್ಲುಜ್ಜುವ ಮೊದಲೇ ಕುಡಿಯಬೇಕು. ಹೀಗೆ ಮಾಡುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿಯಾಗಿದೆ.

ರುದ್ರಾಕ್ಷಿಯನ್ನು ಹಿಂದೂಗಳು ಮಾತ್ರ ಧರಿಸಬೇಕೆ?

ಮೊದಲೇ ಹೇಳಿದಂತೆ ರುದ್ರಾಕ್ಷಿಯನ್ನು ಯಾರು ಬೇಕಾದರೂ ಧರಿಸಬಹುದು. ಧರಿಸುವವರಿಗೆ ಅದರ ಮಹತ್ವ ತಿಳಿದಿದ್ದರೆ, ಅದರ ಮೇಲೆ ನಂಬಿಕೆಯಿದ್ದರೆ ರುದ್ರಾಕ್ಷಿ ಧರಿಸಿದರೆ ಅದರ ಪ್ರಯೋಜನ ಪಡೆಯಬಹುದು.

ರುದ್ರಾಕ್ಷಿಯನ್ನು ಧ್ಯಾನ ಮಾಡಲು ಮಾತ್ರ ಬಳಸಬೇಕೆ?

ರುದ್ರಾಕ್ಷಿಯನ್ನು ಧ್ಯಾನ ಮಾಡಲು ಮಾತ್ರ ಬಳಸಬೇಕೆ?

ಇದನ್ನು ಧರಿಸುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚಾಗುವುದರಿಂದ ಎಲ್ಲಾ ಯಾರು ಬೇಕಾದರೂ ಧರಿಸಬಹುದು. ಇದು ನಮ್ಮ ದಿನನಿತ್ಯದ ಜೀವನದಲ್ಲಿ ಉಂಟಾಗುವ ಮಾನಸಿಕ ಒತ್ತಡ ಕಡಿಮೆ ಮಾಡಲು, ನಮ್ಮಲ್ಲಿ ಧನಾತ್ಮಕ ಶಕ್ತಿ ಮೂಡಲು ಸಹಕಾರಿಯಾಗಿದೆ. ಜನರು ಹಲವು ಬಗೆಯ ರುದ್ರಾಕ್ಷಿ ಧರಿಸುತ್ತದೆ. ಏಕ ಮುಖ ರುದ್ರಾಕ್ಷಿಯಿಂದ ಹಿಡಿದು 21 ಮುಖದ ರುದ್ರಾಕ್ಷಗಳಿವೆ. ರುದ್ರಾಕ್ಷಿ ಅಕಾಲಿಕ ಮುಪ್ಪು ತಡೆಗಟ್ಟುತ್ತದೆ, ಮನಸ್ಸನ್ನು ಶಾಂತವಾಗಿ ಇಡುತ್ತದೆ.

ಬೇರೆ-ಬೇರೆ ಮುಖದ ರುದ್ರಾಕ್ಷಗಳನ್ನು ಜೊತೆಗೆ ಧರಿಸಬಹುದೇ?

ಬೇರೆ-ಬೇರೆ ಮುಖದ ರುದ್ರಾಕ್ಷಿಗಳನ್ನು ಧರಿಸಬಹುದು. ರುದ್ರಾಕ್ಷಿಯನ್ನು ಚಿನ್ನ ಅಥವಾ ಬೆಳ್ಳಿ ಅಥವಾ ತಾಮ್ರ ಇದರಲ್ಲಿ ಯಾವುದಾದರೂ ಒಂದರಲ್ಲಿ ಸರ ಮಾಡಿ ಧರಿಸಬಹುದು.

ಯಾವ ಮುಖದ ರುದ್ರಾಕ್ಷಿ ಧರಿಸಬೇಕು ಎಂದು ನಿರ್ಧರಿಸುವುದು ಹೇಗೆ?

ಯಾವ ಮುಖದ ರುದ್ರಾಕ್ಷಿ ಧರಿಸಬೇಕು ಎಂದು ನಿರ್ಧರಿಸುವುದು ಹೇಗೆ?

ಪಂಚಮುಖಿ ರುದ್ರಾಕ್ಷಿ: ಐದು ಮುಖದ ರುದ್ರಾಕ್ಷಿ ಮಣಿಯನ್ನು 14 ವರ್ಷ ಮೇಲ್ಪಟ್ಟವರು ಧರಿಸಬಹುದು. ಇದು ಆಂತರಿಕ ಶುದ್ಧತೆ ಹೆಚ್ಚಿಸುತ್ತೆ.

ದ್ವಿಮುಖಿ: ಎರಡು ಮುಖದ ರುದ್ರಾಕ್ಷಿಯನ್ನು ವಿವಾಹಿತರು ಧರಿಸಬಹುದು. ಇದರಿಂದ ಗಂಡ-ಹೆಂಡತಿ ಸಂಬಂಧ ಅನ್ಯೂನ್ಯವಾಗಿರುತ್ತೆ.

ಷಣ್ಮುಖಿ: 6 ಮುಖದ ರುದ್ರಾಕ್ಷಿಯನ್ನು 14 ವರ್ಷದ ಕೆಲಗಿನವರು ಧರಿಸಬಾರದು. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿ.

ಗೌರಿ ಶಂಕರ್: ಈ ರುದ್ರಾಕ್ಷಿಯನ್ನು 14 ವರ್ಷ ಮೇಲ್ಪಟ್ಟವರು ಧರಿಸಬಹುದು.

 ರುದ್ರಾಕ್ಷಿಯನ್ನು ಸ್ವಚ್ಛ ಮಾಡುವುದು ಹೇಗೆ?

ರುದ್ರಾಕ್ಷಿಯನ್ನು ಸ್ವಚ್ಛ ಮಾಡುವುದು ಹೇಗೆ?

ರುದ್ರಾಕ್ಷಿ ಮಣಿ ಸರವನ್ನು ಪ್ರತೀ ಆರು ತಿಂಗಳಿಗೊಮ್ಮೆ ಸ್ವಚ್ಛ ಮಾಡಬೇಕು. ಮೊದಲಿಗೆ ರುದ್ರಾಕ್ಷಿ ಮಣಿಗಳನ್ನು ಶುದ್ಧ ತುಪ್ಪದಲ್ಲಿ 24 ಗಂಟೆ ಹಾಕಿಡಬೇಕು. ನಂತರ ಅದನ್ನು ಶುದ್ಧ ಹಾಲಿನಲ್ಲಿ 24 ಗಂಟೆ ಹಾಕಿಡಬೇಕು, ನಂತರ ಶುದ್ಧವಾದ ನೀರಿನಿಂದ ತೊಳೆದು, ಮೃದುವಾದ ಶುದ್ಧ ಬಟ್ಟೆಯಿಂದ ಒರೆಸಬೇಕು. ಇವುಗಳನ್ನು ಸೋಪ್ ಅಥವಾ ಇತರ ಸ್ವಚ್ಛತಾ ಸಾಮಗ್ರಿ ಬಳಸಿ ತೊಳೆಯಬಾರದು.

ರುದ್ರಾಕ್ಷಿ ಮಣಿಗಳನ್ನು ಈ ರೀತಿ ಸ್ವಚ್ಚ ಮಾಡುವುದರಿಂದ ಆ ಮಣಿಗಳು ಮತ್ತಷ್ಟು ಆಕರ್ಷಕವಾಗಿ ಕಾಣುವುದು.

ರುದ್ರಾಕ್ಷಿ ಮಣಿಯ ಪ್ರಭಾವ ನಿಮ್ಮ ಮೇಲೆ ಬೀರಲು ಎಷ್ಟು ಸಮಯ ಬೇಕು?

ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತೆ. ಅದು ಅವರ ದೇಹ, ಔರಾ ಅದಕ್ಕೆ ಅನುಸಾರವಾಗಿ ಭಿನ್ನವಾಗಿರುತ್ತದೆ. ಕೆಲವರಿಗೆ ಧರಿಸಿದ ತಕ್ಷಣ ಪ್ರಯೋಜನ ಕಂಡು ಬಂದರೆ ಇನ್ನು ಕೆಲವರಿಗೆ ಸ್ವಲ್ಪ ಸಮಯ ಹಿಡಿಯಬಹುದು. ರುದ್ರಾಕ್ಷಿ ಮಾಲೆ ಧರಿಸಿದರೆ ಅದರ ಪ್ರಭಾವ ಗೋಚರಿಸಲು 45-60 ದಿನ ಕಾಯಬೇಕಾಗಬಹುದು.

ರುದ್ರಾಕ್ಷಿ ಮಾಲೆಯನ್ನು ಮಹಿಳೆಯರು ಧರಿಸಬಹುದೇ?

ರುದ್ರಾಕ್ಷಿ ಮಾಲೆಯನ್ನು ಮಹಿಳೆಯರು ಧರಿಸಬಹುದೇ?

ಮಹಿಳೆಯರು ಧರಿಸಬಹುದು, ಆದರೆ ಮುಟ್ಟಿನ ಸಮಯದಲ್ಲಿ ಪ್ರಕೃತ್ತಿ ತನ್ನ ಕಾರ್ಯ ಮಾಡುವಾಗ ಇದನ್ನು ಧರಿಸಬೇಡಿ.

ಸಾವು ಮನೆಗೆ ಹೋಗುವಾಗ ಧರಿಸಬೇಡಿ

ರುದ್ರಾಕ್ಷಿ ಮಾಲೆಯನ್ನು ಸಾವು ಮನೆಗೆ ಹೋಗುವಾಗ ಧರಿಸಬೇಡಿ.

ರುದ್ರಾಕ್ಷಿ ಮಾಲೆ ಎಷ್ಟು ಸಮಯ ಬಳಸಬಹುದು?

ರುದ್ರಾಕ್ಷಿ ಮಾಲೆ ಎಷ್ಟು ಸಮಯ ಬಳಸಬಹುದು?

ರುದ್ರಾಕ್ಷಿ ಮಣಿಯನ್ನು ವರ್ಷಗಳ ಕಾಲ ಬಳಸಬಹುದು. ಅನೇಕ ತಲೆಮಾರುವರೆಗೆ ಇದನ್ನು ಬಳಸಬಹುದು.

ಒಂದು ಜಪ ಮಾಲೆ ಮಾಲೆಯನ್ನು ಎಲ್ಲರೂ ಬಳಸಬಹುದೇ?

ಒಬ್ಬರು ಬಳಸಿದ ಜಪ ಮಾಲೆ ಅಥವಾ ಸರವನ್ನು ಅವರೇ ಬಳಸುವುದು ಸೂಕ್ತ. ಅಲ್ಲದೆ ನೋವು ಇಚ್ಛೆಪಟ್ಟರೆ ಮುಂದಿನ ತಲೆಮಾರಿನವರಿಗೆ ನೀಡಬಹುದು.

English summary

Myths vs Facts Surrounding Rudraksha in Kannada

Myths vs Facts Surrounding Rudraksha, Read on,
X
Desktop Bottom Promotion