ಅನಂತ ಪದ್ಮನಾಭ ಸ್ವಾಮಿ ದೇವಾಲಯ ಆ ಕಡೆಯ ಬಾಗಿಲಿನ ರಹಸ್ಯ!

By: Arshad
Subscribe to Boldsky

ಭಗವಂತ ವಿಷ್ಣುವಿಗೆ ಮುಡಿಪಾಗಿರುವ ಪದ್ಮನಾಭಸ್ವಾಮಿ ದೇವಾಲಯ ಕೇರಳದ ತಿರುವನಂತಪುರದಲ್ಲಿದೆ. ತಿರುವಾಂಕೂರು ಜಿಲ್ಲೆಯ ರಾಜಮನೆತನ ಇಂದಿಗೂ ಈ ದೇವಸ್ಥಾನದ ಒಡೆತನವನ್ನು ಹೊಂದಿದೆ. ಖ್ಯಾತ ಸಂತ ಕುಲಶೇಖರ ಅಲ್ವಾರ್ ರವರ ವಂಶಸ್ಥರು ಹಾಗೂ ತಿರುವಾಂಕೂರು ಪ್ರಾಂತದ ಮಹಾರಾಜರು ಈ ದೇವಾಲಯದ ಸುಪರ್ದಿಯನ್ನು ಪಡೆದಿದ್ದಾರೆ. ಕಳೆದ ವರ್ಷ ಇದರ ನೆಲಮಹಡಿಯಲ್ಲಿರುವ ನಿಗೂಢ ಕೋಣೆಗಳ ಬಾಗಿಲನ್ನು ತೆರೆದು ಸ್ವರ್ಣದ ಭಂಡಾರವಿರುವುದನ್ನು ಕಂಡುಕೊಳ್ಳಲಾಗಿತ್ತು.

ಮೂಲತಃ ಈ ದೇವಸ್ಥಾನ ತಿರುವತ್ತರ್ ನಲ್ಲಿರುವ ಪ್ರಖ್ಯಾತ ಶ್ರೀ ಆದಿಕೇಶವಪೆರುಮಾಳ ದೇವಾಲಯದ ವಾಸ್ತುಶಿಲ್ಪವನ್ನು ಹೋಲುತ್ತದೆ. ಈ ದೇವಾಲಯದ ಉಪಸ್ಥಿತಿಯಿಂದಾಗಿಯೇ ಈ ನಗರಕ್ಕೆ ತಿರುವನಂತಪುರಂ ಎಂಬ ಹೆಸರು ಲಭ್ಯವಾಗಿದ್ದು ಈಗ ಕೇರಳ ರಾಜ್ಯದ ರಾಜಧಾನಿಯೂ ಆಗಿದೆ. ಆದರೆ ಈ ದೇವಾಲಯ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚಿನ ಜನಪ್ರಿಯತೆ ಪಡೆದಿರುವುದು ತನ್ನ ಧಾರ್ಮಿಕ ಕಾರಣಗಳಿಗಲ್ಲ, ಬದಲಿಗೆ ಇದರ ಒಡಲಲ್ಲಿರುವ ಚಿನ್ನಕ್ಕಾಗಿ.

ಶ್ರೀಮಂತ ದೇವಾಲಯಗಳು: ಇಲ್ಲಿ ಧನ ಸಂಪತ್ತು ತುಂಬಿ ತುಳುಕುತ್ತಿದೆ!

ಈ ಭಂಡಾರವನ್ನು ನಿಗೂಢ ಹಾಗೂ ಬೇಧಿಸಲು ಅಸಾಧ್ಯವೆನಿಸುವ ತಿಜೋರಿಗಳಲ್ಲಿ ರಕ್ಷಿಸಿಡಲಾಗಿದ್ದು ಇದನ್ನು ಮಾನವ ಮಾತ್ರದವರು ತೆರೆಯಲು ಅಸಾಧ್ಯವೆಂಬಂತೆ ನಿರ್ಮಿಸಲಾಗಿದೆ. ಬನ್ನಿ, ಈ ದೇವಾಲಯದ ಬಗ್ಗೆ ಹಾಗೂ ನಿಗೂಢ ತಿಜೋರಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ....

ಮಲಗಿದ ಭಂಗಿ

ಮಲಗಿದ ಭಂಗಿ

ಈ ದೇವಾಲಯದ ಗರ್ಭಗುಡಿಯಲ್ಲಿ ಭಗವಂತ ವಿಷ್ಣು ಅಥವಾ ಪದ್ಮನಾಭಸ್ವಾಮಿ "ಅನಂತ-ಶಯನಂ" ಅಥವಾ ಅನಂತನೆಂಬ ಸರ್ಪದ ಮೇಲೆ ಯೋಗ ನಿದ್ರೆಯ ಭಂಗಿಯಲ್ಲಿ ಪವಡಿಸಿದಂತೆ ವಿಗ್ರಹವನ್ನು ಕೆತ್ತಲಾಗಿದೆ. ಈ ದೇವಸ್ಥಾನದ ಒಡೆತನ ಹೊಂದಿರುವ ತಿರುವಾಂಕೂರು ಮಹಾರಾಜರು "ಶ್ರೀ ಪದ್ಮನಾಭಾದಸ" ಅಥವಾ ಪದ್ಮನಾಭಸ್ವಾಮಿಯ ಸೇವಕ ಎಂಬ ಬಿರುದು ಪಡೆದಿರುತ್ತಾರೆ.

PC: Offcial Site

ಪವಿತ್ರ ಆಸ್ಥಾನ

ಪವಿತ್ರ ಆಸ್ಥಾನ

ಭಗವಂತ ವಿಷ್ಣುವಿಗೆ ಈ ಜಗತ್ತಿನಲ್ಲಿ ನೂರಾ ಎಂಟು ದಿವ್ಯ ದೇಸಂ ಅಥವಾ ಪವಿತ್ರ ಆಸ್ಥಾನಗಳಿವೆ. ಈ ದೇವಾಲಯ ಇವುಗಳಲ್ಲೊಂದಾಗಿದ್ದು ವಿಷ್ಣುವನ್ನು ಆರಾಧಿಸುವ ಪ್ರಮುಖ ಕೇಂದ್ರವಾಗಿದೆ. ಈ ದೇವಾಲಯದಲ್ಲಿ ಬಳಸಲಾಗಿರುವ ದಿವ್ಯ ಪ್ರಬಂಧ ಅಥವಾ ಸುಮಾರು ಆರರಿಂದ ಒಂಭತ್ತನೆಯ ಶತಮಾನದಲ್ಲಿ ತಮಿಳು ಆಳ್ವಾರ್ ಸಂತರು ಬರೆದಿರುವ ಪ್ರಾಚೀನ ತಮಿಳು ಲಿಪಿಯ ಮಾಹಿತಿ ಅತಿ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ಆ ಸಮಯದಿಂದಲೂ ಹಲವು ಬದಲಾವಣೆಗಳನ್ನು ಪಡೆಯುತ್ತಾ ಹದಿನಾರನೇ ಶತಮಾನದಲ್ಲಿ ಈಗ ಇರುವ ಭವ್ಯ ಗೋಪುರವನ್ನು ಸ್ಥಾಪಿಸಲಾಗಿತ್ತು.

ಸರ್ಪದ ಮೇಲೆ ಪವಡಿಸಿದ ಭಗವಂತ

ಸರ್ಪದ ಮೇಲೆ ಪವಡಿಸಿದ ಭಗವಂತ

ಈ ದೇವಾಲಯದ ಗರ್ಭಗುಡಿಯಲ್ಲಿ ಭಗವಂತ ಪದ್ಮನಾಭ ಅನಂತ ಅಥವಾ ಆದಿಶೇಷ ಎಂಬ ಸರ್ಪದ ಮೇಲೆ ನಿರಾಳನಾಗಿ ಪವಡಿಸಿದ್ದಾನೆ. ಈ ಸರ್ಪಕ್ಕೆ ಐದು ಹೆಡೆಗಳಿದ್ದು ಒಳಮುಖವಾಗಿ ಬಾಗಿವೆ ಅಂದರೆ ದೇವರಿಗೆ ಶರಣಾಗತವಾಗಿದೆ ಎಂದು ತೋರ್ಪಡಿಸುತ್ತದೆ. ಭಗವಂತನ ಬಲಗೈ ಶಿವಲಿಂಗದ ಮೇಲೆ ಇದೆ.

ಪದ್ಮನಾಭನೆಂಬ ಹೆಸರು ಬರಲು ಕಾರಣ

ಪದ್ಮನಾಭನೆಂಬ ಹೆಸರು ಬರಲು ಕಾರಣ

ಈ ದೇವಾಲಯಕ್ಕೆ ಪದ್ಮನಾಭನೆಂಬ ಹೆಸರು ಬರಲು ಬ್ರಹ್ಮದೇವ ಕುಳಿತಿರುವ ಕಮಲ ಅಥವಾ ಪದ್ಮ ಹಾಗೂ ವಿಷ್ಣುವಿನ ನಾಭಿಯಿಂದ ಹೊರಟಿರುವುದೇ ಕಾರಣವಾಗಿದೆ.

ನಿಗೂಢ ಕೋಣೆ!

ನಿಗೂಢ ಕೋಣೆ!

ಈ ದೇವಸ್ಥಾನದ ನೆಲಮಹಡಿಯಲ್ಲಿ ಆರು ನಿಗೂಢ ಕೋಣೆಗಳು ಅಥವಾ ಕಲ್ಲಾರ ಗಳಿವೆ. ಇದರಲ್ಲಿ ಎರಡನೆಯ (ಚೇಂಬರ್ ಬಿ) ಅಥವಾ ಭರತಕ್ಕೋನ್ ಕಲ್ಲಾರ ಪದ್ಮನಾಭ ಸ್ವಾಮಿಯ ವಿಗ್ರಹಕ್ಕೆ ಅತಿ ಸಮೀಪದಲ್ಲಿದೆ. ಆದರೆ ಈ ಕೋಣೆ ದೇವಾಲಯದ ಭಂಡಾರಕ್ಕೆ ಸೇರಿಲ್ಲ. ಪವಿತ್ರ ಕೋಣೆಯಲ್ಲಿ ಶ್ರೀಚಕ್ರಂ ಅಥವಾ ಪದ್ಮನಾಭಸ್ವಾಮಿಯ ಇನ್ನೊಂದು ವಿಗ್ರಹ ಹಾಗೂ ಹಲವಾರು ಬೆಲೆಬಾಳುವ ವಸ್ತುಗಳನ್ನಿರಿಸಲಾಗುತ್ತದೆ.

ಈ ನಿಗೂಢ ಕೋಣೆಗಳನ್ನು ತೆರೆದಾಗ

ಈ ನಿಗೂಢ ಕೋಣೆಗಳನ್ನು ತೆರೆದಾಗ

2011ರಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಈ ದೇವಸ್ಥಾನಕ್ಕೆ ಏಳು ಸದಸ್ಯರ ಸಮಿತಿಯೊಂದನ್ನು ಕಳುಹಿಸಿತು. ಈ ದೇವಾಲಯದ ಪ್ರಧಾನ ಟ್ರಸ್ಟ್ರೀ ಹಾಗೂ ತಿರುವಾಂಕೂರು ಸಂಸ್ಥಾನದ ಪ್ರಧಾನ ಧರ್ಮದರ್ಶಿಗಳ ಉಪಸ್ಥಿತಿಯಲ್ಲಿ ಈ ದೇವಾಲಯದ ಆರು ಕೋಣೆಗಳ ಬಾಗಿಲುಗಳನ್ನು ತೆರೆಯಲಾಯಿತು.

ಭೂಗತ ಸಂಪತ್ತು ಅನಾವರಣ

ಭೂಗತ ಸಂಪತ್ತು ಅನಾವರಣ

ಈ ಬಾಗಿಲುಗಳನ್ನು ತೆರೆದಾಗ ಆಗಾಧ ಪ್ರಮಾಣದ ಚಿನ್ನದ ಆಭರಣ, ಪಾತ್ರೆಗಳು, ಕಲಾಕೃತಿಗಳು, ಆಯುಧಗಳು, ಚಿನ್ನದ ಆನೆ, ವಜ್ರದ ಸರ ಮೊದಲಾದ ಸುಮಾರು ಐನೂರು ಕೇಜಿಗೂ ಹೆಚ್ಚಿನ ಚಿನ್ನದ ಹಾಗೂ ಹದಿನೆಂಟು ಅಡಿ ಉದ್ದದ ಚೀಲಗಳ ಭರ್ತಿ ಚಿನ್ನದ ನಾಣ್ಯಗಳಿರುವುದು ಪತ್ತೆಯಾಯಿತು. ಈ ನಾಣ್ಯಗಳು ಕೇವಲ ಭಾರತದ್ದು ಮಾತ್ರವಲ್ಲ, ಬದಲಿಗೆ ಹಲವು ದೇಶಗಳ ಮೊಹರನ್ನು ಹೊಂದಿದೆ.

ಕೋಣೆಗಳ ಹೆಸರು

ಕೋಣೆಗಳ ಹೆಸರು

ಈ ಕೋಣೆಗಳಿಂದ ಲಭ್ಯವಾದ ಸಂಪತ್ತಿನ ವಿವರಗಳನ್ನು ಬರೆದುಕೊಳ್ಳಲು ಸುಲಭವಾಗುವಂತೆ ಕೋಣೆ ಎ,ಬಿ,ಸಿ,ಡಿ,ಇ,ಎಫ್ ಎಂದು ನಾಮಕರಣ ಮಾಡಲಾಗಿದೆ. ಈ ಕೋಣೆಗಳ ಹೊರತಾಗಿ ದೇವಾಲಯದಲ್ಲಿರುವ ಇತರ ಕೋಣೆಗಳನ್ನು ವರ್ಷದಲ್ಲಿ ಎಂಟು ಬಾರಿ ವಿವಿಧ ಕಾರಣಗಳಿಗಾಗಿ ತೆರೆಯಲಾಗುತ್ತದೆ. ಈ ಕೋಣೆ ಹಾಗೂ ಇದರಲ್ಲಿರುವ ಸಂಪತ್ತಿನ ಬಗ್ಗೆ ಭಾರತದ ಖ್ಯಾತ ಜ್ಯೋತಿಷಿಗಳೂ ಹಾಗೂ ಟ್ರಸ್ಟ್ ನ ಸದಸ್ಯರು ಹೇಳುವಂತೆ, ಈ ಸಂಪತ್ತು ಕೋಣೆಯೊಳಗೆ ಬಂಧಿತವಾಗಿದ್ದರೇ ಸುರಕ್ಷಿತ, ಇದನ್ನು ಹೊರತೆಗೆಯುವುದು ಅಪಾಯಕರ.

ನಿಗೂಢ ಕೋಣೆ

ನಿಗೂಢ ಕೋಣೆ

ಇದರಲ್ಲಿರುವ ಎರಡನೆ ಅಥವಾ ಬಿ. ಕೋಣೆಯಲ್ಲಿ ಇನ್ನೊಂದು ನಿಗೂಢ ಕೋಣೆಯಾದ ನಾಗ ಬಂಧಂ ಅಥವಾ ನಾಗ ಪಾಸಂ ಸಹಾ ಇದೆ ಎಂದು ಹೇಳಲಾಗುತ್ತದೆ. ಈ ಕೋಣೆಯಲ್ಲಿ ಹದಿನಾರನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದ ಮಾರ್ತಾಂಡವರ್ಮನ ಕಾಲದಲ್ಲಿ ನೆಲೆಸಿದ್ದ ಸಿದ್ಧ ಪುರುಷರು ಕೆಲವು ಮಂತ್ರಗಳನ್ನು ಬಂಧಿಸಿಟ್ಟಿದ್ದಾರೆ ಎಂದು ಹೇಳಲಾಗುತ್ತದೆ.

PC: Kamaljith K V

ಈ ಕೋಣೆಯನ್ನು ಯಾರು ತೆರೆಯಬಹುದು?

ಈ ಕೋಣೆಯನ್ನು ಯಾರು ತೆರೆಯಬಹುದು?

ಈ ಕೋಣೆಯನ್ನು ತೆರೆಯಲು ಆ ವಿದ್ಯೆಯಲ್ಲಿ ಪಾರಾಂಗತರಾದ ಸಾಧು ಅಥವಾ ಮಾಂತ್ರಿಕರು ಮಾತ್ರವೇ ಅರ್ಹರಾಗಿದ್ದು ಬಾಗಿಲನ್ನು ತೆರೆಯುವ ಸಮಯದಲ್ಲಿ ಗರುಣ ಮಂತ್ರವನ್ನು ಪಠಿಸುತ್ತಾ ನಾಗ ಬಂಧಂ ಅಥವಾ ನಾಗಪಾಸವನ್ನು ತೆರೆಯಬೇಕಾಗುತ್ತದೆ. ಪ್ರಸ್ತುತ ಈ ವಿದ್ಯೆಯಲ್ಲಿ ಪಾರಾಂಗತರಾದವರು ಯಾರೂ ಲಭ್ಯರಿಲ್ಲದ ಕಾರಣ ಈ ಕೋಣೆಯ ಬಾಗಿಲನ್ನು ಇನ್ನೂ ತೆರೆಯಲು ಸಾಧ್ಯವಾಗಿಲ್ಲ.

ಒಂದು ವೇಳೆ ಬಾಗಿಲನ್ನು ತೆರೆಯಲು ಯತ್ನಿಸಿದರೆ.....

ಒಂದು ವೇಳೆ ಬಾಗಿಲನ್ನು ತೆರೆಯಲು ಯತ್ನಿಸಿದರೆ.....

ಒಂದು ವೇಳೆ ಈ ಮಂತ್ರದ ನೆರವಿನ ಹೊರತಾಗಿ ಯಾರಾದರೂ ಈ ಕೋಣೆಯ (ಚೇಂಬರ್ ಬಿ) ಬಾಗಿಲನ್ನು ತೆರೆಯಲು ಯತ್ನಿಸಿದರೆ ದೇವಾಲಯದ ಸ್ಥಳದಲ್ಲಿ ಮಾತ್ರವಲ್ಲ, ಇಡಿಯ ಭಾರತವನ್ನೇ ಅಹುತಿ ತೆಗೆದುಕೊಳ್ಳಬಹುದಾದಂತಹ ಅನಾಹುತ ಸಂಭವಿಸಬಹುದು.

English summary

mystery behind the last door at Padmanabhaswamy temple?

is currently run by a trust headed by the royal family of Travancore. The Maharajahs of Travancore are Cheras and descendants of the great saint Kulashekhara Alwar.
Subscribe Newsletter