For Quick Alerts
ALLOW NOTIFICATIONS  
For Daily Alerts

ಮೇ 12ಕ್ಕೆ ಮೋಹಿನಿ ಏಕಾದಶಿ: ಪೂಜೆಗೆ ಶುಭ ಮುಹೂರ್ತ ಹಾಗೂ ಪಾಲಿಸಬೇಕಾದ ಉಪವಾಸದ ನಿಯಮಗಳ ಬಗ್ಗೆ ನೋಡಿ

|

ಏಕಾದಶಿ ಶ್ರೀವಿಷ್ಣುವಿನ ಪೂಜೆಗಾಗಿ ಮೀಸಲಿಟ್ಟಿರುವ ದಿನ. ಈ ದಿನ ವಿಷ್ಣು ಭಕ್ತರು ಉಪವಾಸ ನಿಯಮಗಳನ್ನು ಪಾಲಿಸಿ ವ್ರತ ಮಾಡುತ್ತಾರೆ. ಯಾರು ಏಕಾದಶಿ ವ್ರತ ಮಾಡುತ್ತಾರೋ ಅವರಿಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ. ಪ್ರತೀ ತಿಂಗ 2 ಏಕಾದಶಿ ಬರುತ್ತದೆ. ವರ್ಷದಲ್ಲಿ ಒಟ್ಟು 24 ಏಕಾದಶಿ ಆಚರಣೆ ಮಾಡಲಾಗುವುದು. ಪ್ರತಿಯೊಂದು ಏಕಾದಶಿಯು ಒಂದೊಂದು ವೈಶಿಷ್ಟ್ಯತೆ ಹೊಂದಿದೆ. ಮೇ 12 ಬುಧವಾರದಂದು ಮೋಹಿನಿ ಏಕಾದಶಿಯನ್ನು ಆಚರಿಸಲಾಗುತ್ತಿದೆ.

Mohini Ekadashi 2022

ಮೋಹಿನಿ ಏಕಾದಶಿಯ ವಿಶೇಷತೆ ಹಾಗೂ ಮಹತ್ವವೇನು? ಏಕಾದಶಿ ಉಪವಾಸದ ನಿಯಮಗಳೇನು ಎಂದು ನೋಡೋಣ ಬನ್ನಿ:

ಮೋಹಿನಿ ಏಕಾದಶಿ

ಮೋಹಿನಿ ಏಕಾದಶಿ

ಹಿಂದೂ ಕ್ಯಾಲೆಂಡರ್ ಪ್ರಕಾರ ವೈಶಾಖ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಮೋಹಿನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಎಲ್ಲಾ ಏಕಾದಶಿ ದಿನಾಂಕಗಳಲ್ಲಿ ಮೋಹಿನಿ ಏಕಾದಶಿಯನ್ನು ವಿಶೇಷವೆಂದು ಪರಿಗಣಿಸಲಾಗಿದೆ. ಈ ಬಾರಿ ಮೋಹಿನಿ ಏಕಾದಶಿಯನ್ನು 12ನೇ ಮೇ 2022 ಗುರುವಾರ ಬಂದಿದೆ.

ಗುರುವಾರವನ್ನು ವಿಷ್ಣುವಿಗೆ ಸಮರ್ಪಿಸಲಾಗಿದೆ. ಗುರುವಾರ ಏಕಾದಶಿಯಾಗಿರುವುದರಿಂದ ಈ ದಿನದ ಮಹತ್ವ ಹೆಚ್ಚಿದೆ. ಪೌರಾಣಿಕ ಕತೆಯ ಪ್ರಕಾರ ಸಾಗರ ಮಂಥನದ ಸಮಯದಲ್ಲಿ ಹೊರಬಂದ ಅಮೃತವನ್ನು ರಾಕ್ಷಸರಿಂದ ರಕ್ಷಿಸಲು ಶ್ರೀ ವಿಷ್ಣುವು ಮೋಹಿನಿ ರೂಪವನ್ನು ತಾಳಿದನು. ಆ ದಿನವನ್ನು ಮೋಹಿನಿ ಏಕಾದಶಿ ಎಂದು ಆಚರಿಸಲಾಗುತ್ತಿದೆ.

 ಮೋಹಿನಿ ಏಕಾದಶಿಯ ಮಹತ್ವ-

ಮೋಹಿನಿ ಏಕಾದಶಿಯ ಮಹತ್ವ-

ಧಾರ್ಮಿಕ ನಂಬಿಕೆಯ ಪ್ರಕಾರ, ಮೋಹಿನಿ ಏಕಾದಶಿಯನ್ನು ಆಚರಿಸುವುದರಿಂದ ವ್ಯಕ್ತಿಯು ಬಾಂಧವ್ಯದ ಬಂಧನದಿಂದ ದೂರವಿರಲು ಮತ್ತು ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತದೆ. ಈ ಉಪವಾಸ ಮಾಡುವುದರಿಂದ ವ್ಯಕ್ತಿಯು ಎಲ್ಲಾ ಪಾಪಗಳಿಂದ ಮುಕ್ತನಾಗುತ್ತಾನೆ. ಈ ದಿನದಂದು ಉಪವಾಸದ ಕಥೆಯನ್ನು ಹೇಳುವುದರಿಂದ ಅಥವಾ ಕೇಳುವುದರಿಂದ ಸಾವಿರ ಗೋವನ್ನು ದಾನ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.

 ಮೋಹಿನಿ ಏಕಾದಶಿ ಶುಭ ಮುಹೂರ್ತ

ಮೋಹಿನಿ ಏಕಾದಶಿ ಶುಭ ಮುಹೂರ್ತ

ವೈಶಾಖ ಶುಕ್ಲ ಏಕಾದಶಿ ದಿನಾಂಕವು ಮೇ 11 ರ ಬುಧವಾರದಂದು ರಾತ್ರಿ 07.31 ಕ್ಕೆ ಪ್ರಾರಂಭವಾಗಿದೆ. ಇದು ಮೇ 12 ರ ಗುರುವಾರ ಸಂಜೆ 06.51 ರವರೆಗೆ ಇರುತ್ತದೆ. ಉದಯ ತಿಥಿಯ ಪ್ರಕಾರ ಮೇ 12 ರಂದು ಮೋಹಿನಿ ಏಕಾದಶಿ ವ್ರತವನ್ನು ಆಚರಿಸಲಾಗುತ್ತದೆ.

ಉಪವಾಸದ ಪಾರಣೆಯ ಸಮಯ

ಉಪವಾಸದ ಪಾರಣೆಯ ಸಮಯ

ಮೇ 13 ರಂದು ಶುಕ್ರವಾರ ಸೂರ್ಯೋದಯದ ನಂತರ ಮೋಹಿನಿ ಏಕಾದಶಿ ಉಪವಾಸ ಮುರಿಯಬಹುದು. ಬೆಳಗ್ಗೆ 07:59 ರವರೆಗೆ ಪಾರಣೆಗೆ ಶುಭ ಮುಹೂರ್ತ ಇದೆ.

ಮೋಹಿನಿ ಏಕಾದಶಿ ಉಪವಾಸ ವಿಧಾನ-

ಮೋಹಿನಿ ಏಕಾದಶಿ ಉಪವಾಸ ವಿಧಾನ-

* ಈ ಪುಣ್ಯದಿನದಂದು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ.

* ಸ್ನಾನದ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ.

ಇದಾದ ನಂತರ, ಮನೆಯ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ ತುಪ್ಪದ ದೀಪವನ್ನು ಬೆಳಗಿಸಿ.

* ಗಂಗಾಜಲದಿಂದ ವಿಷ್ಣುವಿಗೆ ಅಭಿಷೇಕ ಮಾಡಿ, ಹೊಸ ಬಟ್ಟೆ ಅರ್ಪಿಸಿ.

* ಭಗವಾನ್ ವಿಷ್ಣುವನ್ನು ಆರಾಧಿಸಿ ಮತ್ತು ನೈವೇದ್ಯ ಅರ್ಪಿಸಿ. ತುಳಸಿಯನ್ನು ವಿಷ್ಣುವಿನ ನೈವೇದ್ಯದಲ್ಲಿ ಸೇರಿಸಬೇಕು. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಾನ್ ವಿಷ್ಣುವು ತುಳಸಿ ಇಲ್ಲದೆ ನೈವೇದ್ಯ ಸ್ವೀಕರಿಸುವುದಿಲ್ಲ.

English summary

Mohini Ekadashi 2022: Date, shubh muhurat, vrat katha, rituals and significance in Kannada

Mohini Ekadashi 2022: Date, shubh muhurat, vrat katha, rituals and significance in Kannada, read on....
Story first published: Wednesday, May 11, 2022, 20:54 [IST]
X
Desktop Bottom Promotion