ಪೂಜಾಗೃಹದಲ್ಲಿ ಈ ತಪ್ಪನ್ನು ನೀವು ಮಾಡುತ್ತಿದ್ದರೆ ತಕ್ಷಣ ಸರಿಪಡಿಸಿ!

Posted By: Deepu
Subscribe to Boldsky

ನಿಮ್ಮ ಮನೆಯಲ್ಲಿರುವ ಪೂಜಾಗೃಹ (ನಿಮ್ಮ ಧರ್ಮ ಯವುದೇ ಆಗಿರಲಿ) ನೀವು ದೇವರನ್ನು ಪ್ರಾರ್ಥಿಸುವ, ಆ ಮೂಲಕ ನಿಮ್ಮ ನೆಮ್ಮದಿಯ ತಾಣವೂ ಆಗಿದೆ. ಈ ಸ್ಥಳ ಸದಾ ಪ್ರಕಾಶಮಯವಾಗಿದ್ದು ಸುವಾಸನೆಯಿಂದ ಕೂಡಿರಬೇಕು. ಪ್ರಕಾಶ ಮತ್ತು ಸುವಾಸನೆಯಿಂದ ಈ ಸ್ಥಳದಲ್ಲಿ ಧನಾತ್ಮಕ ಶಕ್ತಿ ಆವರಿಸುತ್ತದೆ. ಆದರೆ ಭಾರತೀಯರಾದ ನಮ್ಮಿಂದ ಅರಿವೇ ಇಲ್ಲದಂತೆ ಕೆಲವು ಸಾಮಾನ್ಯ ತಪ್ಪುಗಳಾಗುತ್ತವೆ.

Gods pooja

ಕೆಲವು ಮನೆಗಳ ಪೂಜಾಗೃಹದಲ್ಲಿ ದೇವರ ಪಟದೊಂದಿಗೆ ಮನೆಯ ಗತಿಸಿದ ಹಿರಿಯರ ಪಟಗಳನ್ನೂ ಇರಿಸಿ ದೇವರ ಪಟದೊಂದಿಗೆ ಈ ಪಟಗಳಿಗೂ ಪೂಜೆ ಸಲ್ಲಿಸಲಾಗುತ್ತದೆ. ಇನ್ನೂ ಕೆಲವು ಮನೆಗಳಲ್ಲಿ ದೇವರ ಪಟದ ಪಕ್ಕದಲ್ಲಿ ಅಲ್ಲದಿದ್ದರೂ ಪೂಜಾಗೃಹದ ಬೇರೆ ಸ್ಥಳಗಳಲ್ಲಿ ಈ ಪಟಗಳನ್ನು ನೇತು ಹಾಕಿರಲಾಗಿರುತ್ತದೆ. ನಿಧನರಾದ ಹಿರಿಯರಿಗೆ ಈ ಮೂಲಕ ಸಲ್ಲಿಸುವ ಗೌರವ ಎಂದು ನಾವೆಲ್ಲರೂ ತಿಳಿದುಕೊಂಡಿದ್ದೇವೆ.    ವಾಸ್ತುಶಾಸ್ತ್ರದ ಪ್ರಕಾರ ಪೂಜಾ ಗೃಹದಲ್ಲಿ ದೇವರ ಪ್ರತಿಮೆ ಹೇಗಿರಬೇಕು?   

ನಮ್ಮ ಹಿರಿಯರು ಈ ಗೌರವಕ್ಕೆ ಪಾತ್ರರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಆತ್ಮಕ್ಕೆ ಶಾಂತಿ ಕೋರುವುದು ನಮ್ಮ ಪ್ರಥಮ ಆದ್ಯತೆಯಾಗಬೇಕು. ಶಾಸ್ತ್ರಗಳ ಪ್ರಕಾರ ಸಾವಿರುವ ಮಾನವರು ದೇವರಿಗೆ ಸಮನಾಗಲು ಎಂದೂ ಸಾಧ್ಯವಿಲ್ಲ. ಇದೇ ಕಾರಣಕ್ಕೆ ದೇವರ ಪಟಗಳಿಗೆ ಸರಿಸಮನಾಗಿ ಮಾನವರ ಪಟಗಳನ್ನಿರಿಸುವುದನ್ನು ಸನಾತನ ಧರ್ಮ ಕಟುವಾಗಿ ವಿರೋಧಿಸುತ್ತದೆ. ಆದ್ದರಿಂದ ಈ ಪಟಗಳಿಗೆ ಪೂಜೆ ಸಲ್ಲಿಸುವ ಮೂಲಕ ಜೀವನದಲ್ಲಿ ಕೆಲವು ತೊಂದರೆಗಳು ಎದುರಾಗಬಹುದು ಎಂದು ಹೇಳಲಾಗಿದೆ.

ಹಿಂದೂ ಧರ್ಮದ ಪ್ರಕಾರ ಶರೀರ ನಶ್ವರವಾಗಿದ್ದು ಅತ್ಮ ಶಾಶ್ವತವಾಗಿದೆ. ನೀವು ನಿಮ್ಮ ಗತಿಸಿದ ಹಿರಿಯರ ಪಟಕ್ಕೆ ಪೂಜೆ ಸಲ್ಲಿಸುವ ಮೂಲಕ ನೀವು ಅವರ ನಶ್ವರ ಶರೀರಕ್ಕೆ ಪೂಜಿಸುತ್ತೀರೇ ಹೊರತು ಅವರ ಆತ್ಮಕ್ಕಲ್ಲ. ಅಲ್ಲದೇ ನಶ್ವರ ಶರೀರ ಹೊಂದಿರುವ ಮಾನವರನ್ನು ದೇವರಿಗೆ ಹೋಲಿಸುವುದು ಮತ್ತು ದೇವರಿಗೆ ಸಮಾನವಾದ ಪೂಜೆಯನ್ನು ಸಲ್ಲಿಸುವುದು ಸಲ್ಲದು. ಇದು ಧರ್ಮದ ಮೂಲತತ್ವಕ್ಕೇ ವಿರುದ್ಧವಾಗಿದೆ.  

Gods Puja room

ಪೂಜಾಗೃಹ ದೇವರಿಗೆ ಮೀಸಲಾದ ಸ್ಥಳವಾಗಿದ್ದು ಈ ಸ್ಥಳದ ಯಾವುದೇ ಭಾಗದಲ್ಲಿ ನಶ್ವರ ಶರೀರದ ಮಾನವರ ಪಟವನ್ನು ಇರಿಸುವುದು ವಾಸ್ತುದೋಷವಾಗುತ್ತದೆ. ಇದರಿಂದ ಮನೆಯ ಸದಸ್ಯರ ಆರೋಗ್ಯದ ಮೇಲೆ ಭಾರೀ ಪ್ರಭಾವ ಉಂಟಾಗುತ್ತದೆ. ಪೂಜಾಗೃಹವೆಂದರೆ ನೀವು ದೇವರೊಂದಿಗೆ ನೇರವಾಗಿ ಸಂವಾದಿಸುವ ಸ್ಥಳವಾಗಿದ್ದು ನಿಮ್ಮ ಭಕ್ತಿಯನ್ನು ದೇವರು ಸ್ವೀಕರಿಸುವ ತಾಣವೂ ಆಗಿದೆ.  ಪೂಜೆ ಎಂದರೆ ಹೀಗಿರಬೇಕು, ಎಲ್ಲಾ ವಿಧಿವತ್ತಾಗಿ ನಡೆಯಬೇಕು!

ಈ ಸ್ಥಳದಲ್ಲಿ ದೇವರ ಹೊರತಾಗಿ ಇತರ ಪಟಗಳನ್ನಿರಿಸಿದರೆ ನೀವು ಭಾವನಾತ್ಮಕವಾಗಿ ಆ ವ್ಯಕ್ತಿಯ ಕೆಲವು ಮಾಹಿತಿಗಳತ್ತ ಗಮನ ಹರಿಸಿ ಈ ಮೂಲಕ ದೇವರಿಗೆ ನೀಡಬೇಕಾಗಿದ್ದ ಪೂರ್ಣ ಗಮನವನ್ನು ಕಡಿಮೆ ಮಾಡಿದಂತಾಗುತ್ತದೆ. ಕೆಲವೊಮ್ಮೆ ಆ ವ್ಯಕ್ತಿಯ ಇಲ್ಲದಿರುವಿಕೆಯ ದುಃಖದಿಂದ ಭಗವಂತನ ಮೇಲಿನ ಗಮನ ಇಲ್ಲವಾಗಿ ನಿಮ್ಮ ಮನಸ್ಸು ಮತ್ತು ಹೃದಯ ಸರಿಯಾಗಿ ಕೆಲಸ ಮಾಡದೇ ಹೋಗಬಹುದು. ಇದು ದೇವರಿಗೆ ಇಷ್ಟವಾಗದ ಸಂಗತಿಯಾಗಿದ್ದು ನಿಮ್ಮ ಪೂಜೆಯ ಮೂಲ ಉದ್ದೇಶವೇ ನೆರವೇರದೇ ಹೋಗಬಹುದು.

For Quick Alerts
ALLOW NOTIFICATIONS
For Daily Alerts

    English summary

    Mistake In Your Puja Room That Is Bringing Your Harm...

    A puja room or any corner of worship in your home (no matter what your religion is) is the sanctum sactorum of the house. Ideally, this place is should be brightly lit and fragrant substances should be kept here to increase the positivity of the place. However Indians make one very common mistake at this place. People usually keep the photographs of their deceased grandparents or parents along with deity's
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more