For Quick Alerts
ALLOW NOTIFICATIONS  
For Daily Alerts

ಇಲ್ಲಿ ಪುರುಷರು ಸೀರೆಯುಟ್ಟು, ಕೈಗೆ ಬಳೆ ಹಾಕಿ ದೇವಿಗೆ ಪೂಜೆ ಮಾಡುತ್ತಾರೆ!

By Manohar
|

ಮನಸೂರೆಗೊಳಿಸುವ ಪ್ರಕೃತಿಸಿರಿ, ಇದರ ನಡುವೆ ಪವಿತ್ರ ಪುಣ್ಯ ಕ್ಷೇತ್ರಗಳು, ಒಂದೊಂದು ದೇಗುಲದಲ್ಲೂ ವಿಭಿನ್ನ ಬಗೆಯ ಇತಿಹಾಸ, ಆಚರಣೆ ಹಾಗೂ ಸಂಪ್ರದಾಯ. ಇವುಗಳ ಅರ್ಥ ಆಚರಣೆಗಳನ್ನು ತಿಳಿದಾಗ ಅದೇನೋ ಒಂದು ಬಗೆಯ ನಿರಾಳ ಭಾವ ಮೂಡುವುದು. ಇಂತಹ ಅದ್ಭುತ ಕ್ಷೇತ್ರಗಳು ಇರುವುದು ನಮ್ಮ ದೇಶದಲ್ಲಿ ಎನ್ನುವುದು ನಮಗೊಂದು ಹೆಮ್ಮೆಯ ವಿಚಾರವೆ. ಆಶ್ಚರ್ಯ ಮೂಡಿಸುವಂತಹ ಆಚರಣೆಯಲ್ಲಿ ಕೊಟ್ಟನ್ ಕೊಟ್ಟನ್ ಕುಲ್ಲಂಗರಾ ದೇಗುಲದ ಆಚರಣೆಯೂ ಒಂದು.

ಈ ದೇವಸ್ಥಾನದಲ್ಲಿ ಒಂದು ರಾತ್ರಿ ಕಳೆದರೆ, ಅವರು ಕಲ್ಲಾಗಿ ಬಿಡುತ್ತಾರೆ!

ಅದೇನೆಂದರೆ ಪುರುಷರು ಮಹಿಳೆಯರ ವೇಶದಲ್ಲಿ ದೇಗುಲಕ್ಕೆ ಬರುವುದು ಹಾಗೂ ಪೂಜೆ ಸಲ್ಲಿಸುವುದು. ಕೇರಳದ ಅರಬ್ಬೀ ಸಮುದ್ರ ತೀರದಲ್ಲಿ ಇರುವ ದೇವಿಯ ದೇಗುಲ ಅದು. ಅಲ್ಲಿಗೆ ಬರುವ ಪುರುಷರೆಲ್ಲರೂ ಮಹಿಳೆಯರಂತೆ ವೇಷಧರಿಸುತ್ತಾರೆ. ಅಲ್ಲಿ ಪುರುಷರು ಮಹಿಳೆಯರು ಎನ್ನುವ ತಾರತಮ್ಯವಿಲ್ಲ. ಎಲ್ಲರೂ ಒಂದೇ. ಇಲ್ಲಿ ದೇವರ ಜ್ಯೋತಿಯೊಂದಿಗೆ ಭಕ್ತರ ಸಮಾನತೆಯ ದೀಪವೂ ಬೆಳಗುತ್ತದೆ. ಹೌದಾ? ಹಾಗಾದರೆ ಅದ್ಯಾವ ದೇಗುಲ ಎನ್ನುವ ವಿಚಾರ ತಿಳಿಯಲು ಈ ಕೆಳಗಿನ ವಿವರಣೆ ನೋಡಿ....

ಯಾವ ದೇಗುಲ?

ಯಾವ ದೇಗುಲ?

ಕೇರಳದ ಕೊಲ್ಲಂ ಜಿಲ್ಲೆಯ ಚವರ ಬಳಿ ಇರುವ ಕೊಟ್ಟನ್ ಕುಲ್ಲಂಗರ್ ದೇವಿಯ ದೇಗುಲ. ಇಲ್ಲಿ ಭಗವತಿ ದೇವಿಯನ್ನು ಆರಾಧಿಸಲಾಗುತ್ತದೆ, ಆದರೆ ಇಲ್ಲಿಯ ವಿಶೇಷತೆ ಏನೆಂದರೆ ಈ ದೇವಿ ದೇವಾಲಯದಲ್ಲಿ ಪುರುಷರು ಮಹಿಳೆಯರಂತೆ ಸೀರೆ ಹಾಗೂ ಆಭರಣವನ್ನು ಧರಿಸಿಕೊಂಡು ಪೂಜೆ ಸಲ್ಲಿಸುತ್ತಾರೆ!....

Image Courtesy

ಎಲ್ಲರೂ ಮಹಿಳೆಯರ ವೇಷ

ಎಲ್ಲರೂ ಮಹಿಳೆಯರ ವೇಷ

ಈ ದೇವಾಲಯದಲ್ಲಿ ಯುವಕರು, ವೃದ್ಧರು ಎನ್ನುವ ಭೇದವಿಲ್ಲದೆ ಎಲ್ಲರೂ ಮಹಿಳೆಯರ ವೇಷ ಧರಿಸಿ, ಶೃಂಗಾರ ಮಾಡಿಕೊಳ್ಳುತ್ತಾರೆ. ಈ ರೂಪದಲ್ಲಿಯೇ ದೇವಿಗೆ ಪೂಜೆ ಸಲ್ಲಿಸುತ್ತಾರೆ. ಪುರುಷರು ತಮ್ಮ ಉಡುಗೆ ಬದಲಾಯಿಸಿಕೊಳ್ಳಲು ವಿಶೇಷವಾಗಿಯೇ ಒಂದು ಕೊಠಡಿಯಿದೆ.

Image Courtesy

ಕೋರಿಕೆಗಳು ಈಡೇರುವುದು

ಕೋರಿಕೆಗಳು ಈಡೇರುವುದು

ಭಕ್ತರು ಕೇಳುವ ವಿದ್ಯೆ, ಆರೋಗ್ಯ, ಸಂಪತ್ತು, ಉದ್ಯೋಗ, ವಿವಾಹ ಸೇರಿದಂತೆ ಎಲ್ಲಾ ಬಗೆಯ ಕೋರಿಕೆಯನ್ನು ತಾಯಿ ಈಡೇರಿಸುತ್ತಾಳೆ.

Image Courtesy

ದೇಗುಲದ ಹುಟ್ಟು

ದೇಗುಲದ ಹುಟ್ಟು

ಒಮ್ಮೆ ದನ ಕಾಯುವ ಹುಡುಗರು ಮಹಿಳೆಯರ ಉಡುಗೆಯನ್ನು ತೊಟ್ಟು, ಒಂದು ಕಲ್ಲಿನ ಪೂಜೆ ನಡೆಸಿದರು. ಪೂಜೆಯ ನಂತರ ಕಲ್ಲಿನ ಸುತ್ತಲು ಅಗೋಚರವಾದ ಶಕ್ತಿಸುತ್ತುತ್ತಿರುವುದನ್ನು ಸ್ಥಳೀಯರು ಗಮನಿಸಿದರು. ನಂತರ ಅಪೂರ್ವವಾದ ಈ ಕಲ್ಲಿಗೆ ದೇಗುಲವನ್ನು ನಿರ್ಮಿಸಲಾಯಿತು ಎನ್ನಲಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಇಂದಿಗೂ ಪುರುಷರು ಮಹಿಳೆಯರಂತೆ ಶೃಂಗರಿಸಿಕೊಂಡು ಪೂಜೆ ಸಲ್ಲಿಸುತ್ತಾರೆ.

Image Courtesy

ಇನ್ನೊಂದು ಕಥೆ

ಇನ್ನೊಂದು ಕಥೆ

ಒಮ್ಮೆ ತೆಂಗಿನಕಾಯಿಯನ್ನು ಒಂದು ಕಲ್ಲಿಗೆ ಬಡಿದಾಗ ತೆಂಗಿನ ಕಾಯಿಯಿಂದ ರಕ್ತ ಸುರಿಯಲು ಆರಂಭವಾಯಿತಂತೆ. ಅಂದಿನಿಂದ ಆ ಕಲ್ಲಿಗೆ ಅತೀವವಾದ ಶಕ್ತಿಯಿದೆ ಎಂದು ಪೂಜಿಸಲಾಯಿತು. ನಂತರ ಆ ಕಲ್ಲಿಗೆ ದೇಗುಲ ನಿರ್ಮಿಸಲಾಯಿತು ಎನ್ನುತ್ತಾರೆ.

Image Courtesy

ವಿಗ್ರಹ ಬೆಳೆಯುತ್ತದೆ

ವಿಗ್ರಹ ಬೆಳೆಯುತ್ತದೆ

ಆ ಕಾಲದಲ್ಲಿ ಅಪಾರವಾದ ಶಕ್ತಿಯನ್ನು ಹೊಂದಿರುವ ಈ ಕಲ್ಲಿಗೆ ಪೂಜಿಸುತ್ತಾ ಬಂದಿದ್ದಾರೆ. ವರ್ಷಗಳು ಉರುಳಿದಂತೆ ಕಲ್ಲಿನ ಬೆಳವಣಿಗೆಯೂ ಆಗುತ್ತಿದೆ ಎಂದು ಹೇಳುತ್ತಾರೆ.

Image Courtesy

ಜಾತ್ರೆ ನಡೆಯುವುದು

ಜಾತ್ರೆ ನಡೆಯುವುದು

ಪ್ರತಿ ವರ್ಷವೂ ಇಲ್ಲಿ ಕೊಟ್ಟಂಕುಳಂಗರ ಉತ್ಸವ ನಡೆಯುತ್ತದೆ. ಅದ್ಧೂರಿಯಿಂದ ಆಚರಿಸುವ ಈ ಉತ್ಸವದಲ್ಲಿ ಪುರುಷರು ಮಹಿಳೆಯರಂತೆ ಶೃಂಗರಿಸಿಕೊಂಡು ಭಾಗಿಯಾಗುತ್ತಾರೆ. ಈ ಉತ್ಸವದಲ್ಲಿ ರಾತ್ರಿ ದೀಪಗಳ ಅಲಂಕಾರ ಮತ್ತು ದೀಪದ ಮೆರವಣಿಗೆ ಮಾಡಲಾಗುತ್ತದೆ.

Image Courtesy

ದರ್ಶನದ ಸಮಯ

ದರ್ಶನದ ಸಮಯ

ಭಕ್ತರಿಗಾಗಿ ಈ ದೇವಾಲಯ ಬೆಳಗ್ಗೆ 5 ರಿಂದ ರಾತ್ರಿ 8 ಗಂಟೆಯವರೆಗೂ ತೆರೆದಿರುತ್ತದೆ. ಭಕ್ತರು ತಮ್ಮ ಮನಸ್ಸಿಗೆ ಬಂದಾಗ ದೇವಿಯ ದರ್ಶನ ಪಡೆಯಬಹುದು.

English summary

Men dress as women to fulfil vows in Kerala temple

Thousands of men, young and old alike, gathered at Kottan Kullangara Devi Temple near Chavara in Kerala’s Kollam District to fulfil their vows dressed up as women, as an offering to the Goddess Bhagavathy, the temple deity. In this unique ritual called ‘Chamaya Vilakku’ or make-up lamp, the men come to the temple late at night in a long procession with lighted lamps in their hands and offer their prayers to the deity.
X
Desktop Bottom Promotion