For Quick Alerts
ALLOW NOTIFICATIONS  
For Daily Alerts

Captain Abhilasha Barak:ಕ್ಯಾಪ್ಟನ್‌ ಅಭಿಲಾಷ ಬರಾಕ್‌ ಸೇನೆಯ ಪ್ರಪ್ರಥಮ ಮಹಿಳಾ ಯುದ್ಧ ಏವಿಯೇಟರ್‌

|

ಅಭಿಲಾಷ ಬರಾಕ್‌ ಭಾರತದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಮಹಿಳಾ ಸಾಮರ್ಥ್ಯಕ್ಕೆ ಮತ್ತೊಂದು ಉದಾಹರಣೆಯಾಗಿ ಅಭಿಲಾಷ ಬರಾಕ್‌ ಹೊರಹೊಮ್ಮಿದ್ದಾರೆ. ಭಾರತದ ಸೇನೆಯಲ್ಲಿ ಮಹಿಳೆಯರು ಹಲವು ಹುದ್ದೆಗಳಲ್ಲಿ ಸ್ಥಾನ ಪಡೆಯುವ ಮೂಲಕ ತಮ್ಮ ಸಾಮರ್ಥ್ಯ ತೋರಿಸಿಕೊಟ್ಟಿದ್ದಾರೆ.

Captain Abhilasha Barak

ಇದುವರೆಗೆ ಯಾವ ಮಹಿಳಾ ಯುದ್ಧ ಏವಿಯೇಟರ್‌ ಭಾರತದ ಸೇನೆಯಲ್ಲಿ ಇರಲಿಲ್ಲ. ಆದರೆ ಅಭಿಲಾಷ ಬರಾಕ್‌ ಭಾರತ ಸೇನೆಯ ಪ್ರಪ್ರಥಮ ಯುದ್ಧ ಏವಿಯೇಟರ್‌ ಆಗಿ ಆಯ್ಕೆ ಆಗುವ ಮೂಲಕ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ಈ ಮೂಲಕ ಹೆಣ್ಣು ಮಕ್ಕಳಿಗೆ ತಾವು ಮನಸ್ಸು ಮಾಡಿದರೆ ಅಸಾಧ್ಯವೆಂಬುವುದು ಯಾವುದೂ ಇಲ್ಲ ಎಂಬುವುದಕ್ಕೆ ನಿದರ್ಶನ ಆಗಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ಭಾರತ ಸೇನೆಯು ಮೊದಲ ಬಾರಿಗೆ ಇಬ್ಬರು ಮಹಿಳೆಯರನ್ನು ಹೆಲಿಕಾಪ್ಟರ್‌ ಪೈಲಟ್ ತರಬೇತಿಗೆ ಆಯ್ಕೆ ಮಾಡಿದ್ದರು. ಇಬ್ಬರಿಗೂ ನಾಸಿಕ್‌ನ ಯುದ್ಧ ಸೇನಾ ವಿಮಾನಯಾನ ತರಬೇತಿ ಶಾಲೆಯಲ್ಲಿ ತರಬೇತಿ ನೀಡಲಾಗಿತ್ತು. ಸೇನೆಯು 15 ಮಹಿಳಾ ಅಧಿಕಾರಿಗಳು ಆರ್ಮಿ ಏವಿಯೇಷನ್‌ಗೆ ಸೇರುವ ಬಯಕೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಭಾರತದ ಸೇನಾ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಿಂದ ಬರೆಯಲ್ಪಡುವ ದಿನ

"Golden Letter Day in the history of Indian Army Aviation." ಎಂದು ಬಾರತೀಯ ಸೇನೆ ಟ್ವೀಟ್‌ ಮಾಡಿದೆ.
ಅಭಿಲಾಷ ಬರಾಕ್‌ ಅವರಿಗೆ 36 ಸೇನಾ ಲೈಲೆಟ್‌ಗಳೊಂದಿಗೆ ಡೈರೆಕ್ಟರ್ ಜನರಲ್‌ ಮತ್ತು ಕರ್ನಲ್‌ ಕಮಾಂಡೆಂಟ್‌ ಆರ್ಮಿ ಏವಿಯೇಷನ್ನಿಂದ ಪ್ರತಿಷ್ಠಿತ ವಿಂಗ್‌ಗಳನ್ನು ನೀಡಲಾಗಿದೆ.

ಸೇನೆ ಸೇರಬೇಕು, ಸಾಧನೆ ಮಾಡಬೇಕು ಎಂಬ ಮಹಿಳೆಯರಿಗೆ ಉದಾಹರಣೆ ಇಂಥ ದಿಟ್ಟ ಮಹಿಳೆಯರು.... ಸೇನೆಯ ಹಲವು ವಿಭಾಗಗಳಲ್ಲಿ ಮಹಿಳೆಯರು ಇಂದು ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

English summary

Meet Captain Abhilasha Barak Know about country's first female Combat Aviator in Kannada

Meet Captain Abhilasha Barak Know about country's first female Combat Aviator in Kannada, Read on...
X
Desktop Bottom Promotion