For Quick Alerts
ALLOW NOTIFICATIONS  
For Daily Alerts

Makara Jyothi : ಅಯ್ಯಪ್ಪಸ್ವಾಮಿ ದರ್ಶನ: ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನದ ದಿನಾಂಕ ಮತ್ತು ಸಮಯ

|

ಕೇರಳದ ಶಬರಿಮಲೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯವು ವರ್ಷದ ಎಲ್ಲಾ ದಿನಗಳಲ್ಲಿ ಭಕ್ತರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಮಳಯಾಳಂ ಮಾಸದ ಮೊದಲ ದಿನ, ವಿಷ್ಣು ಹಾಗೂ ಮಂಡಲ ಪೂಜೆ ದಿನ ಹಾಗೂ ಮಗರವಿಳಕ್ಕು (ಮಕರ ಜ್ಯೋತಿ) ದಿನಗಳಲ್ಲಿ ಅಷ್ಟೇ ತೆರೆದಿರುತ್ತದೆ.

ಮಂಡಲ ಪೂಜೆಯಿಂದ ಮಕರ ಜ್ಯೋತಿಯವರೆಗೆ ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಬಂದು ಸ್ವಾಮಿಯ ದರ್ಶನ ಪಡೆಯತ್ತಾರೆ.

ಕೇರಳದ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಾಲಯಕ್ಕೆ ಪ್ರತಿವರ್ಷ ಲಕ್ಷಾಂತರ ಅಯ್ಯಪ್ಪ ಭಕ್ತರು ಭೇಟಿಕೊಟ್ಟು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಾರೆ. ಅದರಲ್ಲೂ ಮಕರ ಜ್ಯೋತಿಯಂದು ಆ ಪರಿಸರದಲ್ಲಿ 'ಸ್ವಾಮಿಯೇ ಶರಣ ಅಯ್ಯಪ್ಪ' ಎಂಬ ಪ್ರಾರ್ಥನೆಯೊಂದು ಬೇರೇನೋ ಕಿವಿಗೆ ಬೀಳಲ್ಲ. ಅಲ್ಲದೆ ಆ ದಿನ ಮಕರ ಜ್ಯೋತಿಯ ದರ್ಶನ ತುಂಬಾನೇ ಮಹತ್ವವಾದದ್ದು. ಈ ದೈವಿಕ ದರ್ಶನಕ್ಕಾಗಿ ಲಕ್ಷಾಂತ ಅಯ್ಯಪ್ಪ ಭಕ್ತರು ಕಾಯುತ್ತಿರುತ್ತಾರೆ. ಆ ದಿವ್ಯ ಜ್ಯೋತಿಯ ದರ್ಶನ ಪಡೆದ ಭಕ್ತರು ತಮ್ಮ ಜೀವನ ಪಾವನವಾಯಿತು ಎಂದು ಭಾವಿಸುತ್ತಾರೆ.

2023ರಲ್ಲಿ ಮಕರ ಜ್ಯೋತಿ ದರ್ಶನ ದಿನಾಂಕ ಮತ್ತು ಸಮಯದ ಬಗ್ಗೆ ಮಾಹಿತಿ ಇಲ್ಲಿದೆ:

ಮಕರ ಜ್ಯೋತಿ ದಿನಾಂಕ ಮತ್ತು ಸಮಯ

ಮಕರ ಜ್ಯೋತಿ ದಿನಾಂಕ ಮತ್ತು ಸಮಯ

ಮಕರ ಜ್ಯೋತಿ ಶಬರಿಮಲೆಯಿಂದ 4 ಕಿ. ಮೀ ದೂರದಲ್ಲಿರುವ ಪೊನ್ನಂಬಲಮೇಡುವಿನಲ್ಲಿರುವ ಬೆಟ್ಟದಲ್ಲಿ ಮಕರ ಜ್ಯೋತಿಯ ದರ್ಶನವಾಗಲಿದೆ.

ದಿನಾಂಕ : ಜನವರಿ 14, 2023

ಸಮಯ: ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ

ಮಕರ ಜ್ಯೋತಿ

* ಹಿಂದೂಗಳ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ದಟ್ಟಾರಣ್ಯದಿಂದ ಆವೃತವಾಗಿದೆ. 18 ಮೆಟ್ಟಿಲುಗಳನ್ನು ಹತ್ತಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಬಳಿಕ, ಮಕರ ಜ್ಯೋತಿಯ ದರ್ಶನ ಸಿಕ್ಕರೆ ಅಯ್ಯಪ್ಪನ ಆಶೀರ್ವಾದ ನಮಗೆ ಸಿಕ್ಕಿದೆ ಎಂಬುವುದು ಅವನ ನಂಬಿದ ಭಕ್ತರ ಅಚಲ ನಂಬಿಕೆ.

ಮಕರ ಜ್ಯೋತಿ

ಮಕರ ಜ್ಯೋತಿ

ಸೂರ್ಯನು ಮಕರ ರಾಶಿಗೆ ಸಂಚರಿಸುವ ಆ ಶುಭ ಘಳಿಗೆಯಲ್ಲಿ ಆಕಾಶದಲ್ಲಿ ಕಾಣಿಸಿಕೊಳ್ಳುವ ನಕ್ಷತ್ರವೇ ಮಕರ ಜ್ಯೋತಿ. ಮಕರ ಸಂಕ್ರಾಂತಿಯ ದಿನ ಸೂರ್ಯಾಸ್ತದ ನಂತರ ಗೋಚರಿಸುವ ನಕ್ಷತ್ರಕ್ಕೆ ಮಕರ ಜ್ಯೋತಿ ಎಂದು ಕರೆಯಲಾಗುವುದು.

ಮಕರ ಜ್ಯೋತಿ ಬೇಗನೆ ಕಣ್ಮರೆಯಾಗುತ್ತದೆ

ಮಕರ ಜ್ಯೋತಿ ತುಂಬಾ ಪ್ರಕಾಶಮಾನವಾದ ನಕ್ಷತ್ರವಾಗಿದೆ. ಸೂರ್ಯಾಸ್ತವಾದಾಗ ಪ್ರಕಾಶ ಮಾನವಾಗಿ 3 ಬಾರಿ ಗೋಚರಿಸಿ ಕಣ್ಮರೆಯಾಗುತ್ತದೆ. ಈ ಮಕರ ಜ್ಯೋತಿ ದರ್ಶನವಾದರೆ ಅಯ್ಯಪ್ಪ ಸ್ವಾಮಿಯೇ ದರ್ಶನ ನೀಡಿದರು ಎಂದು ಭಾವಿಸಲಾಗುವುದು.

ಅಯ್ಯಪ್ಪ ಸ್ವಾಮಿ ಸರ್ವಾಲಂಕಾರ ಭೂಷಿತನಾದಾಗ ಬೆಳಗುವ ಜ್ಯೋತಿ

ಅಯ್ಯಪ್ಪ ಸ್ವಾಮಿ ಸರ್ವಾಲಂಕಾರ ಭೂಷಿತನಾದಾಗ ಬೆಳಗುವ ಜ್ಯೋತಿ

ಅಯ್ಯಪ್ಪ ಸ್ವಾಮಿಗೆ ತಿರುವಾಣರಣಗಳನ್ನು ಇಟ್ಟು ದೀಪಾರಾಧನೆ ಮಾಡಿದಾಗ ಪೊನ್ನಂಬಲಮೇಡದಲ್ಲಿ ಬೆಳಗುವ ಜ್ಯೋತಿ

ಮಕರ ಜ್ಯೋತಿಗೆ ಮುನ್ನ ಶಬರಿಮಲೆಯ ಗುಡಿಯಲ್ಲಿರುವ ಅಯ್ಯಪ್ಪನಿಗೆ ಆಭರಣ ಹಾಕಿ ಅಲಂಕಾರ ಆಡಲಾಗುವುದು. ವರ್ಷಕ್ಕೆ ಒಂದು ಬಾರಿ ಶಬರೀಶ ಸರ್ವಾಲಂಕಾರ ಭೂಷಿತನಾಗಿ ದರ್ಶನ ನೀಡುತ್ತಾನೆ.

ಈ ಆಭರಣಗಳನ್ನು ಉಳಿದ ದಿನಗಳಲ್ಲಿ ಪಂದಳ ಅರಮನೆಯಲ್ಲಿ ಇಡಲಾಗುವುದು. ಅರಮನೆಯಿಂದ ಆಭರಣ ಮೆಟ್ಟಿಗೆಯನ್ನು ಮೆರವಣಿಗೆಯಲ್ಲಿ ಕರೆತರಲಾಗುವುದು. ಪಂದಳ ರಾಜಮನೆತನಕ್ಕೆ ಸೇರಿದ ರಾಜನ ನೇತೃತ್ವದಲ್ಲಿ ಆಭರಣ ಹೊತ್ತ ಪಲ್ಲಕ್ಕಿಯ ಮೆರವಣಿಗೆ ಪ್ರಾರಂಭವಾಗುವುದು. ಕುಳನಾಡ, ಉಳ್ಳನ್ನೂರು, ಅರನ್ಮುಳ ಮಾರ್ಗವಾಗಿ ಪುತ್ತಿಕಾವ್‌ ದೇವಾಲಯಕ್ಕೆ ತಲುಪುವುದು. ಅಲ್ಲಿಂದ ಪೆರುನಾಡು ಮಾರ್ಗವಾಗಿ ಬಂದು ಅಲ್ಲಿ ಅರಣ್ಯ ಇಲಾಖೆ ಹೋಟೆಲ್‌ನಲ್ಲಿ ಬಿಡಾರ ಹೂಡಿ ನಂತರ ಕಾಡಿನ ಮೂಲಕ ಪ್ಲಾಪ್ಪಲ್ಲಿ ತಲುಪಿ ಅಲ್ಲಿಂದ ಚೆರಿಯಾನವಟ್ಟಂ , ಅಟ್ಟಮೋತ್ ಮಾರ್ಗವಾಗಿ ಸಂಜೆ ಹೊತ್ತಿಗೆ ಶಬರಿಮಲೆ ದೇವಾಲಯಕ್ಕೆ ತಲುಪುವುದು. ನಂತರ ಅಯ್ಯಪ್ಪಸ್ವಾಮಿಗೆ ಆಭರಣಗಳಿಂದ ಅಲಂಕಾರ ಮಾಡಲಾಗುವುದು.

ಆಗ ಪೊನ್ನಂಬಲಮೇಡುವಿನಲ್ಲಿ ಮಕರ ಜ್ಯೋತಿ ಬೆಳಗುವುದು.

ಪೌರಾಣಿಕ ಹಿನ್ನೆಲೆ

ಪೌರಾಣಿಕ ಹಿನ್ನೆಲೆ

ಪೌರಾಣಿಕ ಕತೆಯ ಪ್ರಕಾರ ಅಯ್ಯಪ್ಪಸ್ವಾಮಿ ಲೋಕ ಕಲ್ಯಾಣಕ್ಕೆ ಅರಮನೆಯನ್ನು ಬಿಟ್ಟು ಹೊರಡುತ್ತಾನೆ, ಮಗನಿಗೆ ಪಟ್ಟಾಭಿಷೇಕ ಮಾಡಿ ರಾಜನನ್ನು ಮಾಡಬೇಕೆಂದಿದ್ದ ತಂದೆಗೆ ತುಂಬಾ ನೋವಾಗುತ್ತದೆ. ನಿನಗೆ ಪಟ್ಟಾಭಿಷೇಕ ಮಾಡಿ ನೋಡುವ ಭಾಗ್ಯ ಇಲ್ಲವಲ್ಲ ಎಂದು ಕಣ್ಣೀರಿಡುತ್ತಾರೆ. ಆಗ ಮಣಿಕಂಠ 'ನನ್ನ ಪಟ್ಟಾಭಿಷೇಕ ನೋಡಬೇಕೆಂಬ ನಿಮ್ಮ ಆಸೆಯನ್ನು ನಿರಾಸೆ ಮಾಡಲಾರೆ. ಶಬರಿಮಲೆಯಲ್ಲಿ ನನಗಾಗಿ ಇಂದು ಗುಡಿ ನಿರ್ಮಿಸಿ. ಅಲ್ಲಿ ನನ್ನ ಮೂರ್ತಿಗೆ ಪ್ರತೀವರ್ಷ ಸಂಕ್ರಾಂತಿಯ ದಿನ ಸರ್ವಾಲಂಕಾರ ಮಾಡಿ. ನನ್ನ ದರ್ಶನಕ್ಕೆ ಬಂದ ಭಕ್ತರಿಗೆ ಮಕರ ಜ್ಯೋತಿಯಾಗಿ ಕಾಣಿಸುವ ಮೂಲಕ ದರ್ಶನ ನೀಡುತ್ತೇನೆ ' ಎಂದು ಹೇಳಲಾಗುವುದು.

ಅಯ್ಯಪ್ಪನ ನಂಬಿ ಆರಾಧಿಸಿದ ಭಕ್ತರ ಬದುಕಿನಲ್ಲಿ ಹಲವು ಪವಾಡಗಳು ನಡೆದಿರುವ ಹಲವು ಉದಾಹರಣೆಗಳಿವೆ. ಹೀಗಾಗಿ ಭಕ್ತರನ್ನು ಎಂದಿಗೂ ಅಯ್ಯಪ್ಪಸ್ವಾಮಿ ಕೈ ಬಿಡಲ್ಲ ಎಂಬುವುದು ಅವನ ನಂಬಿದ ಭಕ್ತರ ಬಲವಾದ ನಂಬಿಕೆ. ನಂಬಿಕೆಯಂತೆ ಭಕ್ತರ ಬದುಕಿನಲ್ಲಿ ಅಯ್ಯಪ್ಪ ಸ್ವಾಮಿ ಕೃಪೆಯಿಂದ ಒಳಿತಾಗುತ್ತಿರುವುದರಿಂದ ಪ್ರತೀವರ್ಷ ಈ ದಿವ್ಯ ದರ್ಶನಕ್ಕೆ ಲಕ್ಷಾಂತರ ಅಯ್ಯಪ್ಪ ಭಕ್ತರು ಕಠಿಣ ವ್ರತ ನಿಯಮಗಳನ್ನು ಪಾಲಿಸುವ ಮೂಲಕ ಶಬರಿ ಮಲೆಗೆ ಭೇಟಿ ನೀಡುತ್ತಾರೆ.

'ಸ್ವಾಮಿಯೇ ಶರಣಂ ಅಯ್ಯಪ್ಪ'

English summary

Makara Jyothi In Sabarimala 2023 : Know Jyothi Darshan Date and Time

Makara Jyothi In Sabarimala: Here are information about jyothi darshan date and time in 2023, read on...
X
Desktop Bottom Promotion