For Quick Alerts
ALLOW NOTIFICATIONS  
For Daily Alerts

ಮನೆಯ ಪ್ರವೇಶ ದ್ವಾರವು- ಮನೆ ಒಡೆಯನ ಸ್ವಭಾವ ಹೇಗಿರುತ್ತದೆ ಎಂಬುದನ್ನು ಸೂಚಿಸುತ್ತದೆಯಂತೆ!

|

ಪ್ರತಿಯೊಂದು ಮನೆ ನಿರ್ಮಾಣ ಕಾರ್ಯದ ವೇಳೆ ಕೂಡ ವಾಸ್ತುಶಾಸ್ತ್ರದ ಬಗ್ಗೆ ಹೆಚ್ಚು ಗಮನಹರಿಸಲಾಗುತ್ತದೆ. ವಾಸ್ತು ಸರಿಯಾಗಿದ್ದರೆ ಅಲ್ಲಿ ನೆಲೆಸುವವರ ಮನಸ್ಥಿತಿ ಮತ್ತು ಆ ಮನೆಗೆ ಹೆಚ್ಚಿನ ಸಮೃದ್ಧಿ ಹಾಗೂ ಸಂಪತ್ತು ಸಿಗುವುದು ಎಂದು ನಂಬಲಾಗಿದೆ.

ಪ್ರಮುಖವಾಗಿ ಮನೆಯ ಮುಖ್ಯದ್ವಾರವು ಮನೆಯಲ್ಲಿ ನೆಲೆಸುವವರ ಮೇಲೆ ಪರಿಣಾಮ ಬೀರುವುದು. ಮನೆಯ ಮುಖ್ಯದ್ವಾರವನ್ನು ಅಳವಡಿಸುವ ವೇಳೆ ಕೆಲವೊಂದು ಆಚರಣೆಗಳನ್ನು ಪಾಲಿಸಿಕೊಂಡು ಹೋಗುವಂತಹ ಸಂಪ್ರದಾಯವು ಇದೆ.

Main Door Can Reveal The Owners Nature

ಮಾನಸಿಕ ಸ್ಥಿತಿಯು ಉತ್ತಮವಾಗಿರಬೇಕಾದರೆ ನಾವು ಮನೆಯ ವಾಸ್ತುವನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಮನೆಯ ಕೆಲವೊಂದು ವಿನ್ಯಾಸವು ಮನೆಯಲ್ಲಿರುವವರ ಮನಸ್ಥಿತಿ ಮೇಲೆ ನೇರ ಪರಿಣಾಮ ಬೀರುವುದು. ಮನೆಯ ವಿನ್ಯಾಸವನ್ನು ನೋಡಿ ಅವರ ಮನಸ್ಥಿತಿ ಅರಿಯಬಹುದಾಗಿದೆ. ಈ ಲೇಖನದಲ್ಲಿ ನಾವು ನಿಮಗೆ ಇಂದು ಅದನ್ನೇ ಹೇಳಲಿದ್ದೇವೆ. ವಿವಿಧ ರೀತಿಯ ಪ್ರವೇಶ ದ್ವಾರಗಳು ಅಥವಾ ಬಾಗಿಲುಗಳು ಇರುವುದು. ನಾವು ಇಂದು ಅವುಗಳ ಸ್ವಭಾವ ಮತ್ತು ಪರಿಣಾಮದ ಬಗ್ಗೆ ತಿಳಿಸಲಿದ್ದೇವೆ. ಇದನ್ನು ನೀವು ತಿಳಿದುಕೊಳ್ಳಿ.

ಈಶಾನ್ಯ

ಈಶಾನ್ಯ

ಮನೆಯ ಮುಖ್ಯದ್ವಾರವು ಈಶಾನ್ಯ ಭಾಗಕ್ಕೆ ಇದ್ದರೆ ಆಗ ಆ ಮನೆಯ ಯಜಮಾನನು ತುಂಬಾ ಸರಳ ವ್ಯಕ್ತಿ ಎಂದು ಊಹಿಸಬಹುದು. ಇಂತಹ ವ್ಯಕ್ತಿಗಳು ತಮ್ಮ ಸಾಧನೆ ಬಗ್ಗೆ ಕೊಚ್ಚಿಕೊಳ್ಳುವುದಿಲ್ಲ. ಅತಿಯಾಗಿ ವೆಚ್ಚ ಮಾಡುವುದು ಕೂಡ ಅವರಿಗೆ ಇಷ್ಟವಾಗದು. ಮನೆಯ ಪ್ರವೇಶ ದ್ವಾರವು ಈಶಾನ್ಯಕ್ಕೆ ಹೆಚ್ಚು ಹತ್ತಿರವಿದ್ದರೆ ಆಗ ಮನೆಯ ಯಜಮಾನನು ತುಂಬಾ ವಿನಯಶೀಲ ಎಂದು ಊಹಿಸಲಾಗಿದೆ. ಈ ವ್ಯಕ್ತಿಗೆ ಆಧ್ಯಾತ್ಮ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಕಾಣಿಸುವುದು. ಸಾಹಿತ್ಯವು ಇವರನ್ನು ಆಕರ್ಷಿಸುವುದು ಮತ್ತು ಇಂತಹ ವ್ಯಕ್ತಿಗಳು ತುಂಬಾ ಧೈರ್ಯ ಶಾಲಿಯಾಗಿರುವರು.

ಪೂರ್ವ

ಪೂರ್ವ

ಮನೆಯ ಮುಖ್ಯ ದ್ವಾರವು ಪೂರ್ವ ದಿಕ್ಕಿನಲ್ಲಿ, ಮನೆಯ ಪೂರ್ವ ಭಾಗದ ಗೋಡೆಯ ಮಧ್ಯಭಾಗದಲ್ಲಿ ಇದು ಇದ್ದರೆ ಆಗ ಈ ಮನೆಯ ಹೆಚ್ಚಿನ ಎಲ್ಲಾ ಸದಸ್ಯರಿಗೆ ಸಮಾನ ಗುಣವು ಇರುವುದು. ಅವರೆಲ್ಲರೂ ತುಂಬಾ ಮಹಾತ್ವಾಕಾಂಕ್ಷಿಗಳು ಆಗಿರುವರು. ಇವರು ದೊಡ್ಡ ಕನಸು ಕಾಣೂವರು ಮತ್ತು ಜೀವನದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಲು ಬಯಸುವರು.

ಆಗ್ನೇಯ

ಆಗ್ನೇಯ

ದಕ್ಷಿಣ ದಿಕ್ಕಿ ಅಷ್ಟೊಂದು ಒಳ್ಳೆಯದೆಂದು ಪರಿಗಣಿಸಲಾಗಿಲ್ಲ ಮತ್ತು ಮನೆಯ ಮುಖ್ಯ ಬಾಗಿಲು ಈ ಭಾಗದಲ್ಲಿ ಇರುವುದಿಲ್ಲ. ಈ ದಿಕ್ಕಿನಲ್ಲಿ ಪ್ರವೇಶ ದ್ವಾರವು ಇದ್ದರೆ ಆಗ ಮನೆಯಲ್ಲಿ ಕಳ್ಳತನ, ಸದಸ್ಯರ ಮಧ್ಯೆ ಜಗಳವಾಗುವಂತಹ ಸಂದರ್ಭವಿರುವುದು.

Most Read: ಮನುಷ್ಯನಲ್ಲಿ ಇರುವಂತಹ ನಾಲ್ಕು ಗುಣಗಳಿಂದ ಆತ ಸ್ವರ್ಗದಿಂದ ಬಂದಿರುವವನು ಎಂದು ಹೇಳಬಹುದಂತೆ!

ನೈಋತ್ಯ

ನೈಋತ್ಯ

ಮನೆಯ ಮುಖ್ಯ ಬಾಗಿಲು ನೈಋತ್ಯ ದಿಕ್ಕಿನಲ್ಲಿ ಇರುವುದರಿಂದ ಮನೆಯ ಯಜಮಾನನಿಗೆ ಹೆಚ್ಚಿನ ಒತ್ತಡ ಮತ್ತು ಆತಂಕವು ಕಾಣಿಸಿಕೊಳ್ಳಬಹುದು. ಮನೆಯಲ್ಲಿನ ಮಹಿಳೆಯರ ಆರೋಗ್ಯವು ಕೆಡುವುದರಿಂದಾಗಿ ಯಜಮಾನನಿಗೆ ಹೆಚ್ಚು ಒತ್ತಡ ಬರಬಹುದು. ಬಾಗಿಲು ನೈಋತ್ಯ ದಿಕ್ಕಿನತ್ತ ಇದ್ದರೆ ಆಗ ಮನೆಯ ಯಜಮಾನನು ತುಂಬಾ ಗಂಭೀರವಾದ ಕಾಯಿಲೆಗೆ ತುತ್ತಾಗುವಂತಹ ಸಾಧ್ಯತೆಯು ಅತಿಯಾಗಿರುವುದು. ಆತ ತುಂಬಾ ಉದಾಸೀನ ಮತ್ತು ಅನಾರೋಗ್ಯಕರ ಹವ್ಯಾಸಗಳಿಗೆ ಬಲಿಯಾಗುವನು.

ಪಶ್ಚಿಮ

ಪಶ್ಚಿಮ

ಪಶ್ಚಿಮ ದಿಕ್ಕಿಗೆ ಪ್ರವೇಶ ದ್ವಾರವಿದ್ದರೆ ಆಗ ಮನೆಯ ಯಜಮಾನನು ತುಂಬಾ ಸರಳ ಹಾಗೂ ಅಷ್ಟೇ ಗಂಭೀರ ವ್ಯಕ್ತಿಯನ್ನಾಗಿ ಮಾಡುವುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಆತ ಗಂಭೀರವಾಗಿ ಈ ಬಗ್ಗೆ ಚಿಂತಿಸುವನು.

ವಾಯುವ್ಯ

ವಾಯುವ್ಯ

ಮನೆಯ ಪ್ರವೇಶ ಬಾಗಿಲು ವಾಯುವ್ಯ ದಿಕ್ಕಿಗೆ ಇದ್ದರೆ ಆಗ ಆ ಮನೆಯ ಯಜಮಾಣನು ಪ್ರವಾಸ ಮತ್ತು ಹೊಸ ಹೊಸ ಪ್ರದೇಶಗಳಿಗೆ ಭೇಟಿ ನೀಡುವುದನ್ನು ಇಷ್ಟಪಡುತ್ತಾನೆ ಎನ್ನುವುದನ್ನು ಸೂಚಿಸುತ್ತದೆ. ಆತ ತುಂಬಾ ಭಾವನಾತ್ಮಕ ಮತ್ತು ಏರಿಳಿತದ ಗುಣ ಹೊಂದಿರುವನು. ಬಾಗಿಲು ಉತ್ತರ ದಿಕ್ಕಿನಲ್ಲಿದ್ದರೆ ಆಗ ಯಜಮಾನನ ಜೀವನದಲ್ಲಿ ಇದರಿಂದ ವೈಯಕ್ತಿಕ ಮತ್ತು ಕಾನೂನಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

Most Read: ಬರೀ 15 ದಿನಗಳಲ್ಲಿಯೇ ಬಿಳಿಕೂದಲನ್ನು ಕಪ್ಪಾಗಿಸುವ ಮನೆಯಲ್ಲಿಯೇ ಮಾಡಬಹುದಾದ ನೈಸರ್ಗಿಕ ಎಣ್ಣೆಗಳು

ಉತ್ತರ

ಉತ್ತರ

ಉತ್ತರ ದಿಕ್ಕಿನಲ್ಲಿ ಮನೆಯ ಮುಖ್ಯದ್ವಾರವು ಇದ್ದರೆ ಆಗ ಆ ವ್ಯಕ್ತಿಯು ಸರಳವಾದ ನಡವಳಿಕೆ ಹೊಂದಿರುವವ ಎಂದು ಹೇಳಬಹುದು. ಆ ವ್ಯಕ್ತಿಯು ತುಂಬಾ ಬುದ್ಧಿವಂತ ಮತ್ತು ಗೌರವಯುತವಾಗಿರುವಾತ.

English summary

Main Door Can Reveal The Owner's Nature

Vastu Shastra is believed to affect the environment and the moods of the people around by regulating the energies that flow around. So does it mean that the Vastu of a house can be used to predict the nature and behaviour of the members staying in it? Probably that is how the nature of the owner can be known through the direction of the main door of the house.
X
Desktop Bottom Promotion