For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಸಮೃದ್ಧಿ ನೆಲೆಸಲು ನಿತ್ಯ ಪಠಿಸಿ ಈ ಮಹಾಲಕ್ಷ್ಮಿ ಸ್ತೋತ್ರ

|

ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ದಿನವೂ ಒಂದೊಂದು ದೇವತೆಗೆ ಸಮರ್ಪಿಸಲಾಗಿದೆ. ಅದೇ ರೀತಿ ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದು ಪದ್ಧತಿ. ಈ ದಿನ ಐಶ್ವರ್ಯ, ಸಂತೋಷ ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿಯನ್ನು ಪೂಜಿಸುವ ಜೊತೆಗೆ ಲಕ್ಷ್ಮಿ ಚಾಲೀಸಾ, ಮಹಾಲಕ್ಷ್ಮಿ ಸ್ತೋತ್ರವನ್ನು ಪಠಿಸಿದರೆ ಮನೆಯಲ್ಲಿ ಲಕ್ಷ್ಮಿ ಸದಾ ಕಾಲ ನೆಲೆಸುತ್ತಾಳೆ, ಆರ್ಥಿಕವಾಗಿ ಅಭಿವೃದ್ಧಿಯಾಗುತ್ತೇವೆ, ಸಂಪತ್ತು ತುಂಬಿರುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ.

ಧರ್ಮಗ್ರಂಥಗಳ ಪ್ರಕಾರ, ಇಂದ್ರ ದೇವನು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಈ ಸ್ತೋತ್ರವನ್ನು ರಚಿಸಿದನು ಎಂದು ನಂಬಲಾಗಿದೆ. ಮಹಾಲಕ್ಷ್ಮಿ ಸ್ತೋತ್ರವನ್ನು ಪಠಿಸುವುದರಿಂದ ತಾಯಿ ಲಕ್ಷ್ಮಿಯು ಶೀಘ್ರದಲ್ಲೇ ಪ್ರಸನ್ನಳಾಗುತ್ತಾಳೆ, ಯಾರು ಮಹಾಲಕ್ಷ್ಮಿ ಸ್ತೋತ್ರವನ್ನು ಪ್ರತಿನಿತ್ಯ ಒಮ್ಮೆ ಪಠಿಸುತ್ತಾರೋ ಅವರು ಎಲ್ಲಾ ರೀತಿಯ ಪಾಪಗಳಿಂದ ಮುಕ್ತರಾಗುತ್ತಾರೆ ಮತ್ತು ವ್ಯಕ್ತಿಯ ಎಲ್ಲಾ ಆಸೆಗಳನ್ನು ಪೂರೈಸುತ್ತಾಳೆ ಎಂದು ನಂಬಲಾಗಿದೆ.

ಈ ಹಿನ್ನೆಲೆ ನಾವಿಂದು ನಿತ್ಯ ಪಠಿಸಲು ಮಹಾಲಕ್ಷ್ಮಿ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕಂ, ಮಹಾಲಕ್ಷ್ಮಿ ಅಷ್ಟೋತ್ತರ ಶತ ನಾಮಾವಳಿ ಸ್ತೋತ್ರವನ್ನು ಓದಿ:

1. ಮಹಾಲಕ್ಷ್ಮಿ ಸ್ತೋತ್ರ

1. ಮಹಾಲಕ್ಷ್ಮಿ ಸ್ತೋತ್ರ

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ ।

ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಽಸ್ತು ತೇ ॥ 1 ॥

ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ ।

ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ॥ 2 ॥

ಸರ್ವಜ್ಞೇ ಸರ್ವವರದೇ ಸರ್ವ ದುಷ್ಟ ಭಯಂಕರಿ ।

ಸರ್ವದುಃಖ ಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ॥ 3 ॥

ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ ।

ಮಂತ್ರ ಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ॥ 4 ॥

ಆದ್ಯಂತ ರಹಿತೇ ದೇವಿ ಆದಿಶಕ್ತಿ ಮಹೇಶ್ವರಿ ।

ಯೋಗಜ್ಞೇ ಯೋಗ ಸಂಭೂತೇ ಮಹಾಲಕ್ಷ್ಮಿ ನಮೋಽಸ್ತು ತೇ ॥ 5 ॥

ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ ।

ಮಹಾ ಪಾಪ ಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ॥ 6 ॥

ಪದ್ಮಾಸನ ಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ ।

ಪರಮೇಶಿ ಜಗನ್ಮಾತಃ ಮಹಾಲಕ್ಷ್ಮಿ ನಮೋಽಸ್ತು ತೇ ॥ 7 ॥

ಶ್ವೇತಾಂಬರಧರೇ ದೇವಿ ನಾನಾಲಂಕಾರ ಭೂಷಿತೇ ।

ಜಗಸ್ಥಿತೇ ಜಗನ್ಮಾತಃ ಮಹಾಲಕ್ಷ್ಮಿ ನಮೋಽಸ್ತು ತೇ ॥ 8 ॥

ಮಹಾಲಕ್ಷ್ಮಷ್ಟಕಂ ಸ್ತೋತ್ರಂ ಯಃ ಪಠೇದ್ ಭಕ್ತಿಮಾನ್ ನರಃ ।

ಸರ್ವ ಸಿದ್ಧಿ ಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ ॥

ಏಕಕಾಲೇ ಪಠೇನ್ನಿತ್ಯಂ ಮಹಾಪಾಪ ವಿನಾಶನಮ್ ।

ದ್ವಿಕಾಲಂ ಯಃ ಪಠೇನ್ನಿತ್ಯಂ ಧನ ಧಾನ್ಯ ಸಮನ್ವಿತಃ ॥

ತ್ರಿಕಾಲಂ ಯಃ ಪಠೇನ್ನಿತ್ಯಂ ಮಹಾಶತ್ರು ವಿನಾಶನಮ್ ।

ಮಹಾಲಕ್ಷ್ಮೀ ರ್ಭವೇನ್-ನಿತ್ಯಂ ಪ್ರಸನ್ನಾ ವರದಾ ಶುಭಾ ॥

2. ಶ್ರೀ ಮಹಾ ಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ

2. ಶ್ರೀ ಮಹಾ ಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ

ಓಂ ಪ್ರಕೃತ್ಯೈ ನಮಃ

ಓಂ ವಿಕೃತ್ಯೈ ನಮಃ

ಓಂ ವಿದ್ಯಾಯೈ ನಮಃ

ಓಂ ಸರ್ವಭೂತ ಹಿತಪ್ರದಾಯೈ ನಮಃ

ಓಂ ಶ್ರದ್ಧಾಯೈ ನಮಃ

ಓಂ ವಿಭೂತ್ಯೈ ನಮಃ

ಓಂ ಸುರಭ್ಯೈ ನಮಃ

ಓಂ ಪರಮಾತ್ಮಿಕಾಯೈ ನಮಃ

ಓಂ ವಾಚೇ ನಮಃ

ಓಂ ಪದ್ಮಾಲಯಾಯೈ ನಮಃ (10)

ಓಂ ಪದ್ಮಾಯೈ ನಮಃ

ಓಂ ಶುಚಯೇ ನಮಃ

ಓಂ ಸ್ವಾಹಾಯೈ ನಮಃ

ಓಂ ಸ್ವಧಾಯೈ ನಮಃ

ಓಂ ಸುಧಾಯೈ ನಮಃ

ಓಂ ಧನ್ಯಾಯೈ ನಮಃ

ಓಂ ಹಿರಣ್ಮಯ್ಯೈ ನಮಃ

ಓಂ ಲಕ್ಷ್ಮ್ಯೈ ನಮಃ

ಓಂ ನಿತ್ಯಪುಷ್ಟಾಯೈ ನಮಃ

ಓಂ ವಿಭಾವರ್ಯೈ ನಮಃ (20)

ಓಂ ಅದಿತ್ಯೈ ನಮಃ

ಓಂ ದಿತ್ಯೈ ನಮಃ

ಓಂ ದೀಪ್ತಾಯೈ ನಮಃ

ಓಂ ವಸುಧಾಯೈ ನಮಃ

ಓಂ ವಸುಧಾರಿಣ್ಯೈ ನಮಃ

ಓಂ ಕಮಲಾಯೈ ನಮಃ

ಓಂ ಕಾಂತಾಯೈ ನಮಃ

ಓಂ ಕಾಮಾಕ್ಷ್ಯೈ ನಮಃ

ಓಂ ಕ್ಷೀರೋದಸಂಭವಾಯೈ ನಮಃ

ಓಂ ಅನುಗ್ರಹಪರಾಯೈ ನಮಃ (30)

ಓಂ ಋದ್ಧಯೇ ನಮಃ

ಓಂ ಅನಘಾಯೈ ನಮಃ

ಓಂ ಹರಿವಲ್ಲಭಾಯೈ ನಮಃ

ಓಂ ಅಶೋಕಾಯೈ ನಮಃ

ಓಂ ಅಮೃತಾಯೈ ನಮಃ

ಓಂ ದೀಪ್ತಾಯೈ ನಮಃ

ಓಂ ಲೋಕಶೋಕ ವಿನಾಶಿನ್ಯೈ ನಮಃ

ಓಂ ಧರ್ಮನಿಲಯಾಯೈ ನಮಃ

ಓಂ ಕರುಣಾಯೈ ನಮಃ

ಓಂ ಲೋಕಮಾತ್ರೇ ನಮಃ (40)

ಓಂ ಪದ್ಮಪ್ರಿಯಾಯೈ ನಮಃ

ಓಂ ಪದ್ಮಹಸ್ತಾಯೈ ನಮಃ

ಓಂ ಪದ್ಮಾಕ್ಷ್ಯೈ ನಮಃ

ಓಂ ಪದ್ಮಸುಂದರ್ಯೈ ನಮಃ

ಓಂ ಪದ್ಮೋದ್ಭವಾಯೈ ನಮಃ

ಓಂ ಪದ್ಮಮುಖ್ಯೈ ನಮಃ

ಓಂ ಪದ್ಮನಾಭಪ್ರಿಯಾಯೈ ನಮಃ

ಓಂ ರಮಾಯೈ ನಮಃ

ಓಂ ಪದ್ಮಮಾಲಾಧರಾಯೈ ನಮಃ

ಓಂ ದೇವ್ಯೈ ನಮಃ (50)

ಓಂ ಪದ್ಮಿನ್ಯೈ ನಮಃ

ಓಂ ಪದ್ಮಗಂಧಿನ್ಯೈ ನಮಃ

ಓಂ ಪುಣ್ಯಗಂಧಾಯೈ ನಮಃ

ಓಂ ಸುಪ್ರಸನ್ನಾಯೈ ನಮಃ

ಓಂ ಪ್ರಸಾದಾಭಿಮುಖ್ಯೈ ನಮಃ

ಓಂ ಪ್ರಭಾಯೈ ನಮಃ

ಓಂ ಚಂದ್ರವದನಾಯೈ ನಮಃ

ಓಂ ಚಂದ್ರಾಯೈ ನಮಃ

ಓಂ ಚಂದ್ರಸಹೋದರ್ಯೈ ನಮಃ

ಓಂ ಚತುರ್ಭುಜಾಯೈ ನಮಃ (60)

ಓಂ ಚಂದ್ರರೂಪಾಯೈ ನಮಃ

ಓಂ ಇಂದಿರಾಯೈ ನಮಃ

ಓಂ ಇಂದುಶೀತಲಾಯೈ ನಮಃ

ಓಂ ಆಹ್ಲೋದಜನನ್ಯೈ ನಮಃ

ಓಂ ಪುಷ್ಟ್ಯೈ ನಮಃ

ಓಂ ಶಿವಾಯೈ ನಮಃ

ಓಂ ಶಿವಕರ್ಯೈ ನಮಃ

ಓಂ ಸತ್ಯೈ ನಮಃ

ಓಂ ವಿಮಲಾಯೈ ನಮಃ

ಓಂ ವಿಶ್ವಜನನ್ಯೈ ನಮಃ (70)

ಓಂ ತುಷ್ಟಯೇ ನಮಃ

ಓಂ ದಾರಿದ್ರ್ಯನಾಶಿನ್ಯೈ ನಮಃ

ಓಂ ಪ್ರೀತಿಪುಷ್ಕರಿಣ್ಯೈ ನಮಃ

ಓಂ ಶಾಂತಾಯೈ ನಮಃ

ಓಂ ಶುಕ್ಲಮಾಲ್ಯಾಂಬರಾಯೈ ನಮಃ

ಓಂ ಶ್ರಿಯೈ ನಮಃ

ಓಂ ಭಾಸ್ಕರ್ಯೈ ನಮಃ

ಓಂ ಬಿಲ್ವನಿಲಯಾಯೈ ನಮಃ

ಓಂ ವರಾರೋಹಾಯೈ ನಮಃ

ಓಂ ಯಶಸ್ವಿನ್ಯೈ ನಮಃ (80)

ಓಂ ವಸುಂಧರಾಯೈ ನಮಃ

ಓಂ ಉದಾರಾಂಗಾಯೈ ನಮಃ

ಓಂ ಹರಿಣ್ಯೈ ನಮಃ

ಓಂ ಹೇಮಮಾಲಿನ್ಯೈ ನಮಃ

ಓಂ ಧನಧಾನ್ಯ ಕರ್ಯೈ ನಮಃ

ಓಂ ಸಿದ್ಧಯೇ ನಮಃ

ಓಂ ಸದಾಸೌಮ್ಯಾಯೈ ನಮಃ

ಓಂ ಶುಭಪ್ರದಾಯೈ ನಮಃ

ಓಂ ನೃಪವೇಶ್ಮಗತಾಯೈ ನಮಃ

ಓಂ ನಂದಾಯೈ ನಮಃ (90)

ಓಂ ವರಲಕ್ಷ್ಮ್ಯೈ ನಮಃ

ಓಂ ವಸುಪ್ರದಾಯೈ ನಮಃ

ಓಂ ಶುಭಾಯೈ ನಮಃ

ಓಂ ಹಿರಣ್ಯಪ್ರಾಕಾರಾಯೈ ನಮಃ

ಓಂ ಸಮುದ್ರ ತನಯಾಯೈ ನಮಃ

ಓಂ ಜಯಾಯೈ ನಮಃ

ಓಂ ಮಂಗಳಾಯೈ ದೇವ್ಯೈ ನಮಃ

ಓಂ ವಿಷ್ಣು ವಕ್ಷಃಸ್ಥಲ ಸ್ಥಿತಾಯೈ ನಮಃ

ಓಂ ವಿಷ್ಣುಪತ್ನ್ಯೈ ನಮಃ

ಓಂ ಪ್ರಸನ್ನಾಕ್ಷ್ಯೈ ನಮಃ (100)

ಓಂ ನಾರಾಯಣ ಸಮಾಶ್ರಿತಾಯೈ ನಮಃ

ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ

ಓಂ ಸರ್ವೋಪದ್ರವ ವಾರಿಣ್ಯೈ ನಮಃ

ಓಂ ನವದುರ್ಗಾಯೈ ನಮಃ

ಓಂ ಮಹಾಕಾಳ್ಯೈ ನಮಃ

ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ

ಓಂ ತ್ರಿಕಾಲ ಜ್ಞಾನ ಸಂಪನ್ನಾಯೈ ನಮಃ

ಓಂ ಭುವನೇಶ್ವರ್ಯೈ ನಮಃ (108)

ಇತಿ ಶ್ರೀಲಕ್ಷ್ಮ್ಯಷ್ಟೋತ್ತರಶತನಾಮಾವಳಿಃ ಸಮಾಪ್ತಾ ।

3.ಅಷ್ಟಲಕ್ಷ್ಮಿ ಸ್ತೋತ್ರ

3.ಅಷ್ಟಲಕ್ಷ್ಮಿ ಸ್ತೋತ್ರ

ಆದಿಲಕ್ಷ್ಮಿ

ಸುಮನಸ ವಂದಿತ ಸುಂದರಿ ಮಾಧವಿ, ಚಂದ್ರ ಸಹೊದರಿ ಹೇಮಮಯೇ

ಮುನಿಗಣ ವಂದಿತ ಮೋಕ್ಷಪ್ರದಾಯನಿ, ಮಂಜುಲ ಭಾಷಿಣಿ ವೇದನುತೇ ।

ಪಂಕಜವಾಸಿನಿ ದೇವ ಸುಪೂಜಿತ, ಸದ್ಗುಣ ವರ್ಷಿಣಿ ಶಾಂತಿಯುತೇ

ಜಯ ಜಯಹೇ ಮಧುಸೂದನ ಕಾಮಿನಿ, ಆದಿಲಕ್ಷ್ಮಿ ಪರಿಪಾಲಯ ಮಾಮ್ ॥ 1 ॥

ಧಾನ್ಯಲಕ್ಷ್ಮಿ

ಅಯಿಕಲಿ ಕಲ್ಮಷ ನಾಶಿನಿ ಕಾಮಿನಿ, ವೈದಿಕ ರೂಪಿಣಿ ವೇದಮಯೇ

ಕ್ಷೀರ ಸಮುದ್ಭವ ಮಂಗಳ ರೂಪಿಣಿ, ಮಂತ್ರನಿವಾಸಿನಿ ಮಂತ್ರನುತೇ ।

ಮಂಗಳದಾಯಿನಿ ಅಂಬುಜವಾಸಿನಿ, ದೇವಗಣಾಶ್ರಿತ ಪಾದಯುತೇ

ಜಯ ಜಯಹೇ ಮಧುಸೂದನ ಕಾಮಿನಿ, ಧಾನ್ಯಲಕ್ಷ್ಮಿ ಪರಿಪಾಲಯ ಮಾಮ್ ॥ 2 ॥

ಧೈರ್ಯಲಕ್ಷ್ಮಿ

ಜಯವರವರ್ಷಿಣಿ ವೈಷ್ಣವಿ ಭಾರ್ಗವಿ, ಮಂತ್ರ ಸ್ವರೂಪಿಣಿ ಮಂತ್ರಮಯೇ

ಸುರಗಣ ಪೂಜಿತ ಶೀಘ್ರ ಫಲಪ್ರದ, ಜ್ಞಾನ ವಿಕಾಸಿನಿ ಶಾಸ್ತ್ರನುತೇ ।

ಭವಭಯಹಾರಿಣಿ ಪಾಪವಿಮೋಚನಿ, ಸಾಧು ಜನಾಶ್ರಿತ ಪಾದಯುತೇ

ಜಯ ಜಯಹೇ ಮಧು ಸೂಧನ ಕಾಮಿನಿ, ಧೈರ್ಯಲಕ್ಷ್ಮೀ ಪರಿಪಾಲಯ ಮಾಮ್ ॥ 3 ॥

ಗಜಲಕ್ಷ್ಮಿ

ಜಯ ಜಯ ದುರ್ಗತಿ ನಾಶಿನಿ ಕಾಮಿನಿ, ಸರ್ವಫಲಪ್ರದ ಶಾಸ್ತ್ರಮಯೇ

ರಧಗಜ ತುರಗಪದಾತಿ ಸಮಾವೃತ, ಪರಿಜನ ಮಂಡಿತ ಲೋಕನುತೇ ।

ಹರಿಹರ ಬ್ರಹ್ಮ ಸುಪೂಜಿತ ಸೇವಿತ, ತಾಪ ನಿವಾರಿಣಿ ಪಾದಯುತೇ

ಜಯ ಜಯಹೇ ಮಧುಸೂದನ ಕಾಮಿನಿ, ಗಜಲಕ್ಷ್ಮೀ ರೂಪೇಣ ಪಾಲಯ ಮಾಮ್ ॥ 4 ॥

ಸಂತಾನಲಕ್ಷ್ಮಿ

ಅಯಿಖಗ ವಾಹಿನಿ ಮೋಹಿನಿ ಚಕ್ರಿಣಿ, ರಾಗವಿವರ್ಧಿನಿ ಜ್ಞಾನಮಯೇ

ಗುಣಗಣವಾರಧಿ ಲೋಕಹಿತೈಷಿಣಿ, ಸಪ್ತಸ್ವರ ಭೂಷಿತ ಗಾನನುತೇ ।

ಸಕಲ ಸುರಾಸುರ ದೇವ ಮುನೀಶ್ವರ, ಮಾನವ ವಂದಿತ ಪಾದಯುತೇ

ಜಯ ಜಯಹೇ ಮಧುಸೂದನ ಕಾಮಿನಿ, ಸಂತಾನಲಕ್ಷ್ಮೀ ಪರಿಪಾಲಯ ಮಾಮ್ ॥ 5 ॥

ವಿಜಯಲಕ್ಷ್ಮಿ

ಜಯ ಕಮಲಾಸಿನಿ ಸದ್ಗತಿ ದಾಯಿನಿ, ಜ್ಞಾನವಿಕಾಸಿನಿ ಗಾನಮಯೇ

ಅನುದಿನ ಮರ್ಚಿತ ಕುಂಕುಮ ಧೂಸರ, ಭೂಷಿತ ವಾಸಿತ ವಾದ್ಯನುತೇ ।

ಕನಕಧರಾಸ್ತುತಿ ವೈಭವ ವಂದಿತ, ಶಂಕರದೇಶಿಕ ಮಾನ್ಯಪದೇ

ಜಯ ಜಯಹೇ ಮಧುಸೂದನ ಕಾಮಿನಿ, ವಿಜಯಲಕ್ಷ್ಮೀ ಪರಿಪಾಲಯ ಮಾಮ್ ॥ 6 ॥

ವಿದ್ಯಾಲಕ್ಷ್ಮಿ

ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ, ಶೋಕವಿನಾಶಿನಿ ರತ್ನಮಯೇ

ಮಣಿಮಯ ಭೂಷಿತ ಕರ್ಣವಿಭೂಷಣ, ಶಾಂತಿ ಸಮಾವೃತ ಹಾಸ್ಯಮುಖೇ ।

ನವನಿಧಿ ದಾಯಿನಿ ಕಲಿಮಲಹಾರಿಣಿ, ಕಾಮಿತ ಫಲಪ್ರದ ಹಸ್ತಯುತೇ

ಜಯ ಜಯಹೇ ಮಧುಸೂದನ ಕಾಮಿನಿ, ವಿದ್ಯಾಲಕ್ಷ್ಮೀ ಸದಾ ಪಾಲಯ ಮಾಮ್ ॥ 7 ॥

ಧನಲಕ್ಷ್ಮಿ

ಧಿಮಿಧಿಮಿ ಧಿಂಧಿಮಿ ಧಿಂಧಿಮಿ-ದಿಂಧಿಮಿ, ದುಂಧುಭಿ ನಾದ ಸುಪೂರ್ಣಮಯೇ

ಘುಮಘುಮ ಘುಂಘುಮ ಘುಂಘುಮ ಘುಂಘುಮ, ಶಂಖ ನಿನಾದ ಸುವಾದ್ಯನುತೇ ।

ವೇದ ಪೂರಾಣೇತಿಹಾಸ ಸುಪೂಜಿತ, ವೈದಿಕ ಮಾರ್ಗ ಪ್ರದರ್ಶಯುತೇ

ಜಯ ಜಯಹೇ ಮಧುಸೂದನ ಕಾಮಿನಿ, ಧನಲಕ್ಷ್ಮಿ ರೂಪೇಣಾ ಪಾಲಯ ಮಾಮ್ ॥ 8 ॥

ಫಲಶೃತಿ

ಶ್ಲೋ॥ ಅಷ್ಟಲಕ್ಷ್ಮೀ ನಮಸ್ತುಭ್ಯಂ ವರದೇ ಕಾಮರೂಪಿಣಿ ।

ವಿಷ್ಣುವಕ್ಷಃ ಸ್ಥಲಾ ರೂಢೇ ಭಕ್ತ ಮೋಕ್ಷ ಪ್ರದಾಯಿನಿ ॥

ಶ್ಲೋ॥ ಶಂಖ ಚಕ್ರಗದಾಹಸ್ತೇ ವಿಶ್ವರೂಪಿಣಿತೇ ಜಯಃ ।

ಜಗನ್ಮಾತ್ರೇ ಚ ಮೋಹಿನ್ಯೈ ಮಂಗಳಂ ಶುಭ ಮಂಗಳಮ್ ॥

4. ಸರ್ವದೇವ ಕೃತ ಶ್ರೀ ಲಕ್ಷ್ಮೀ ಸ್ತೋತ್ರಂ

4. ಸರ್ವದೇವ ಕೃತ ಶ್ರೀ ಲಕ್ಷ್ಮೀ ಸ್ತೋತ್ರಂ

ಕ್ಷಮಸ್ವ ಭಗವತ್ಯಂಬ ಕ್ಷಮಾ ಶೀಲೇ ಪರಾತ್ಪರೇ।

ಶುದ್ಧ ಸತ್ವ ಸ್ವರೂಪೇಚ ಕೋಪಾದಿ ಪರಿ ವರ್ಜಿತೇ॥

ಉಪಮೇ ಸರ್ವ ಸಾಧ್ವೀನಾಂ ದೇವೀನಾಂ ದೇವ ಪೂಜಿತೇ।

ತ್ವಯಾ ವಿನಾ ಜಗತ್ಸರ್ವಂ ಮೃತ ತುಲ್ಯಂಚ ನಿಷ್ಫಲಂ।

ಸರ್ವ ಸಂಪತ್ಸ್ವರೂಪಾತ್ವಂ ಸರ್ವೇಷಾಂ ಸರ್ವ ರೂಪಿಣೀ।

ರಾಸೇಶ್ವರ್ಯಧಿ ದೇವೀತ್ವಂ ತ್ವತ್ಕಲಾಃ ಸರ್ವಯೋಷಿತಃ॥

ಕೈಲಾಸೇ ಪಾರ್ವತೀ ತ್ವಂಚ ಕ್ಷೀರೋಧೇ ಸಿಂಧು ಕನ್ಯಕಾ।

ಸ್ವರ್ಗೇಚ ಸ್ವರ್ಗ ಲಕ್ಷ್ಮೀ ಸ್ತ್ವಂ ಮರ್ತ್ಯ ಲಕ್ಷ್ಮೀಶ್ಚ ಭೂತಲೇ॥

ವೈಕುಂಠೇಚ ಮಹಾಲಕ್ಷ್ಮೀಃ ದೇವದೇವೀ ಸರಸ್ವತೀ।

ಗಂಗಾಚ ತುಲಸೀತ್ವಂಚ ಸಾವಿತ್ರೀ ಬ್ರಹ್ಮ ಲೋಕತಃ॥

ಕೃಷ್ಣ ಪ್ರಾಣಾಧಿ ದೇವೀತ್ವಂ ಗೋಲೋಕೇ ರಾಧಿಕಾ ಸ್ವಯಂ।

ರಾಸೇ ರಾಸೇಶ್ವರೀ ತ್ವಂಚ ಬೃಂದಾ ಬೃಂದಾವನೇ ವನೇ॥

ಕೃಷ್ಣ ಪ್ರಿಯಾ ತ್ವಂ ಭಾಂಡೀರೇ ಚಂದ್ರಾ ಚಂದನ ಕಾನನೇ।

ವಿರಜಾ ಚಂಪಕ ವನೇ ಶತ ಶೃಂಗೇಚ ಸುಂದರೀ।

ಪದ್ಮಾವತೀ ಪದ್ಮ ವನೇ ಮಾಲತೀ ಮಾಲತೀ ವನೇ।

ಕುಂದ ದಂತೀ ಕುಂದವನೇ ಸುಶೀಲಾ ಕೇತಕೀ ವನೇ॥

ಕದಂಬ ಮಾಲಾ ತ್ವಂ ದೇವೀ ಕದಂಬ ಕಾನನೇ2ಪಿಚ।

ರಾಜಲಕ್ಷ್ಮೀಃ ರಾಜ ಗೇಹೇ ಗೃಹಲಕ್ಷ್ಮೀ ರ್ಗೃಹೇ ಗೃಹೇ॥

ಇತ್ಯುಕ್ತ್ವಾ ದೇವತಾಸ್ಸರ್ವಾಃ ಮುನಯೋ ಮನವಸ್ತಥಾ।

ರೂರೂದುರ್ನ ಮ್ರವದನಾಃ ಶುಷ್ಕ ಕಂಠೋಷ್ಠ ತಾಲುಕಾಃ॥

ಇತಿ ಲಕ್ಷ್ಮೀ ಸ್ತವಂ ಪುಣ್ಯಂ ಸರ್ವದೇವೈಃ ಕೃತಂ ಶುಭಂ।

ಯಃ ಪಠೇತ್ಪ್ರಾತರುತ್ಥಾಯ ಸವೈಸರ್ವಂ ಲಭೇದ್ಧ್ರುವಂ॥

ಅಭಾರ್ಯೋ ಲಭತೇ ಭಾರ್ಯಾಂ ವಿನೀತಾಂ ಸುಸುತಾಂ ಸತೀಂ।

ಸುಶೀಲಾಂ ಸುಂದರೀಂ ರಮ್ಯಾಮತಿ ಸುಪ್ರಿಯವಾದಿನೀಂ॥

ಪುತ್ರ ಪೌತ್ರ ವತೀಂ ಶುದ್ಧಾಂ ಕುಲಜಾಂ ಕೋಮಲಾಂ ವರಾಂ।

ಅಪುತ್ರೋ ಲಭತೇ ಪುತ್ರಂ ವೈಷ್ಣವಂ ಚಿರಜೀವಿನಂ॥

ಪರಮೈಶ್ವರ್ಯ ಯುಕ್ತಂಚ ವಿದ್ಯಾವಂತಂ ಯಶಸ್ವಿನಂ।

ಭ್ರಷ್ಟರಾಜ್ಯೋ ಲಭೇದ್ರಾಜ್ಯಂ ಭ್ರಷ್ಟ ಶ್ರೀರ್ಲಭೇತೇ ಶ್ರಿಯಂ॥

ಹತ ಬಂಧುರ್ಲಭೇದ್ಬಂಧುಂ ಧನ ಭ್ರಷ್ಟೋ ಧನಂ ಲಭೇತ್॥

ಕೀರ್ತಿ ಹೀನೋ ಲಭೇತ್ಕೀರ್ತಿಂ ಪ್ರತಿಷ್ಠಾಂಚ ಲಭೇದ್ಧ್ರುವಂ॥

ಸರ್ವ ಮಂಗಳದಂ ಸ್ತೋತ್ರಂ ಶೋಕ ಸಂತಾಪ ನಾಶನಂ।

ಹರ್ಷಾನಂದಕರಂ ಶಾಶ್ವದ್ಧರ್ಮ ಮೋಕ್ಷ ಸುಹೃತ್ಪದಂ॥

॥ ಇತಿ ಸರ್ವ ದೇವ ಕೃತ ಲಕ್ಷ್ಮೀ ಸ್ತೋತ್ರಂ ಸಂಪೂರ್ಣಮ್ ॥

ಮಹಾಲಕ್ಷ್ಮಿ ಸ್ತೋತ್ರವನ್ನು ಪಠಿಸುವ ನಿಯಮಗಳು

ಬೆಳಗ್ಗೆ ಶುದ್ಧವಾಗಿ ಮಡಿ ಸ್ನಾನ ಇತ್ಯಾದಿಗಳನ್ನು ಮಾಡಿದ ನಂತರ ಲಕ್ಷ್ಮಿ ದೇವಿಯನ್ನು ಧ್ಯಾನಿಸಿ. ಅದರ ನಂತರ ಲಕ್ಷ್ಮಿಯನ್ನು ಪೂಜಿಸಲು ಪ್ರಾರಂಭಿಸಿ. ಎಳನೀರು, ಸಿಂಧೂರ, ಅಕ್ಷತೆ, ಕೆಂಪು ಬಣ್ಣದ ಹೂವುಗಳು, ಮಾಲೆಗಳು, ವೀಳ್ಯದೆಲೆಗಳು, ತೆಂಗಿನಕಾಯಿ, ಹಣ್ಣುಗಳು, ಪ್ರಸಾದ ಅರ್ಪಿಸಬೇಕು. ಸಾಧ್ಯವಾದರೆ, ಬಿಳಿ ಬಣ್ಣದ ಸಿಹಿತಿಂಡಿಗಳನ್ನು ನೀಡಿ. ಇದು ತಾಯಿಯನ್ನು ಸಂತೋಷಪಡಿಸುತ್ತದೆ. ಇದರ ನಂತರ ಧೂಪ ಮತ್ತು ದೀಪವನ್ನು ಹಚ್ಚಿ ಮಹಾಲಕ್ಷ್ಮಿ ಸ್ತೋತ್ರವನ್ನು ಪಠಿಸಲು ಪ್ರಾರಂಭಿಸಿ.

English summary

Mahalakshmi Stotram Lyrics and Benefits of Chanting for Money, Success in Kannada

Here we are discussing about Mahalakshmi Stotram Lyrics and Benefits of Chanting for Money, Success in Kannada. Read more.
Story first published: Tuesday, June 14, 2022, 16:02 [IST]
X
Desktop Bottom Promotion