ವಿಷ್ಣು ಸಂಕಷ್ಟಹರ ಮಂತ್ರ ಪಠಿಸಿ-ಸುಖ ಸಂಪತ್ತನ್ನು ಪಡೆದುಕೊಳ್ಳಿ

By: Jaya subramanya
Subscribe to Boldsky

ಅಷ್ಟೈಶ್ವರ್ಯ ಸಿದ್ಧಿಯನ್ನು ಪಡೆದುಕೊಳ್ಳುವ ಅಕ್ಷಯ ತೃತೀಯ ಸಮೀಪದಲ್ಲಿದೆ. ಐಶ್ವರ್ಯ ದೇವತೆಗಳನ್ನು ಈ ದಿನ ನೆನೆದಲ್ಲಿ ನೀವು ಬಯಸಿದ್ದೆಲ್ಲವೂ ಕೈಗೂಡುತ್ತದೆ ಎಂಬ ನಂಬಿಕೆ ಇದೆ. ಅಂತೆಯೇ ಯಾವುದೇ ಶುಭ ಕಾರ್ಯಗಳನ್ನು ನೀವು ಇಂದು ಹಮ್ಮಿಕೊಂಡಲ್ಲಿ ಅದು ಕೈಗೂಡುವುದು ಖಂಡಿತವಾಗಿದೆ.

ಅದಕ್ಕಾಗಿ ನೀವು ಆ ದೇವತೆಗಳನ್ನು ತೃಪ್ತಿಪಡಿಸಬೇಕಾಗುತ್ತದೆ. ಇಂದಿನ ಲೇಖನದಲ್ಲಿ ನಿಮ್ಮ ಸಕಲ ಇಷ್ಟಾರ್ಥಗಳನ್ನು ಪೂರೈಸುವ ದೇವತೆಗಳ ಮಂತ್ರವನ್ನು ನೀಡುತ್ತಿದ್ದು ಇದರಿಂದ ನಿಮ್ಮ ಮನೋಕಾಮನೆಗಳು ಪೂರ್ಣವಾಗುವುದು ಖಚಿತ.

ಗಣೇಶನನ್ನು ನೆನೆಯುವುದು

ಎಲ್ಲಾ ಸಂಕಷ್ಟಗಳನ್ನು ತೊಡೆಯುವ ವಿನಾಯಕನನ್ನು ಅಕ್ಷಯ ತೃತೀಯದಂದು ಪೂಜಿಸಲಾಗುತ್ತದೆ.ಪೂಜೆಯ ಮೊದಲು ಅವರನ್ನು ನೆನೆಯುವುದರಿಂದ ಎಲ್ಲಾ ಕಾರ್ಯವೂ ಶುಭವಾಗುತ್ತದೆ. ಸಂಕಷ್ಟಿ ಚತುರ್ಥಿ ಹಬ್ಬದ ಮಹತ್ವ ತಿಳಿದಿದೆಯೇ?

Akshaya Tritiya

ಲಕ್ಷ್ಮೀ ದೇವರು

ಧನಕನಕ ಸಂಪತ್ತಿನ ಅದಿಧೇವತೆ ಎಂದೆನಿಸಿರುವ ಲಕ್ಷ್ಮೀ ಮಾತೆಯನ್ನು ಅಕ್ಷಯ ತೃತೀಯದಂದು ಪೂಜಿಸಲಾಗುತ್ತದೆ. ಮನೆಯಲ್ಲಿ ಧನ ಸಂಪತ್ತು ದೊರೆಯುತ್ತದೆ ಎಂಬ ಪ್ರತೀತಿ ಕೂಡ ಇದೆ. ಲಕ್ಷ್ಮೀಯನ್ನು ಪತಿ ಮಹಾವಿಷ್ಣುವಿನೊಂದಿಗೆ ಪೂಜಿಸಲಾಗುತ್ತದೆ. ಅಕ್ಷಯ ತೃತೀಯದಂದು ತಪ್ಪದೇ ಪಠಿಸಿ 'ಮಹಾಲಕ್ಷ್ಮೀ' ಸ್ತೋತ್ರ 

ಕುಬೇರನನ್ನು ನೆನೆಯುವುದು

ದೇವತೆಗಳಿಗೆ ಸಾಲ ನೀಡುವ ಶ್ರೀಮಂತ ಎಂದೆನಿಸಿರುವ ಕುಬೇರ ಕೂಡ ಸಂಪತ್ತಿನ ದೇವತೆ ಎಂದೆನಿಸಿದ್ದಾರೆ. ಸಂಪತ್ತನ್ನು ಪಡೆದುಕೊಳ್ಳಲು ಈ ದೇವರನ್ನು ಈ ದಿನ ಭಕ್ತಿಯಿಂದ ಪೂಜಿಸಬೇಕು. ಐಶ್ವರ್ಯದ ಅಧಿಪತಿ ಕುಬೇರನನ್ನು ಒಲಿಸಿಕೊಳ್ಳುವ ಪರಿ ಹೇಗೆ?

Akshaya Tritiya

ಮಹಾವಿಷ್ಣುವಿನ ಸ್ತುತಿ

ಅದೃಷ್ಟ, ಸಮಾಧಾನ ಮತ್ತು ಶಾಂತಿ ನೆಲೆಗೊಳ್ಳಲು ಮಹಾವಿಷ್ಣುವನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಮಹಾವಿಷ್ಣುವಿಗೆ ತ್ರಿಮೂರ್ತಿಗಳಲ್ಲಿ ಒಬ್ಬರು ಎಂಬ ಬಿರುದಿದೆ. ಸೃಷ್ಟಿಯ ಸಂರಕ್ಷಕ ಎಂಬ ಹೆಸರು ವಿಷ್ಣುವಿಗಿದೆ.

ದೇವತೆಗಳಲ್ಲಿ ಹೆಚ್ಚು ಶಾಂತಪ್ರಿಯರು ಮಹಾವಿಷ್ಣು ಎಂದಾಗಿದೆ. ಭಕ್ತರ ಸಕಲ ಪಾಪಗಳನ್ನು ಮನ್ನಿಸುವ ಮಹಾವಿಷ್ಣುವು ಭಕ್ತರ ಮೊರೆಯನ್ನು ಬೇಗನೇ ಆಲಿಸುವವರಾಗಿದ್ದಾರೆ. ಅಂತೆಯೇ ಹೆಚ್ಚು ಪರಿಣಾಮಕಾರಿ ದೇವರು ಎಂಬುದೂ ಕೂಡ ಹೌದು. ಮಹಾವಿಷ್ಣುವನ್ನು ಸಂಪ್ರೀತಿ ಪಡಿಸುವ ಮಂತ್ರಗಳು ಮತ್ತು ಸ್ತೋತ್ರಗಳು ಹೆಚ್ಚು ಫಲಪ್ರದ ಎಂದೆನಿಸಿದೆ. ದೇವರನ್ನು ಶ್ರದ್ಧೆ ಭಕ್ತಿಯಿಂದ ನೆನೆಯುವುದರಿಂದ ಸಕಲ ಕಾಮನೆಗಳೂ ಪೂರ್ಣಗೊಳ್ಳಲಿದೆ. ವಿಷ್ಣು 'ಶೇಷನಾಗನ' ಮೇಲೆಯೇ ವಿಶ್ರಮಿಸುತ್ತಾನೆ, ಯಾಕೆ ಅಂತೀರಾ?

Akshaya Tritiya

ವಿಷ್ಣು ಮೂಲ ಮಂತ್ರ

ಓಂ ನಮೋ ನಾರಾಯಣಾಯ

ನಾನು ನಿನಗೆ ನಮಸ್ಕರಿಸುತ್ತೇನೆ ಓ ನಾರಾಯಣ ದೇವರೇ ಮಹಾವಿಷ್ಣುವಿಗೆ ಸಮರ್ಪಿಸಲಾದ ಮಂತ್ರ ಇದಾಗಿದೆ. ಇದು ಹೆಚ್ಚು ಶಕ್ತಿಯುತವಾದ ಮಂತ್ರವಾಗಿದೆ.

ವಿಷ್ಣು ಭಗವತೇ ವಾಸುದೇವ ಮಂತ್ರ

ಓಂ ನಮೋ ಭಗವತೇ ವಾಸುದೇವಾಯ

ವಿಶ್ವವನ್ನು ಕಾಪಾಡುವ ಭಗವಂತನೇ ನಾನು ನಿನಗೆ ವಂದಿಸುತ್ತೇನೆ.

Akshaya Tritiya

ವಿಷ್ಣು ಗಾಯತ್ರಿ ಮಂತ್ರ

ಓಂ ಶ್ರೀ ವೈಷ್ಣವೇ ಚ

ವಿದಾಮಹೇ ವಾಸುದೇವಾಯ ಧೀಮಹಿ

ತನ್ನೊ ವಿಷ್ಣು ಪ್ರಚೋದಯಾತ್

ವಿಷ್ಣು ಸಂಕಷ್ಟಹರ ಮಂತ್ರ

ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ

ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಂ

ಲಕ್ಷ್ಮೀಕಾಂತಂ ಕಮಲನಯನಂ ಯೋಗಿಭೃದ್ಯಾನಗಮ್ಯಂ

ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ

Akshaya Tritiya

ವಿಷ್ಣು ಸಂಕಷ್ಟಹರ ಮಂತ್ರ

"ಓ ದೇವರೇ ನೀನು ಎಂದಿಗೂ ಶಾಂತನಾಗಿರುತ್ತೀಯೆ, ಹಾವು ಅನಂತನ ಮೇಲೆ ಮಲಗಿರುವವರೇ, ತಮ್ಮ ನಾಭಿಯಿಂದ ಕಮಲವನ್ನು ಉದಿಸುವವರೇ (ಅವರ ನಾಭಿಯಿಂದ ಕಮಲದ ಹೂವು ಉದಯಿಸುತ್ತದೆ ಎಂಬುದಾಗಿದೆ) ವಿಶ್ವಕ್ಕೂ ಒಡೆಯನಾಗಿರುವ ತಂದೆಯೇ ನಾನು ನಿಮಗೆ ವಂದಿಸುವೆ. ವಿಶ್ವದ ಅಸ್ತಿತ್ವ ನೀನೇ ಆಗಿರುವೆ. ನೀವು ಆಗಸದಷ್ಟೇ ವಿಸ್ತರಿಸಿರುವೆ ನಿಮ್ಮ ಬಣ್ಣ ಮೇಘದ್ದಾಗಿದೆ ಮತ್ತು ನಿಮ್ಮ ದೇಹದ ಪ್ರತಿಯೊಂದು ಭಾಗವೂ ಪವಿತ್ರವಾದುದಾಗಿದೆ. ನೀವು ಲಕ್ಷ್ಮೀ ದೇವಿಯ ಪ್ರೀತಿಪಾತ್ರರು, ಸಂಗಾತಿಯಾಗಿರುವಿರಿ. ಕಮಲದಂತಹ ನಯನವನ್ನು ಹೊಂದಿರುವವರೇ, ಯೋಗಿಗಗಳ ಮನದಲ್ಲಿ ನೆಲೆಸಿರುವ ದೇವರೇ ನಾನು ನಿಮಗೆ ವಂದಿಸುತ್ತೇನೆ. ವಿಶ್ವವನ್ನು ಕಾಪಾಡುವ ರಕ್ಷಕನೇ ನಿನಗಿದೋ ವಂದನೆ."

ಮಂಗಳಂ ಭಗವಾನ್ ವಿಷ್ಣು ಮಂತ್ರ

ಮಂಗಳಂ ಭಗವಾನ್ ವಿಷ್ಣು ಮಂಗಳಂ ಗರುಡಾಧ್ವಜಾ ಮಂಗಳಂ ಪುಂಡರೀಕಾಕ್ಷಾ ಮಂಗಳಂ ತನ್ನೋಂ ಹರಿಹೀ

ತಮ್ಮ ಧ್ವಜದಲ್ಲಿ ಗರುಡನ್ನು ಹೊಂದಿರುವವರೇ ನೀವು ಪವಿತ್ರರು ಮತ್ತು ಸಾತ್ವಿಕ ಸ್ವಭಾದವರೂ ಆಗಿರುವಿರಿ. ಕಮಲದಷ್ಟು ನವಿರಾದ ಕಣ್ಣುಗಳನ್ನು ಹೊಂದಿರುವವರು ನೀವಾಗಿರುವಿರಿ. ನನ್ನೆಲ್ಲಾ ಭಕ್ತಿ ನಿಮ್ಮದಾಗಿದೆ. ಓ ಮಹಾ ವಿಷ್ಣುವೇ, ನಿಮ್ಮನ್ನು ಹರಿ ಎಂಬುದಾಗಿ ಕೂಡ ಕರೆಯುತ್ತಾರೆ.

English summary

Maha Vishnu Mantras For Akshaya Tritiya

The auspicious day of Akshaya Tritiya is presided over by Lord Maha Vishnu. There is a plethora of deities that are worshipped on this day, but it is Lord Maha Vishnu that most people worship. The other deities that are commonly worshipped on the Akshaya Tritiya day are: 1. Lord Ganesha: He is the remover of all obstacles and therefore, Lord Ganapati is worshipped on Akshaya Tritiya.
Subscribe Newsletter