For Quick Alerts
ALLOW NOTIFICATIONS  
For Daily Alerts

ಶಿವರಾತ್ರಿ 2023: ಶಿವನ ಆರಾಧನೆ ಮನೆಯಲ್ಲಿ ಮಾಡುವಾಗ ಪಾಲಿಸಬೇಕಾದ ಕ್ರಮಗಳು

|

ಹಿಂದೂ ಕ್ಯಾಲಂಡರ್‌ ಪ್ರಕಾರ ಫಲ್ಗುಣ ಮಾಸದ 13ನೇ ಅಥವಾ 14ನೇ ದಿನ, ಕೃಷ್ಣ ಪಕ್ಷದಂದು ಮಹಾ ಶಿವರಾತ್ರಿ ಆಚರಿಸಲಾಗುತ್ತದೆ. ಅಂದ್ರೆ ಫೆಬದರವರಿ 18ಕ್ಕೆ ಆಚರಿಸಲಾಗುತ್ತಿದೆ. ಶಿವರಾತ್ರಿಯ ಬಗ್ಗೆ ಅನೇಕ ಪೌರಾಣಿಕ ಕತೆಗಳಿವೆ. ಈ ದಿನ ಆದಿಶಕ್ತಿಯಾದ ಶಿವನು ಪಾರ್ವತಿಯನ್ನು ವರಿಸಿದ ದಿನ ಎಂದು ಹೇಳಲಾಗುತ್ತದೆ.

ಶಿವರಾತ್ರಿಯನ್ನು ಮನೆಯಲ್ಲಿ ಮಾಡುವುದಾದರೆ ಕೆಲವೊಂದು ಕ್ರಮಗಳಿವೆ, ಅವಗಳನ್ನು ಅನುಸರಿಸಬೇಕು. ಶಿವರಾತ್ರಿಯಂದು ಶಿವನ ಮೆಚ್ಚುಗೆಗೆ ಪಾತ್ರರಾಗಲು ಮನೆಯಲ್ಲಿ ಮಾಡುವ ಆಚರಣೆ ಹೇಗಿರಬೇಕೆಂದು ಶಿವ ಪುರಾಣದಲ್ಲಿ ಹೇಳಲಾಗಿದೆ. ಬನ್ನಿ, ಅವುಗಳನ್ನು ತಿಳಿಯೋಣ:

ಮನೆಯಲ್ಲಿ ಶಿವನ ಆರಾಧನೆ

ಮನೆಯಲ್ಲಿ ಶಿವನ ಆರಾಧನೆ

1. ಮೊದಲನೆಯದಾಗಿ ಶಿವ ಲಿಂಗಕ್ಕೆ ನೀರು, ಹಾಲು, ಜೇನಿನ ಅಭಿಷೇಕ ಮಾಡಬೇಕು. ನಂತರ ಶಿವನಿಗೆ ಇಷ್ಟವಾದ ಬಿಲ್ವೆ ಪತ್ರೆಯನ್ನು ಅರ್ಪಿಸಬೇಕು. ಇದು ಆತ್ಮಶುದ್ಧಿಯ ಪ್ರತೀಕವಾಗಿದೆ.

2. ಶಿವಲಿಂಗಕ್ಕೆ ಅಭಿಷೇಕ ಮಾಡಿದ ಬಳಿಕ ಕುಂಕುಮ ಹಚ್ಚಬೇಕು. ಈ ಕುಂಕುಮ ಜ್ಞಾನದ ಪ್ರತೀಕವಾಗಿದೆ.

3. ನಂತರ ವಿವಿಧ ಬಗೆಯ ಹಣ್ಣುಗಳನ್ನು ಅರ್ಪಿಸಬೇಕು. ಇದು ಬಯಕೆಗಳನ್ನು ಈಡೇರಿಸುತ್ತದೆ ಎಂಬುವುದರ ಪ್ರತೀಕವಾಗಿದೆ.

4. ನಂತರ ಸುಗಂಧ ವಾಸನೆ ಬೀರುವ ಗಂಧದ ಕಡ್ಡಿ ಹಚ್ಚಿ, ದೀಪ ಬೆಳಗಿ, ಇದು ಜ್ಞಾನದ ಸಂಕೇತವಾಗಿದೆ.

5. ನಂತರ ಬಿಲ್ವಾ ಪತ್ರೆ ಅರ್ಪಿಸಿ, ಇದು ಲೌಕಿಕ ಸಂತೃಪ್ತಿಯನ್ನು ಸೂಚಿಸುತ್ತದೆ.

ಈ ನಿಯಮಗಳನ್ನು ಪಾಲಿಸಿ

ಈ ನಿಯಮಗಳನ್ನು ಪಾಲಿಸಿ

ಬೆಳಗ್ಗೆ ಎದ್ದು ಪುಣ್ಯ ನದಿಯಲ್ಲಿ ಸ್ನಾನ ಮಾಡಿ. ಮನೆಯಲ್ಲೇ ಸ್ನಾನ ಮಾಡುವುದಾದರೆ ಸ್ವಲ್ಪ ಎಳ್ಳನ್ನು ಹಾಕಿ ಕುದಿಸಿ, ಆ ನೀರಿನಲ್ಲಿ ಸ್ನಾನ ಮಾಡಿ. ಇದರಿಂದ ಪರಿಪೂರ್ಣ ಶುದ್ಧವಾಗುವುದು ಎಂಬ ನಂಬಿಕೆ,

ನಂತರ ಉಪವಾಸ ವ್ರತ ಪಾಲಿಸಬೇಕು. ಈ ದಿನ ಪೂರ್ತಿ ಉಪವಾಸ ಇದ್ದು ಶಿವನ ಮೆಚ್ಚಿಸಲು ಪ್ರಯತ್ನಿಸಬೇಕು.

ನಂತರ ಶಿವರಾತ್ರಿಯಂದು ಶಿವಲಿಂಗಕ್ಕೆ ನೀರು, ಹಾಲು, ಜೇನು ಇದರಿಂದ ಅಭಿಷೇಕ ಮಾಡಬೇಕು. ನಂತರ ದೀಪ ಹಚ್ಚಿ,ಶಿವನಿಗೆ ಹೂ, ಹಣ್ಣುಗಳನ್ನು ಅರ್ಪಿಸಿ, ಶಿವ ಮಂತ್ರ ಪಠಿಸಿ. ರಾತ್ರಿ ಹೊತ್ತು ಶಿವನಾಮ ಹೇಳುತ್ತಾ ಜಾಗರಣೆ ಮಾಡಿ. ಹೀಗೆ ಮಾಡುವುದರಿಂದ ಶಿವನ ಕೃಪೆಗೆ ಪಾತ್ರರಾಗುತ್ತೀರಿ.

ಶಿವನ ಪಂಚಾಕ್ಷರಿ ಮಂತ್ರ

ಶಿವನ ಪಂಚಾಕ್ಷರಿ ಮಂತ್ರ

ಓಂ ನಮಃ ಶಿವಾಯ

ಶ್ರೀ ಶಿವಪಂಚಾಕ್ಷರ ಸ್ತೋತ್ರಮ್

||ಶ್ರೀ ಶಿವಪಂಚಾಕ್ಷರ ಸ್ತೋತ್ರಮ್|| ನಾಗೇಂದ್ರಹಾರಾಯ ತ್ರಿಲೋಚನಾಯ ಭಸ್ಮಾಂಗರಾಗಾಯ ಮಹೇಶ್ವರಾಯ| ನಿತ್ಯಾಯ ಶುದ್ಧಾಯ ದಿಗಂಬರಾಯ ತಸ್ಮೈ ನಕಾರಾಯ ನಮಃ ಶಿವಾಯ||೧|| ಮಂದಾಕಿನೀ ಸಲಿಲ ಚಂದನಚರ್ಚಿತಾಯ ನಂದೀಶ್ವರಪ್ರಮಥನಾಥ ಮಹೇಶ್ವರಾಯ| ಮಂದಾರ ಮುಖ್ಯ ಬಹುಪುಷ್ಪಸುಪೂಜಿತಾಯ ತಸ್ಮೈ ಮಕಾರಾಯ ನಮಃ ಶಿವಾಯ||೨|| ಶಿವಾಯ ಗೌರೀವದನಾಬ್ಜವೃಂದ ಸೂರ್ಯಾಯ ದಕ್ಷಾಧ್ವರನಾಶಕಾಯ| ಶ್ರೀನೀಲಕಂಠಾಯ ವೃಷಧ್ವಜಾಯ ತಸ್ಮೈ ಶಿಕಾರಾಯ ನಮಃ ಶಿವಾಯ||೩|| ವಸಿಷ್ಠ ಕುಂಭೋದ್ಭವಗೌತಮಾರ್ಯ ಮುನೀಂದ್ರ ದೇವಾರ್ಚಿತ ಶೇಖರಾಯ| ಚಂದ್ರಾರ್ಕವೈಶ್ವಾನರ ಲೋಚನಾಯ ತಸ್ಮೈ ವಕಾರಾಯ ನಮಃ ಶಿವಾಯ||೪|| ಯಕ್ಷಸ್ವರೂಪಾಯ ಜಟಾಧರಾಯ ಪಿನಾಕಹಸ್ತಾಯ ಸನಾತನಾಯ| ದಿವ್ಯಾಯ ದೇವಾಯ ದಿಗಂಬರಾಯ ತಸ್ಮೈ ಯಕಾರಾಯ ನಮಃ ಶಿವಾಯ||೫|| ಪಂಚಾಕ್ಷರಮಿದಂ ಪುಣ್ಯಂ ಯಃ ಪಠೇಚ್ಛಿವಸನ್ನಿಧೌ| ಶಿವಲೋಕಮವಾಪ್ನೋತಿ ಶಿವೇನ ಸಹ...

ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರ

ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರ

ಸೌರಾಷ್ಟ್ರೇ ಸೋಮನಾಧಂಚ ಶ್ರೀಶೈಲೇ ಮಲ್ಲಿಕಾರ್ಜುನಮ್

ಉಜ್ಜಯಿನ್ಯಾಂ ಮಹಾಕಾಲಮ್ ಓಂಕಾರೇತ್ವಮಾಮಲೇಶ್ವರಮ್

ಪರ್ಲ್ಯಾಂ ವೈದ್ಯನಾಧಂಚ ಢಾಕಿನ್ಯಾಂ ಭೀಮ ಶಂಕರಮ್

ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ

ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ

ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ

ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ

ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ

ಮಹಾಮೃತ್ಯುಂಜಯ ಮಂತ್ರ

ಓಂ!! ತ್ರಯಂಬಕಮ್ ಯಜಾಮಹೇ ಸುಗಂಧೀಂ ಪುಷ್ಟಿವರ್ಧನಂ ಊರ್ವಾವರ್ಕಮೀವ ಬಂಧಂ ಮೃತ್ಯೊರ್ ಮೋಕ್ಷಂ ಅಮೃತಃ

English summary

Maha Shivratri 2023: How To Worship Lord Shiva At Home in kannada

Maha Shivratri 2021: How To Worship Lord Shiva At Home in kannada, Have a look.
X
Desktop Bottom Promotion