For Quick Alerts
ALLOW NOTIFICATIONS  
For Daily Alerts

ನ.8ಕ್ಕೆ ಚಂದ್ರಗ್ರಹಣ: ಗ್ರಹಣ ಯಾವಾಗ ಪ್ರಾರಂಭ? ಎಷ್ಟು ಗಂಟೆಯವರೆಗೆ ಇರುತ್ತದೆ?

|

ಸೂರ್ಯಗ್ರಹಣ ನಡೆದು ಹದಿನೈದು ದಿನಗಳ ಕಳೆಯೊದ್ರೊಳಗೆ ಇದೀಗ ಚಂದ್ರಗ್ರಹಣ ಭಾರತ ಸೇರಿ ಪ್ರಪಂಚದಾದ್ಯಂತ ನಡೆಯುತ್ತಿದೆ. 2022 ರ ನವೆಂಬರ್‌ 8 ರಂದು ಚಂದ್ರ ಗ್ರಹಣವು ಸಂಭವಿಸಲಿದೆ. ಈ ವರ್ಷದ ಚಂದ್ರ ಗ್ರಹಣ ಬಹಳ ವಿಶೇಷವಾಗಿದೆ. ಚಂದ್ರಗ್ರಹಣವು 2.39ಕ್ಕೆ ಆರಂಭವಾಗಿ ಸಂಜೆ 6.19ಕ್ಕೆ ಮುಗಿಯಲಿದೆ. ಇನ್ನು ಸೂರ್ಯಾಸ್ತ 5.54ಕ್ಕೆ ಆಗಲಿದ್ದು, ಮಧ್ಯಾಹ್ನದ ಹೊತ್ತು ಚಂದ್ರಗ್ರಹಣವಾಗುತ್ತಿರುವುದರಿಂದ ಕಾಣಲು ಅಸಾಧ್ಯವಾಗಿದೆ.

ಅಂದರೆ ಗ್ರಹಣದ ಕೊನೆಯ 25 ನಿಮಿಷಗಳ ಕಾಲ ಅಂದರೆ ಸೂರ್ಯಾಸ್ತದ ಸಮಯದಲ್ಲಿ ಮಾತ್ರ ವೀಕ್ಷಿಸಲು ಸಾಧ್ಯವಿದೆ. 2022 ರ ಎರಡನೇ ಚಂದ್ರಗ್ರಹಣವು ಭಾಗಶಃ ಚಂದ್ರ ಗ್ರಹಣವಾಗಿದ್ದು ಇದನ್ನು ಖಂಡಗ್ರಾಸ ಚಂದ್ರಗ್ರಹಣ ಎಂದೂ ಕರೆಯುತ್ತಾರೆ. ಆದರೆ, ಹಲವೆಡೆ ಸಂಪೂರ್ಣ ಚಂದ್ರಗ್ರಹಣವಾಗಲಿದೆ. ಈ ಚಂದ್ರಗ್ರಹಣವು ಭಾರತದ ಹೆಚ್ಚಿನ ಪ್ರದೇಶಗಳಿಂದ ಭಾಗಶಃ ರೂಪದಲ್ಲಿ ಗೋಚರಿಸುತ್ತದೆ. ಚಂದ್ರಗ್ರಹಣದ ಸಂದರ್ಭದಲ್ಲಿ ಚಂದ್ರನು ಸಂಪೂರ್ಣ ಕೆಂಪು ಬಣ್ಣಕ್ಕೆ ತಿರುಗಲಿದ್ದಾನೆ.

ಇದನ್ನು ಬ್ಲಡ್ ಮೂನ್ ಫಿನಾಮಿನನ್ ಎಂದು ಕೂಡ ಕರೆಯುತ್ತಾರೆ. ಹಾಗಾದರೆ ಭಾರತದ ಎಲ್ಲಿ ಮತ್ತು ಎಷ್ಟು ಗಂಟೆಗೆ ಚಂದ್ರ ಗ್ರಹಣ ಸಂಭವಿಸುತ್ತದೆ. ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ದೆಹಲಿ : ಭಾಗಶಃ ಚಂದ್ರಗ್ರಹಣ

ದೆಹಲಿ : ಭಾಗಶಃ ಚಂದ್ರಗ್ರಹಣ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೂಡ ಭಾಗಶಃ ಚಂದ್ರ ಗ್ರಹಣ ಸಂಭವಿಸಲಿದೆ. ದೆಹಲಿಯಲ್ಲಿ ಸುಮಾರು 1 ಗಂಟೆ 58 ನಿಮಿಷಗಳ ಕಾಲ ಚಂದ್ರಗ್ರಹಣ ಇರಲಿದೆ ಅಥವಾ ಚಂದ್ರಗ್ರಹಣ ಗೋಚರಿಸುತ್ತದೆ. ಸಂಜೆ 5.58 ರಿಂದ 7.26 ಗಂಟೆವರೆಗೆ ಚಂದ್ರಗ್ರಹಣ ಗೋಚರವಾಗಲಿದೆ.

ಕೊಲ್ಕತ್ತಾ : ಭಾಗಶಃ ಚಂದ್ರಗ್ರಹಣ

ಕೊಲ್ಕತ್ತಾದಲ್ಲೂ ಭಾಗಶಃ ಚಂದ್ರಗ್ರಹಣ ಇರಲಿದ್ದು ಸುಮಾರು 2 ಗಂಟೆ 34 ನಿಮಿಷ ಚಂದ್ರಗ್ರಹಣ ಜನರಿಗೆ ಗೋಚರವಾಗಲಿದೆ. ಸಂಜೆ 4.52 ಕ್ಕೆ ಆರಂಭವಾಗಿ 7.26ಕ್ಕೆ ಚಂದ್ರಗ್ರಹಣಕ್ಕೆ ಮೋಕ್ಷ ಸಿಗಲಿದೆ. ಸುಮಾರು ಹೊತ್ತು ಕಾಲ ಚಂದ್ರಗ್ರಹಣವನ್ನು ಜನರು ಕೊಲ್ಕತ್ತಾದಲ್ಲಿ ವೀಕ್ಷಿಸಬಹುದು.

ಮುಂಬಯಿ : ಭಾಗಶಃ ಚಂದ್ರಗ್ರಹಣ

ಮುಂಬಯಿ : ಭಾಗಶಃ ಚಂದ್ರಗ್ರಹಣ

ಮುಂಬಯಿನಲ್ಲೂ ಭಾಗಶಃ ಚಂದ್ರಗ್ರಹಣ 06.04 ರಿಂದ ಗೋಚರವಾಗಲಿದೆ. ಅದರಲ್ಲೂ 23 % ಅಸ್ಪಷ್ಟತೆ ಇರಲಿದೆ ಎಂದು ಅಂದಾಜಿಸಲಾಗಿದೆ. 06:01ರಿಂದ ಆರಂಭವಾಗಿ 07:26ರವರೆಗೆ ಇರಲಿದೆ ಸರಿ ಸುಮಾರು 1 ಗಂಟೆ 25 ನಿಮಿಷಗಳ ಕಾಲ ಗ್ರಹಣ ಗೋಚರಿಸಲಿದೆ.

ಬೆಂಗಳೂರು : ಭಾಗಶಃ ಚಂದ್ರಗ್ರಹಣ

ಸರಿ ಸುಮಾರು ಸಂಜೆ 05:57 ಗಂಟೆಗೆ ಬೆಂಗಳೂರಿನಲ್ಲಿ ಚಂದಗ್ರಹ ಸ್ಪಷ್ಟವಾಗಿ ಗೋಚರವಾಗಲಿದೆ. ಆದರೂ ಶೇ.23ರಷ್ಟು ಅಗೋಚರತೆ ಇರಲಿದೆ. ಸರಿ ಸುಮಾರು 1 ಗಂಟೆ 36 ನಿಮಿಷಗಳ ಕಾಲ ಬೆಂಗಳೂರಿನಲ್ಲಿ ಚಂದ್ರಗ್ರಹಣ ಗೋಚರಿಸಲಿದೆ. 05:49 ಗಂಟೆಯಿಂದ 07:26 ಕಾಲ ಚಂದ್ರಗ್ರಹಣವನ್ನು ಬೆಂಗಳೂರಿಗರು ವೀಕ್ಷಿಸಬಹುದಾಗಿದೆ.

ನೋಯ್ಡಾ: ಭಾಗಶಃ ಚಂದ್ರಗ್ರಹಣ

ನೋಯ್ಡಾ: ಭಾಗಶಃ ಚಂದ್ರಗ್ರಹಣ

ನೋಯ್ಡಾದಲ್ಲಿ ಭಾಗಶಃ ಚಂದ್ರಗ್ರಹಣಗ್ರಹಣ ಉಂಟಾಗಲಿದೆ. ಸಂಜೆ 05:30 ಕ್ಕೆ ಅತ್ಯಂತ ಪ್ರಕಾಶಮಾನವಾಗಿ ಚಂದ್ರಗ್ರಹಣ ನೋಯ್ಡಾದಲ್ಲಿ ಗೋಚರಿಸಲಿದೆ. 07:26 ಕ್ಕೆ ಮುಕ್ತಾಯಗೊಳ್ಳುತ್ತದೆ. 1 ಗಂಟೆ 59 ನಿಮಿಷಗಳ ಕಾಲ ನೋಯ್ಡಾದಲ್ಲಿ ಚಂದ್ರಗ್ರಹಣ ವೀಕ್ಷಿಸಬಹುದು.

ಗುರುಗ್ರಾಮ್: ಭಾಗಶಃ ಚಂದ್ರಗ್ರಹಣಭಾಗಶಃ

ಗುರುಗ್ರಾಮ್ ನಲ್ಲೂ ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ. ಸಂಜೆ 05:33 ರ ಸುಮಾರಿಗೆ ಚಂದ್ರಗ್ರಹಣವು ಉತ್ತುಂಗದಲ್ಲಿ ಗೋಚರಿಸುತ್ತದೆ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ.

ಚಂಡೀಗಢ: ಭಾಗಶಃ ಚಂದ್ರಗ್ರಹಣ

ಚಂಡೀಗಢ: ಭಾಗಶಃ ಚಂದ್ರಗ್ರಹಣ

ಚಂಡೀಗಢದಲ್ಲಿಯು ಭಾಗಶಃ ಚಂದ್ರಗ್ರಹಣ ಸಂಭವಿಸುತ್ತಿದೆ. ಸುಮಾರು 1 ಗಂಟೆ 59 ನಿಮಿಷಗಳವರೆಗೆ ಇಲ್ಲಿ ಚಂದ್ರಗ್ರಹಣ ಗೋಚರಿಸಲಿದೆ. ಸಂಜೆ 05:30 ಕ್ಕೆ ಸರಿಯಾಗಿ ಚಂದ್ರಗ್ರಹಣವು ಪ್ರಕಾಶಮಾನವಾಗಿ ಗೋಚರಿಸಲಿದೆ.

ಹೈದರಾಬಾದ್: ಭಾಗಶಃ ಚಂದ್ರಗ್ರಹಣ

ಹೈದರಾಬಾದ್ ನಲ್ಲೂ ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ. ಹೈದರಾಬಾದ್‌ನಲ್ಲಿ ಸಂಜೆ 05:43 ರಿಂದ ಚಂದ್ರಗ್ರಹಣ ವೀಕ್ಷಿಸಬಹುದಾಗಿದೆ. ಸಮಯ 1 ಗಂಟೆ 46 ನಿಮಿಷಗಳು ಚಂದ್ರಗ್ರಹಣ ಗೋಚರದ ಕಾಲ.

ಚೆನ್ನೈ: ಭಾಗಶಃ ಚಂದ್ರಗ್ರಹಣ

ಚೆನ್ನೈ: ಭಾಗಶಃ ಚಂದ್ರಗ್ರಹಣ

ಚೆನ್ನೈನಲ್ಲೂ ಭಾಗಶಃ ಚಂದ್ರಗ್ರಹಣ ಗೋಚರಿಸಲಿದೆ. ಎಕ್ಲಿಪ್ಸ್ಡ್ ಮೂನ್ ಚೆನ್ನೈನಲ್ಲಿ 1 ಗಂಟೆ 48 ನಿಮಿಷಗಳ ಕಾಲ ಗೋಚರಿಸುತ್ತದೆ. ಇದು 05:42 ಕ್ಕೆ ತನ್ನ ಉತ್ತುಂಗವನ್ನು ತಲುಪುತ್ತದೆ. ಈ ಸಮಯದಲ್ಲಿ ಜನರಿಗೆ ಚಂದ್ರಗ್ರಹಣ ಸ್ಪಷ್ಟವಾಗಿ ಕಾಣಲಿದೆ.

ಸಂಜೆ 05:31ಕ್ಕೆ. ಶ್ರೀನಗರದಲ್ಲಿ, ಎಕ್ಲಿಪ್ಸ್ಡ್ ಮೂನ್ ಸುಮಾರು 66% ನಷ್ಟು ಅಸ್ಪಷ್ಟತೆಯೊಂದಿಗೆ ದಿಗಂತದ ಮೇಲೆ ಏರುತ್ತದೆ.

ಶ್ರೀನಗರ: ಭಾಗಶಃ ಚಂದ್ರಗ್ರಹಣ

ಶ್ರೀನಗರದಲ್ಲಿಯೂ ಭಾಗಶಃ ಚಂದ್ರಗ್ರಹಣ ಸಂಭವಿಸುತ್ತಿದೆ. ಸಂಜೆ 05:31 ಗಂಟೆಗೆ ಗೋಚರಿಸಲು ಆರಂಭವಾಗಲಿದೆ. ಸುಮಾರು 66% ನಷ್ಟು ಅಸ್ಪಷ್ಟತೆಯೊಂದಿಗೆ ಸೂರ್ಯಗ್ರಹಣ ಸಂಭವಿಸಲಿದೆ.

ಇನ್ನುಈ ಚಂದ್ರಗ್ರಹಣ ಮಹಾಭಾರತಕ್ಕೆ ನಂತು ಹೊಂದಿದ್ದು, ಇದಕ್ಕೂ ಮೊದಲು ಈ ಚಂದ್ರ ಗ್ರಹಣವು ಮಹಾಭಾರತ ಕಾಲದಲ್ಲಿ ಸಂಭವಿಸಿತ್ತು ಎಂದು ಹೇಳಲಾಗುತ್ತಿದೆ. ಮಹಾಭಾರತ ಅವಧಿಯ ನಂತರ ಇದೇ ಮೊದಲು ಈ ಚಂದ್ರ ಗ್ರಹಣ ಸಂಭವಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಚಂದ್ರಗ್ರಹಣವು ಆಸ್ಟ್ರೇಲಿಯಾ, ಏಷ್ಯಾ, ದಕ್ಷಿಣ ಮತ್ತು ಉತ್ತರ ಅಮೆರಿಕಾ, ಈಶಾನ್ಯ ಯುರೋಪ್, ಪೆಸಿಫಿಕ್ ಮಹಾಸಾಗರ, ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರದ ಹೆಚ್ಚಿನ ಭಾಗಗಳಲ್ಲಿ ಗೋಚರಿಸುತ್ತದೆ.

English summary

Lunar Eclipse 2022 India Timings- Final Chandra Grahan City Wise Date, Timings in Kannada

Chandra Grahan 2022: Final Lunar Eclipse, Know City-Wise Timings In All Parts Of India in kannada, readon
X
Desktop Bottom Promotion