Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಭಗವಾನ್ ಗಣೇಶನು ನರಕ/ಪಾತಾಳ ಲೋಕದ ರಾಜನಾದ ಕಥೆ
ಪ್ರಥಮ ಪೂಜಿತ, ಗಣಗಳ ಒಡೆಯ ಎಂದು ಕರೆಸಿಕೊಳ್ಳುವ ಶ್ರೀಗಣೇಶನ ಬಗ್ಗೆ ಅನೇಕ ಉಪಕಥೆಗಳಿವೆ. ಎಲ್ಲವೂ ಪೂಜ್ಯನೀಯವಾದ ಭಕ್ತಿ ಪೂರಕವಾದದ್ದು. ಅವುಗಳಲ್ಲಿ ಒಂದು "ಗಣೇಶ ಆಕಸ್ಮಿಕವಾಗಿ ಪಾತಾಳ ಲೋಕದ/ನರಕ ಲೋಕದ ರಾಜನಾಗಿದ್ದು''. ಈ ಕಥೆಯು ಗಣೇಶ ಪುರಾಣದಲ್ಲಿ ಉಲ್ಲೇಖವಾಗಿರುವುದನ್ನು ಕಾಣಬಹುದು...

ದಂಥ ಕಥೆಯ ಪ್ರಕಾರ
ದಂಥ ಕಥೆಯ ಪ್ರಕಾರ, ಪರಶಾರ್ ಋಷಿಮುನಿಯ ಆಶ್ರಮದಲ್ಲಿರುವ ಮುನಿಗಳ ಮಕ್ಕಳೊಂದಿಗೆ ಗಣೇಶನು ಆಟ ಆಡುತ್ತಿದ್ದನು. ಆ ಸಮಯದಲ್ಲಿ ಹಾವು ರಾಣಿಯೊಂದು ಮಹಿಳೆಯ ರೂಪದಲ್ಲಿ ಪ್ರತ್ಯಕ್ಷಳಾದಳು. ಜೊತೆಗೆ ತನ್ನೊಡನೆ ಗಣೇಶನು ನರಕ/ಪಾತಾಳ ಲೋಕಕ್ಕೆ ಬರಬೇಕೆಂದು ಒತ್ತಾಯಿಸಿದಳು.
ಗಣೇಶನಿಗೆ ತುಂಬಾ ಪ್ರಿಯವಾದ ಎಲೆ,ಪುಷ್ಪಗಳು

ಗಣೇಶನಿಗೆ ಆದರದ ಸ್ವಾಗತ...
ಇದಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸದೆ ಗಣೇಶ ಅವಳೊಡನೆ ತೆರಳಿದನು. ಅಲ್ಲಿ ಗಣೇಶನಿಗೆ ಗೌರವದಿಂದಲೇ ಸ್ವಾಗತಿಸಿ, ಹಲವು ಬಗೆಯ ರುಚಿಕರ ತಿನಿಸನ್ನು ಸವಿಯಲು ನೀಡಿದರು.

ಹಾಸ್ಯ ಮಾಡಿದ ವಾಸುಕಿ...
ಹಾವುಗಳ ರಾಜ ವಾಸುಕಿಯು ಗಣೇಶನಿಗೆ ಸತ್ಕಾರ ಹಾಗೂ ಗೌರವ ನೀಡುವುದನ್ನು ಸಹಿಸಲಿಲ್ಲ. ಬದಲಿಗೆ ಗಣೇಶನ ಮುಖ, ಕಿವಿ, ಆನೆಯ ಸೊಂಡಿಲುಗಳನ್ನು ನೋಡಿ ಹಾಸ್ಯ ಮಾಡುತ್ತಾ ನಗಲು ಪ್ರಾರಂಭಿಸಿದನು.

ಕೋಪೋದ್ರಿಕ್ತನಾದ ಗಣೇಶ...
ಇದನ್ನು ಕಂಡ ಗಣೇಶನು ಕೋಪೋದ್ರಿಕ್ತನಾಗಿ ವಾಸುಕಿಯ ತಲೆಯ ಮೇಲೆ ಹತ್ತಿದನು. ಜೊತೆಗೆ ಅವನ ಕಿರೀಟವನ್ನು ಕಿತ್ತುಕೊಂಡು ತನ್ನ ತಲೆಯಮೇಲೆ ಇಟ್ಟುಕೊಂಡನು. (ಸಮುದ್ರ ಮಂಥನದ ಸಮಯದಲ್ಲಿ ಹಗ್ಗದ ರೂಪದಲ್ಲಿ ಬಳಸಿಕೊಂಡ ಹಾವು ವಾಸುಕಿ)
ಸಂಕಷ್ಟಿ ಚತುರ್ಥಿ ಹಬ್ಬದ ಮಹತ್ವ ತಿಳಿದಿದೆಯೇ?

ಪಾತಾಳ ಲೋಕದ ಹೊಸ ರಾಜನಾದ...
ವಾಸುಕಿಗೆ ಪಾಠಕಲಿಸಿದ ವಿಚಾರವನ್ನು ತಿಳಿದ, ಅವನ ಹಿರಿಯ ಸಹೋದರ ಶೇಷನಾಗ್ ಅಲ್ಲಿಗೆ ಬಂದನು. ಸ್ಥಳಕ್ಕೆ ಬರುತ್ತಿದ್ದಂತೆ ಗಣೇಶನನ್ನು ನೋಡಿ ವಂದಿಸಿದನು. ಜೊತೆಗೆ ಪಾತಾಳ ಲೋಕದ ಹೊಸ ರಾಜ ಎಂದು ಘೋಷಿಸಿದನು.



Click it and Unblock the Notifications
