ಗಣೇಶನಿಗೆ ತುಂಬಾ ಪ್ರಿಯವಾದ ಎಲೆ,ಪುಷ್ಪಗಳು

Subscribe to Boldsky

ಹಿಂದೂ ಧರ್ಮದಲ್ಲಿ ನಾವು ರಾಮಾ, ಕೃಷ್ಣ, ಶಿವ, ಗಣಪ, ಲಕ್ಷ್ಮಿ ಹೀಗೆ ಅನೇಕ ದೇವರನ್ನು ಪೂಜಿಸುತ್ತೇವೆ. ಪ್ರತಿಯೊಂದು ದೇವರಿಗೆ ಪೂಜಾ ವಿಧಾನಗಳು, ಇಷ್ಟದ ಆಹಾರಗಳು, ಹೂಗಳು, ವಾಹನಗಳು ಬೇರೆ-ಬೇರೆಯಾಗಿರುತ್ತದೆ. ಅನೇಕ ಬಗೆಯ ಪೂಜೆಗಳಿರುತ್ತದೆ. ಆದರೆ ಯಾವುದೇ ಪೂಜೆ ಮಾಡುವ ಮುಂಚೆ ಗಣಪನಿಗೆ ಪೂಜೆ ಮಾಡಿ, 'ವಿಘ್ನಗಳನ್ನು ನಿವಾರಿಸು ತಂದೇ' ಎಂದು ಬೇಡಿಕೊಳ್ಳುತ್ತೇವೆ.

ಗಣೇಶನಿಗೆ ಪುಷ್ಪಾರ್ಚನೆ ಮಾಡುವಾಗ ಅವನಿಗೆ ಇಷ್ಟವಾದ ಹೂಗಳಿಂದ ಮಾಡಿದರೆ ಗಣೇಶ ತುಂಬಾ ಸಂತುಷ್ಟನಾಗುತ್ತಾನೆ ಎಂಬ ನಂಬಿಕೆ ನಮ್ಮಲ್ಲಿದೆ. ಆದ್ದರಿಂದ ಗಣಪನ ಪೂಜೆಗೆ ಈ ಕೆಳಗಿನ ಹೂಗಳನ್ನು ಬಳಸಿ, ಗಣೇಶ ಕೃಪೆಗೆ ಪಾತ್ರರಾಗಿ.

ಕೆಂಪು ದಾಸವಾಳದ ಹೂ

ಕೆಂಪು ದಾಸವಾಳದ ಹೂ

ಗಣೇಶನಿಗೆ ಕೆಂಪು ಬಣ್ಣದ ಹೂಗಳೆಂದರೆ ಇಷ್ಟ, ಅದರಲ್ಲೂ ಕೆಂಪು ದಾಸವಾಳವೆಂದರೆ ತುಂಬಾ ಇಷ್ಟವಂತೆ.

 ಗರಿಕೆ ಹುಲ್ಲು

ಗರಿಕೆ ಹುಲ್ಲು

ಗಣಪನ ಪೂಜೆಗೆ ಗರಿಕೆ ಹುಲ್ಲು ಇರಲೇಬೇಕು. ಗರಿಕೆ ಹುಲ್ಲು ಬಳಸದಿದ್ದರೆ ಗಣಪನ ಪೂಜೆ ಪೂರ್ಣವಾಗುವುದಿಲ್ಲ.

ದಾಳಿಂಬೆ ಹೂ

ದಾಳಿಂಬೆ ಹೂ

ಗಣಪನಿಗೆ ದಾಳಿಂಬೆ ಹೂವೆಂದರೆ ತುಂಬಾ ಇಷ್ಟ.ಗಣಪನ ಪೂಜೆಯಲ್ಲಿ ಸಾಮಾನ್ಯವಾಗಿ ದಾಳಿಂಬೆ ಹೂ ಇದ್ದೇ ಇರುತ್ತದೆ.

ತುಳಸಿ

ತುಳಸಿ

ತುಳಸಿಯನ್ನು ಸಾಮಾನ್ಯವಾಗಿ ಎಲ್ಲಾ ಪೂಜೆಗೂ ಬಳಸುತ್ತೇವೆ. ತುಳಸಿಯನ್ನು ಮಾಲೆ ಮಾಡಿ ಗಣಪನಿಗೆ ಹಾಕಿದರೆ ಒಳ್ಳೆಯದು, ಬೇಡಿದ್ದು ನೆರವೇರುತ್ತದೆ ಎಂಬ ನಂಬಿಕೆ ಇದೆ.

ಶಂಖ ಪುಷ್ಪ

ಶಂಖ ಪುಷ್ಪ

ಈ ಹೂ ಸಾಮಾನ್ಯವಾಗಿ ಬಿಳಿ ಮತ್ತು ನೀಲಿ ಬಣ್ಣದಲ್ಲಿರುತ್ತದೆ. ಇದು ಶಂಖದ ಆಕೃತಿಯಲ್ಲಿರುವುದರಿಂದ ಇದನ್ನು ಶಂಖ ಪುಷ್ಪವೆಂದು ಕರೆಯುತ್ತಾರೆ.

ಕೇದಗೆ

ಕೇದಗೆ

ಕೇದಗೆ ಹೂ ಕೂಡ ಗಣಪನಿಗೆ ತುಂಬಾ ಪ್ರಿಯವಾದ ಹೂವಾಗಿದೆ.

ಕಣಗಲೆ ಹೂ (ಗೆನ್ನೇರು ಹೂ)

ಕಣಗಲೆ ಹೂ (ಗೆನ್ನೇರು ಹೂ)

ಈ ಹೂವನ್ನು ಸಾಮಾನ್ಯವಾಗಿ ಎಲ್ಲಾ ದೇವರ ಅರ್ಚನೆಗೆ ಬಳಸುತ್ತಾರೆ

For Quick Alerts
ALLOW NOTIFICATIONS
For Daily Alerts

    English summary

    Favourite Flowers Of Lord Ganesha

    It is believed that Lord Ganesha is attracted towards the red coloured hibiscus flower. Similarly there are some other flowers and leaves too used to worship Ganesha. Here are some favourite flowers and leaves of Lord Ganesha.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more