For Quick Alerts
ALLOW NOTIFICATIONS  
For Daily Alerts

ನಾಮಕರಣದ ಶುಭ ಸಮಾರಂಭಕ್ಕೆ 2019ರಲ್ಲಿ ಪ್ರಶಸ್ತವಾದ ದಿನಗಳು

|

ಮಗು ಎಂದರೇನೆ ಮನಸ್ಸಿಗೆ ಉಲ್ಲಾಸ ಹಿತ. ಒಂದು ಮನೆಯಲ್ಲಿ ಮಗು ಜನಿಸಿದರೆ ಆ ಕುಟುಂಬದ ಸಂತೋಷಕ್ಕೆ ಪಾರವೇ ಇರುವುದಿಲ್ಲ.ಕಷ್ಟದ ದಿನಗಳು ಕಳೆದು ಒಳ್ಳೆಯ ದಿನಗಳು ಸಮೀಪವಾದವೆಂಬ ಅನುಭವ. ಎಲ್ಲರಲ್ಲೂ ಏನೋ ಒಂದು ರೀತಿಯ ಖುಷಿ.ಮನಸ್ಸಿನ ನೋವನ್ನೆಲ್ಲಾ ಮರೆತು ಮಗುವಿನ ಜೊತೆ ಮಗುವಾಗಿ ಬೆರೆತು ಕಾಲ ಕಳೆಯುವ ಸಂತಸದ ಕ್ಷಣಗಳನ್ನು ಮರೆಯುವುದಕ್ಕೇ ಸಾಧ್ಯವಿಲ್ಲ ಎಂಬಂತಹ ಸಿಹಿಯಾದ ನೆನಪುಗಳು. ಮನೆಯಲ್ಲಿ ಹಬ್ಬದ ವಾತಾವರಣ ಮತ್ತು ದೈವೀದತ್ತವಾದ ವರವನ್ನೇ ಪಡೆದ ಅನುಭವ.ಏಕೆಂದರೆ ನಮಗೆಲ್ಲ ತಿಳಿದಿರುವ ಹಾಗೆ ಮಕ್ಕಳು ದೇವರ ಸಮ. ಮನೆಯಲ್ಲಿ ಪುಟ್ಟ ಪುಟ್ಟ ಮಕ್ಕಳು ಮನೆಯ ತುಂಬಾ ಓಡಾಡಿಕೊಂಡಿದ್ದರೆ ಮನೆ ತುಂಬಾ ನಗು ಮತ್ತು ಹಕ್ಕಿಯ ಗೂಡಿನಂತೆ ಯಾವಾಗಲು ಚಿಲಿಪಿಲಿಗುಟ್ಟುತ್ತಿರುತ್ತದೆ.ಇದಕ್ಕೇ ನಮ್ಮ ಜಾನಪದ ಹಿರಿಯರು 'ಮಕ್ಕಳಿರಲವ್ವಾ ಮನೆತುಂಬಾ' ಎಂದು ಹಾಡಿ ಸಂಭ್ರಮ ಪಟ್ಟಿದ್ದಾರೆ.

ಮಕ್ಕಳಿದ್ದಷ್ಟೂ ಚೆಂದ . ಮಗುವಿನ ಆಟ ಪಾಠ ನಗು ಅಳು ತುಂಟಾಟ ಎಲ್ಲವೂ ಒಂದು ರೀತಿಯ ಹೊಸ ಅನುಭವ ಮತ್ತು ಜೀವನದ ಜಂಜಾಟದಲ್ಲಿ ಈಜುತ್ತಿರುವ ಮನಸ್ಸಿಗೆ ಹಿತವಾದ ಅನುಭವ .ಮಗು ಎಂದ ಮೇಲೆ ಅದನ್ನು ಕರೆಯಲು ಒಂದು ಮುದ್ದಾದ ಹೆಸರು ಬೇಡವೇ ? ಮನೆಯಲ್ಲಿರುವ ದೊಡ್ಡವರಿಗಂತೂ ಹೆಸರು ಹೊಂದಿಸುವುದೇ ಒಂದು ಕೆಲಸವಾಗಿ ಬಿಟ್ಟಿರುತ್ತದೆ. ಆ ಮಗುವಿಗೆ ಹೆಸರಿಡುವ ಸಂಭ್ರಮ ಹೇಳತೀರದು .ನಾವು ಕರೆದಾಗ ಅದು ನಮ್ಮನ್ನು ತಿರುಗಿನೋಡಿದರೆ ನಮಗೆ ಆಗುವ ಸಂತೋಷ ರೋಮಾಂಚನ ಹೇಳತೀರದು. ಕೆಲವರಂತೂ ಕೂಸಿಗಿಂತ ಮುಂಚೆ ಕುಲಾವಿ ಎಂಬಂತೆ ಮಗು ಹುಟ್ಟುವ ಒಂದು ತಿಂಗಳು ಮುಂಚೆಯೇ ಹೆಸರಿಡಲು ಒಂದು ಮುದ್ದಾದ ಹೆಸರಿಗಾಗಿ ಹುಡುಕಾಟ ನಡೆಸುತ್ತಿರುತ್ತಾರೆ.ಇನ್ನೂ ಕೆಲವರಿಗೆ ಎರಡೆರಡು ಹೆಸರುಗಳನ್ನು ಇಡಬೇಕೆಂಬ ಬಯಕೆ ಇರುತ್ತದೆ. ಒಂದು ಅಧಿಕೃತ ಹೆಸರು ಹೊರಗಿನ ಜಗತ್ತಿಗೆ ಪರಿಚಿತವಾಗಲು ಮತ್ತೊಂದು ಪ್ರೀತಿಯ ಹೆಸರು ಮನೆಯ ಮಂದಿ ಪ್ರೀತಿಯಿಂದ ಕರೆದು ಮುದ್ದಾಡಲು. ಅದಕ್ಕಾಗಿ ಜನರು ಜ್ಯೋತಿಷಿಗಳ ಬಳಿ ಹೋಗಿ ಮಗು ಹುಟ್ಟಿದ ಸಮಯ ಸ್ಥಳ ದಿನಾಂಕ ಎಲ್ಲವನ್ನೂ ತಿಳಿಸಿ ಮಗುವಿಗೆ ಸರಿಹೊಂದುವಂತಹ ಒಂದು ಒಳ್ಳೆಯ ಹೆಸರಿಗಾಗಿ ಬೇಡಿಕೆ ಇಡುವುದು ಸರ್ವೇಸಾಮಾನ್ಯ. ನಾಮಕರಣದ ಸಮಾರಂಭಕ್ಕಾಗಿ ಶುಭದಿನವನ್ನು ಗೊತ್ತುಪಡಿಸಿ ಬಂಧುಬಾಂಧವರನ್ನು ಕರೆಯುವುದು ವಿಶೇಷ.

ನಾಮಕರಣದ ಶುಭ ಸಮಾರಂಭಕ್ಕೆ 2019ರಲ್ಲಿ ಪ್ರಶಸ್ತವಾದ ದಿನಗಳು

ನಾಮಕರಣದ ಶುಭ ಸಮಾರಂಭಕ್ಕೆ 2019ರಲ್ಲಿ ಪ್ರಶಸ್ತವಾದ ದಿನಗಳು

ನಾಮಕರಣದ ಸಮಾರಂಭವನ್ನು ವಿವಿಧ ದೇಶಗಳಲ್ಲಿ ವಿವಿಧ ಸಂಸ್ಕೃತಿ ಮತ್ತು ಪರಂಪರೆ ಪದ್ಧತಿಗಳಿಂದ ಆಚರಿಸುತ್ತಾರೆ. ಅದಕ್ಕೆ ನಮ್ಮ ಭಾರತವೂ ಹೊರತಲ್ಲ. ನಮ್ಮ ದೇಶವು ಎಲ್ಲಾ ಧರ್ಮಗಳಿಗೂ ಆಶ್ರಯತಾಣವಾಗಿರುವುದರಿಂದ ಇಲ್ಲಿ ಎಲ್ಲಾ ರೀತಿಯ ಸಾಂಪ್ರದಾಯಿಕ ವೈವಿಧ್ಯತೆಗಳಿಗೂ ಅವಕಾಶವಿದೆ. "ನಾಮಕರಣ" ವೆಂಬುದು ಸಂಸ್ಕೃತ ಪದ ಮತ್ತು ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಒಂದು ಅರ್ಥಪೂರ್ಣ ಸಂಪ್ರದಾಯ.ನಮ್ಮ ಹಿಂದೂ ಸಂಪ್ರದಾಯದಲ್ಲಿ ನಾಮಕರಣ ಒಂದು ಶುಭಸಮಾರಂಭವಾಗಿರುವುದರಿಂದ ಎಲ್ಲರೂ ಶುಭಗಳಿಗೆಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸುತ್ತಿರುತ್ತಾರೆ . ಅದಕ್ಕಾಗಿ ಸಮಯ ವ್ಯರ್ಥ ಮಾಡುವ ಬದಲು ನಾವು ಈ ಕೆಳಗೆ ಕೊಟ್ಟಿರುವ ಈ ವರ್ಷ ಅಂದರೆ 2019 ರ ಶುಭದಿನಗಳ ಕಡೆಗೆ ಒಮ್ಮೆ ಕಣ್ಣಾಡಿಸಿ.

ಫೆಬ್ರವರಿ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

ಫೆಬ್ರವರಿ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

7 ಫೆಬ್ರವರಿ 2019 , ಗುರುವಾರ ಬೆ. 7.06 ರಿಂದ ಮ. 12.09 , ದ್ವಿತೀಯ ತಿಥಿ , ಶತಭಿಷಾ ನಕ್ಷತ್ರ .

11 ಫೆಬ್ರವರಿ 2019 ,ಸೋಮವಾರ ಬೆ.7.03 ರಿಂದ ಸಂ. 6.12 ,ಷಷ್ಠಿ ತಿಥಿ , ಅಶ್ವಿನಿ ನಕ್ಷತ್ರ .

15 ಫೆಬ್ರವರಿ 2019 ,ಶುಕ್ರವಾರ ಬೆ.7.27 ರಿಂದ ರಾ. 8.13,ದಶಾಮಿ ತಿಥಿ , ಮೃಗಶಿರಾ ನಕ್ಷತ್ರ.

21 ಫೆಬ್ರವರಿ 2019 , ಗುರುವಾರ ಬೆ.6.55 ರಿಂದ ಸಂ. 7.50, ದ್ವಿತೀಯ ತಿಥಿ,ಫಲ್ಗುಣಿ ನಕ್ಷತ್ರ

ಮಾರ್ಚ್ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

ಮಾರ್ಚ್ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

8 ಮಾರ್ಚ್ 2019, ಶುಕ್ರವಾರ ಬೆ.6.40 ರಿಂದ ಸಂ. 6.51, ದ್ವಿತೀಯ ತಿಥಿ ,ಉತ್ತರಾಭಾದ್ರಪದ ನಕ್ಷತ್ರ .

13 ಮಾರ್ಚ್ 2019,ಬುಧವಾರ ಬೆ.6.34 ರಿಂದ ಸಂ. 6.31 ,ಸಪ್ತಮಿ ತಿಥಿ , ರೋಹಿಣಿ ನಕ್ಷತ್ರ.

21 ಮಾರ್ಚ್ 2019, ಗುರುವಾರ ಬೆ.7.13 ರಿಂದ ರಾ. 8.16, ಪೂರ್ಣಿಮಾ ತಿಥಿ ,ಉತ್ತರ ಫಲ್ಗುಣಿ ನಕ್ಷತ್ರ.

22 ಮಾರ್ಚ್ 2019,ಶುಕ್ರವಾರ ಬೆ.6.24 ರಿಂದ ರಾ. 8.12 ,ದ್ವಿತೀಯ ತಿಥಿ ,ಹಸ್ತ ನಕ್ಷತ್ರ.

25 ಮಾರ್ಚ್ 2019, ಸೋಮವಾರ ಬೆ.7.03 ರಿಂದ ರಾ. 8.00 ,ಪಂಚಮಿ ತಿಥಿ ,ವಿಶಾಖ ನಕ್ಷತ್ರ.

ಏಪ್ರಿಲ್ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

ಏಪ್ರಿಲ್ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

1 ಏಪ್ರಿಲ್ 2019, ಸೋಮವಾರ ಬೆ.6.12 ರಿಂದ ಸಂ.7.23, ದ್ವಿತೀಯ ತಿಥಿ, ಧನಿಷ್ಠ ನಕ್ಷತ್ರ.

5 ಏಪ್ರಿಲ್ 2019, ಶುಕ್ರವಾರ ಮ. 2.20 ರಿಂದ ಸಂ.7.17, ಪೂರ್ಣಿಮಾ ತಿಥಿ, ರೇವತಿ ನಕ್ಷತ್ರ.

10 ಏಪ್ರಿಲ್ 2019,ಬುಧವಾರ ಬೆ.6.02 ರಿಂದ ಸಂ.6.57, ಪಂಚಮಿ ತಿಥಿ ,ರೋಹಿಣಿ ನಕ್ಷತ್ರ.

11 ಏಪ್ರಿಲ್ 2019,ಗುರುವಾರ ಬೆ. 6.01 ರಿಂದ ಬೆ.10.25, ಷಷ್ಠಿ ತಿಥಿ , ಮೃಗಶಿರಾ ನಕ್ಷತ್ರ.

12 ಏಪ್ರಿಲ್ 2019,ಶುಕ್ರವಾರ ಬೆ.9.54 ರಿಂದ ಮ.1.24, ಸಪ್ತಮಿ ತಿಥಿ , ಆರಿದ್ರ ನಕ್ಷತ್ರ.

17 ಏಪ್ರಿಲ್ 2019,ಬುಧವಾರ ಬೆ.5.54 ರಿಂದ ಸಂ.6.31, ತ್ರಯೋದಶಿ ತಿಥಿ,ಉತ್ತರಫಾಲ್ಗುಣಿ ನಕ್ಷತ್ರ.

19 ಏಪ್ರಿಲ್ 2019,ಶುಕ್ರವಾರ ಸಂ.4.42 ರಿಂದ 7.29 ,ಪೂರ್ಣಿಮಾ ತಿಥಿ, ಚಿತ್ರ ನಕ್ಷತ್ರ.

26 ಏಪ್ರಿಲ್ 2019, ಶುಕ್ರವಾರ ಬೆ.5.45 ರಿಂದ ಮ.2.40, ಸಪ್ತಮಿ ತಿಥಿ ,ಉತ್ತರಾಷಾಡ ನಕ್ಷತ್ರ.

29 ಏಪ್ರಿಲ್ 2019,ಸೋಮವಾರ ಬೆ.5.43 ರಿಂದ ಬೆ.8.51, ದಶಮಿ ತಿಥಿ ,ಶತಭಿಷಾ ನಕ್ಷತ್ರ.

Most Read: 2019ರ ವರ್ಷದಲ್ಲಿ ಆಸ್ತಿ ಖರೀದಿಗೆ ಇರುವ ಶುಭ ದಿನಗಳು

ಮೇ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

ಮೇ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

2 ಮೇ 2019, ಗುರುವಾರ - ಬೆ.6.42 ರಿಂದ ಸಂ. 7.50 , ತ್ರಯೋದಶಿ ತಿಥಿ, ಉತ್ತರಾಭಾದ್ರಪದ ನಕ್ಷತ್ರ .

6 ಮೇ 2019, ಸೋಮವಾರ ಬೆ. 4.36 ರಿಂದ ಸಂ. 7.34 , ದ್ವಿತೀಯ ತಿಥಿ,ಕೃತಿಕಾ ನಕ್ಷತ್ರ.

9 ಮೇ 2019, ಗುರುವಾರ -ಸಂ. 3.17 ರಿಂದ ಸಂ. 7.00 , ಪಂಚಮಿ ತಿಥಿ, ಆರಿದ್ರ ನಕ್ಷತ್ರ.

10 ಮೇ 2019, ಶುಕ್ರವಾರ- ಬೆ. 5.34 ರಿಂದ ಸಂ. 7.06 , ಷಷ್ಠಿ ತಿಥಿ, ಪುನರ್ವಸು ನಕ್ಷತ್ರ.

15 ಮೇ 2019, ಬುಧವಾರ - ಬೆ. 10.36 ರಿಂದ ರಾ. 9.18 , ಪಂಚಮಿ ತಿಥಿ, ಆರಿದ್ರ ನಕ್ಷತ್ರ.

16 ಮೇ 2019, ಗುರುವಾರ - ಬೆ. 5.30 ರಿಂದ ಸಂ. 7.08 , ದ್ವಾದಶಿ ತಿಥಿ, ಹಸ್ತ ನಕ್ಷತ್ರ.

23 ಮೇ 2019, ಗುರುವಾರ - ಬೆ. 5.27 ರಿಂದ ರಾ. 8.46 , ಪಂಚಮಿ ತಿಥಿ, ಉತ್ತರಾಷಾಡ ನಕ್ಷತ್ರ.

24 ಮೇ 2019,ಶುಕ್ರವಾರ- ಬೆ. 5.26 ರಿಂದ ರಾ. 8.42 , ಷಷ್ಠಿ ತಿಥಿ, ಉತ್ತರಾಷಾಡ ನಕ್ಷತ್ರ.

29 ಮೇ 2019, ಬುಧವಾರ - ಬೆ. 3.21 ರಿಂದ ರಾ. 8.23 , ದಶಮಿ ತಿಥಿ,ಉತ್ತರಾಭಾದ್ರಪದ ನಕ್ಷತ್ರ.

30 ಮೇ 2019, ಗುರುವಾರ - ಬೆ. 5.24 ರಿಂದ ರಾ. 8.19 , ಏಕಾದಶಿ ತಿಥಿ, ರೇವತಿ ನಕ್ಷತ್ರ.

31 ಮೇ 2019, ಶುಕ್ರವಾರ - ಬೆ. 5.24 ರಿಂದ ರಾ. 8.15 , ದ್ವಾದಶಿ ತಿಥಿ, ಅಶ್ವಿನಿ ನಕ್ಷತ್ರ.

ಜೂನ್ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

ಜೂನ್ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

3 ಜೂನ್ 2019, ಸೋಮವಾರ- ಮ. 3.32 ರಿಂದ ರಾ. 8.03 , ಪೂರ್ಣಿಮಾ ತಿಥಿ, ರೋಹಿಣಿ ನಕ್ಷತ್ರ.

6 ಜೂನ್ 2019, ಗುರುವಾರ - ಬೆ. 5.23 ರಿಂದ ಬೆ. 9.55 , ತೃತೀಯ ತಿಥಿ, ಪುನರ್ವಸು ನಕ್ಷತ್ರ.

7 ಜೂನ್ 2019, ಶುಕ್ರವಾರ - ಬೆ. 7.38 ರಿಂದ ಸಂ. 6.56 , ಚತುರ್ಥಿ ತಿಥಿ, ಪುಷ್ಯ ನಕ್ಷತ್ರ.

12 ಜೂನ್ 2019, ಬುಧವಾರ - ಬೆ. 6.06 ರಿಂದ ಸಂ.7.28 , ದಶಮಿ ತಿಥಿ, ಹಸ್ತ ನಕ್ಷತ್ರ.

13 ಜೂನ್ 2019, ಗುರುವಾರ -ಸಂ. 4.49 ರಿಂದ ಸಂ.7.24 ,ಏಕಾದಶಿ ತಿಥಿ, ಚಿತ್ರ ನಕ್ಷತ್ರ.

14 ಜೂನ್ 2019, ಶುಕ್ರವಾರ- ಬೆ. 5.23 ರಿಂದ ಬೆ. 10.16 , ದ್ವಾದಶಿ ತಿಥಿ, ಹಸ್ತ ನಕ್ಷತ್ರ.

19 ಜೂನ್ 2019, ಬುಧವಾರ -ಮ. 1.29 ರಿಂದ ಸಂ. 7.59 , ದ್ವಿತೀಯ ತಿಥಿ, ಪೂರ್ವಾಷಾಢ ನಕ್ಷತ್ರ.

27 ಜೂನ್ 2019, ಗುರುವಾರ - ಬೆ. 5.44 ರಿಂದ ಸಂ. 6.15 , ನವಮಿ ತಿಥಿ, ರೇವತಿ ನಕ್ಷತ್ರ.

28 ಜೂನ್ 2019, ಶುಕ್ರವಾರ - ಬೆ. 6.36 ರಿಂದ ಬೆ. 9.11 , ದಶಮಿ ತಿಥಿ, ಅಶ್ವಿನಿ ನಕ್ಷತ್ರ.

ಜುಲೈ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

ಜುಲೈ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

3 ಜುಲೈ 2019, ಬುಧವಾರ -ಬೆ. 6.36 ರಿಂದ ರಾ.8.09 ,ಪ್ರತಿಪಾದ ತಿಥಿ, ಆರಿದ್ರ ನಕ್ಷತ್ರ.

4 ಜುಲೈ 2019,ಗುರುವಾರ -ಬೆ. 5.28 ರಿಂದ ರಾ.8.05 , ದ್ವಿತೀಯ ತಿಥಿ, ಪುಷ್ಯ ನಕ್ಷತ್ರ.

8 ಜುಲೈ 2019, ಸೋಮವಾರ-ಬೆ. 5.30 ರಿಂದ ಮ.3.36 , ಷಷ್ಠಿ ತಿಥಿ, ಉತ್ತರಫಾಲ್ಗುಣಿ ನಕ್ಷತ್ರ.

11 ಜುಲೈ 2019, ಗುರುವಾರ -ಬೆ. 5.31 ರಿಂದ ಮ.3.55 , ದಶಮಿ ತಿಥಿ, ಸ್ವಾತಿ ನಕ್ಷತ್ರ.

18 ಜುಲೈ 2019, ಗುರುವಾರ -ಬೆ. 5.35 ರಿಂದ ರಾ.8.52 , ದ್ವಿತೀಯ ತಿಥಿ, ಶ್ರಾವಣ ನಕ್ಷತ್ರ.

19 ಜುಲೈ 2019, ಶುಕ್ರವಾರ -ಬೆ. 5.35 ರಿಂದ ರಾ.8.03 , ದ್ವಿತೀಯ ತಿಥಿ, ಧನಿಷ್ಠ ನಕ್ಷತ್ರ.

22 ಜುಲೈ 2019, ಸೋಮವಾರ-ಬೆ. 10.24 ರಿಂದ ರಾ.8.37 , ಪಂಚಮಿ ತಿಥಿ, ಪೂರ್ವಭಾದ್ರಪದ ನಕ್ಷತ್ರ.

24 ಜುಲೈ 2019, ಬುಧವಾರ ಬೆ. 5.38 ರಿಂದ ಸಂ.6.05 , ಸಪ್ತಮಿ ತಿಥಿ, ರೇವತಿ ನಕ್ಷತ್ರ.

29 ಜುಲೈ 2019, ಸೋಮವಾರ-ಬೆ. 8.00 ರಿಂದ ಸಂ.6.22 , ದಶಮಿ ತಿಥಿ, ಮೃಗಶಿರಾ ನಕ್ಷತ್ರ.

ಆಗಸ್ಟ್ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

ಆಗಸ್ಟ್ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

1 ಆಗಸ್ಟ್ 2019, ಗುರುವಾರ-ಬೆ. 8.42 ರಿಂದ ಬೆ.12.11 , ಪೂರ್ಣಿಮಾ ತಿಥಿ, ಪುಷ್ಯ ನಕ್ಷತ್ರ.

5 ಆಗಸ್ಟ್ 2019, ಸೋಮವಾರ -ಬೆ. 5.45 ರಿಂದ ರಾ.7.42 , ಪಂಚಮಿ ತಿಥಿ, ಹಸ್ತ ನಕ್ಷತ್ರ.

7 ಆಗಸ್ಟ್ 2019, ಬುಧವಾರ -ಬೆ. 5.46 ರಿಂದ ರಾ.7.42 , ಸಪ್ತಮಿ ತಿಥಿ, ಸ್ವಾತಿ ನಕ್ಷತ್ರ.

9 ಆಗಸ್ಟ್ 2019, ಶುಕ್ರವಾರ- ಬೆ.10.00 ರಿಂದ ರಾ.7.26 , ನವಮಿ ತಿಥಿ, ಅನುರಾಧ ನಕ್ಷತ್ರ.

15 ಆಗಸ್ಟ್ 2019, ಗುರುವಾರ- ಬೆ.5.59 ರಿಂದ ಸಂ.7.02 , ಪೂರ್ಣಿಮಾ ತಿಥಿ, ಶ್ರಾವಣ ನಕ್ಷತ್ರ.

16 ಆಗಸ್ಟ್ 2019, ಶುಕ್ರವಾರ-ಬೆ. 5.51 ರಿಂದ ರಾ.8.22 , ಪ್ರತಿಪಾದ ತಿಥಿ, ಧನಿಷ್ಠ ನಕ್ಷತ್ರ.

21 ಆಗಸ್ಟ್ 2019, ಬುಧವಾರ -ಬೆ. 5.53 ರಿಂದ ರಾ.8.06 , ಪಂಚಮಿ ತಿಥಿ, ಅಶ್ವಿನಿ ನಕ್ಷತ್ರ.

28 ಆಗಸ್ಟ್ 2019, ಬುಧವಾರ -ಬೆ. 6.10 ರಿಂದ ರಾ.7.39 , ತ್ರಯೋದಶಿ ತಿಥಿ, ಪುಷ್ಯ ನಕ್ಷತ್ರ.

ಸೆಪ್ಟೆಂಬರ್ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

ಸೆಪ್ಟೆಂಬರ್ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

9 ಸೆಪ್ಟೆಂಬರ್ 2019, ಸೋಮವಾರ-ಬೆ. 8.36 ರಿಂದ ರಾ.11.33 , ಏಕಾದಶಿ ತಿಥಿ, ಪೂರ್ವಾಷಾಢ ನಕ್ಷತ್ರ.

11 ಸೆಪ್ಟೆಂಬರ್ 2019, ಬುಧವಾರ -ಬೆ. 6.04 ರಿಂದ ಸಂ.6.36 , ತ್ರಯೋದಶಿ ತಿಥಿ, ಶ್ರಾವಣ ನಕ್ಷತ್ರ.

16 ಸೆಪ್ಟೆಂಬರ್ 2019, ಸೋಮವಾರ-ಬೆ. 6.06 ರಿಂದ ರಾ.7.49 , ತ್ರಯೋದಶಿ ತಿಥಿ, ಶ್ರಾವಣ ನಕ್ಷತ್ರ.

20 ಸೆಪ್ಟೆಂಬರ್ 2019, ಶುಕ್ರವಾರ-ಬೆ. 10.19 ರಿಂದ ರಾ.7.33 , ಷಷ್ಠಿ ತಿಥಿ, ಕೃತಿಕಾ ನಕ್ಷತ್ರ.

25 ಸೆಪ್ಟೆಂಬರ್ 2019, ಬುಧವಾರ -ಬೆ. 6.11 ರಿಂದ ಬೆ.8.52 , ಏಕಾದಶಿ ತಿಥಿ, ಪುಷ್ಯ ನಕ್ಷತ್ರ.

30 ಸೆಪ್ಟೆಂಬರ್ 2019, ಸೋಮವಾರ-ಬೆ. 6.13 ರಿಂದ ಮ.12.08 , ದ್ವಿತೀಯ ತಿಥಿ,ಚಿತ್ರ ನಕ್ಷತ್ರ.

Most Read: ಮೆದುಳೇ ಇಲ್ಲದೆ ಹುಟ್ಟಿದ ಹುಡುಗ! ಆದರೆ ಇವನ ಜೀವನದಲ್ಲಿ ನಡೆಯಿತು ಪವಾಡ!

ಅಕ್ಟೋಬರ್ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

ಅಕ್ಟೋಬರ್ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

2 ಅಕ್ಟೋಬರ್ 2019, ಬುಧವಾರ - ಮ.12.52 ರಿಂದ ಸಂ.6.46 , ಚತುರ್ಥಿ ತಿಥಿ, ವಿಶಾಖ ನಕ್ಷತ್ರ.

3 ಅಕ್ಟೋಬರ್ 2019, ಗುರುವಾರ-ಬೆ. 6.15 ರಿಂದ ಮ.12.10 , ಪಂಚಮಿ ತಿಥಿ,ಅನುರಾಧ ನಕ್ಷತ್ರ.

7 ಅಕ್ಟೋಬರ್ 2019, ಸೋಮವಾರ- ಮ.12.38 ರಿಂದ ಸಂ.6.26 , ನವಮಿ ತಿಥಿ, ಉತ್ತರಾಷಾಡ ನಕ್ಷತ್ರ.

9 ಅಕ್ಟೋಬರ್ 2019, ಬುಧವಾರ - ಸಂ.5.19 ರಿಂದ ಸಂ.6.18 , ಏಕಾದಶಿ ತಿಥಿ, ಧನಿಷ್ಠ ನಕ್ಷತ್ರ.

10 ಅಕ್ಟೋಬರ್ 2019, ಗುರುವಾರ-ಬೆ. 6.19 ರಿಂದ ಸಂ.6.14 , ದ್ವಾದಶಿ ತಿಥಿ, ಶತಭಿಷಾ ನಕ್ಷತ್ರ.

14 ಅಕ್ಟೋಬರ್ 2019, ಸೋಮವಾರ-ಬೆ. 6.21 ರಿಂದ ಸಂ.5.59 , ಪ್ರತಿಪಾದ ತಿಥಿ, ರೇವತಿ ನಕ್ಷತ್ರ.

18 ಅಕ್ಟೋಬರ್ 2019, ಶುಕ್ರವಾರ-ಬೆ. 7.29 ರಿಂದ ಸಂ.7.18 , ಚತುರ್ಥಿ ತಿಥಿ,ರೋಹಿಣಿ ನಕ್ಷತ್ರ.

21 ಅಕ್ಟೋಬರ್ 2019, ಸೋಮವಾರ -ಬೆ. 6.26 ರಿಂದ ಸಂ.6.44 , ಸಪ್ತಮಿ ತಿಥಿ, ಪುನರ್ವಸು ನಕ್ಷತ್ರ.

25 ಅಕ್ಟೋಬರ್ 2019, ಶುಕ್ರವಾರ- ಬೆ.11.00 ರಿಂದ ಸಂ.6.51 , ದ್ವಾದಶಿ ತಿಥಿ, ಪೂರ್ವಫಾಲ್ಗುಣಿ ನಕ್ಷತ್ರ.

28 ಅಕ್ಟೋಬರ್ 2019, ಸೋಮವಾರ-ಬೆ. 9.08 ರಿಂದ ಸಂ.6.26 , ಪೂರ್ಣಿಮಾ ತಿಥಿ, ಸ್ವಾತಿ ನಕ್ಷತ್ರ.

30 ಅಕ್ಟೋಬರ್ 2019, ಬುಧವಾರ -ಬೆ. 6.32 ರಿಂದ ಸಂ.6.31 , ತೃತೀಯ ತಿಥಿ, ಅನುರಾಧ ನಕ್ಷತ್ರ.

Most Read: 2019ರಲ್ಲಿ ಗೃಹ ಪ್ರವೇಶಕ್ಕೆ ಶುಭ ದಿನ, ಮುಹೂರ್ತಗಳು-ಇಲ್ಲಿದೆ ಫುಲ್ ಡಿಟೇಲ್ಸ್

ನವೆಂಬರ್ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

ನವೆಂಬರ್ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

7 ನವೆಂಬರ್ 2019, ಗುರುವಾರ-ಬೆ. 6.37 ರಿಂದ ರಾ.8.41 , ಏಕಾದಶಿ ತಿಥಿ, ಶತಭಿಷಾ ನಕ್ಷತ್ರ.

8 ನವೆಂಬರ್ 2019, ಶುಕ್ರವಾರ- ಮ.12.24 ರಿಂದ ಸಂ.5.56 , ಏಕಾದಶಿ ತಿಥಿ, ಪೂರ್ವಫಾಲ್ಗುಣಿ ನಕ್ಷತ್ರ.

14 ನವೆಂಬರ್ 2019, ಗುರುವಾರ-ಬೆ. 6.43 ರಿಂದ ಸಂ.5.32 , ದ್ವಿತೀಯ ತಿಥಿ, ರೋಹಿಣಿ ನಕ್ಷತ್ರ.

15 ನವೆಂಬರ್ 2019, ಶುಕ್ರವಾರ- ಬೆ. 6.44 ರಿಂದ ರಾ.7.53 , ತೃತೀಯ ತಿಥಿ, ಮೃಗಶಿರಾ ನಕ್ಷತ್ರ.

18 ನವೆಂಬರ್ 2019, ಸೋಮವಾರ- ಬೆ. 6.46 ರಿಂದ ಸಂ.5.10 , ಷಷ್ಠಿ ತಿಥಿ, ಪುಷ್ಯ ನಕ್ಷತ್ರ.

22 ನವೆಂಬರ್ 2019, ಶುಕ್ರವಾರ- ಬೆ.9.01 ರಿಂದ ಸಂ.6. 56 , ದಶಮಿ ತಿಥಿ, ಉತ್ತರ ಫಾಲ್ಗುಣಿ ನಕ್ಷತ್ರ.

27 ನವೆಂಬರ್ 2019, ಬುಧವಾರ-ಬೆ. 6.53 ರಿಂದ ಬೆ.8.12 , ಪ್ರತಿಪಾದ ತಿಥಿ, ಅನುರಾಧ ನಕ್ಷತ್ರ.

ಡಿಸೆಂಬರ್ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

ಡಿಸೆಂಬರ್ 2019 ತಿಂಗಳಲ್ಲಿ ನಾಮಕರಣದ ಶುಭ ದಿನಗಳು

2 ಡಿಸೆಂಬರ್ 2019, ಸೋಮವಾರ-ಬೆ. 6.57 ರಿಂದ ಸಂ.6.17 , ಷಷ್ಠಿ ತಿಥಿ, ಶ್ರಾವಣ ನಕ್ಷತ್ರ.

6 ಡಿಸೆಂಬರ್ 2019, ಶುಕ್ರವಾರ-ಬೆ. 7.00 ರಿಂದ ಸಂ.4.30 , ದಶಮಿ ತಿಥಿ, ಉತ್ತರಾಭಾದ್ರಪದ ನಕ್ಷತ್ರ.

12 ಡಿಸೆಂಬರ್ 2019, ಗುರುವಾರ- ಬೆ.10.42 ರಿಂದ ಸಂ.5.37 , ಪೂರ್ಣಿಮಾ ತಿಥಿ, ಮೃಗಶಿರಾ ನಕ್ಷತ್ರ.

27 ಡಿಸೆಂಬರ್ 2019, ಶುಕ್ರವಾರ- ಸಂ.5.30 ರಿಂದ ಸಂ.6.53 , ಪ್ರತಿಪಾದ ತಿಥಿ, ಪೂರ್ವಾಷಾಢ ನಕ್ಷತ್ರ.

30 ಡಿಸೆಂಬರ್ 2019, ಸೋಮವಾರ-ಮ.1.55 ರಿಂದ ಸಂ.6.41 , ಚತುರ್ಥಿ ತಿಥಿ, ಧನಿಷ್ಠ ನಕ್ಷತ್ರ.

English summary

List Of Naming Ceremony Dates In 2019

Naming ceremony is a ritualistic procedure when a baby is given a name on an auspicious day or Shubh Muhurta, by an astrologer. It is done in accordance with the birth chart prepared when the child is born. The positioning of various celestial bodies at the time of the birth determines his zodiac sign, which further becomes a factor in deciding on the name.
X
Desktop Bottom Promotion