ಜನ್ಮಾಷ್ಟಮಿ ವಿಶೇಷ: ತುಳಸಿ ಕಟ್ಟೆಯ ಎದುರು ತುಪ್ಪದ ದೀಪ ಬೆಳಗಿಸಿ

By: Deepu
Subscribe to Boldsky

ನಿಮ್ಮ ಮನೆಯಲ್ಲಿ ಆದಾಯ ಸತತವಾಗಿರಬೇಕು ಹಾಗೂ ಸಮೃದ್ಧಿ ಹೆಚ್ಚುತ್ತಿರಬೇಕು ಎಂಬ ಬಯಕೆ ನಿಮಗಿದ್ದರೆ ಈ ಕೃಷ್ಣ ಜನ್ಮಾಷ್ಟಮಿಯಂದು ಹೀಗೆ ಮಾಡಿ. ಈ ಜನ್ಮಾಷ್ಟಮಿಯಂದು (ಇದಕ್ಕೆ ಮೋಹರಾತ್ರಿ ಎಂಬ ಹೆಸರೂ ಇದೆ) ಕೃಷ್ಣನನ್ನು ಪೂಜಿಸಿ ಜೀವನದ ಕಷ್ಟಗಳನ್ನು ನಿವಾರಿಸುವಂತೆ ಬೇಡಿಕೊಳ್ಳಿ. ಅಗತ್ಯವಿರುವವರಿಗೆ ಆಹಾರ ದಾನ ಮಾಡಿ ಹಾಗೂ ತುಳಸಿಕಟ್ಟೆಯಲ್ಲಿ ಅಥವಾ ಕೆಳಗೆ ವಿವರಿಸುವ ಸ್ಥಳದಲ್ಲಿ ದೀಪವನ್ನು ಬೆಳಗಿಸಿ. ಬನ್ನಿ, ಹೆಚ್ಚಿನ ಮಾಹಿತಿಯನ್ನು ಪಡೆಯಲು ಮುಂದೆ ಓದಿ...

ಪೂಜಾತಟ್ಟೆಯ ನಾಣ್ಯಗಳು

ಪೂಜಾತಟ್ಟೆಯ ನಾಣ್ಯಗಳು

ಕೃಷ್ಣನನ್ನು ಪೂಜಿಸುವ ಸಮಯದಲ್ಲಿ ಪೂಜಾತಟ್ಟೆಯಲ್ಲಿ ಕೆಲವು ನಾಣ್ಯಗಳನ್ನಿಡಿ. ಪೂಜೆಯ ಬಳಿಕ ಇವನ್ನು ನಿಮ್ಮ ಹಣದ ಪರ್ಸಿನಲ್ಲಿಡಿ. ಆದರೆ ಇವನ್ನು ಖರ್ಚು ಮಾಡಬೇಡಿ. ಮುಂದಿನ ದಿನಗಳಲ್ಲಿ ಬದಲಾವಣೆಯನ್ನು ಗಮನಿಸಿ.

ಪೂಜೆಯ ಬಳಿಕ ಶಂಖ...

ಪೂಜೆಯ ಬಳಿಕ ಶಂಖ...

ಒಂದು ವೇಳೆ ನಿಮ್ಮ ಪರ್ಸಿಗೆ ಆಗಮನವಾಗುವ ಹಣ ಹಾಗೇ ನಿರ್ಗಮಿಸುತ್ತಲೂ ಇದ್ದರೆ ಹೀಗೆ ಮಾಡಿ: ಈ ಜನ್ಮಾಷ್ಟಮಿಯಂದು ನಡುರಾತ್ರಿ ಹನ್ನೆರಡು ಗಂಟೆಗೆ ಕೃಷ್ಣನನ್ನು ಪೂಜಿಸಿ ಹಾಗೂ ಪೂಜಾಗೃಹದಲ್ಲಿ ಹನ್ನೊಂದು ಲಕ್ಷ್ಮಿಶಂಖಗಳನ್ನಿರಿಸಿ. ಪೂಜೆಯ ಬಳಿಕ ಈ ಶಂಖಗಳನ್ನು ನಿಮ್ಮ ಮನೆಯ ತಿಜೋರಿಗಳಲ್ಲಿಡಿ.

ಓ ವಾಸುದೇವಾಯೇ ನಮಃ ಮಂತ್ರವನ್ನು ಪಠಿಸಿ

ಓ ವಾಸುದೇವಾಯೇ ನಮಃ ಮಂತ್ರವನ್ನು ಪಠಿಸಿ

ಈ ಜನ್ಮಾಷ್ಟಮಿಯ ಸಂಜೆ ತುಪ್ಪದ ದೀಪವೊಂದನ್ನು ನಿಮ್ಮ ಮನೆಯ ತುಳಸಿ ಕಟ್ಟೆಯ ಮೇಲೆ ಬೆಳಗಿಸಿ ಕೃಷ್ಣನ ಅನುಗ್ರಹವನ್ನು ಪಡೆಯಿರಿ. ಇದರೊಂದಿಗೆ ತುಳಸಿ ಗಿಡದ ಮೇಲೆ ದಾವಣಿಯೊಂದನ್ನು ಆವರಿಸಿ ಎರಡು ಸುತ್ತು ಓ ವಾಸುದೇವಾಯೇ ನಮಃ ಮಂತ್ರವನ್ನು ಪಠಿಸಿ.

ಶಂಖವನ್ನು ಊದಿ ಕೃಷ್ಣನನ್ನು ಪ್ರಾರ್ಥಿಸಿ

ಶಂಖವನ್ನು ಊದಿ ಕೃಷ್ಣನನ್ನು ಪ್ರಾರ್ಥಿಸಿ

ಶಂಖವನ್ನು ಊದಿ ಕೃಷ್ಣನನ್ನು ಪ್ರಾರ್ಥಿಸಿ ಹಾಗೂ ಜೊತೆಗೇ ಧನ ಹಾಗೂ ರಕ್ಷಣೆಯನ್ನು ಬಯಸಿ ಲಕ್ಷ್ಮಿದೇವತೆಯನ್ನೂ ಆರಾಧಿಸಿ.

ಹಣ್ಣುಗಳು ಮತ್ತು ಧಾನ್ಯವನ್ನು ದಾನ ಮಾಡಿ

ಹಣ್ಣುಗಳು ಮತ್ತು ಧಾನ್ಯವನ್ನು ದಾನ ಮಾಡಿ

ಈ ಜನ್ಮಷ್ಟಮಿಯ ಸಂದರ್ಭದಲ್ಲಿ ಅಗತ್ಯವುಳ್ಳವರಿಗೆ ಆಹಾರವಸ್ತುಗಳು, ವಿಶೇಷವಾಗಿ ಹಣ್ಣುಗಳು ಮತ್ತು ಧಾನ್ಯವನ್ನು ದಾನ ಮಾಡಿ.

English summary

Light A Diya Near Tulsi On Janamashtami To Boost Your Income

On this Janmashtami do the following steps to retain wealth and create a flow of money. Praying to lord Krishna on Janmashtami which is also called Mohratri is specially beneficial to erase the financial problems that you are facing in your life. From donating food items, to lighting a diya at the following place, these remedies are simple, but will help you if done on Janamashtami. Read through the slides to know more.
Subscribe Newsletter