ನಿಮ್ಮ ಬಯಕೆಗಳು ಈಡೇರಬೇಕೆಂದರೆ ಲಕ್ಷ್ಮಿ ದೇವಿಯ ಈ ಮಂತ್ರಗಳನ್ನು ಪಠಿಸಿ

By: Divya pandith
Subscribe to Boldsky

ಹಿಂದೂ ಧರ್ಮದ ಆಚಾರ ವಿಚಾರಗಳು ವಿಶಿಷ್ಟವಾದ ಹಿನ್ನೆಲೆಯನ್ನು ಹೊಂದಿರುತ್ತವೆ. ದೈವ ಆರಾಧನೆ, ಮಂತ್ರ ಪಠಣೆ ಹಾಗೂ ಧ್ಯಾನ ಇವೆಲ್ಲವೂ ವೈಜ್ಞಾನಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ನಮ್ಮ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅಲ್ಲದೆ ಮನಸ್ಸಿಗೆ ಹಿತ ಹಾಗೂ ನೆಮ್ಮದಿಯ ಭಾವವನ್ನು ನೀಡುವವು. ಪ್ರತಿಯೊಂದು ದೇವತೆಗಳಿಗಾಗಿ ಜಪಿಸುವ ಮಂತ್ರಗಳು ವಿಶಿಷ್ಟತೆಯನ್ನು ಹೊಂದಿರುವುದು ವಿಶೇಷ.

ಸಂಸ್ಕೃತ ಭಾಷೆಯಲ್ಲಿರುವ ಮಂತ್ರಗಳನ್ನು ಹೇಳುವುದು ಸುಲಭವಲ್ಲ. ಅದರ ಉಚ್ಚಾರ ಸ್ಪಷ್ಟ ಹಾಗೂ ಶುದ್ಧವಾಗಿರಬೇಕಾಗುತ್ತದೆ. ಸರ್ವ ಶಕ್ತಿಯನ್ನು ಕೇಂದ್ರೀಕರಿಸಲು ಸಹಾಯ ಮಾಡುವ ಈ ಮಂತ್ರಗಳು ಆಧ್ಯಾತ್ಮಿಕವಾಗಿ ಶಕ್ತಿಯನ್ನು ಹೊಂದಿರುತ್ತವೆ. ಹಾಗಾಗಿ ನಿತ್ಯವೂ ದೇವರ ಆರಾಧನೆಯ ಸಂದರ್ಭದಲ್ಲಿ ಸೂಕ್ತ ಮಂತ್ರಗಳ ಜಪಿಸುವುದರಿಂದ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎನ್ನಲಾಗುತ್ತದೆ.

ದೀಪಾವಳಿ ವಿಶೇಷ: ಲಕ್ಷ್ಮೀ ದೇವಿಯ ಪೂಜಾ, ವಿಧಿವಿಧಾನ

ಧಾರ್ಮಿಕ ಹಿನ್ನೆಲೆಯ ಪ್ರಕಾರ ದೀಪಾವಳಿ ಹಬ್ಬದಲ್ಲಿ ಲಕ್ಷ್ಮಿ ದೇವಿಗೆ ಹೇಳಬೇಕಾದ ಕೆಲವು ಮಂತ್ರಗಳನ್ನು ಹೇಳಿದರೆ ನಮ್ಮ ಕಷ್ಟಗಳು ದೂರವಾಗುತ್ತವೆ, ಬಯಕೆಗಳು ಈಡೇರುತ್ತವೆ ಎನ್ನಲಾಗುವುದು. ನಿಮಗೂ ನಿಮ್ಮ ಬಯಕೆಗಳು ಈಡೇರಬೇಕೆಂದರೆ ಈ ಬಾರಿಯ ದೀಪಾವಳಿ ಹಬ್ಬದಲ್ಲಿ ನಾವಿಲ್ಲ ಸೂಚಿಸಿರುವ ಮಂತ್ರಗಳನ್ನು ಹೇಳುವ ಮೂಲಕ ಪೂಜೆಯನ್ನು ಮಾಡಿ, ದೇವಿಯ ಕೃಪೆಗೆ ಒಳಗಾಗಿ... 

ಯಾವ ಮಂತ್ರಗಳು?

ಯಾವ ಮಂತ್ರಗಳು?

ಪ್ರತಿಯೊಂದು ಮಂತ್ರವೂ ಅಪಾರ ಶಕ್ತಿಯನ್ನು ಹೊಂದಿರುತ್ತದೆ. ಧನಾತ್ಮಕ ಶಕ್ತಿಗಳನ್ನು ಕೇಂದ್ರೀಕರರಿಸಿ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತವೆ. ಪ್ರತಿಯೊಂದು ದೇವತೆಗಳಿಗೂ ವಿಶೇಷವಾದ ಮಂತ್ರಗಳನ್ನು ಹೇಳುವುದರಿಂದ ಆಧ್ಯಾತ್ಮಿ ಶಕ್ತಿ ಹತ್ತಿರವಾಗುವುದರ ಜೊತೆಗೆ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷವನ್ನುಂಟುಮಾಡುತ್ತವೆ.

ಮಹಾಲಕ್ಷ್ಮಿ ಮಂತ್ರಗಳ ಮಹತ್ವ

ಮಹಾಲಕ್ಷ್ಮಿ ಮಂತ್ರಗಳ ಮಹತ್ವ

ಲಕ್ಷ್ಮಿ ದೇವಿಯ ಮಂತ್ರಗಳನ್ನು ಸಿದ್ಧಿ ಮಂತ್ರಗಳು ಎಂದು ಕರೆಯಲಾಗುತ್ತವೆ. ಪ್ರತಿಯೊಂದು ಮಂತ್ರವೂ ಲಕ್ಷ್ಮಿ ದೇವಿಯ ಶಕ್ತಿ ಮತ್ತು ಬಲಿಷ್ಠತೆಯನ್ನು ಹೆಚ್ಚಿಸುತ್ತವೆ. ಈ ಮಂತ್ರಗಳನ್ನು ನಾವು ಶ್ರದ್ಧಾ ಭಕ್ತಿಯಿಂದ ಪಠಿಸಿದಾಗ, ಧನಾತ್ಮಕ ಶಕ್ತಿಯು ನಮಗೆ ಸಿದ್ಧಿಸುತ್ತದೆ. ದೇವಿಯ ಪೂಜೆಯ ಸಂದರ್ಭದಲ್ಲಿ ಇವುಗಳನ್ನು ಹೇಳಿದರೆ ನಮ್ಮ ಎಲ್ಲಾ ತೊಂದರೆಗಳು ನಿವಾರಣೆಯಾಗಿ, ಯಶಸ್ಸು ಪ್ರಾಪ್ತಿಯಾಗುತ್ತದೆ. ದೀಪಾವಳಿ ಸಮಯದಲ್ಲಿ ಹೇಳಬಹುದಾದ ಮಂತ್ರಗಳ ಸೂಕ್ತ ವಿವರಣೆ ಮುಂದಿದೆ ಓದಿ.

ಆರ್ಥಿಕ ಶಕ್ತಿ ಹೆಚ್ಚಳಕ್ಕೆ

ಆರ್ಥಿಕ ಶಕ್ತಿ ಹೆಚ್ಚಳಕ್ಕೆ

ಆಥಿಕ ಸ್ಥಿತಿ ಸುಧಾರಣೆ ಹೊಂದಬೇಕೆಂದುಕೊಂಡಿದ್ದರೆ ಹಬ್ಬದ ದಿನ ಲಕ್ಷ್ಮಿ ಪೂಜೆ ಮಾಡುವಾಗ "ಓಂ ಶ್ರೀಮ್ ಮಹಾ ಲಕ್ಷ್ಮೀಯೇಯ್ ನಮಃ" ಎನ್ನುವ ಮಂತ್ರವನ್ನು ಹೇಳಿ.

ಸಮೃದ್ಧಿಗಾಗಿ

ಸಮೃದ್ಧಿಗಾಗಿ

ನಿಮ್ಮ ಸಮೃದ್ಧಿಗಾಗಿ "ಓಂ ಹ್ರೀಮ್ ಶ್ರೀಮ್ ಕ್ಲೀಮ್ ಮಹಾಲಕ್ಷ್ಮಿ ನಮಃ" ಎನ್ನಿರಿ.

ಹೆಚ್ಚಿನ ಸಂತೋಷಕ್ಕೆ

ಹೆಚ್ಚಿನ ಸಂತೋಷಕ್ಕೆ

ಜೀವನದಲ್ಲಿ ಹೆಚ್ಚು ಸಂತೋಷವಾಗಿರಬೇಕೆಂದು ಬಯಸಿದರೆ " ಓಂ ಶ್ರೀಮ್ ಶ್ರೀ-ಆಯ್ ನಮಃ " ಎನ್ನಿರಿ.

ಆಧ್ಯಾತ್ಮಿಕ ಶಕ್ತಿ ವೃದ್ಧಿಗೆ

ಆಧ್ಯಾತ್ಮಿಕ ಶಕ್ತಿ ವೃದ್ಧಿಗೆ

ಆಧ್ಯಾತ್ಮಿಕ ಶಕ್ತಿ ವೃದ್ಧಿಗಾಗಿ ಗಾಯತ್ರಿ ಮಂತ್ರವಾದ " ಓಂ ಮಹಾ ದೇವಿಚ ವಿದ್ಮಾಯ್; ವಿಷ್ಣು ಪ್ರತಿಚಾ ದೇಮಹಿ; ಥನ್ನೋ ಲಕ್ಷ್ಮಿ ಪ್ರಚೋದಯತ್" ಮಂತ್ರವನ್ನು ಹೇಳಿರಿ.

ದೀಪಾವಳಿಯ ವಿಶೇಷ ಮಂತ್ರ

ದೀಪಾವಳಿಯ ವಿಶೇಷ ಮಂತ್ರ

ದೀಪಾವಳಿ ಹಬ್ಬದಲ್ಲಿ ಲಕ್ಷ್ಮಿ ದೇವಿಗೆ ಹೇಳುವ ವಿಶೇಷವಾದ 108 ನಾಮವನ್ನು 21 ಬಾರಿ ಹೇಳಬೇಕು. ಹಬ್ಬದ ವಿಶೇಷ ಸಂದರ್ಭದಲ್ಲಿ ಹೇಳುವ ಮಂತ್ರವೆಂದರೆ "ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್ ಏಂಗ್ ಸಾಂಗ್ ಓಂ ಹ್ರಿಂಗ್ ಕಾ ಏ ಲಾ ಹ್ರಿಂಗ್ ಹಾ ಸಾ ಕಾ ಹಾ ಲಾ ಹ್ರಿಂಗ್ ಸಕಲ್ ಹ್ರಿಂಗ್ ಸಾಂಗ್ ಏಂಗ್ ಕ್ಲಿಂಗ್ ಹ್ರಿಂಗ್ ಶ್ರಿಂಗ್ ಓಂ" ಎಂದು.

ವ್ಯಾಪಾರ ಮತ್ತು ವೃತ್ತಿ ಯಶಸ್ಸಿಗೆ

ವ್ಯಾಪಾರ ಮತ್ತು ವೃತ್ತಿ ಯಶಸ್ಸಿಗೆ

ಸಂಪತ್ತಿನ ಲಾಭ, ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು, ರೋಗ ಮತ್ತು ಜಿಂತೆಗಳಿಂದ ಮುಕ್ತಿ, ಸುಂದರ ಹೆಂಡತಿ ಹಾಗೂ ಉತ್ತಮ ವೈವಾಹಿಕ ಜೀವನಕ್ಕಾಗಿ "ಶ್ರೀಮ್ ಎಂದು ಹೇಳಬೇಕು."

ಹೇಳುವುದು ಹೇಗೆ?

ಹೇಳುವುದು ಹೇಗೆ?

ಲಕ್ಷ್ಮಿ ದೇವಿಯ ಮಂತ್ರಗಳನ್ನು ಕಲಿಯುವುದು ಸುಲಭ. ಇವುಗಳನ್ನು ಪಠಿಸುವುದರಿಂದ ಶೀಘ್ರದಲ್ಲಿ ಫಲಿತಾಂಶ ದೊರೆಯುತ್ತದೆ. ಮಂತ್ರವನ್ನು ಹೇಳುವಾಗ ಆರಾಮವಾಗಿ ಕುಳಿತುಕೊಂಡು ಸ್ಪಷ್ಟವಾಗಿ ಮಂತ್ರಗಳನ್ನು ಪುನರಾವರ್ತಿಸುತ್ತಿರಬೇಕು. ಸಾಮಾನ್ಯವಾಗಿ 108 ಬಾರಿ ಅಪವತ್ರ್ಯಗಳಲ್ಲಿ ಹೇಳುತ್ತಾರೆ. ನೀವು ಮಂತ್ರವನ್ನು ಜೋರಾಗಿ, ಪಿಸುಗುಟ್ಟುವುದು ಅಥವಾ ಮೌನವಾಗಿ ಮನಸ್ಸಿನಲ್ಲಿಯೇ ಸಹ ಹೇಳಬಹುದು. ಅದು ನಿಮ್ಮ ಹೃದಯ ಪೂರ್ವಕವಾಗಿ ಇರಬೇಕು ಅಷ್ಟೆ.

ಪಠಣ ಹೇಗೆ?

ಪಠಣ ಹೇಗೆ?

ಮಂತ್ರ ಹೇಳುವುದರಲ್ಲಿ ಸ್ಥಿರತೆ ಇರಬೇಕು. ನಿತ್ಯವೂ ಮಂತ್ರಗಳನ್ನು 10 ಬಾರಿ ಹೇಳಬೇಕು ಎನ್ನುವ ಹಿನ್ನೆಲೆಯಿದೆ. ಇದನ್ನು ಪ್ರಾರಂಭದ ದಿನದಿಂದ ಹಿಡಿದು 40 ದಿನಗಳ ಕಾಲ ಹೇಳಬೇಕು ಎನ್ನುವ ಪ್ರತೀತಿ ಇದೆ. ಅದನ್ನು 10 ದಿನಗಳ ಕಾಲ ಹೇಳಿದರೂ ನಿಮಗೆ ಗಣನೀಯ ಲಾಭ ಹಾಗೂ ದೇವಿಯ ಆಶೀರ್ವಾದ ಲಭಿಸುವುದು ಎನ್ನಲಾಗುತ್ತದೆ.

ಶಕ್ತಿಯುತ ಪೂಜೆಗಾಗಿ

ಶಕ್ತಿಯುತ ಪೂಜೆಗಾಗಿ

ಪೂಜೆಯು ಹೆಚ್ಚು ಶಕ್ತಿಯುತವಾಗಿರಬೇಕು ಎಂದಾದರೆ 108 ಬಾರಿ ಮಂತ್ರವನ್ನು ಪಠಿಸಬೇಕು. ಸಿದ್ಧಿ ಮಂತ್ರವನ್ನು ತಪ್ಪದೆ ಹೇಳಬೇಕು. ಎಣ್ಣೆ ದೀಪವನ್ನು ಬೆಳಗಬೇಕು. ಸಾಧ್ಯವಾದರೆ ಲಕ್ಷ್ಮಿ ಮೂರ್ತಿಗೆ ಅಥವಾ ಫೋಟೋಗೆ ಕಮಲದ ಹೂವಿನಿಂದ ಅಲಂಕರಿಸಿ. ಮಂತ್ರ ಜಪಿಸಿದ ನಂತರ ಕೆಲ ಕಾಲ ದೇವಿಯ ಕುರಿತು ನಿರಾಳ ಮನಸ್ಸಿನಿಂದ ಜಪವನ್ನು ಮಾಡಿ. ಬಳಿಕ ಲಕ್ಷ್ಮಿ ದೇವಿಗೆ "ಓಂ... ಓಂ..." ಎನ್ನುವ ಮೂಲಕ ಧನ್ಯವಾದವನ್ನು ಹೇಳಿ.

English summary

Laxmi mantras in Diwali will make all your desires come true!

Mantras are especially crafted incantations that hold immense power. They have boundless spiritual energy that helps in concentrating in the almighty. Mantras are supposed to be uttered in a way that they create divine vibrations. These vibrations resound in the universe and bring peace of mind and happiness to us when we chant on them.
Subscribe Newsletter