For Quick Alerts
ALLOW NOTIFICATIONS  
For Daily Alerts

ಕುಂಭ ಮೇಳ 2019: ಶಾಹಿ ಸ್ನಾನದ ದಿನಾಂಕ ಹಾಗೂ ಮಹತ್ವ

|

ಅಲಹಾಬಾದ್‌ನಲ್ಲಿ ನಡೆಯುವ ಕುಂಭಮೇಳ ಸಮಾವೇಶವು ಜಗತ್ ಪ್ರಸಿದ್ಧ ಧಾರ್ಮಿಕ ಸಮ್ಮೇಳನವಾಗಿದೆ. ಕುಂಭ ಮೇಳದಲ್ಲಿ ಪಾಲ್ಗೊಂಡು ಗಂಗಾ ನದಿಯಲ್ಲಿ ಸ್ನಾನ ಮಾಡಿ ಪುನೀತರಾಗುವ ಉದ್ದೇಶದಿಂದ ಜಗತ್ತಿನೆಲ್ಲೆಡೆಯಿಂದ ಜನ ಅಲಹಾಬಾದ್‌ಗೆ ಆಗಮಿಸುತ್ತಾರೆ.

ಭಾರತದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳಗಳಾದ ಪ್ರಯಾಗ, ಹರಿದ್ವಾರ, ನಾಸಿಕ್ ಹಾಗೂ ಉಜ್ಜಯಿನಿಗಳಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಕುಂಭಮೇಳ ಜರುಗುತ್ತದೆ. ಅಂದರೆ 12 ವರ್ಷಕ್ಕೊಮ್ಮೆ ಮತ್ತೆ ಅದೇ ಸ್ಥಳದಲ್ಲಿ ಕುಂಭಮೇಳವನ್ನು ಆಯೋಜಿಸಲಾಗುತ್ತದೆ.

ಈ ವರ್ಷ ಅಂದರೆ 2019ರ ಕುಂಭಮೇಳ ಸಮಾವೇಶವು ಜನವರಿ 14 ರಿಂದ ಮಾರ್ಚ್ 4 ರವರೆಗೆ ಉತ್ತರ ಪ್ರದೇಶದ ಪ್ರಯಾಗನಲ್ಲಿ ನಡೆಯಲಿದೆ. ಕುಂಭಮೇಳದಲ್ಲಿ ಪಾಲ್ಗೊಳ್ಳುವ ಹಿಂದೂ ಸಾಧು ಸಂತರು ಪ್ರದರ್ಶಿಸುವ ಅಮೋಘ ಧಾರ್ಮಿಕ ಕ್ರಿಯಾವಿಧಿಗಳು ನೋಡುಗರಲ್ಲಿ ರೋಮಾಂಚನ ಮೂಡಿಸುತ್ತವೆ. ಮೇಳದಲ್ಲಿ ಪಾಲ್ಗೊಂಡು ನದಿಯಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ಮೋಕ್ಷ ಸಾಧನೆ ಮಾಡಬಹುದು ಎಂಬ ನಂಬಿಕೆ ಪುರಾತನ ಕಾಲದಿಂದಲೂ ಹಿಂದೂಗಳಲ್ಲಿ ಬೆಳೆದು ಬಂದಿದೆ.

ಕುಂಭ ಮೇಳದಲ್ಲಿ ಪಾಲ್ಗೊಂಡು ನದಿಯಲ್ಲಿ ಪವಿತ್ರ ಸ್ನಾನ ಮಾಡುವುದನ್ನು 'ಶಾಹಿ ಸ್ನಾನ' ಎಂದು ಕರೆಯಲಾಗುತ್ತದೆ. ಕುಂಭಮೇಳದ ಅವಧಿಯಲ್ಲಿ ಒಟ್ಟು ಎಂಟು ದಿನಗಳಂದು ಪವಿತ್ರ ಶಾಹಿ ಸ್ನಾನವನ್ನು ಆಯೋಜಿಸಲಾಗುತ್ತದೆ. ಈ ಬಾರಿಯ ಪವಿತ್ರ ಶಾಹಿ ಸ್ನಾನದ ದಿನಾಂಕಗಳು ಹೀಗಿವೆ:

ಮಕರ ಸಂಕ್ರಾಂತಿ - ಜನೆವರಿ 14

ಮಕರ ಸಂಕ್ರಾಂತಿ - ಜನೆವರಿ 14

ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಪವಿತ್ರ ದಿನವಾದ ಮಕರ ಸಂಕ್ರಾಂತಿಯ ಜನವರಿ 14 ನೇ ದಿನಾಂಕ ಪ್ರಥಮ ಶಾಹಿ ಸ್ನಾನದ ದಿನವಾಗಿದೆ. ಈ ದಿನದಂದು ದೇಶದೆಲ್ಲೆಡೆಯಿಂದ ಆಗಮಿಸುವ ಸಾಧು ಸಂತರಿಂದ ಪವಿತ್ರ ಶಾಹಿ ಸ್ನಾನದ ನಂತರ ಬೃಹತ್ ಶೋಭಾಯಾತ್ರೆ ನಡೆಯುತ್ತದೆ. ಶಾಹಿ ಸ್ನಾನದ ನಂತರ ಅಕ್ಕಿ ಹಾಗೂ ಎಳ್ಳುಗಳನ್ನು ದಾನ ಮಾಡಲಾಗುತ್ತದೆ. ಹೆಸರು ಬೇಳೆ ಕಿಚಡಿ ಅಥವಾ ದಹಿ ಛೂರಾ ತಯಾರಿಸಿ ಎಲ್ಲ ಭಕ್ತರಿಗೂ ಪ್ರಸಾದವಾಗಿ ಹಂಚಲಾಗುತ್ತದೆ. ಶಾಹಿ ಸ್ನಾನ ಮಾಡಿದ ಎಲ್ಲ ಭಕ್ತರು ಈ ಪ್ರಸಾದವನ್ನು ಭಕ್ತಿಯಿಂದ ಕಡ್ಡಾಯವಾಗಿ ಸ್ವೀಕರಿಸುತ್ತಾರೆ.

ಪುಷ್ಯ ಪೂರ್ಣಿಮಾ - ಜನೆವರಿ 21

ಪುಷ್ಯ ಪೂರ್ಣಿಮಾ - ಜನೆವರಿ 21

ಪುಷ್ಯ ಪೂರ್ಣಿಮೆಯಂದು ನಡೆಯುವ ಈ ದಿನ ಶಾಹಿ ಸ್ನಾನದ ಎರಡನೇ ದಿನಾಂಕವಾಗಿದೆ. ಈ ದಿನದಂದು ಭಕ್ತರು ಪವಿತ್ರ ಶಾಹಿ ಸ್ನಾನ ಮಾಡಿ ಪೂಜೆ ಹಾಗೂ ದಾನ ಕ್ರಿಯಾದಿಗಳನ್ನು ನಡೆಸುತ್ತಾರೆ. ಈ ದಿನ ದಾನ ಮಾಡುವುದರಿಂದ ಜೀವನದಲ್ಲಿ ಮಾಡಿದ ಪಾಪಗಳು ಕಳೆದುಹೋಗುತ್ತದೆ ಹಾಗೂ ಮೋಕ್ಷಕ್ಕೆ ದಾರಿಯಾಗುತ್ತದೆ ಎಂಬ ನಂಬಿಕೆ ಇದೆ.

Most Read: ಕುಂಭ ಮೇಳದ ನಾಗಾ ಸಾಧುಗಳ ಕುರಿತ ಇಂಟರೆಸ್ಟಿಂಗ್ ಕಹಾನಿ

ಪುಷ್ಯ ಏಕಾದಶಿ - ಜನವರಿ 31

ಪುಷ್ಯ ಏಕಾದಶಿ - ಜನವರಿ 31

ಜನವರಿ 31ರ ಪುಷ್ಯ ಏಕಾದಶಿಯಂದು ನಡೆಯುವ ಈ ಶಾಹಿ ಸ್ನಾನ ಮೂರನೇ ಪವಿತ್ರ ಸ್ನಾನದ ದಿನವಾಗಿದೆ. ಈ ದಿನದಂದು ಸಹ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳ ನಂತರ ನಂತರ ದಾನ ಕ್ರಿಯೆಗಳನ್ನು ನೆರವೇರಿಸಲಾಗುತ್ತದೆ.

ಮೌನಿ ಅಮಾವಾಸ್ಯೆ - ಫೆಬ್ರುವರಿ 4

ಮೌನಿ ಅಮಾವಾಸ್ಯೆ - ಫೆಬ್ರುವರಿ 4

ಫೆಬ್ರುವರಿ 14ರ ಮೌನಿ ಅಮಾವಾಸ್ಯೆಯ ದಿನವು ಪವಿತ್ರ ಶಾಹಿ ಸ್ನಾನದ ನಾಲ್ಕನೇ ದಿನಾಂಕವಾಗಿದೆ. ಜೈನ ತೀರ್ಥಂಕರರಾದ ಗುರು ಋಷಭದೇವ ಅವರು ಇದೇ ದಿನದಂದು ತಮ್ಮ ಉಪವಾಸವನ್ನು ಕೊನೆಗೊಳಿಸಿ ಪ್ರಯಾಗದ ಸಂಗಮದಲ್ಲಿ ಪವಿತ್ರ ಶಾಹಿ ಸ್ನಾನ ಮಾಡಿದ್ದರಿಂದ ಈ ದಿನಕ್ಕೆ ವಿಶೇಷ ಮಹತ್ವವಿದೆ.

Most Read: 2019ರಲ್ಲಿ ಐದು ರಾಶಿಯವರ ಬದುಕಿನಲ್ಲಿ ಮಹತ್ತರ ಬದಲಾವಣೆ ಕಾಣಲಿದೆಯಂತೆ!

ಬಸಂತ ಪಂಚಮಿ - ಫೆಬ್ರುವರಿ 10

ಬಸಂತ ಪಂಚಮಿ - ಫೆಬ್ರುವರಿ 10

ಫೆಬ್ರವರಿ 10 ರಂದು ವಸಂತ ಪಂಚಮಿಯ ದಿನವು ಶಾಹಿ ಸ್ನಾನದ 5ನೇ ದಿನಾಂಕವಾಗಿದೆ. ವಿದ್ಯಾ ದೇವತೆ ಸರಸ್ವತಿ ದೇವಿಯು ಇದೇ ದಿನದಂದು ಜನಿಸಿದ್ದಳು ಎಂಬ ನಂಬಿಕೆ ಭಕ್ತರಲ್ಲಿದೆ. ದೇಶದ ಹಲವಾರು ನದಿ ತಟಗಳಲ್ಲಿ ಇದೇ ದಿನದಂದು ಬಸಂತ ಪಂಚಮಿ ಆಚರಿಸಲಾಗುತ್ತದೆ.

ಮಾಘ ಏಕಾದಶಿ - ಫೆಬ್ರವರಿ 16

ಮಾಘ ಏಕಾದಶಿ - ಫೆಬ್ರವರಿ 16

ಈ ಬಾರಿ ಫೆಬ್ರವರಿ 16ರಂದು ಬಂದಿರುವ ಮಾಘ ಏಕಾದಶಿ ಆರನೇ ಶಾಹಿ ಸ್ನಾನದ ದಿನವಾಗಿದೆ. ಈ ದಿನದಂದು ಭಕ್ತರು ಶಾಹಿ ಸ್ನಾನ ಮಾಡಿ ಹಲವಾರು ವಸ್ತುಗಳನ್ನು ದಾನ ಮಾಡುತ್ತಾರೆ. ಈ ಜನ್ಮದಲ್ಲಿ ಹಾಗೂ ಹಿಂದಿನ ಜನ್ಮದಲ್ಲಿ ಮಾಡಿರುವ ಪಾಪಗಳನ್ನು ದಾನ ಮಾಡುವ ಮೂಲಕ ಪರಿಹರಿಸಿಕೊಳ್ಳಬಹುದು ಎಂಬ ನಂಬಿಕೆ ಬೆಳೆದು ಬಂದಿದೆ.

Most Read: ಹೌದು ಸ್ವಾಮಿ, ಇನ್ನೊಮ್ಮೆ ಬರಲಿದ್ದಾರೆ ನಾಗಾ ಸಾಧುಗಳು!

ಮಾಘ ಪೂರ್ಣಿಮಾ - ಫೆಬ್ರುವರಿ 19

ಮಾಘ ಪೂರ್ಣಿಮಾ - ಫೆಬ್ರುವರಿ 19

ಮಾಘ ಪೂರ್ಣಿಮಾ ಪವಿತ್ರ ಶಾಹಿ ಸ್ನಾನದ ಏಳನೇ ದಿನಾಂಕವಾಗಿದೆ. ಭಗವಂತ ವಿಷ್ಣು ಮಾಘ ಪೂರ್ಣಿಮೆಯಂದು ಗಂಗಾ ನದಿಯಲ್ಲಿ ಐಕ್ಯನಾಗಿದ್ದರಿಂದ ಈ ದಿನವನ್ನು ಅತಿ ಪವಿತ್ರ ದಿನವಾಗಿ ಪರಿಗಣಿಸಲಾಗುತ್ತದೆ. ಇಡೀ ಮಾಘ ಮಾಸವು ಧಾರ್ಮಿಕ ಕ್ರಿಯೆಗಳಿಗೆ ಅತ್ಯಂತ ಪ್ರಶಸ್ತವಾಗಿದೆ. ಆದರೆ ತಿಂಗಳಿಡೀ ಧಾರ್ಮಿಕ ಕಾರ್ಯಗಳನ್ನು ಮಾಡಲಾಗದೆ ಇರುವವರು ಮಾಘ ಪೂರ್ಣಿಮೆಯ ದಿನ ಧಾರ್ಮಿಕ ಕ್ರಿಯೆಗಳನ್ನು ಕೈಗೊಳ್ಳುವ ಮೂಲಕ ಅದರ ಸಂಪೂರ್ಣ ಫಲಾಫಲಗಳನ್ನು ಪಡೆಯಬಹುದು ಎಂಬ ನಂಬಿಕೆ ಇದೆ.

ಶಿವರಾತ್ರಿ - ಮಾರ್ಚ್ 4

ಶಿವರಾತ್ರಿ - ಮಾರ್ಚ್ 4

ಶಿವರಾತ್ರಿಯಂದು ಪವಿತ್ರ ಶಾಹಿ ಸ್ನಾನದ ಎಂಟನೇ ದಿನವಾಗಿದೆ. ದೇವಲೋಕದಲ್ಲಿಯೂ ಸಹ ಸಹ ಶಿವರಾತ್ರಿಗಾಗಿ ಕಾಯಲಾಗುತ್ತದೆ ಎಂದು ಹೇಳಲಾಗುತ್ತದೆ. ಈ ದಿನದಂದು ಪವಿತ್ರ ಸ್ನಾನ ಮಾಡಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಶಿವ ಹಾಗೂ ಪಾರ್ವತಿಯರ ಆಶೀರ್ವಾದ ಪಡೆದು ಭಕ್ತರು ತಮ್ಮ ತಮ್ಮ ಊರುಗಳಿಗೆ ಮರಳಲು ಆರಂಭಿಸುತ್ತಾರೆ.

English summary

Kumbh Mela 2019: Shahi Snaan Dates

Kumbh Mela is one of the religious events where Hindus come from around the world to perform religious rituals such as a holy bath and make donations and accumulate virtue which is further believed to help attain salvation. It is organised at four main places, this time at Prayag. There will be eight more auspicious dates for Shahi Snaan.
Story first published: Friday, January 11, 2019, 13:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more