For Quick Alerts
ALLOW NOTIFICATIONS  
For Daily Alerts

ಜನ್ಮಾಷ್ಟಮಿಗೆ ಶುಭ ಕೋರಲು ಶುಭಾಶಯ ಹಾಗೂ ಭಗವದ್ಗೀತೆ ಸಾರ

|

ಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 6 ಮತ್ತು 7ರಂದು ಆಚರಿಸಲಾಗುವುದು. ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದರೆ ಸಂಭ್ರಮದ ಹಬ್ಬ. ಉತ್ತರ ಭಾರತದ ಕಡೆ ಬಾಧ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯೆಂದು ಜನ್ಮಾಷ್ಟಮಿ ಆಚರಣೆ ಮಾಡಲಾಗುವುದು. ದಕ್ಷಿಣ ಭಾರತದಲ್ಲಿ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಆಚರಿಸಲಾಗುವುದು, ಎರಡೂ ಒಂದೇ ದಿನ ಬರುತ್ತದೆ. ಈ ದಿನ ಕೃಷ್ಣನಿಗೆ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ, ಅವನಿಗೆ ಇಷ್ಟವಾದ ತಿಂಡಿಗಳನ್ನು ನೈವೇದ್ಯವಾಗಿ ಇಡಲಾಗುವುದು.

ಶ್ರೀ ವಿಷ್ಣು ಧರ್ಮವನ್ನು ರಕ್ಷಿಸಲು ಶ್ರೀಕೃಷ್ಣ ಜನ್ಮ ತಾಳಿ ಬಂದ ಎಂದು ಹೇಳಲಾಗುತ್ತದೆ. ಕೃಷ್ಣನ ಅವತಾರವನ್ನು ಶ್ರೀವಿಷ್ಣುವಿನ ಎಂಟನೇ ಅವತಾರ ಎಂದು ಹೇಳಲಾಗುವುದು. ಇಲ್ಲಿ ನಾವು ಜನ್ಮಾಷ್ಟಮಿಗೆ ಶುಭಾಶಯ ಕೋರಲು ಹಾಗೂ ಕೃಷ್ಣ ಹೇಳಿದ ಭಗವದ್ಗೀತೆ ಸಾರದ ಕೋಟ್‌ಗಳನ್ನು ನೀಡಿದ್ದೇವೆ ನೋಡಿ:

ಭಗವದ್ಗೀತೆ ಕೋಟ್ 1

ಭಗವದ್ಗೀತೆ ಕೋಟ್ 1

ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

ಭಗವದ್ಗೀತೆ ಕೋಟ್ 2

ಭಗವದ್ಗೀತೆ ಕೋಟ್ 2

ಅಧರ್ಮದಿಂದ ಶತ್ರು ಹಲವು ಬಾರಿ ಗೆಲ್ಲಬಹುದು

ಆದರೆ ಕರ್ಮ ಎದುರಾಗುವ ವೇಳೆ ಧರ್ಮ ಅವನನ್ನು ಸುಡಲು ಪ್ರಾರಂಭಿಸುತ್ತದೆ. ಅವನ ನಿರ್ನಾಮ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ-ಭಗವದ್ಗೀತೆ

ಭಗವದ್ಗೀತೆ ಕೋಟ್ 3

ಭಗವದ್ಗೀತೆ ಕೋಟ್ 3

ಗೀತಾ ಸಾರ

ಆದುದೆಲ್ಲಾ ಒಳ್ಳೆಯದಕ್ಕೆ ಆಗಿದೆ

ಆಗುವುದೆಲ್ಲಾ ಒಳ್ಳೆಯದೇ ಆಗುತ್ತಿದೆ

ಆಗಲಿರುವುದು ಸಹ ಒಳ್ಳೆಯದೇ ಆಗಲಿದೆ

ರೋಧಿಸಲು ನೀನೇನು ಕಳೆದುಕೊಂಡಿರುವೆ

ಕಳೆದುಕೊಳ್ಳಲು ನೀನು ತಂದಿರುವುದಾದರು ಏನು?

ನಾಶವಾಗಲು ನೀನು ಮಾಡಿರುವುದಾದರೂ ಏನು?

ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ

ಏನನ್ನು ಅರ್ಪಿಸಿದರೂ ಅದನ್ನು ಇಲ್ಲಿಗೆ ಅರ್ಪಿಸಿರುವೆ

ನಿನ್ನೆ ಬೇರೆಯಾರದ್ದೋ ಆಗಿದ್ದು ಇಂದು ನಿನ್ನದಾಗಿದೆ

ಮತ್ತು ನಾಳೆ ಇನ್ನಾರದ್ದೋ ಆಗಲಿದೆ

ಪರಿವರ್ತನೆ ಜಗದ ನಿಯಮ

ಭಗವಾನ್ ಶ್ರೀ ಕೃಷ್ಣ

ಭಗವದ್ಗೀತೆ ಕೋಟ್ 4

ಭಗವದ್ಗೀತೆ ಕೋಟ್ 4

ನಮ್ಮ ಬದುಕೇ ಒಂದು ಹೋರಾಟ. ಈ ಹೋರಾಟದಲ್ಲಿ

ನಾವು ಮಾಡುವ ಕಾರ್ಯವನ್ನು ಪ್ರಮಾಣಿಕವಾಗಿ ಮಾಡಬೇಕು

ಏನು ಆಗಬೇಕೋ ಅದು ಆಗೇ ತೀರುತ್ತದೆ

ಅದನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ: ಭಗವದ್ಗೀತೆ

ಭಗವದ್ಗೀತೆ ಕೋಟ್ 5

ಭಗವದ್ಗೀತೆ ಕೋಟ್ 5

ಧರ್ಮದಿಂದ ಬದುಕುವವರನ್ನು ಧರ್ಮವೇ ರಕ್ಷಿಸುತ್ತದೆ: ಭಗವಾನ್ ಶ್ರೀಕೃಷ್ಣ

ಭಗವದ್ಗೀತೆ ಕೋಟ್ 6

ಭಗವದ್ಗೀತೆ ಕೋಟ್ 6

ಮರದ ಮೇಲೆ ಕುಳಿತ ಹಕ್ಕಿಯು ಕೊಂಬೆ ಮುರಿದು ಬಿದ್ದರೂ

ಭಯಪಡುವುದಿಲ್ಲ, ಏಕೆಂದರೆ ಅದು ನಂಬಿರುವುದು

ತನ್ನ ರೆಕ್ಕೆಗಳನ್ನೇ ವಿನಃ ಕೊಂಬೆಗಳನ್ನಲ್ಲ

ನಮ್ಮ ಸಾಮಾರ್ಥ್ಯದ ಮೇಲೆ ಸದಾ ನಂಬಿಕೆಯಿರಬೇಕು

ಭಗವದ್ಗೀತೆ ಕೋಟ್ 7

ಭಗವದ್ಗೀತೆ ಕೋಟ್ 7

ನಮ್ಮ ಬದುಕೇ ಒಂದು ಹೋರಾಟ, ಈ ಹೋರಾಟದಲ್ಲಿ

ನಾವು ಮಾಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು

ಏನು ಆಗಬೇಕೋ ಅದು ಆಗೇ ತೀರುತ್ತದೆ

ಅದನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ

ಭಗವದ್ಗೀತೆ ಕೋಟ್ 8

ಭಗವದ್ಗೀತೆ ಕೋಟ್ 8

ಭೂಮಿಯ ಪ್ರತಿಯೊಂದು ಚರಾಚರಗಳಲ್ಲೂ ನಾನಿದ್ದೇನೆ. ನಿನ್ನ ಸುತ್ತಲ ಬದುಕು ಸಂಪೂರ್ಣ ಪವಾಡಗಳಿಂದಲೇ ತುಂಬಿದೆ. ಅವುಗಳನ್ನು ಕಂಡು ಖುಷಿ ಪಡು, ನಿನ್ನ ಕರ್ಮಕ್ಕೆ ತಕ್ಕ ಫಲವನ್ನು ನಾನು ನೀಡಿಯೇ ತೀರುತ್ತೇನೆ: ಭಗವಾನ್ ಶ್ರೀಕೃಷ್ಣ

ಭಗವದ್ಗೀತೆ ಕೋಟ್ 9

ಭಗವದ್ಗೀತೆ ಕೋಟ್ 9

ಕೋಪ ನಿಮ್ಮನ್ನು ದಾರಿತಪ್ಪಿಸಬಹುದು, ಕೋಪದಲ್ಲಿದ್ದಾಗ

ಕಳೆದುಕೊಂಡ ವಿವೇಕ ಸೂಕ್ತ ತೀರ್ಮಾನ ಅಥವಾ ಕ್ರಮ ಕೈಗೊಳ್ಳಲು ಸಾಧ್ಯವಾಗದೇ ಹೋಗುತ್ತದೆ, ಜೀವನದಲ್ಲಿ ಯಶಸ್ವಿಯಾಗಿದ್ದ ವ್ಯಕ್ತಿ ಕೋಪದ ಒಂದು ಕ್ಷಣದ ತಪ್ಪು ನಿರ್ಧಾರದಿಂದ ಸಂಪೂರ್ಣವಾಗಿ ನೆಲಕಚ್ಚಲೂ ಬಹುದು

ಭಗವದ್ಗೀತೆ

ಭಗವದ್ಗೀತೆ ಕೋಟ್ 10

ಭಗವದ್ಗೀತೆ ಕೋಟ್ 10

ಧರ್ಮೋ ರಕ್ಷತಿ ರಕ್ಷಿತಃ

(ಧರ್ಮದಿಂದ ನಡೆಯುವವರನ್ನು ಧರ್ಮವೇ ರಕ್ಷಿಸುತ್ತದೆ)

English summary

Happy Krishna Janmashtami Images, Wishes, Quotes, Greetings, Messages, Whatsapp Status In Kannada

Happy Krishna Janmashtami 2020: Quotes, Images, Wishes, Messages, Facebook and WhatsApp status In Kannada,
X
Desktop Bottom Promotion