For Quick Alerts
ALLOW NOTIFICATIONS  
For Daily Alerts

ಕಾರ್ತಿಕ ಮಾಸ 2021: ದಿನಾಂಕ, ಪೂಜಾ ವಿಧಾನ ಇಲ್ಲಿದೆ ಸಂಪೂರ್ಣ ಮಾಹಿತಿ

|

ಹಿಂದೂ ಪುರಾಣದ ಪ್ರಕಾರ, ಪ್ರತಿ ತಿಂಗಳಿಗು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಆದರೆ ಕಾರ್ತಿಕ ಮಾಸಕ್ಕೆ ವಿಶೇಷ ಪೂಜ್ಯನೀಯ ಮಾಸ ಎಂಬ ನಂಬಿಕೆ. ಈ ಮಾಸದಲ್ಲಿ ವೈಭವ ತುಂಬಾ ಹೆಚ್ಚು. ಹಿಂದೂ ಪಂಚಾಂಗದ ಪ್ರಕಾರ ಎಂಟನೇ ತಿಂಗಳು ಕಾರ್ತಿಕ ಮಾಸ. ಹಿಂದೂಗಳ ಪವಿತ್ರ, ಪ್ರಮುಖ ಹಬ್ಬಗಳಲ್ಲಿ ಒಂದಾದ ದೀಪಾವಳಿ ಇದೇ ಮಾಸದಲ್ಲಿ ಬರುತ್ತದೆ.

ಈ ವರ್ಷ 2021ನೇ ಸಾಲಿನಲ್ಲಿ ಕಾರ್ತಿಕ ಮಾಸ ನವೆಂಬರ್ 5ರಿಂದ ಆರಂಭವಾಗುತ್ತದೆ ಮತ್ತು ಡಿಸೆಂಬರ್ 4ರವರೆಗೆ ಇರಲಿದೆ. ಸ್ಕಂದ ಪುರಾಣದಲ್ಲಿ ಕಾರ್ತಿಕದಂತೆ ಯಾವುದೇ ತಿಂಗಳು ಇಲ್ಲ ಮತ್ತು ಸತ್ಯಯುಗದಂತಹ ಯುಗವಿಲ್ಲ ಎಂದು ಹೇಳಲಾಗಿದೆ. ಕಾರ್ತಿಕ ಮಾಸವನ್ನು ಉತ್ತಮ ಬುದ್ಧಿ, ಲಕ್ಷ್ಮಿ ಮತ್ತು ಮುಕ್ತಿ ಪಡೆಯುವ ತಿಂಗಳು ಎಂದೂ ಕರೆಯುತ್ತಾರೆ.

ಈ ತಿಂಗಳಲ್ಲಿ ಪೂಜೆಗೆ ವಿಶೇಷ ಮಹತ್ವವಿದೆ. ಈ ತಿಂಗಳಲ್ಲಿ ಮಾಡುವ ಪೂಜೆಯು ಪಾಪಗಳಿಂದ ಮುಕ್ತಗೊಳಿಸುತ್ತದೆ ಮತ್ತು ವಿಮೋಚನೆಯ ಹಾದಿಯಲ್ಲಿ ಮುನ್ನಡೆಸುತ್ತದೆ. ಈ ತಿಂಗಳಲ್ಲಿ ಯಾವ ಕೆಲಸಗಳನ್ನು ಮಾಡಲೇಬೇಕು ಹಾಗೂ ಇವುಗಳನ್ನು ಮಾಡುವುದರಿಂದ ಪುಣ್ಯ ಸಿಗುತ್ತದೆ ಮುಂದೆ ತಿಳಿಯೋಣ:

ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ

ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ

ಬ್ರಾಹ್ಮಿ ಮುಹೂರ್ತದಲ್ಲಿ ಕಾರ್ತಿಕ ಮಾಸದಲ್ಲಿ ಪವಿತ್ರ ಯಮುನಾ ನದಿಯಲ್ಲಿ ಸ್ನಾನ ಮಾಡುವುದರಿಂದ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಈ ಸ್ನಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಪುಣ್ಯ ಮಾಸದಲ್ಲಿ ಮಹಿಳೆಯರು ಮುಂಜಾನೆ ಎದ್ದು ಸ್ನಾನ ಮಾಡುತ್ತಾರೆ. ಕನ್ಯೆಯರು ಅಥವಾ ವಿವಾಹಿತ ಮಹಿಳೆಯರು ಮುಂಜಾನೆ ಸ್ನಾನ ಮಾಡಿದರೆ ಮಂಗಳಕರ ಎಂದು ಪರಿಗಣಿಸಲಾಗಿದೆ. ನೀವು ನದಿಯ ನೀರಿನಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ, ಯಾವುದೇ ಪವಿತ್ರ ನದಿಯ ನೀರನ್ನು ಸ್ನಾನದ ನೀರಿನಲ್ಲಿ ಬೆರೆಸುವ ಮೂಲಕ ಸ್ನಾನ ಮಾಡಬಹುದು.

ತುಳಸಿ ಪೂಜೆ ಮಾಡಬೇಕು

ತುಳಸಿ ಪೂಜೆ ಮಾಡಬೇಕು

ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಪವಿತ್ರವೆಂದು ಪರಿಗಣಿಸಲಾಗಿದೆ. ತುಳಸಿ ಪೂಜೆಯನ್ನು ವರ್ಷವಿಡೀ ಮಾಡುತ್ತೇವೆ ಮತ್ತು ಮಂಗಳಕರವಾಗಿದ್ದರೂ, ಕಾರ್ತಿಕ ಮಾಸದಲ್ಲಿ ತುಳಸಿಯನ್ನು ಪೂಜಿಸುವುದಕ್ಕೆ ವಿಶೇಷ ಮಹತ್ವವಿದೆ. ಕಾರ್ತಿಕ ಮಾಸದಲ್ಲಿ ಒಂದು ತಿಂಗಳು ನಿರಂತರವಾಗಿ ತುಳಸಿಯ ಮುಂದೆ ದೀಪವನ್ನು ಹಚ್ಚುವುದರಿಂದ ಮಾಡುವುದು ಹೆಚ್ಚು ಪುಣ್ಯವನ್ನು ನೀಡುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.

ದೀಪ ಹಚ್ಚುವುದು ಬಹಳ ಮುಖ್ಯ

ದೀಪ ಹಚ್ಚುವುದು ಬಹಳ ಮುಖ್ಯ

ಈ ಇಡೀ ತಿಂಗಳಲ್ಲಿ, ಪವಿತ್ರ ನದಿ, ತೀರ್ಥಕ್ಷೇತ್ರ, ದೇವಾಲಯದ ಬಳಿ ಪ್ರತಿದಿನ ದೀಪವನ್ನು ಹಚ್ಚಬೇಕು, ನಂತರ ತುಳಸಿಯನ್ನು ಮನೆಯಲ್ಲಿ ಇಡಬೇಕು ಎಂದು ಹೇಳಲಾಗುತ್ತದೆ. ಇದು ಬಹಳಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ. ಶರದ್ ಪೂರ್ಣಿಮಾ ದಿಂದ ಕಾರ್ತಿಕ ಪೂರ್ಣಿಮಾ ವರೆಗೂ ನಿಯಮಿತವಾಗಿ ದೀಪವನ್ನು ಹಚ್ಚಲಾಗುತ್ತದೆ. ದೀಪ ಹಚ್ಚುವುದರಿಂದ ಮನೆಯ ಕತ್ತಲೆ ಮಾತ್ರವಲ್ಲ ಜೀವನದ ಕತ್ತಲೆಯೂ ದೂರವಾಗುತ್ತದೆ ಮತ್ತು ತಾಯಿ ಲಕ್ಷ್ಮಿ ಸಂತೋಷಗೊಂಡು ಮನೆಯನ್ನು ಹಣ ಮತ್ತು ಧಾನ್ಯಗಳಿಂದ ತುಂಬುತ್ತಾಳೆ ಎಂದು ನಂಬಲಾಗಿದೆ.

ಶಿವ ಮತ್ತು ವಿಷ್ಣುವಿನ ಪೂಜೆ

ಶಿವ ಮತ್ತು ವಿಷ್ಣುವಿನ ಪೂಜೆ

ಕಾರ್ತಿಕ ಮಾಸವು ಶಿವ ಮತ್ತು ವಿಷ್ಣುವಿಗೆ ಮೀಸಲಾದ ತಿಂಗಳು. ಶಿವನ ಹಾಗೂ ವಿಷ್ಣುವಿನ ಕೃಷ್ಣ, ರಾಮನ ದೇವಾಲಯಗಳಲ್ಲಿ ದೀಪ ಬೆಳಗುವುದು, ಇಷ್ಟವಾದ ಹೂ ಅರ್ಪಣೆ, ಮಂತ್ರ ಪಾರಾಯಣ ಮಾಡಬೇಕು. ಅದ್ಭುತ ಶಕ್ತಿಯನ್ನು ಹೊಂದಿರುವ ಶಿವ ಮತ್ತು ವಿಷ್ಣುವಿಗೆ ವಿಶೇಷ ದೀಪ ಬೆಳಗುವುದು ಹಾಗೂ ಪೂಜೆ ಗೈಯುವುದರಿಂದ ಜ್ಞಾನ ಲಭಿಸುತ್ತದೆ ಎಂಬ ನಂಬಿಕೆ ಇದೆ.

ಕಾರ್ತಿಕ ಮಾಸದಲ್ಲಿ ದಾನದ ಮಹತ್ವ

ಕಾರ್ತಿಕ ಮಾಸದಲ್ಲಿ ದಾನದ ಮಹತ್ವ

ಕಾರ್ತಿಕ ಮಾಸದಲ್ಲಿ ಕೆಲವು ವಸ್ತುಗಳ ದಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಬ್ರಾಹ್ಮಣನಿಗೆ ಅಥವಾ ನಿರ್ಗತಿಕರಿಗೆ ಇಡೀ ತಿಂಗಳು ದಾನ ಮಾಡುವುದು ಸಾಕಷ್ಟು ಪುಣ್ಯ ಫಲಿತಾಂಶಗಳನ್ನು ನೀಡುತ್ತದೆ ಎಂದು ಹೇಳಲಾಗಿದೆ. ಈ ತಿಂಗಳಲ್ಲಿ ತುಳಸಿ ದಾನ, ಅನ್ನದಾನ, ಹಸು ದಾನ ಮತ್ತು ನೆಲ್ಲಿಕಾಯಿ ಗಿಡ ದಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ.

English summary

Kartik Month 2021 start and end date: importance and worship method

Here we are discussing about Kartik Month 2021 start and end date: importance and worship method. Kartik is the eighth month of the Hindi calendar. This year Kartik month will start from 21st October 2021 and will last till 19th November 2021. Read more.
X
Desktop Bottom Promotion