For Quick Alerts
ALLOW NOTIFICATIONS  
For Daily Alerts

ಕಾರ್ತಿಕ ಸೋಮವಾರದಲ್ಲಿ ಏಕದಶ ರುದ್ರಾಭಿಷೇಕಂ ಹಾಗೂ ದೀಪ ದಾನದ ಮಹತ್ವವೇನು, ಗೊತ್ತೇ?

|

ಸೋಮವಾರ ಶಿವನಿಗೆ ಮೀಸಲಾದ ದಿನ, ಅದರಲ್ಲೂ ಕಾರ್ತಿಕ ಸೋಮವಾರವೆಂದರೆ ಇನ್ನೂ ವಿಶೇಷ. ಈ ದಿನ ಶಿವನಿಗೆ ಆರಾಧನೆ ಮಾಡಿದರೆ ವಿಶೇಷ ಫಲ ಸಿಗಲಿದೆ ಎಂಬುವುದು ಶಿವನ ಭಕ್ತರ ಬಲವಾದ ನಂಬಿಕೆ, ಈ ದಿನದಂದು ರುದ್ರ ನಮಕಂ ಹಾಗೂ ರುದ್ರ ಚಮಕಂ ಹೇಳುತ್ತಾ ರುದ್ರಾಭಿಷೇಕ ಮಾಡಿದರೆ ತುಂಬಾನೇ ಒಳ್ಳೆಯದು.

ಹಿಂದೂ ಕ್ಯಾಲೆಂಡರ್‌ನ ಎಂಟನೇ ತಿಂಗಳಾದ ಕಾರ್ತಿಕ ಮಾಸ ವಿಷ್ಣು ಹಾಗೂ ಶಿವ ಇಬ್ಬರಿಗೂ ಅತ್ಯಂತ ಪ್ರಿಯವಾದ ತಿಂಗಳಾಗಿದೆ. ಈ ತಿಂಗಳಿನಲ್ಲಿ ಶಿವ ಹಾಗೂ ವಿಷ್ಣುವಿಗೆ ಪೂಜೆಯನ್ನು ಸಲ್ಲಿಸಲಾಗುವುದು. ಅದರಲ್ಲೂ ಸೋಮವಾರದಂದು ಶಿವನಿಗೆ ವಿಶೇಷವಾದ ಪೂಜೆಯನ್ನು ಮಾಡಲಾಗುವುದು.

ಪದ್ಮ ಪುರಾಣ ಹಾಗೂ ಸ್ಕಂದ ಪುರಾಣದ ಪ್ರಕಾರ ಕಾರ್ತಿಕ ಮಾಸದಲ್ಲಿ ಪೂಜೆ ಮಾಡುವುದರಿಂದ ಧಾರ್ಮಿಕ, ಆರ್ಥಿಕ, ನೆಮ್ಮದಿಯ ಸಂಸಾರ, ಜ್ಞಾನ ನೀಡುತ್ತಾನೆ.

ಹಾಗಾಗಿ ಕಾರ್ತಿಕ ಸೋಮವಾರದಂದು ಭಕ್ತರು ಈ ರೀತಿ ಮಾಡುತ್ತಾರೆ:

 ವ್ರತ ಪಾಲಿಸುವುದು

ವ್ರತ ಪಾಲಿಸುವುದು

* ಮುಂಜಾನೆ ಎದ್ದು ಸ್ನಾನ ಮಾಡಿ ಶಿವನ ಧ್ಯಾನ ಮಾಡಬೇಕು.

* ರುದ್ರಾಭಿಷೇಕ ಮಾಡಿ, ಬಿಲ್ವೆ ಪತ್ರಗಳನ್ನು ಶಿವನಿಗೆ ಅರ್ಪಿಸಬೇಕು.

* ನಂತರ ಹಿರಿಯರ ಆಶೀರ್ವಾದ ಪಡೆಯಬೇಕು

* ಬಳಿಕ ಸಂಜೆ ಶಿವನ ದೇವಾಲಯಕ್ಕೆ ಹೋಗಿ ದೀಪ ಹಚ್ಚಬೇಕು.

* ಈ ದಿನ ಬ್ರಾಹ್ಮಣರಿಗೆ ದೀಪಗಳನ್ನು ದಾನ ಮಾಡುವುದು ಒಳ್ಳೆಯದು

ಈ ದಿನ ಏಕದಶ ರುದ್ರ ಅಭಿಷೇಕಂ ಮಾಡಿಸಬೇಕು

ಈ ದಿನ ಏಕದಶ ರುದ್ರ ಅಭಿಷೇಕಂ ಮಾಡಿಸಬೇಕು

ಕಾರ್ತಿಕ ಸೋಮವಾರದಂದು ಶಿವನ ದೇವಾಲಯಕ್ಕೆ ಹೋಗಿ ಏಕದಶ ರುದ್ರ ಅಭಿಷೇಕಂ ಮಾಡಿಸಿದರೆ ತುಂಬಾನೇ ಒಳ್ಳೆಯದು. ಇದರಿಂದ ಜೀವನದಲ್ಲಿರುವ ಕಷ್ಟಗಳ ನೀಗುವುದು.

 ಕಾರ್ತಿಕ ಸೋಮವಾರ ದೀಪ ದಾನ

ಕಾರ್ತಿಕ ಸೋಮವಾರ ದೀಪ ದಾನ

ಕಾರ್ತಿಕ ಸೋಮವರದಂದು ದೀಪಗಳನ್ನು ಹಚ್ಚಿದರೆ ಅದರಿಂದ ಶಿವನ ಕೃಪೆಗೆ ಪಾತ್ರರಾಗುವಿರಿ. ಈ ದಿನ ದೇವಾಲಯಕ್ಕೆ ಹೋಗಿ ದೀಪ ಹಚ್ಚುವುದರಿಂದ ಮಾಡಿರುವ ಪಾಪಗಳೆಲ್ಲಾ ದೂರಾಗಿ ಮೋಕ್ಷ ಸಿಗುತ್ತದೆ. ಶಿವನಿಗೆ ದೀಪ ಹಚ್ಚುವುದಕ್ಕೆ ಸಮನಾದ ಉಡುಗೊರೆ ಮತ್ತೊಂದಿಲ್ಲ. ಯಾರು ಕಾರ್ತಿಕ ಮಾಸದಲ್ಲಿ ಎಳ್ಳೆಣ್ಣೆಯಲ್ಲಿ ಶ್ರೀಹರಿಗೆ ದೀಪ ಹಚ್ಚುತ್ತಾರೋ ಅವರಿಗೆ ಶಿವ ಆರೋಗ್ಯ, ಐಶ್ವರ್ಯ ಕೊಟ್ಟು ಹರಿಸುತ್ತಾನೆ.

2022ರಲ್ಲಿ ಬರುವ ಕಾರ್ತಿಕ ಸೋಮವಾರಗಳು

2022ರಲ್ಲಿ ಬರುವ ಕಾರ್ತಿಕ ಸೋಮವಾರಗಳು

ಅಕ್ಟೋಬರ್ 31

ನವೆಂಬರ್ 7

ನವೆಂಬರ್ 14

ನವೆಂಬರ್ 21

English summary

Karthika Somavar: Significance Of Ekadasa Rudra Abhishekam On Karthika Monday

Karthika Somavar: Here are significance of ekadasa rudra abhishekam On Karthika Monday, read on...
X
Desktop Bottom Promotion