For Quick Alerts
ALLOW NOTIFICATIONS  
For Daily Alerts

ಕಾರ್ತಿಕ ಮಾಸ: ಈ 30 ದಿನ ಏನು ಮಾಡಬೇಕು, ಏನು ಮಾಡಬಾರದು?

|

ಕಾರ್ತಿಕ ಮಾಸ ಎಂದರೆ ಸೂರ್ಯ ದೇವನಿಗೆ ಸಮರ್ಪಿತವಾದ ಮಾಸ. ಈ ಮಾಸ ಸೂರ್ಯ ದೇವನಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಆಚರಣೆಗಳನ್ನು ಸಲ್ಲಿಸಲಾಗುವುದು.

ಈ ಮಾಸದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ದೀಪಾರಾಧನೆ ಮಾಡಲಾಗುವುದು. ಈ ಮಾಸದಲ್ಲಿ ದೀಪಾರಾಧನೆ ಮಾಡುವುದರಿಂದ ಸಂಪತ್ತು, ಆರೋಗ್ಯ, ಯಶಸ್ಸು ದೊರೆಯುವುದು ಎಂಬ ನಂಬಿಕೆ ಭಕ್ತರಲ್ಲಿದೆ.

2020ರ ಕಾರ್ತಿಕ ಮಾಸ ಅಕ್ಟೋಬರ್‌ 23ರಂದು ಪ್ರಾರಂಭವಾಗಿದೆ, ನವೆಂಬರ್ 21ಕ್ಕೆ ಕಾರ್ತಿಕ ಮಾಸ ಪೂರ್ಣವಾಗುವುದು. ನಾವಿಲ್ಲಿ ಕಾರ್ತಿಕ ಮಾಸದ ಮಹತ್ವ ಹಾಗೂ ಈ ಸಮಯದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ:ದಕ್ಷಿಣ

ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,

ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.

ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಉಪಾಸಕರು

ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ. ಹಣಕಾಸು ಸಮಸ್ಯೆ, ಅನಾರೋ ಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ. ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ.

ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005

 ಕಾರ್ತಿಕ ಮಾಸದ ಮಹತ್ವ

ಕಾರ್ತಿಕ ಮಾಸದ ಮಹತ್ವ

ಪೌರಾಣಿಕ ಕತೆಯ ಪ್ರಕಾರ ಶಿವನು ಆಷಾಢ ಸುಧಾ ಏಕಾದಶಿಯಂದು ಯೋಗ ನಿದ್ರೆಗೆ ಜಾರಿ ಕಾರ್ತಿಕ ಸುಧಾ ಏಕಾದಶಿಗೆ ಎಚ್ಚರಗೊಳ್ಳುತ್ತಾನೆ ಎಂದು ಹೇಳಲಾಗುವುದು. ಶಿವನು ಕಾರ್ತಿಕ ಪೌರ್ಣಿಮೆಯಂದು ತ್ರಿಪುರಾಸುರನನ್ನು ಕೊಂದು ವಿಶ್ವವನ್ನು ರಕ್ಷಿಸಿದನು ಎಂಬ ಕತೆಯಿದೆ. ಅಲ್ಲದೆ ಈ ಮಾಸದಲ್ಲಿ ಗಂಗೆಯು ನದಿ, ಕೊಳ, ಬಾವಿಗಳಲ್ಲಿ ಉಕ್ಕಿ ಹರಿದು ಆ ನೀರನ್ನು ಅಮೃತವಾಗಿಸುತ್ತಾಳೆ. ಇನ್ನು ಅಯ್ಯಪ್ಪ ಸ್ವಾಮಿ ಭಕ್ತರಿಗೂ ಈ ಮಾಸ ವಿಶೇಷವಾದದ್ದಾಗಿದ್ದು ಈ ಸಮಯದಲ್ಲಿ ದೀಕ್ಷೆಯನ್ನು ಪಾಲಿಸುತ್ತಾರೆ.

 ಕಾರ್ತಿಕ ಮಾಸದಲ್ಲಿ ಏನು ಮಾಡಬೇಕು?

ಕಾರ್ತಿಕ ಮಾಸದಲ್ಲಿ ಏನು ಮಾಡಬೇಕು?

  • ಕಾರ್ತಿಕ ಮಾಸದಲ್ಲಿ ಎರಡು ಹೊತ್ತು ಸ್ನಾನ ಮಾಡಿ ದೀಪಾರಾಧನೆ ಮಾಡಬೇಕು.
  • ಸಂಜೆ ಹೊತ್ತು ದೀಪ ಹಚ್ಚಿ ಪೂಜೆಯನ್ನು ಸಲ್ಲಿಸುವುದನ್ನು ತಪ್ಪಿಸಬಾರದು.
  • ಕಾರ್ತಿಕ ಪುರಾಣವನ್ನು ಓದಿ, ಯಾರಾದರೂ ಜೋರಾಗಿ ಓದಿದರೆ ಕೇಳುವುದು ಕೂಡ ಒಳ್ಳೆಯದು.
  • ಸೋಮವಾರ ಪ್ರಸಾದ ತಯಾರಿಸಬೇಕು, ಉಳಿದ ದಿನಗಳಲ್ಲಿ ಹಣ್ಣುಗಳನ್ನು ಪ್ರಸಾದವಾಗಿ ಸಮರ್ಪಿಸಬಹುದು.
ಏನು ಮಾಡಬಾರದು?

ಏನು ಮಾಡಬಾರದು?

  • ಈರುಳ್ಳಿ, ಬೆಳ್ಳುಳ್ಳಿ, ಮಾಂಸಾಹಾರ ಸೇವನೆ ಮಾಡಬಾರದು.
  • ಎಳ್ಳೆಣ್ಣೆಯನ್ನು ದೀಪ ಹಚ್ಚಲು ಹೊರತು ಪಡಿಸಿ, ಬೇರೆ ಯಾವುದೇ ಕಾರ್ಯಕ್ಕೆ ಬಳಸಬಾರದು.
  • ಉದ್ದಿನ ಬೇಳೆ ಸೇವಿಸಬಾರದು.
  • ದಿನದಲ್ಲಿ ಒಮ್ಮೆ ಮಾತ್ರ ಸೇವನೆ ಮಾಡಿದರೆ ಒಳ್ಳೆಯದು. ಅದು ಸಾಧ್ಯವಾಗದಿದ್ದರೆ ಸೋಮವಾರ, ಕಾರ್ತಿಕ ಸೋಮವಾರ, ಕಾರ್ತಿಕ ಪೂರ್ಣಿಮ, ಕೋತಿ ಸೋಮವಾರದಂದು ವ್ರತ ಪಾಲಿಸಿ.
 ಕಾರ್ತಿಕ ಮಾಸದ ಪ್ರತಿದಿನದ ಮಹತ್ವ

ಕಾರ್ತಿಕ ಮಾಸದ ಪ್ರತಿದಿನದ ಮಹತ್ವ

ಪಾಡ್ಯಮಿ, 1ನೇ ದಿನ: ಶಿವನ ದೇವಾಲಯಕ್ಕೆ ಹೋಗಿ ಪೂಜೆಯನ್ನು ಸಲ್ಲಿಸಬೇಕು.

ತದಿಯಾ, 2ನೇ ದಿನ: ಸಹೋದರ ಸಹೋದರಿ ಮನೆಗೆ ಹೋಗಿ ಆಕೆ ಮಾಡಿದ ಆಹಾರ ಸೇವಿಸಿ, ಆಕೆಗೆ ಉಡುಗೊರೆ ನೀಡಿ ಆರ್ಶೀವದಿಸಬೇಕು.

ಥದಿಯಾ , 3ನೇ ದಿನ: ಪಾರ್ವತಿ ದೇವಿಗೆ ಕುಂಕುಮಾರ್ಚನೆ ಮಾಡಬೇಕು.

4ನೇ ದಿನ: ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆಯನ್ನು ಸಲ್ಲಿಸಬೇಕು.

ಪಂಚಮಿ, 5ನೇ ದಿನ: ಈ ದಿನವನ್ನು ಜ್ಞಾನ ಪಂಚಮಿಯೆಂದು ಕೂಡ ಕರೆಯಲಾಗುವುದು. ಈ ದಿನ ಬ್ರಹ್ಮಣ್ಯ ಸ್ವಾಮಿಗೆ ಪೂಜೆಯನ್ನು ಸಲ್ಲಿಸಬೇಕು.

ಷಷ್ಠಿ, 6ನೇ ದಿನ: ನಿಮಗೆ ಇಷ್ಟವಾದ ಆಹಾರವನ್ನು ಈ ದಿನ ಸೇವಿಸಬಾರದು.

ಸಪ್ತಮಿ, 7ನೇ ದಿನ: ಸೂರ್ಯನಿಗೆ ಪೂಜೆ ಸಲ್ಲಿಸಿ ನುಚ್ಚು ಗೋಧಿಯನ್ನು ಕೆಂಪು ಬಟ್ಟೆಯಲ್ಲಿ ದಾನ ಮಾಡಬೇಕು.

ಅಷ್ಟಮಿ, 8ನೇ ದಿನ: ಗೋ ಮಾತೆಗೆ ಪೂಜೆಯನ್ನು ಸಲ್ಲಿಸಬೇಕು.

ನವಮಿ, 9ನೇ ದಿನ: ವಿಷ್ಣು ತ್ರಿ ರಥ್ರ ವ್ರತ ಪ್ರಾರಂಭಿಸಲು ಒಳ್ಳೆಯ ದಿನ. ಇದನ್ನು 3 ದಿನ ಮಾಡಬೇಕು. ಸಂಜೆ ಹೊತ್ತು ದೀಪ ಹಚ್ಚಿ ವಿಷ್ಣುವನ್ನು ಪೂಜಿಸಬೇಕು.

ದಶಮಿ, 10ನೇ ದಿನ: ಈ ದಿನ ವಿಷ್ಣುವನ್ನು ಪೂಜಿಸಿ.

ಏಕಾದಶಿ, 11ನೇ ದಿನ: ಈ ದಿನ ಉಪವಾಸ ಮಾಡಿ ದ್ವಾದಶಿಯಂದು ಮುರಿಯಿರಿ.

ದ್ವಾದಶಿ, 12ನೇ ದಿನ: ಈ ದಿನ ವಿಷ್ಣುವಿಗೆ ಪೂಜೆಯನ್ನು ಸಲ್ಲಿಸಬೇಕು. ತುಳಸಿ ಹಾಗೂ ನೆಲ್ಲಿಕಾಯಿ ಗಿಡಕ್ಕೆ ಪೂಜೆಯನ್ನು ಸಲ್ಲಿಸಿ.

ತ್ರಯೋದಶಿ, 13ನೇ ದಿನ: ಈ ದಿನ ರಾತ್ರಿ ಊಟ ಬಿಡುವುದು ಒಳ್ಳೆಯದು, ಈ ಪವಿತ್ರ ದಿನ ಬ್ರಾಹ್ಮಣನಿಗೆ ಸಾಲಿಗ್ರಾಮ ಶಿಲೆ ನೀಡಿ.

ಚತುರ್ದಶಿ, 14ನ ದಿನ: ಈ ದಿನ ದಾನ ಮಾಡಿ ಅಲ್ಲದೆ ನಿಮ್ಮ ನೆಚ್ಚಿನ ಆಹಾರ ಸೇವಿಸಬೇಡಿ.

ಪೌರ್ಣಮಿ, 15ನೇ ದಿನ: ಈ ದಿನ ನದಿಯಲ್ಲಿ ಸ್ನಾನ ಮಾಡಿ, ವಿಷ್ಣುವಿಗೆ ಪೂಜೆ ಮಾಡಬೇಕು.

ಬಹುಳ ಪಾಡ್ಯಮಿ, 16ನೇ ದಿನ :ಹಳೆಯ ಆಹಾರ ಹಾಗೂ ಮೊಸರು ಸೇವಿಸಬಾರದು.

ವಿದಿಯಾ, 17ನೇ ದಿನ: ನೆಲ್ಲಿಕಾಯಿ ಗಿಡಕ್ಕೆ ಪೂಜೆಯನ್ನು ಸಲ್ಲಿಸಿ, ಮನೆಯವರ ಜೊತೆ ಆಹಾರ ಸೇವಿಸಬೇಕು.

ಥದಿಯಾ, 18ನೇ ದಿನ: ಈ ದಿನ ಬ್ರಾಹ್ಮಣರಿಗೆ ತುಳಸಿ ಮಾಲೆ ನೀಡಬೇಕು.

ಚವಿಥಿ, 19ನೇ ದಿನ: ಈ ದಿನ ವಿನಾಯನಿಕನಿಗೆ ಗರಿಕೆ ಸಮರ್ಪಿಸಿ ಪೂಜೆ ಸಲ್ಲಿಸಬೇಕು.

ಪಂಚಮಿ, 20ನೇ ದಿನ: ಈ ದಿನ ಪ್ರಾಣಿಗಳಿಗೆ ಆಹಾರ ದಾನ ಮಾಡಬೇಕು.

ಷಷ್ಠಿ, 21ನೇ ದಿನ: ಈ ದಿನ ಗ್ರಾಮ ದೇವತೆಗೆ ಪೂಜೆ ಸಲ್ಲಿಸಬೇಕು. ಈ ದಿನ ನಿಮ್ಮ ಸ್ಥಿತಿಗೆ ತಕ್ಕಂತೆ ದಾನ ಮಾಡಿ. ಸಪ್ತಮಿ, 22ನೇ ದಿನ: ಈ ದಿನ ಶಿವನಿಗೆ ಎಕ್ಕೆ ಹೂವನ್ನು ಸಮರ್ಪಿಸಿ ಪೂಜೆ ಸಲ್ಲಿಸಬೇಕು.

ಅಷ್ಟಮಿ, 23ನೇ ದಿನ: ಈ ದಿನ ಕಾಲ ಭೈರವನಿಗೆ ಪೂಜೆ ಸಲ್ಲಿಸಬೇಕು.

ನವಮಿ, 24ನೇ ದಿನ: ಈ ದಿನ ನೀರು, ಕೆಂಪು ಸೀರೆ, ಬ್ಲೌಸ್ ಪೀಸ್, ಬಳೆ ಇವುಗಳನ್ನು ದಾನ ಮಾಡಿ.

ದಶಮಿ, 25ನೇ ದಿನ: ಈ ದಿನ ಉಪವಾಸವಿರುವುದು ಒಳ್ಳೆಯದು ಹಾಗೂ ನಿರ್ಗತಿಕರಿಗೆ ಆಹಾರ ದಾನ ಮಾಡಬೇಕು.

ಏಕಾದಶಿ, 26ನೇ ದಿನ: ಈ ದಿನ ದೀಪಾರಾಧನೆ ಬಳಿಕ ಪೌರಾಣಿಕ ಕತೆಗಳನ್ನು ಕೇಳುವುದು ತುಂಬಾ ಒಳ್ಳೆಯದು.

ದ್ವಾದಶಿ, 27ನೇ ದಿನ: ಅಗ್ಯತವಿರುವವರಿಗೆ ಆಹಾರ ದಾನ ಮಾಡಿ.

ತ್ರಯೋದಶಿ, 28ನೇ ದಿನ: ನವಗ್ರಹಗಳಿಗೆ ಪೂಜೆಯನ್ನು ಸಲ್ಲಿಸಬೇಕಯ.

ಚತುದರ್ಶಿ, 29ನೇ ದಿನ: ಈ ದಿನ ಉಪವಾಸವಿದ್ದು ಶಿವನನ್ನು ಪೂಜಿಸಬೇಕು.

ಅಮವಾಸ್ಯೆ, 30ನೇ ದಿನ: ಪಿತೃ ದೇವತೆಗಳ (ಮರಣವೊಂದಿರುವ ಪೂರ್ವಜರು) ಹೆಸರಿನಲ್ಲಿ ಆಹಾರ ದಾನ ಮಾಡಬೇಕು, ದೇವಾಸ್ಥಾನಕ್ಕೆ ಹೋಗಿ ದೀಪ ಹಚ್ಚಿ, ದೇವರಿಗೆ ತೆಂಗಿನಕಾಯಿ ಸಮರ್ಪಿಸಬೇಕು.

English summary

Karthika Masam Significance And Dos and Don'ts in Kannada

Here is Karthika Masam Significance And Dos and Don'ts in Karthika Masam.
X